Category: ಕಾವ್ಯಯಾನ
-

ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ”
ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಚಿತೆಯ ಹೊಗೆಯಲ್ಲಿ ಕಳೆದುಹೋದ ಸತ್ಯ” ಬದುಕಿದ್ದಾಗ…ಅವನ ಮನೆಯ ಬಾಗಿಲು ತಟ್ಟಿದರೂತೆರೆದದ್ದು ಯಾರ ಮನಸ್ಸೂ ಅಲ್ಲ. ಹಸಿವೆಂದು ಕೈ ಚಾಚಿದಾಗಒಂದು ತುತ್ತು ಅನ್ನಕ್ಕೂ ಲೆಕ್ಕ ಹಾಕಿದ ಜನ,ದುಃಖವೆಂದು ಕಣ್ಣೀರು ಸುರಿಸಿದಾಗಒಂದು ಹೆಗಲನ್ನೂ ನೀಡದ ಬಂಧುಗಳು. ಅವನ ಉಸಿರು ಇರುವಾಗಅವನ ಮಾತಿಗೆ ಬೆಲೆ ಇರಲಿಲ್ಲ;ಉಸಿರು ನಿಂತ ಕ್ಷಣದಿಂದಲೇಅವನ ಮೌನಕ್ಕೆ ಬೆಲೆ ಕಟ್ಟಲು ಹೊರಟರು. ಚಿತೆಯ ಬೆಂಕಿ ಹೊತ್ತಿತು…ದೇಹ ಬೂದಿಯಾಯಿತು…ಆದರೆ ಸುಟ್ಟು ಹೋದದ್ದು ದೇಹವಲ್ಲ—ಸಮಾಜದ ಕಪಟ ಮುಖವಾಡ. ಅಂತ್ಯಸಂಸ್ಕಾರಕ್ಕೆಸಾವಿರ ಜನ ಸೇರಿದರು;ಬದುಕಿನ ದಾರಿಯಲ್ಲಿಅವನೊಂದಿಗೆ ನಡೆದದ್ದುಅವನ ನೆರಳು…
-

ಪರಿಮಳ ಐವರ್ನಾಡು ಅವರ ಕವಿತೆ”ಅವಳಿಗೆ”
ಕಾವ್ಯ ಸಂಗಾತಿ ಪರಿಮಳ ಐವರ್ನಾಡು “ಅವಳಿಗೆ” ಅವಳಿರಬೇಕಿತ್ತು ಅಲ್ಲಿಅವನ ಜೊತೆಯಲ್ಲಿಅವನ ಬದುಕಲ್ಲಿಅವನ ಬಾಳಿನಲ್ಲಿ ಆಗಬೇಕಿತ್ತು ಅವಳಿಗೆಅವನ ಮಗನ ತಾಯಿಯಾಗಿಅವನ ಬಾಳ ಸಂಗಾತಿಯಾಗಿಅವನ ಹೃದಯದ ಬಡಿತವಾಗಿ ಬಯಕೆಯಿತ್ತು ಅವಳಿಗೆಬಾಹುಗಳಲ್ಲಿ ಬಂಧಿಯಾಗಲುಸುಖ ದುಃಖಗಳಲಿ ಜೊತೆಯಾಗಲುಅವನ ತುಟಿಗಳ ನಗುವಾಗಲು ಕನಸಿತ್ತು ಅವಳಿಗೆಅವನ ಕನಸಿಗೆ ಜೀವ ತುಂಬಲುಅವನ ಕವಿತೆಗೆ ಪದವಾಗಲುಮಧುಮಂಚದ ವದುವಾಗಲು ಅಂತರಂಗದ ಭಾವನೆಗಳುಹೊರಬರಲಾರದ ಕನಸುಗಳುಬಲಿಪಶುವಾದ ಹೂಗಳುಅವಲೊಳಗಿನ ಅವಶೇಷಗಳು ಪರಿಮಳ ಐವರ್ನಾಡು
-

