Category: ಇತರೆ

ಇತರೆ

ಅನುಭವ

ಬೆಳಗಿನ ಚಹಾ ಹೀರುತ್ತಾ…. ಎನ್.ಶಂಕರ್ ಗೌಡ ಶರತ್ಕಾಲದ ಕಾತೀ೯ಮಾಸವಿದು. ಆರಂಭಿಕ ಚಳಿಗಾಲವಾದರೂ ನಿಧಾನವಾಗಿ ತಣ್ಣನೆಯ ಸುಳಿಗಾಳಿಯನ್ನು ಕೂಡ ತರುತ್ತದೆ.ಸಾದಾರಣ ಆಹ್ಲಾದಕರ ಹವಾಮಾನ ಹೊಂದಿದ ದಿನಗಳಿವು. ದೈಹಿಕವಾಗಿ ಹಿಮ್ಮೆಟ್ಟಿಸುವ ಸಮಯವಿದು.ರಾತ್ರಿ ದೀರ್ಘ, ಹಗಲು ಕಡಿಮೆ.ಕೆಲವರಿಗೆ ಸೋಮಾರಿತನವನ್ನು ಹೆಚ್ಚಿಸುವ ಈ ಚಳಿಗಾಲ ,ಬೆಚ್ಚಗಿನ ನೆನಪುಗಳನ್ನು ಹೊಂದಿದವರವನ್ನು ತಂಪಾಗಿರಿಸುತ್ತದೆ. ವೃದ್ಧಾಪ್ಯರಿಗೆ ಪಾಪ ಚಳಿ ಹೊರೆಯಾದರೆ,ನವ ವಧು-ವರರಿಗೆ ವರವಿದು. ಹಿಮ ಭರಿತ ಪ್ರದೇಶಗಳು ಕವಿಗಳನ್ನು ಆಕಷಿ೯ಸುತ್ತವೆ.ಜಿ.ಪಿ.ರಾಜರತ್ನಂ ರವರ ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಸಿದ್ ರೋಡ್ ಇದ್ದಂಗೆ…..”ಮಡಿಕೇರೀಲಿ ಮಂಜು”ಗ್ರಾಮ್ಯ ಸೊಗಡಿನ ಮನಸೆಳೆವ […]

ಮಕ್ಕಳು ಮತ್ತು ಸಾಹಿತ್ಯ

ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು. ಎನ್.ಶೈಲಜಾ ಹಾಸನ ಅಮ್ಮ ತನ್ನ ಮಗುವನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಹಾಡು ಹೇಳಿ ಮಗುವನ್ನು ಮಲಗಿಸಲು ಅನುವಾಗುತ್ತಾಳೆ. ” ಅತ್ತಿತ್ತ ನೋಡಿದಿರು, ಅತ್ತು ಹೊರಳಾಡದಿರು, ಕದ್ದು ಬರುವದು ನಿದ್ದೆ, ಮಲಗು ಮಗುವೇ, ಜೋ ಜೋಜೋ ” ಅಂತ ಲಾಲಿ ಹಾಡು ಹೇಳಿ ಮಲಗಿಸುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಅಮ್ಮನ ಲಾಲಿ ಹಾಡು ಕೇಳುತ್ತಲೇ ಬೆಳೆದಿರುತ್ತಾರೆ. ಅಮ್ಮನ ಲಾಲಿ ಹಾಡು ಕೇಳುತ್ತಾ ಕೇಳುತ್ತಾ ಹಾಡು, ಕವಿತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದು ಬಂದಿರುತ್ತದೆ. […]

ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು ಡಿ.ಎಸ್.ರಾಮಸ್ವಾಮಿ ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ. ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ […]

