Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ನಿಮ್ಮೊಂದಿಗೆ ಮಕ್ಕಳ ಬಗ್ಗೆ ಎರಡು ಮಾತು

ಇವತ್ತು ನವೆಂಬರ್ ಹದಿನಾಲ್ಕು ಮಕ್ಕಳದಿನಾಚರಣೆ. ಯಾರ ನೆನಪಿನಲ್ಲಿ  ಆಚರಿಸುತ್ತಿದ್ದೇವೆ ಅನ್ನುವುದಕ್ಕಿಂತ, ಹೇಗೆ ಮತ್ತು ಯಾವ ಉದ್ದೇಶಗಳನ್ನು ಇಟ್ಟುಕೊಂಡು ಆಚರಿಸುತ್ತಿದ್ದೇವೆಂಬುದು ಮಾತ್ರ ನಮಗೆ ಮುಖ್ಯವಾಗಬೇಕಿದೆ. ಮಕ್ಕಳ ದಿನದಂದು ಮಕ್ಕಳಿಂದ ನೃತ್ಯ ಮಾಡಿಸಿ, ಆಟ  ಆಡಿಸಿ, ಸಿಹಿ ಹಂಚಿ ಮಕ್ಕಳ ಬಗ್ಗೆ ಉದ್ದನೆಯ ಬಾಷಣಗಳನ್ನು ಬಿಗಿಯುವಷ್ಟಕ್ಕೆ ಈ ಆಚರಣೆಯನ್ನು ಮುಗಿಸಲಾಗುತ್ತಿದೆ. ಆದರೆ  ಮಕ್ಕಳದಿನದಂದು ಮಾತ್ರವಲ್ಲದೆ ಪ್ರತಿನಿತ್ಯವು ನಮಗೆ ಮಕ್ಕಳ ಬಗ್ಗೆ ಕಾಳಜಿ-ಪ್ರೀತಿಯಿರಬೇಕು. ಯಾಕೆಂದರೆ ಯಾವುದೇ ನಾಡಿನ ಭವಿಷ್ಯ ನಿಂತಿರುವುದು ಆ ನಾಡಿನ ಮಕ್ಕಳು ಹೇಗೆ ಪಾಲಿಸಲ್ಪಡುತ್ತಿದ್ದಾರೆ-ಬೆಳೆಸಲ್ಪಡುತ್ತಿದ್ದಾರೆ  ಎನ್ನುವುದರ ಮೇಲೆ. ಹಾಗಾಗಿ […]

ಸಂಪಾದಕರ ಮಾತು

ಕು.ಸ.ಮಧುಸೂದನರಂಗೇನಹಳ್ಳಿ           ಮೊದಲಿಗೆ ನಿಮಗೆಲ್ಲ ಬೆಳಕಿನಹಬ್ಬದ ಶುಭಾಶಯಗಳು.  ಅನಗತ್ಯ  ಖರ್ಚು ಮತ್ತು ಅಪಾಯವನ್ನು ಮೈಮೇಲೇಳೆದುಕೊಳ್ಳದೆ, ಸರಳವಾಗಿ,ಅನ್ಯರಿಗೆ ತೊಂದರೆ ಕೊಡದ ರೀತಿಯಲ್ಲಿ ಹಬ್ಬ ಆಚರಿಸಿ. ಹಬ್ಬದಂದು ಹಚ್ಚುವ ದೀಪದ ಬೆಳಕು ಮನದೊಳಗಿನ ಕತ್ತಲೆಯನ್ನೂ ಕಳೆಯುವಂತಿರ ಬೇಕು.ಆಗಲೇ ಹಬ್ಬಕ್ಕೆ ಸಾರ್ಥಕತೆ ಬರುವುದು    ಇನ್ನು ‘ಸಂಗಾತಿ’ಬಗ್ಗೆ ಏನು ಹೇಳಲಿ?ನಗರದ ಸಾಹಿತ್ಯಕ್ಷೇತ್ರದ ಕಣ್ಣು ಕುಕ್ಕುವ ಬೆಳಕಿನಿಂದ ಬಹುದೂರದಲ್ಲಿರುವ ಹಳ್ಳಿಯೊಂದರಿಂದ ಹೊರಬರುತ್ತಿರುವ  ಪತ್ರಿಕೆಗೆ ನೀವು ತೋರಿಸುತ್ತಿರುವ ಪ್ರೀತಿ ದೊಡ್ಡದೇ ಸರಿ. ಪತ್ರಿಕೆಯ ಬಗ್ಗೆ ಹಲವರ ಮೆಚ್ಚುಗೆಯಜೊತೆಗೆ ಕೆಲವು ದೂರುಗಳೂ ಇವೆ. ಅವನ್ನೂ […]