ಎಮ್ಮಾರ್ಕೆ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಮ್ಮ ನೆತ್ತರಿನ ಬಣ್ಣ ಒಂದೇಯಾಗಿದ್ದರೂಉತ್ತರ ಆಶೋತ್ತರಗಳು ಬೇರೆ ಬೇರೆಅಡಿ ಇಡುವ ನೆಲವು ಒಂದೇಯಾಗಿದ್ದರೂಗಮ್ಯ ತಾಣ ನಿಲ್ದಾಣಗಳು ಬೇರೆ ಬೇರೆ ಬುದ್ಧಿಶಕ್ತಿಯ ಲವಲೇಶವಿರದ ಪ್ರಾಣಿಗಳುಸಹಬಾಳ್ವೆಗೆ ತಮ್ಮನ್ನು ಒಡ್ಡಿಕೊಂಡಿವೆಸುತ್ತ ಸುಳಿವ ಗಾಳಿ ಒಂದೇಯಾಗಿದ್ದರೂಒಳ ನೋಟ ಒಕ್ಕೂಟಗಳು ಬೇರೆ ಬೇರೆ ಭಾಷಣ ಬರವಣಿಗೆಯಲ್ಲಷ್ಟೇ ಸಮತೆಯಹೂರಣ ತೋರಣಗಳನ್ನು ಕಂಡಿದ್ದೇವೆಕುಡಿಯುವ ಜಲವು ಒಂದೇಯಾಗಿದ್ದರೂಯೋಚನೆ ಯೋಜನೆಗಳು ಬೇರೆ ಬೇರೆ ಒಡಹುಟ್ಟಿದವರೇ ಬೆಳೆದೊಡನೆ ಕಾದಾಡಿದಾಯಾದಿಗಳಾಗುವುದಿಲ್ಲಿ ಮಾಮೂಲಿಭಾರತೀಯರೆಂದೂ ಒಂದೇಯಾಗಿದ್ದರೂಇಲ್ಲಿ ಆಚಾರ ವಿಚಾರಗಳು ಬೇರೆ ಬೇರೆ ಸರ್ವಜನಾಂಗದ ತೋಟದಲ್ಲಿ ಕುಂಬಾರಶಾಂತಿ ಹುಡುಕಿ ಹುಡುಕಿ ಸೋತಿದ್ದಾನೆಭಾವೈಕ್ಯದ…
-

ಕಲ್ಪನಾ ಎಸ್ ಪಾಟೀಲ ಕವಿತೆ “ಸ್ವಪ್ನ ಸುಂದರಿ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಸ್ವಪ್ನ ಸುಂದರಿ” ನನ್ನ ಕನಸಲ್ಲಿ ಬಂದವಳು ನೀನು, ಹೆಸರಿಲ್ಲ, ಊರಿಲ್ಲ,ಆದರೂಎಷ್ಟು ಹತ್ತಿರ ಇರುವೆ ನೀನುಕಣ್ಣಲ್ಲಿ ನಕ್ಷತ್ರ, ನಗುವಲ್ಲಿ ಹುಣ್ಣಿಮೆ, ಮಾತಲ್ಲಿ ಮಲ್ಲಿಗೆ ಪರಿಮಳವನುಹೊತ್ತು ತಂದಿರುವೆ ಏನು.? ನೀನು ನಡೆದರೆ ಹೂವು ಅರಳಿಹುದುನೀನು ನೋಡಿದರೆ ಮಳೆ ಬರುವುದು ಸುಮ್ಮನೆ ಒಮ್ಮೆ ನೀ ಕೈ ಬೀಸಿದರೂ ನನ್ನ ಇಡಿ ದಿನ ಹಬ್ಬವಾಗುವದು. ವಾಸ್ತವದಲ್ಲಿ ಸಿಗಲಾರೆನೋ ಗೊತ್ತಿಲ್ಲಆದರೂ ಕನಸಲ್ಲಿ ಪ್ರತಿ ರಾತ್ರಿಭೇಟಿಯಾಗುವೆನು ನಿನ್ನನು“ನೀನೆ ನನ್ನ ಸ್ವಪ್ನ ಸುಂದರಿ”ನಿದ್ದೆಯಲ್ಲೆ ಪದೇ ಪದೇ ಹೇಳುವೆ ರಿ. ನೀನು…
-

