ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು”
ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕೋಗಿಲೆ ಕರಗಿತು” ಕೋಗಿಲೆ ಕರಗಿತುಕಾಡು ಮೌನವಾಗಲಿಲ್ಲ;ಅವಳ ಕಂಠದಿಂದ ಹರಿದರಾಗಗಳುಇನ್ನೂ ಗಾಳಿಯ ಎದೆಯಲಿ ತೇಲುತ್ತಿವೆ. ಸ್ವರವೆಂಬ ಗಂಗೆಯಲ್ಲಿಭಾವದ ದೀಪ ಹಚ್ಚಿದವಳುನೀನು;ನಗುವಿಗೂ ನಾದ ಕೊಟ್ಟೆ,ಅಳುವಿಗೂ ಆಲಾಪನೆಯರೂಪ ಕೊಟ್ಟೆ. ನಿನ್ನ ಕಂಠದ ಜೇನಿನಹನಿಗಳುಕೋಟಿ ಹೃದಯಗಳದಾಹ ನೀಗಿಸಿದವು;ಮುಗ್ಧ ಮಗುವಿನಲಾಲಿಯಾಗಿ,ತಾಯಿಯ ಮಮತೆಯತೊಟ್ಟಿಲಾಗಿ,ಪ್ರೇಮಿಗಳ ಕನಸಿನ ಭಾವವಾಗಿಭಕ್ತರ ಪ್ರಾರ್ಥನೆಯದೀಪವಾಗಿಅಮರಳಾದೆ ನೀನು. ನೀ ಹಾಡಿದಾಗಚಂದ್ರನು ಬೆಳದಿಂಗಳ ಹರಡಿದಮಲ್ಲಿಗೆ ತನ್ನ ಪರಿಮಳ ಸೂಸಿತು;ಗಾಳಿ ನಿಂತು ನಿನ್ನಆಲಾಪನೆಯನ್ನು ಆಲಿಸಿತು;ನದಿಯ ಅಲೆಗಳೂನಿನ್ನ ತಾಳಕ್ಕೆ ತಲೆದೂಗಿದವು. ನಿನ್ನ ರಾಗದ ಅಲೆಗಳಲ್ಲಿವಿರಹವು ಕಣ್ಣೀರಮುತ್ತಾಯಿತು;ಸಂತೋಷವು ನಗುವಿನ ಹೂವಾಯಿತು;ವೇದನೆಯೂ ಸಂಗೀತವಾಗಿ ಅರಳಿತು;ಮೌನವೂ ಮಧುರಗೀತೆಯಾಗಿ ಮೊಳಗಿತುಕಲ್ಲಿನ ಮೇಲೆ ಹೆಸರುಬರೆದವಳಲ್ಲಹೃದಯಗಳ ಮೇಲೆಸ್ವರಗಳಿಂದ ಶಾಶ್ವತ ಅಚ್ಚು ಹಾಕಿದವಳು ಕೋಗಿಲೆ ಕರಗಿತುಎನ್ನುವುದುಕಾಲದ ಮಾತು ಮಾತ್ರ;ಆದರೆ ನಿನ್ನ ಗಾನ ಬೆಳಗಿನ ಮೊದಲಹಕ್ಕಿಯ ಕೂಗಿನಂತೆ,ಸಂಜೆಯ ಮೃದುವಾದಗಾಳಿಯಂತೆ,ಮಳೆಹನಿಯ ಸಂಗೀತದಂತೆ,ಭಕ್ತಿಯ ದೀಪದಜ್ಯೋತಿಯಂತೆಯುಗಯುಗಕೂ ಮೊಳಗುತ್ತಲೇ ಇರುವುದು. ಓ ಗಾನಸರಸ್ವತಿಯೇ!ನಿನ್ನ ಕಂಠ ಮೌನವಾದರೂನಿನ್ನ ಸ್ವರ ಅಮರವಾಗಿದೆ;ನಿನ್ನ ದೇಹ ದೂರವಾದರೂನಿನ್ನ ಸಂಗೀತನಮ್ಮ ಉಸಿರಾಗಿದೆ. ಕೋಗಿಲೆ ಕರಗಲಿಲ್ಲ…ಜಾನಕಿ ರಾಗವಾಗಿಆಕಾಶದಲ್ಲಿ ಬೆರೆತಳು;ಭಾವವಾಗಿ ಮನಗಳಲ್ಲಿನೆಲೆಸಿದಳು;ಸಂಗೀತವಾಗಿ ಕಾಲಾತೀತಳಾದಳು. ನಿನ್ನ ಅಮರ ಗಾನಕ್ಕೆಶತಶತ ನಮನಗಳು. ವಿಜಯಲಕ್ಷ್ಮಿ ಹಂಗರಗಿ
ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು” Read Post »