ಅನುಭವ

ಕಾಯುವವರು ಹಲವರಾದರೆ ಕೊಲುವವ ಒಬ್ಬನೇ ! ಗೌರಿ.ಚಂದ್ರಕೇಸರಿ          ಕೆಲ ದಿನಗಳ ಹಿಂದೆ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪೇಟೆಗೆಂದು ಹೊರಟಿದ್ದೆ. ಸ್ವಲ್ಪ ದೂರ ಕ್ರಮಿಸುವುದರಲ್ಲಿ ರಸ್ತೆಯ ಮಧ್ಯದಲ್ಲಿ ಹಾವೊಂದು ಕಂಡಿತು. ಆ ಬದಿಯಿಂದ ಈ ಬದಿಯ ರಸ್ತೆಯನ್ನು ಅದು ದಾಟುತ್ತಿತ್ತು. ತಕ್ಷಣವೇ ಸ್ಕೂಟಿಯನ್ನು ಬದಿಗೆ ನಿಲ್ಲಿಸಿದ್ದೆವು. ಎದುರು ಬದುರಿನಿಂದ ಬರುತ್ತಿದ್ದ ವಾಹನ ಸವಾರರು ಹಾವಿನ ಮೇಲೆ ವಾಹನಗಳನ್ನು ಹತ್ತಿಸದಂತೆ ಮಗಳು ಎಲ್ಲರ ಗಮನವನ್ನು ಹಾವಿನತ್ತ ಸೆಳೆಯುತ್ತಿದ್ದಳು. ಅದನ್ನು ಕಂಡ ವಾಹವ ಸವಾರರೆಲ್ಲ ತಮ್ಮ […]

ಕಾವ್ಯಯಾನ

ಅಪ್ಪನೊಡನೆ ಒಂದಿಷ್ಟು ಮೋಹನ ಗೌಡ ಹೆಗ್ರೆ ಒರಿಗೆಯವರೆಲ್ಲ ಬಾಲ್ಯಕ್ಕೆ ಬಣ್ಣ ತುಂಬುವಾಗ ನನ್ನ ಪಂಜರದ ಗಿಳಿಯಾಗಿ ಮಾಡಿದ ಸದಾ ನಾ ಶಪಿಸುವವ ನೀನಾಗಿದ್ದೆ ಊರ ಜಾತ್ರೆಯಲಿ ಅಮ್ಮ ಕೈ ಹಿಡಿದು ನಿಂತರೂ ದೂರದ ಕಣ್ಣುಗಳ ಕಾವಲುಗಾರನಾದ ನಿನ್ನ ಶಪಿಸುವವಳು ನಾನಾಗಿದ್ದೆ. ಎಲ್ಲೋ ಯಾರೋ ಓಡಿಹೋದ ಸುದ್ದಿಗೆಲ್ಲಾ ಸುಮ್ಮನೆ ಮುಂದಾಲೋಚನೆಯಿಂದ ಅಮ್ಮನ ಬೈಯುವಾಗ ನಾ ಕಂಡ ನಕ್ಸಲೈಟ್ ನೀನಾಗಿದ್ದೆ…. ನಿನ್ನಿಷ್ಟದಂತೆ ಓದಿದೆ ಕೆಲಸಕ್ಕೂ ಸೇರಿದೆ ಇಷ್ಟು ವರ್ಷ ಬೆವರಿಳಿಸಿದ ನೀನು ನಾ ಮೆಚ್ಚಿದ ಗಂಡಿಗೆ ನನ್ನ ಒಪ್ಪಿಸಿದೆ….. ಅಂದು […]

ಶರೀಫರ ನೆನೆಯುತ್ತಾ…

ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ 200ನೇ ವರ್ಷಾಚರಣೆ ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ. ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. […]