ರೇಷ್ಮಾ ಕಂದಕೂರ ಅವರ ಕವಿತೆ “ಎತ್ತ ಸಾಗುತ್ತಿದೆ”
ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಎತ್ತ ಸಾಗುತ್ತಿದೆ” ಎತ್ತ ಸಾಗುತ್ತಿದೆ ನವ ಸಮಾಜಸಮಾನತೆ ಗಾಳಿಗೆ ತೂರಿನಾಗರಿಕತೆಯ ಕುರುಹುಗಳ ಅರಿಯದೆಮಾನವೀಯತೆಯ ಬೆತ್ತಲಾಗಿಸಿದೆ . ಅರೆಬೆತ್ತಲೆ ಮೈ ಮನಮನಸಾ ಇಚ್ಛೆಯ ಮೆರವಣಿಗೆಸಾಮರಸ್ಯ ಕುರುಡಾಗಿಸಿವಿಕೃತ ಮನಸ್ಸಿನ ಅನಾವರಣ. ನಶೆಯ ಗುಂಗಲಿಸಮಾಜಿಕ ಜಾಲತಾಣಗಳಿಗೆ ಮುಗಿ ಬಿದ್ದುಜವಾಬ್ದಾರಿ ಮರೆತುಕರುಳ ಕುಡಿಗಳು ಹೊಂಚು ಹಾಕುತ್ತಿವೆ. ಬಿಕೋ ಎನ್ನುತ್ತಿವೆ ಹಳ್ಳಿ ಹಾಡುಹೂಬಳ್ಳಿ ಗಳು ಮುಳ್ಳು ಮೊನಚಾಗಿಹಿರಿಯ ಜೀವಗಳು ಹಪಹಪಿಸುತ್ತಿವೆಜೀವ ಕೊಂಡಿ ಕಳಚುತಿದೆ. ಎಲ್ಲೆಂದರಲ್ಲಿ ಕಾರ್ಖಾನೆಕೆಲಸದ ಆಸೆಗೆ ಭೂಮಿ ಮಾರಿಕೊಂಡುಉಸಿರಾಡಲು ಕಲುಷಿತ ಗಾಳಿಹೊಟ್ಟೆ ಹೊರೆಯಲು ಜೀತದಾಳು. ರಕ್ತ ಸಂಬಂಧಕೆ…
-

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ”
ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನರಕದ ಬೆಂಕಿ” ಓ…ಅಹಂಕಾರಿ ಮನುಜನೀನೆಂದೂ ಚಿರಂಜೀವಿಯಲ್ಲ,! ನಿನ್ನ ಅಧಿಕಾರದ ದರ್ಪ ನೀನಗೆಂದೂ ಅದು ಶಾಶ್ವತವಲ್ಲ,! ಧರ್ಮದ ಮಧವೇರಿಸಿಅನ್ಯ ಧರ್ಮಗಳ ನೀ ಕೆಣಕದಿರು,! ರಾಜಕೀಯ ಪ್ರೇರಿತನಾಗಿ ದ್ವೇಷದ ಜಪವನು ಮಾಡದಿರು,! ಮತಾಂಧರನು ನೀನಾಗದೆಮಾನವ ಕುಲದ ಸುಪುತ್ರನಾಗು,! ಮರಣದ ಕುಣಿಕೆ ಹಿಡಿದು ಯಮ ನಿನ್ನ ಬೆನ್ನಟ್ಟುತ್ತಿರುವನು! ಸತ್ತು ಮಣ್ಣಾಗುವ ಮುನ್ನಮಂದಿಯ ಮನಸ್ಸಿಗೆ ಅರಸನಾಗು.! ಕೆಡುಕಿನ ದಾರಿಗಳ ಹಿಡಿದು “ನರಕದ ಬೆಂಕಿ”ಗೆ ಆಹುತಿ ಆಗದಿರು.! ಹಮೀದ್ ಹಸನ್ ಮಾಡೂರು.
-

