ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ”
ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ” ಹೋಮ ಹವನ ಮಾಡುವರುಅಂದ ಶ್ರದ್ದೆ ಆಚಾರ ಅನಾಚಾರಪ್ರಾಣಿ ಮಕ್ಕಳ ಬಲಿ ಕೊಡುವರುಅರಿವಿದ್ದು ಮೌಢ್ಯ ನೆಚ್ಚಿಹರುಇಂಥ ಕಂದಾಚಾರ ತೊಡೆದುಹಾಕಲು ಜಗಜ್ಯೋತಿ ಬಸವಣ್ಣಮತ್ತೆ ಹುಟ್ಟಿ ಬಾ… ಮನ ಶುದ್ಧ ವಿಲ್ಲಚಿತ್ತ ಶುದ್ದ ವಿಲ್ಲವೇಷ ಭಾಷೆಯಲ್ಲ ವಿಷ ಪಾಶ ಹರಿಯುವುದು ನಿತ್ಯಪರಿಶುದ್ಧ ಸ್ವತಂತ್ರರು ಆದಬಸವಣ್ಣ ಮತ್ತೆ ಹುಟ್ಟಿ ಬಾ… ಸತ್ಯ ಶುದ್ಧವಿಲ್ಲದ ಕಾಯಕದ ಮಧ್ಯೆ ಆಸೆ ಎಂಬ ಭವದ ಬೀಜ ಬಿತ್ತಿಹಲಬೂತಿಹರು ಧನ ಕನಕಕ್ಕಾಗಿಬಕಾಸುರ ರಂತೆ ಬಾಚುವರುಕಾಯಕ ಯೋಗಿ ಬಸವಣ್ಣಮತ್ತೆ ಹುಟ್ಟಿ ಬಾ… ಕೊಲೆ ಸುಲಿಗೆ ಮಾಡುವರುಕ್ರೂರಿಗಳು ಜಾತಿ ಮತ ಲಿಂಗಗಳ ಎಣಿಸುವರು ನಿತ್ಯ ನಿರಂತರಭೇದ ಭಾವ ಅಳಿಸಿ ಹಾಕಲುಕ್ರಾಂತಿಯೋಗಿ ಬಸವಣ್ಣಮತ್ತೆ ಹುಟ್ಟಿ ಬಾ… ಕಾಯಕ ನಿಷ್ಠೆ ತೋರಿಧರ್ಮದ ಬುನಾದಿಯಾಗಿವಚನ ತತ್ವ ಸಂಸ್ಕೃತಿ ಪರಂಪರೆ ಜಗಕೆ ಅರುಹಲುಮಹಾ ಮಾನವತಾವಾದಿಬಸವಣ್ಣ ಮತ್ತೆ ಹುಟ್ಟಿ ಬಾ… ವಿಜಯಲಕ್ಷ್ಮಿ ಹಂಗರಗಿ
ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ” Read Post »