ವಿಶ್ಲೇಷಣೆ

ರಾಮ-ರಾಮಾಯಣ ಅಯೋಧ್ಯಾರಾಮ. ಗಣೇಶ ಭಟ್ ಶಿರಸಿ ..       ಅಯೋಧ್ಯೆಯಲ್ಲಿ  ರಾಮಮಂದಿರ  ನಿರ್ಮಾಣಕ್ಕೆ  ಹಸಿರು  ನಿಶಾನೆ ಸಿಕ್ಕಿರುವುದರಿಂದ    ಜನಸಾಮಾನ್ಯರು ನಿರಾಳವಾಗಿದ್ದರೆ, ರಾಜಕೀಯ  ಪಕ್ಷಗಳಿಗೆ   ಚಿಂತೆ  ಶುರುವಾಗಿದೆ.   ಬಹಳಷ್ಟು ವರ್ಷಗಳಿಂದ ಸಮಸ್ಯೆಯನ್ನು ಜೀವಂತವಾಗಿಟ್ಟು,  ಜನರನ್ನು  ಮರುಳು ಮಾಡಿ ಮತ ಗಳಿಸುತ್ತಿದ್ದವರಿಗೆ  ಇನ್ನೊಂದು ಹೊಸ ಸಮಸ್ಯೆ  ಹುಟ್ಟು ಹಾಕುವ  ಕುರಿತು   ಯೋಚಿಸುವ  ಪರಿಸ್ಥಿತಿ  ಎದುರಾಗಿದೆ.  ಇನ್ನು ರಾಮನನ್ನು  ಬಹುಬೇಗ  ನೇಪಥ್ಯಕ್ಕೆ ಸರಿಸಲಾಗುತ್ತದೆ.  ರಾಮಾಯಣದ  ಅಯೋಧ್ಯೆಯ  ರಾಮಚಂದ್ರನಿಗೂ, ಭಾರತೀಯ  ದರ್ಶನಶಾಸ್ತ್ರದ  ರಾಮನಿಗೂ ಏನಾದರೂ ಸಂಬಂಧವಿದೆಯೇ […]

ಪ್ರಬಂಧ

ಅಪ್ಪ ಅಂದರೆ ಆಕಾಶ = ಅಮ್ಮ ಅಂದರೆ ಭೂಮಿ. ಬಸನಗೌಡ ಪಾಟೀಲ ಹೆಗಲಿಗೆ ಕೊಡಲಿ ಹಾಕಿಕೊಂಡು ಸೂರ್ಯೋದಯವಾಗುತ್ತಿದ್ದಂತೆ ಹೊಲದ ಕಡೆ ಹೋದಾತ ಮರಳಿ ಮನೆಗೆ ಬರುವುದು ಸೂರ್ಯ ತಾಯಿಯ ಮಡಿಲು ಸೇರಿದ ಮೇಲೆಯೆ. ಮುಳ್ಳು ಕಂಟಿ ಕಡಿಯೋದು ನೀರು ಹಾಯೊಸೋದು, ಗೊಬ್ಬರ ಹರವುವುದು ಮಣ್ಣು ಹದ ಮಾಡುವುದು ಒಂದಾ ಎರಡಾ ಅವನ ಕೆಲಸ. ಸುರಿಯುವ ಮಳೆಯಲ್ಲಿ ಇಕ್ಕೆಲದ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ನಡೆದುಕೊಂಡು ಮನೆ ಸೇರೋ ಕಷ್ಟ ಅವನಿಗೆ ಮಾತ್ರ ಗೊತ್ತು. ಅದಕ್ಕೆ ಅನ್ನೋದು ಅಪ್ಪ […]

ಮಕ್ಕಳ ದಿನ

ಅಣ್ಣ ಬಾರಣ್ಣ ಸಿಂದು ಭಾರ್ಗವ್ ಅಣ್ಣ ಅಣ್ಣ ನನ್ನ ಜೊತೆಗೆ ಆಡಲು ಬಾರಣ್ಣ ಬ್ಯಾಟು ಬಾಲು ತಂದು ಇಡುವೆನು ಬೇಗ ಬಾರಣ್ಣ ಸ್ಕೂಲ್ ಗೆ ಹೋಗುವೆ ನನ್ನನು ಬಿಟ್ಟು ಏಕೆ ಹೇಳಣ್ಣ ತಿರುಗಿ ಬರುವ ತನಕ ಕಾಯುವೆ ನಿನ್ನೀ ಹಾದಿಯನ್ನ ಅಣ್ಣ ಅಣ್ಣ ನನ್ನ ಜೊತೆಗೆ ಅಂಗಡಿಗೆ ಬಾರಣ್ಣ ಮಿಠಾಯಿ ಕೊಡಿಸು ಆಟಿಕೆ ಕೊಡಿಸು ಎಂದು ಕೇಳೆನಣ್ಣ. ನಿನ್ನ ಕೈಹಿಡಿದೇ ಸಾಗುವೆ ಪೂರ ಬೀದಿಯನ್ನ ಅಣ್ಣ ಅಣ್ಣ ನನ್ನ ಜೊತೆಗೆ ಊಟಕೆ ಬಾರಣ್ಣ ನಾನೊಂದು ತುತ್ತು ನೀನೊಂದು […]

Back To Top