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ!
ಕಾವ್ಯ ಸಂಗಾತಿ ಗೌರಾ ಹಾಲಭಾವಿ. ಯುದ್ಧ ಯುದ್ಧ ಯುದ್ಧ! ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ ಮನಸ್ಸಿನ ಉನ್ಮಾದ!ಯಾಕಿಷ್ಟು ಮಮಕಾರ ಈ ಯುದ್ಧ ಎಂಬ ಮಾರಿಯ ಮೇಲೆ ನಿನಗೆ ಏ ಮನುಷ್ಯ ಜೀವಿಯೇ?ಯಾರಿಗಾಗಿ?ಏನು ಸಾಧಿಸಿದೆ?ಯಾರಿಗಾಯಿತು ಪ್ರಯೋಜನ?ನಿನಗಾಗಿ , ನಿನ್ನ ಅಹಂಕಾರಕ್ಕಾಗಿ,ನಿನ್ನ ಕೀರ್ತಿಗಾಗಿ,ನೀನು ಎಲ್ಲರನ್ನು ನಿನ್ನ ಆಧೀನದಲ್ಲಿ ಇರಿಸುವದಕ್ಕಾಗಿ!ಎಲ್ಲದರ ಮೇಲಿನ ಅಧಿಪತ್ಯಕ್ಕಾಗಿ ,ನಿನ್ನ ಪ್ರತಿಷ್ಠೆಗಾಗಿ , ಹಠಕ್ಕಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ,ಹೊನ್ನಿಗಾಗಿ!ಏನು ಮಾಡಿದೆ ?ಏನು ಮಾಡಿದೆ ಹಿಂತಿರುಗಿ ನೋಡೊಮ್ಮೆ!ಯಾವುದು ನಿನಗೆ ಸುಖ ಕೊಟ್ಟಿತು?ಯಾವದು ನಿನ್ನೊಡನೆ ಬಂದಿತು ಉಸಿರೊಮ್ಮೆ!ರಾಮಾಯಣದ ರಾಮ ರಾವಣರ…
-

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ”
ಕಾವ್ಯ ಸಂಗಾತಿ ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” ಇಲ್ಲಿ ಇವರೆಲ್ಲರೂ ಹೊಟ್ಟೆ ತುಂಬಿದವರೇ ಇದ್ದಾರೆ ಸೋನಂ ಹಸಿವಿನ ಬೆಲೆ ತುಸುವಾದರೂ ತಿಳಿಯದವರೇ ಇದ್ದಾರೆ ಸೋನಂ ಉಪವಾಸ ಸತ್ಯಾಗ್ರಹಗಳಿಗೆ ಹಿರೇಮಣಿಗಳು ಹೇಗೆ ಮಣಿದಾರುಕೇವಲ ಕುರ್ಚಿಗಾಗಿ ಹಣಾ ಹಣಿ ನಡೆಸಿದವರೇ ಇದ್ದಾರೆ ಸೋನಂ ಬಾಳಿ ಬೆಳಗಬೇಕಾದ ಮಕ್ಕಳ ಕಳೆದುಕೊಂಡವರು ಅಳುತ್ತಿದ್ದಾರೆಯಾರಿಗಿದೆ ಬಾಧಕ ಕರುಳು ಅರಿಯದವರೇ ಇದ್ದಾರೆ ಸೋನಂ ಇಲ್ಲಿ ಪ್ರಶ್ನೆ ಪತ್ರಿಕೆ ಸೋರುತ್ತದೆ ಅಲ್ಲಿ ಅತ್ಯಾಚಾರ ನಡೆಯುತ್ತದೆ ಅನೈತಿಕತೆಯನೇ ಹೊತ್ತುಕೊಂಡು ಮೆರೆದವರೇ ಇದ್ದಾರೆ ಸೋನಂ ಕ್ಷೀಣಿಸುತ್ತಿರುವ ನಿನ್ನ ಉಸಿರಿಗಾಗಿ ನಾವು…
-

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ”
ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮನೆಯೆಂದರೆ” ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ…
-

ಅನುರಾಧಾ ರಾಜೀವ್ ಅವರ ಗಜಲ್
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು ಕರಗಿ…
