Category: ಪ್ರಬಂದ

ವಾಕಿಂಗ್..

ಇನ್ನು 10 ನಿಮಿಷದ ದಾರಿಯಲ್ಲಿರುವ ಅಕ್ಕನ ಮನೆಯಲ್ಲಿದ್ದ ಎಂಟು ತಿಂಗಳ ಮರಿ ಡೋರ , ಕೆಲ ತಿಂಗಳ ಹಿಂದೆ ಅನಾರೋಗ್ಯ ದಿಂದ ಇಹಲೋಕ ತ್ಯಜಿಸಿದ್ದಳು. ಡೋರಗೆ ಡ್ರಿಪ್ ಹಾಕಿ ಮಲಗಿ ಸಿದ್ದಾಗ, ಸೋನು ಅವಳ‌ ಪಕ್ಕನೇ ಇರುತ್ತಿದ್ದ. ಈಗಲೂ ವಾರಕ್ಕೊಮ್ಮೆಯಾದರೂ ಅಕ್ಕನ‌ ಮನೆ ತನಕ ವಾಕಿಂಗ್ ಹೋಗಿ ಡೋರ ಳ ಹುಡುಕಾಡಿ ಮನೆಯವರನ್ನೆಲ್ಲ ಕರುಣಾಪೂರಿತ ಕಣ್ಣು ಗಳಿಂದ ನೋಡಿ ಸುಮ್ಮನೆ ಹೊರಹೋಗುತ್ತಾನೆ.

ಹಾಲು ಎಲ್ಲಿ ಕೊಳ್ಳುವುದು?

ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.

ಬಸ್ ಪಯಣ

ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ  ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ !  ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! […]

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ […]

ಅಳುವನ್ನು ಅನುಸರಿಸಿ ಹೋಗುವವನೇ ಕವಿ

ಪ್ರಬಂಧ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಸರಿತಾಮಧು ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ. ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.      ಸ್ವತಃ ಬೇಡ ನಾಗಿದ್ದು ರತ್ನಾಕರ […]

ಲಲಿತ ಪ್ರಬಂಧ

ಲಲಿತ ಪ್ರಬಂಧ ನನ್ನ ಲಿಯೋ ಸಮತಾ ಆರ್.   ಒಂದು ದಿನ ಎಂದಿನಂತೆ ಶಾಲೆಗೆ ಹೊರಟು ಸಿದ್ದಳಾಗಿ ಹೊರಬಂದು ಕಣ್ಣಾಡಿಸಿದರೆ, ಲಿಯೋ ಅವನಿರುವ ಜಾಗದಲ್ಲಿ ಇಲ್ಲ!”ಲಿಯೋ ರೆಡಿ ಏನೋ, ಎಲ್ಲಿದ್ದೀಯೋ’?”ಎಂದಾಕ್ಷಣ”ನಾನಾಗಲೇ ರೆಡಿಯಾಗಿ ನಿಂತಿದ್ದೀನಿ ಬಾರಕ್ಕ”ಎಂಬ ಉತ್ತರ ಕೇಳಿಸಿತು, ಆದರೆ ಕಾಣಲಿಲ್ಲ. “ಲೋ, ಎಲ್ಲೋ ಇದಿಯಾ, ಇರೋ ಜಾಗದಲ್ಲಿರೋಕೆ ನಿಂಗೇನೋ ಕಾಯಿಲೆ! ಈಗ್ಲೇ ಲೇಟಾಗಿದೆ ,ಇನ್ನು ನಿನ್ನನ್ನು ಹುಡುಕಿಕೊಂಡು ಬೇರೆ ಸಾಯ್ಬೇಕು” ಎಂದು ಸಿಟ್ಟಿನಿಂದ ಕಿರುಚಿದಾಗ,” ಅಕ್ಕ ಒಂಚೂರು ಈ ಕಡೆ ನೋಡು”ಎಂದು ನನ್ನ ಬಲಬದಿಯ ಹತ್ತು ಮಾರು […]

Back To Top