Category: ಕಾವ್ಯಯಾನ

  • ವಾಣಿ ಯಡಹಳ್ಳಿಮಠ ಅವರ ಗಜಲ್

    ವಾಣಿ ಯಡಹಳ್ಳಿಮಠ ಅವರ ಗಜಲ್

    ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ರವಿ ಸರ್ ಅವರ ಗಜಲ್ ಒಂದರಿಂದ ಪ್ರೇರಿತ ) ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆಲೋಪಗಳಿವೆಯೆಂದು ನಾ  ಜರಿವ ಜಗದೊಳಗೂ ತುಸು ಚಂದವಿದೆ ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳುಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ ವರ್ಣನೆಗೂ ನಿಲುಕದ  ಮಾತುಗಳಿಗಿಲ್ಲಿ ಬರವಿಲ್ಲ ನಿಜಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿನೋವು…

  • ವನಜ ಮಹಾಲಿಂಗಯ್ಯ  ಕವಿತೆ “ಮಳೆಯೇ ಬಾ”

    ವನಜ ಮಹಾಲಿಂಗಯ್ಯ ಕವಿತೆ “ಮಳೆಯೇ ಬಾ”

    ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ “ಮಳೆಯೇ ಬಾ” ಮೋಡಗಳೇ ಎಲ್ಲಿಗೆ ಹೋದಿರಿ,  ನಮ್ಮ ಊರ ನೀವು ಮರೆತೆರಾ?  ಬಾವಿಯಲ್ಲೂ ಒಂದನಿ ನೀರಿಲ್ಲ,  ಕೆರೆಯಲ್ಲೂ  ಹನಿ ನೀರಿಲ್ಲ. ಅಡಿಕೆ ಬಾಳೆ ತೆಂಗು ಒಣಗುತಿದೆಆದರೆ ಅಲ್ಲಿ….ರಾಜಕೀಯ ಕುಣಿದಾಡುತಿದೆಬಡವನ ಕೂಗು ಕೇಳಲವರಿಗೆ ಸಮಯವೆಲ್ಲಿದೆ?ನಿನಗಾದರೂ ಕೇಳಲಿ ರೈತರ ಕೂಗು ಮಳೆಯೇ ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ಬೆಳೆ ಇಲ್ಲದೆ ರೈತ ಅಳುತಿರುವ,ಮಗುವಿಗೆ ನೀರಿಲ್ಲದೆ ತಾಯಿ ಪರಿತಪಿಸುವ,  ಒಣಗಿದ ಮರದ ಕೆಳಗೆ ಹಕ್ಕಿಯೂ ಸುಮ್ಮನಿದೆ,  ಮಳೆಯೇ ಬೇಗ ಬಾ, ನಮ್ಮ ಕಣ್ಣೀರು…

  • ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ”

    ಚಂಪಾ ಬಿ. ಜಿ. ಅವರ ಕವಿತೆ “ಒಲವಿನೋಲೆ”

    ಕಾವ್ಯ ಸಂಗಾತಿ ಚಂಪಾ ಬಿ. ಜಿ. “ಒಲವಿನೋಲೆ” ಮಣ್ಣಿನ ವಾಸನೆ ಹೊತ್ತ ಮೊಗಸಿರಿಮುಗ್ಧ ನಗುವಿನ ಮೋಹನಾಂಗಿನಿನ್ನ ನಡಿಗೆಯ ಲಯಕೆಸುಳಿಗಾಳಿ ತಿಳಿಯಾಗಿತುಂತುರು ಹನಿಯಾಗಿಭುವಿಯೆಲ್ಲಾ ಹರಡಿತೇನೋಇವಳ ಒಡನಾಟವೇಮಧುರ ಸಂಗೀತವಾಗಿಝರಿಯಾಗಿ ಹರಿಯಿತೇನೋಸೂರ್ಯನ ಕಿರಣ ಕೂಡನಾಚಿ ಮೇಘಗಳ ಹಿಂದೆ ಸರಿಯಿತೇನೋನೀ ನಡೆವ ಹಾದಿಯಲಿ ನಿಸರ್ಗವೇಬರೆಯಿತೇನೋ ಒಲವಿನೋಲೆ. ಚಂಪಾ ಬಿ. ಜಿ.

  • ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ”

    ಟಿ.ಪಿ.ಉಮೇಶ್ ಚಿತ್ರದುರ್ಗ “ಮರದ ಮೌನ”

    ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಮರದ ಮೌನ” ನನ್ನನ್ನುನೆರಳಿನ ಗಾಢತೆಯಿಂದ ಅಳೆಯುತ್ತೀರಿಬೇರುಗಳ ಆಳವನ್ನುಯಾರೂ ಗಮನಿಸುವುದಿಲ್ಲ! ನಾನು ನಿಂತಿರುವುದುನಿಮಗೆ ಸುಲಭವೆನಿಸುತ್ತದೆ;ನೆಲದೊಳಗೆ ಪ್ರತಿದಿನಕುಸಿಯದೆ ಹಿಡಿದಿಟ್ಟುಕೊಳ್ಳುವಬೇರಿನ ಹೋರಾಟ ನಿಮಗೆ ಕಾಣುವುದಿಲ್ಲ ನನ್ನ ಕೊಂಬೆಗಳಲ್ಲಿಹಕ್ಕಿಗಳು ಗೂಡು ಕಟ್ಟಿದಾಗಅದು ಅವುಗಳ ಮನೆಯೆನ್ನುತ್ತೀರಿ;ಗಾಳಿ ಅವನ್ನು ಕೆಡವಿದಾಗನನ್ನನ್ನೇ ಶಾಪಗ್ರಸ್ತವೆನ್ನುತ್ತೀರಿ! ನಾನು ಉದುರಿಸಿದ ಎಲೆಗಳುನನ್ನ ಸೋಲಲ್ಲ ಕೇಳಿರಿ;ಹೊಸ ಋತುವಿಗೆ ಬರೆದಮುನ್ನುಡಿಯಷ್ಟೇ ನೋಡಿರಿ! ನನ್ನ ಹಣ್ಣುಗಳ ಸಿಹಿಯನ್ನುನಿಮ್ಮ ನಾಲಿಗೆ ನೆನಪಿಡುತ್ತದೆ;ಆ ಸ್ವಾದಕ್ಕೆ ಕಾರಣವಾದನನ್ನ ಕಹಿ ಬೇರುಗಳನ್ನುಯಾರೂ ನೆನಪಿಸಿಕೊಳ್ಳುವುದಿಲ್ಲ! ಕಲ್ಲೆಸೆದ ಕೈಗಳಿಗೂನೆರಳನ್ನೇ ಕೊಟ್ಟಿದ್ದೇನೆ!ಆದರೂ ನನ್ನ ಮೌನವನ್ನುದುರ್ಬಲತೆಯೆಂದು ಕರೆಯುತ್ತೀರಿ! ನಾನು ಆಕಾಶದ ಕಡೆಎತ್ತರವಾಗಿ ಬೆಳೆದಂತೆಯೇಭೂಮಿಯ…

  • ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ”

    ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ”

    ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಅದೆಂತಹ ಹೆಸರನಿಟ್ಟೆ” ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆಹಾಡಿ ಹರಸಿ ಹೃದಯದುಂಬಿ ಕುಣಿವ ಭಾವ ತಾನಕೆ ಅದೆಂತಹ ಹೆಸರನಿಟ್ಟೆ ನೂರು ಸಲ ದೂರ ನೂಕಿದರೂ  ಉಸಿರೆತ್ತದ ಹದುಳ ಜೀವ ಮಿಡಿದ ಮಧುರ ಗಾನವದುಮಾತಿನ ಚೂರಿಯಿಂದ ಇರಿದು ಕೊಂದು ಪವಿತ್ರ ನೇಹ ಪಾನಕೆ ಅದೆಂತಹ ಹೆಸರನಿಟ್ಟೆ ಕಾವ್ಯಯಾನದ ಪಥಿಕ ಮೃದು ಮಧುರ ಎದೆಹಾಸ ತುಂಬೆಲ್ಲ ಮಾತಿನ ಮುಳ್ಳುಗಳ ನೇವರಿಕೆಮಲ್ಲಿಗೆ ಮನದ ಮೌನ ದೋಣಿಯ ಪ್ರೀತಿ ಪಯಣ…

  • ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ”

    ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ”

    ಕಾವ್ಯ ಸಂಗಾತಿ ಎ.ಎಸ್. ಮಕಾನದಾರ ಗದಗ “ಆ ಕಾಲಕ್ಕೆ ಕಾಯುವೆ” ಮಸೀದೆಯ ಅಜಾನ್ಚರ್ಚ್ ನಲ್ಲಿ  ಕೇಳಬೇಕು ಚರ್ಚ್ ನಲ್ಲಿಯ ಪ್ರಾರ್ಥನೆಮಂದಿರ ದಲ್ಲಿ  ಜರುಗಬೇಕು ಮಂದಿರ ದಲ್ಲಿ ಸೇರಿದ ಜನಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ನನ್ನ ಕಾಯಕರ್ಪುರ ವಾಗಬೇಕು ಮಂದಿರ ಮಸೀದೆಚರ್ಚ್ ನಲ್ಲಿ ಬೆಳಗಬೇಕು ನರನಾಡಿಗಳುನೀಲಾಂಜನಕೆ ಬತ್ತಿ ಯಾಗಬೇಕು ರಕುತ ಎಣ್ಣಿಯಾಗಬೇಕುಮನಸು ಬೆಣ್ಣಿಯಂತೆ ಕರಗಬೇಕು ಆ ಕಾಲಕ್ಕಾಗಿ ನನ್ನಕಣ್ಣುಗಳು ಕಾಯಬೇಕು ಎ.ಎಸ್. ಮಕಾನದಾರ ಗದಗ

  • ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

    ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

    ಕಾವ್ಯ ಸಂಗಾತಿ ಡಾ. ಶ್ರೀಶೈಲ ಮಾದಣ್ಣವರ ಗಜಲ್ ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲುಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳುಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರಬಾಳು ತೆನೆಗಟ್ಟಿಸಿದವರಾರು ಬದುಕು ಈಗ…

