ಅವ್ಯಕ್ತಳ ಅಂಗಳದಿಂದ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಉಡುಗೊರೆ ಉಡುಗೊರೆ ಅವನ್ಯಾರೋ ನಂಗೆ ಗೊತ್ತಿಲ್ಲ, ಮುಗ್ಧ ನಗುವ ಹೊನಲು ಮುಖದಲ್ಲಿ ಹಾರಾಡ್ತಿರ್ತಿತ್ತು , 100 ಮಕ್ಳ ಕ್ಲಾಸಲ್ಲಿ ವಿಭಿನ್ನ ಇವ್ನು. ಹೊಳೆವ ಕಣ್ಣುಗಳು, ಮುಖದಲ್ಲಿ ಕಾಂತಿ, ಬಾಡಿ ಲ್ಯಾಂಗ್ವೇಜಲ್ಲಿ ಗೌರವ…ನಾನು ನಿತ್ಯ ನನ್ನ ಕೆಲಸ ಮಾಡೋದು- ಪ್ರಶ್ನೆ ಕೇಳೋದು, ಉತ್ತರ ಹೇಳೋದು, ಕೊನೇ ಘಳಿಗೇಲಿ ಸ್ವಲ್ಪ ಹೊತ್ತು ಜೀವನದ ಬೆಲೆ  ಬಗ್ಗೆ ವಿಶ್ಲೇಷಣೆ….        ಹೀಗೆ ದಿನ ಕಳೆದ್ವು, ಎದ್ರು ಬಂದಾಗ್ಲು ಎದುರು ನಿಲ್ಲಲು ಹಿಂಜರಿತಿದ್ದ. ಫಸ್ಟ್ ಪಿಯುಸಿ ಅಲ್ವಾ ಭಯ […]

ಮಕ್ಕಳ ಪದ್ಯ

ಪಟ್ ಪಟೆಕಾಯಿ ಚಟ್ ಪಟ ಎಂದು! ವಿಜಯಶ್ರೀ ಹಾಲಾಡಿ ಪಟ್ ಪಟೆಕಾಯಿ ಚಟ್ ಪಟ ಎಂದು ಹಾಡು ಕಟ್ತಿತ್ತು ಮೆತ್ತನೆ ಹೆಜ್ಜೆಯ ಬೆಳ್ಳಿ ಬೆಕ್ಕು ಕದ್ದು ಕೇಳ್ತಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ನಕ್ಕು ಉರುಳಿತ್ತು ಮುಳ್ಳಿನ ಮರೆಯ ಓತಿಕ್ಯಾತವು ಫೋಟೋ ಹಿಡಿದಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಅಳುತಾ ಕೂತಿತ್ತು ಓಡುತ ಬಂದ ಇರುವೆಯಣ್ಣ ಗಲ್ಲ ಸವರಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಗೊರಕೆ ಹೊಡೆದಿತ್ತು ನಿದ್ದೆ ಬಾರದೆ ಬಾಲವ ಸುತ್ತಿ […]

ಸ್ಮರಣೆ

ಅರು #ಪ್ರಕಾಶನ ಸಹಯೋಗದಲ್ಲಿ ಶರೀಫರನ್ನು ಅವರ ೨೦೦ ನೇ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ ನಿನ್ನೆ ನೆರವೇರಿತು. ಕನ್ನಡದ ಅಪರೂಪದ ಆಶು ಕವಿ ಶರೀಫರ ವ್ಯಕ್ತಿತ್ವ.. ಜೀವನಗಳ ಕುರಿತು ಒಂದಷ್ಟು ಮಾತು. ಜನಮಾನಸದಲ್ಲಿ ನೆಲೆಗೊಂಡಿರುವ ಅವರ ಆಯ್ದ ೧೦ ತತ್ವ ಪದಗಳನ್ನು ಗಾಯನ ತಂಡದವರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವಿಕೆ.. ಜೊತೆಗೆ ಆ ಪದಗಳ ತಾತ್ವಿಕ ವಿಶ್ಲೇಷಣೆ.. ಕೊನೆಯಲ್ಲಿ ಪುಟ್ಟದೊಂದು ಉಪಹಾರದ ರೀತಿಯ ಪ್ರಸಾದ ಸೇವನೆ.. ಇಷ್ಟು ಕಾರ್ಯಕ್ರಮದ ಒಟ್ಟು ರೂಪುರೇಷೆ.

