Category: ಪ್ರಬಂಧ

ಪರಿವರ್ತನೆಗೆ ದಾರಿ ಯಾವುದಾದರೇನು?

ಲಲಿತ ಪ್ರಬಂಧ ಪರಿವರ್ತನೆಗೆ ದಾರಿ ಯಾವುದಾದರೇನು? ನಾಗರೇಖಾ ಗಾಂವಕರ್ ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ  ವಿದ್ಯಾರ್ಥಿಗಳು  ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು  ಮಾತ್ರ. ಉಳಿದೆಲ್ಲ ಮಕ್ಕಳು […]

ಎಲೆಗಳ ಬಲೆಯಲ್ಲಿ…

ಲಲಿತ ಪ್ರಬಂಧ ಎಲೆಗಳ ಬಲೆಯಲ್ಲಿ…                                                             ಟಿ.ಎಸ್.ಶ್ರವಣಕುಮಾರಿ ಈ ಹದಿಮೂರು ಎಲೆಗಳಿಗೊಂದು ವಿಶಿಷ್ಟ ಆಕರ್ಷಣೆಯಿದೆ, ಸೆಳೆತವಿದೆ. ಕೆಲವರು ರಮ್ಮಿ, ಬ್ರಿಡ್ಜ್‌, ಮೂರೆಲೆ ಎನ್ನುತ್ತಾ ಇಸ್ಪೀಟಿನ ಹಿಂದೆ ಬಿದ್ದರೆ, ಇನ್ನು ಕೆಲವರು ಸಾಲಿಟೇರ್‌, ಫ್ರೀಸೆಲ್‌ ಎನ್ನುತ್ತಾ ಕಂಪ್ಯೂಟರಿನಲ್ಲಿ ಅದೇ ಹದಿಮೂರು ಎಲೆಗಳಲ್ಲಿ ಅಡಗಿಕೊಂಡಿರುತ್ತಾರೆ. ʻಅಂದರ್‌ ಬಾಹರ್‌ ಅಂದರ್‌ ಬಾಹರ್‌ʼ ಎಂದು ಕೋರಸ್‌ನಲ್ಲಿ ಗುನುಗುತ್ತ ʻಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿಮಣ್ಣು ನಿನ್ನ ಬಾಯೊಳಗೆʼ ಎಂದು ಹಾಡುತ್ತ ಜಾಕಿ ಚಲನಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ತನ್ನೆಲ್ಲಾ ಅಭಿಮಾನಿಗಳನ್ನೂ ವಶೀಕರಣ ಮಾಡಿಕೊಂಡಿದ್ದು […]

ವಿಚಿತ್ರ ಆಸೆಗಳು…ಹೀಗೊಂದಷ್ಟು,

ಲಲಿತ ಪ್ರಬಂಧ ವಿಚಿತ್ರ  ಆಸೆಗಳು…ಹೀಗೊಂದಷ್ಟು, ಸಮತಾ ಆರ್. “ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ. ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ […]

ಪಾರಿಜಾತ ಗಿಡ

ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.             ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು […]

ಬೀದಿಯ ಪ್ರಪಂಚ….

ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ…  ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು […]

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು […]

ಆಡು ಭಾಷೆಯ ವೈಶಿಷ್ಟ್ಯತೆ

ಪ್ರಬಂಧ ಆಡು ಭಾಷೆಯ ವೈಶಿಷ್ಟ್ಯತೆ ಬಾಲಾಜಿ ಕುಂಬಾರ ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ […]

ಶಿಶುತನದ ಹದನದೊಳು ಬದುಕಲೆಳಸಿ…

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ… ಲಕ್ಷ್ಮಿ ನಾರಾಯಣಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ […]

ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ    ಫ್ಲೈಟ್ ತಪ್ಪಿಸಿದ  ಮೆಹೆಂದಿ ಸುಮಾ ವೀಣಾ                                         ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ […]

Back To Top