  • ಮಾಜಾನ್ ಮಸ್ಕಿ ಅವರ ಗಜಲ್

    ಮಾಜಾನ್ ಮಸ್ಕಿ ಅವರ ಗಜಲ್

    ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ವಿದಾಯ ಹೇಳಲೇ ಕವಲೊಡೆದ ದಾರಿಗೆದೂರ ಸರಿಯಲೇ ಒಲವಿರದ ದಾರಿಗೆ ಘಮವಿಲ್ಲದ ಪಾರಿಜಾತ ನೊಂದಿದೆಕಳಚಿ ಹೋಗಲೇ ನಾಕವಿರದ ದಾರಿಗೆ ಪಡೆದುದೆಲ್ಲ ನಶ್ವರವಾಗಿ ಮೌನವಾದೆಮರೆತು ಬಿಡಲೇ ಸುಖವಿರದ ದಾರಿಗೆ ಕಲ್ಪನೆಯ ಭಾವನೆಗಳ ಬಳ್ಳಿ ರೋಧಿಸಿದೆಹರಿದು ತೊರೆಯಲೇ ನಲಿವಿರದ ದಾರಿಗೆ ತಪ್ಪಿದೆ ಯಾನದ ಹರಿಗೋಲು ಮಾಜಾಕಳೆದು ಕೂಡಲೇ ಕರುಣೆವಿರದ ದಾರಿಗೆ ಮಾಜಾನ್ ಮಸ್ಕಿ

  • ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

    ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

    ‌ ಕಾವ್ಯ ಸಂಗಾತಿ. ಜ್ಯೋತಿ ಮಾಳಿ ಬೆಳಗಾವಿ ಗಜಲ್ ಕುಳಿತು ಮಾತನಾಡಿಸಿ ಎದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆನಕ್ಕು ನಗಿಸಿ ಮನವನು ಗೆದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಹೋದರೆ ಹೋಗಿ ನಿಮಗೂ ಏನೊ ಅನಿವಾರ್ಯತೆಗಳುಇರಬಹುದುಭಾವ ಬಸಿದ ಕವಿತೆಗಳನು ಕದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ನೊಂದು ಬೆಂದು ನರಳಿದ ಗಾಯಗಳ ಗುರುತು ಸಿಗದಂತೆಅಳಿಸಿ ಹಾಕಿದಿರಿಕಲಕಿದ ಕೊಳ ತಿಳಿಯಾಗಿಸಿ ಇದ್ದು ಹೋದ ಜಾಗವೀಗ ಖಾಲಿಖಾಲಿ ಅನಿಸುತಿದೆ ಬೇಸರಗೊಂಡ  ಜೀವಗಳಿಗೆ ಎಡೆಯ ತುಂಬ ಸಂತಸವನುಮನದಿ ಬಡಿಸಿದಿರಿಹಾಲುಣಿಸಿ ಹಾಲಾಹಲ ಮೆದ್ದು…

  • ಸುಕನಸು ಅವರ‌ ಗಜಲ್

    ಸುಕನಸು ಅವರ‌ ಗಜಲ್

    ಕಾವ್ಯ ಸಂಗಾತಿ ಸುಕನಸು ಗಜಲ್ ಬಾ ಅಪರಿಚಿತರಾಗೊಣ  ಮತ್ತೊಮ್ಮೆ ಗೆಳೆಯನೀ ಮರೆತು ಸಹ ಸಿಗದಿರು ಇನ್ನೊಮ್ಮೆ ಗೆಳೆಯ ಸದಾ ನಿನ್ಹೆಸರ ಜಪಿಸುವ ಮನಕೇನು ಸಂತೈಸಲಿನೆನಪುಗಳ ಕೊಂದ್ಹೋಗೂ ಬಂದೊಮ್ಮೆ ಗೆಳೆಯ ಜೊತೆ ಇಟ್ಟ ಹೆಜ್ಜೆಗಳ ಲೆಕ್ಕ ಎಲ್ಲಿದೆ ಸಂತೃಪ್ತಿಯಷ್ಟೆಮುಂದೆಂದೂ ಸಿಗದಂತೆ ಶಪಥ ಮಾಡೊಮ್ಮೆ ಗೆಳೆಯ ಮನ ತಬ್ಬಿಬಾಗಿದೆ ತಳ್ಳಿ ಹೋದ ಕಾರಣ ತಿಳಿಯದೆತೊರೆದು ಹೋದ ನೆಪ ಹೇಳಿ ಹೋಗೊಮ್ಮೆ ಗೆಳೆಯ ಸುಮದ ಪರಿಮಳವೆ ಅಪಾರವಾಯಿತು ನವಿರಲ್ಲವಒಲವಿಲ್ಲ ಲಾಲಶೆಯಷ್ಟೆಯೆಂದು ಹೇಳೊಮ್ಮೆ ಗೆಳೆಯ ಸುಕನಸು

You cannot copy content of this page