ಅನುಭವ

ಬೆಳಗಿನ ಚಹಾ ಹೀರುತ್ತಾ…. ಎನ್.ಶಂಕರ್ ಗೌಡ ಶರತ್ಕಾಲದ ಕಾತೀ೯ಮಾಸವಿದು. ಆರಂಭಿಕ ಚಳಿಗಾಲವಾದರೂ ನಿಧಾನವಾಗಿ ತಣ್ಣನೆಯ ಸುಳಿಗಾಳಿಯನ್ನು ಕೂಡ ತರುತ್ತದೆ.ಸಾದಾರಣ ಆಹ್ಲಾದಕರ ಹವಾಮಾನ ಹೊಂದಿದ ದಿನಗಳಿವು. ದೈಹಿಕವಾಗಿ ಹಿಮ್ಮೆಟ್ಟಿಸುವ ಸಮಯವಿದು.ರಾತ್ರಿ ದೀರ್ಘ, ಹಗಲು ಕಡಿಮೆ.ಕೆಲವರಿಗೆ ಸೋಮಾರಿತನವನ್ನು ಹೆಚ್ಚಿಸುವ ಈ ಚಳಿಗಾಲ ,ಬೆಚ್ಚಗಿನ ನೆನಪುಗಳನ್ನು ಹೊಂದಿದವರವನ್ನು ತಂಪಾಗಿರಿಸುತ್ತದೆ. ವೃದ್ಧಾಪ್ಯರಿಗೆ ಪಾಪ ಚಳಿ ಹೊರೆಯಾದರೆ,ನವ ವಧು-ವರರಿಗೆ ವರವಿದು. ಹಿಮ ಭರಿತ ಪ್ರದೇಶಗಳು ಕವಿಗಳನ್ನು ಆಕಷಿ೯ಸುತ್ತವೆ.ಜಿ.ಪಿ.ರಾಜರತ್ನಂ ರವರ ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಸಿದ್ ರೋಡ್ ಇದ್ದಂಗೆ…..”ಮಡಿಕೇರೀಲಿ ಮಂಜು”ಗ್ರಾಮ್ಯ ಸೊಗಡಿನ ಮನಸೆಳೆವ […]

ಕಾವ್ಯಯಾನ

ಮನದಾಳದ ಬಯಕೆ ರತ್ನಾ ಬಡವನಹಳ್ಳಿ ಸದ್ದಿಲ್ಲದೆ ಸರಿದ ಸುಂದರ ದಿನಗಳು ಸುದ್ದಿ ಮಾಡಿದ್ದರಿಯದಿಹ ವಾರಗಳು ತಂಗಳೆನಿಸದ ತಿಳಿನೀರಂತಹ ತಿಂಗಳುಗಳು ಹರುಷದ ಸವಿ ಸಿಂಚನಗೈದ ವರುಷಗಳು ಮೆಲುಕು ಹಾಕಲು ಕಾಯಬಹುದು ನಾ ಮುಂದೊಂದು ದಿನ ಬುದ್ದಿಯಗರ್ಭದಲಿ ಮೊಳಕೆಯೊಡೆದು ಮನಸು ಅಂಬೆಗಾಲಿಟ್ಟ ಅಕ್ಷರಗಳಲಿರದೆ ಮುನಿಸು ಪದಗಳಾಗಿ ಹೆಣೆದ ಬಾಡದಿಹ ಹಾರ ಸೊಗಸು ಕನ್ನಡಾಂಬೆಯ ಕೊರಳಲಂಕರಿಸಿ ಮೆರೆವ ಕನಸು ನಂಬಿಕೆಯ ನೆರಳಲಿ ನನಸಾಗಬಹುದು ಮುಂದೊಂದು ದಿನ ಕಿಚ್ಚಾವರಿಸದ ಹಚ್ಚ ಹಸಿರು ಕಾನನ ಸ್ವಚ್ಛ ಮನಗಳ ನಡುವೆ ಹೂವಾದ ಜೀವನ ಧಾವಂತಗಳಲಿ ನಲುಗದೆ […]

ಕಾವ್ಯಯಾನ

ಸಖಿ ಸತ್ಯಮಂಗಲ ಮಹಾದೇವ ಈ ಬೆಳಗಿನ ಏಕಾಂತ ಅದೇಕೊ ಮುದ ನೀಡಲಿಲ್ಲ ಸಖಿ ನಟ್ಟನಡುರಾತ್ರಿಯ ಕಡುಕತ್ತಲಲ್ಲಿ ನಿನ್ನ ಮೊಗವೊಂದೆ ಸಾಕು ಬೆಳದಿಂಗಳಂತೆ ಯಮುನಾ ತೀರದಲಲೆಯುತ ಒಂಟಿ ನಡಿಗೆಯ ಪ್ರಯಾಣ ಅದೆಷ್ಟು ನೀರಸ ಸಖಿ ಮಧುರ ಮಂಜುಳ ನಾದವೂ ಸಪ್ಪೆ ತೆರೆಯೇರಿ ಬೀಸುವ ತಂಗಾಳಿಯೂ ರುಚಿಯಿಲ್ಲ ಮೈಗೆ ನಿನ್ನ ಹೆಸರೊಂದೇ ಸಾಕು ಅದೆಷ್ಟೋ ದೂರದ ನಿನ್ನ ಸನಿಹದಂತಿರಿಸುವುದು ಪದವನರಿತ ಮನಸ್ಸಿಗೆ ಪರಿಚಯ ಬೇಕೆ ಬಣ್ಣವಾಗುವ ಕನಸುಗಳಿಗೆ ರೆಕ್ಕೆಗಳ ಬಿಡಿಸಿ ಹಾರುವುದ ಕಲಿಸಬೇಕೆ ಸಖಿ ನಿನ್ನ ಉಸಿರ ಜಾಡು ಕಣ್ಣಳತೆಯಲಿ […]

ಮಕ್ಕಳು ಮತ್ತು ಸಾಹಿತ್ಯ

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಎನ್.ಶೈಲಜಾ ಹಾಸನ ಅಮ್ಮ ತನ್ನ ಮಗುವನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಹಾಡು ಹೇಳಿ ಮಗುವನ್ನು ಮಲಗಿಸಲು ಅನುವಾಗುತ್ತಾಳೆ. ” ಅತ್ತಿತ್ತ ನೋಡಿದಿರು, ಅತ್ತು ಹೊರಳಾಡದಿರು, ಕದ್ದು ಬರುವದು ನಿದ್ದೆ, ಮಲಗು ಮಗುವೇ, ಜೋ ಜೋಜೋ ” ಅಂತ ಲಾಲಿ ಹಾಡು ಹೇಳಿ ಮಲಗಿಸುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಅಮ್ಮನ ಲಾಲಿ ಹಾಡು ಕೇಳುತ್ತಲೇ ಬೆಳೆದಿರುತ್ತಾರೆ. ಅಮ್ಮನ ಲಾಲಿ ಹಾಡು ಕೇಳುತ್ತಾ ಕೇಳುತ್ತಾ ಹಾಡು, ಕವಿತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದೆ. […]

ಕವಿತೆ ಕಾರ್ನರ್

ರಕ್ತ ಒಸರುವ ಗತದ ಗಾಯ
ಮುಲಾಮುಗಳಿಗೆಲ್ಲ ಮಾಯುವುದಿಲ್ಲ
ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ
ನರಕದ ಭಯ ಯಾರಿಗಿದೆ ಇಲ್ಲೀಗ?

ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಡಿ.ಎಸ್.ರಾಮಸ್ವಾಮಿ ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ. ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ […]

Back To Top