ಸಂಪಾದಕೀಯ

ಗೆಳೆಯರೆ, ಸಂಗಾತಿ ಪತ್ರಿಕೆಯನ್ನು ಕೇವಲ ರಂಜನೆಗಾಗಿ ರೂಪಿಸಿಲ್ಲ-ಜೊತೆಗೆ ಕೇವಲ ಕತೆ-ಕತೆಗಳಿಗೆ ಮಾತ್ರ ಮೀಸಲಿರಿಸಿಯೂ ಇಲ್ಲ.ಪತ್ರಿಕೆಯಲ್ಲಿ ಪ್ರಖರವಾದ ವೈಚಾರಿಕ ಲೇಖನಗಳನ್ನು,ಸಮಕಾಲೀನ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠ ವಿಮರ್ಶಾತ್ಮಕ, ಬರಹಗಳನ್ನು ಪ್ರಕಟಿಸಬೇಕೆಂಬುದು ನಮ್ಮಬಯಕೆ. ಈ ವಿಷಯಗಳಬಗ್ಗೆ ಬರೆಯುವವರು ಸಾಕಷ್ಟು ಜನ ಲೇಖಕರಿದ್ದರೂ ಅವರಿನ್ನೂ ನಮ್ಮ ಪತ್ರಿಕೆಗೆ ಬರೆಯುವ ಮನಸ್ಸು ಮಾಡಿಲ್ಲ. ಬಹುಶ: ಪತ್ರಿಕೆಯ ನಡೆಯನ್ನು ಕಾದುನೋಡುವ ಉದ್ದೇಶವಿದ್ದರೂ ಇರಬಹುದೇನೊ. ಈ ದಿಸೆಯಲ್ಲಿ ಬಹಳಷ್ಟು ಲೇಖಕರನ್ನು ಈಗಾಗಲೇ ಸಂಪರ್ಕಿಸಿ ಬರೆಯಲು ಕೋರಿದ್ದೇನೆ.ಜನಪ್ರಿಯತೆಗಾಗಿ ಸಂಗಾತಿ ತನ್ನಗುಣಮಟ್ಟ ಮತ್ತು ಸ್ವಂತಿಕೆಯನ್ನುಯಾವತ್ತಿಗೂ ಬಿಟ್ಟು ಕೊಡುವುದಿಲ್ಲೆಂದು ಈ ಮೂಲಕ […]

ಕಾವ್ಯಯಾನ

ದಾರಿಯುದ್ದಕ್ಕೂ…… ಮುಗಿಲಕಾವ್ಯ ನೀ ಬರುವ ದಾರಿ ಉದ್ದಕ್ಕೂ ಒಲವಿನ ಹೂ ಹಾಸಿ ಗರಿಗೆದರಿದ ನನ್ನೊಳಗಿನ ಹೃದಯದ ಭಾವಗಳನ್ನು,,, ಒಪ್ಪವಾಗಿ ಜೋಡಿಸಿಕೊಳ್ಳುತ್ತಾ ಕಣ್ಣು ಕೀಲಿಸುತ್ತೇನೆ,, ಹಾದಿಯೂ ಒಮ್ಮೊಮ್ಮೆ ಸಿಟ್ಟಿಗೇಳುತ್ತದೆ ಅಲ್ಲಲ್ಲ ಕರುಬುತ್ತದೆ ನಿನ್ನ ಮೇಲಿನ ನನ್ನೊಲವಿನ ಕಂಡು ಇದರ ಮತ್ಸರ ಎಷ್ಟಿದೆ ಗೊತ್ತಾ? ಬೇಕೆಂತಲೇ ಭಾರವಾಗಿ ದೂರವಾಗಿ ಕ್ಷಣಗಳನ್ನು ಯುಗಗಳಾಗಿ ಮಾಡುತ್ತಾ,,, ಮತ್ತಷ್ಟು ನನ್ನ ಕಾಯಿಸಲು ಶುರುವಿಟ್ಟುಕೊಳ್ಳುತ್ತದೆ ಮೊದಮೊದಲಿಗೆ ನಾನು ಜಿದ್ದಿಗಿಳಿಯುತ್ತೇನೆ ಸೋಲಲಾರೆ ಎಂದೂ ನಿನ್ನ ಕಾಣುವ ತವಕ ಮೂಡಿದಂತೆಲ್ಲಾ ನಾನೇ ನಾನಾಗಿ ಸೋತುಬಿಡುತ್ತೇನೆ; ನಿನ್ನ ಸಂಧಿಸುವ ಗಳಿಗೆಯ […]

ಅನುವಾದ

ಮೂರು ಅನುವಾದಿತ ಗಜಲುಗಳು. ಉತ್ತಮ ಯಲಿಗಾರ ಗಜಲ್-ಒಂದು ಹೆಜ್ಜೆ ಶಬ್ದವೊಂದು ಕೇಳಿಸಿದರೆ ಅನಿಸುವದು ನೀನೆಂದು ನೆರಳೊಂದು ಬಳಿ ಸುಳಿದರೆ ಅನಿಸುವದು ನೀನೆಂದು ಹೂದೋಟದಲಿ ರೆಂಬೆಯೊಂದನು ಮುಟ್ಟಲು ನಾಚಿ ನಲಿದಾಡಿದರೆ ಅನಿಸುವದು ನೀನೆಂದು ಚಂದನದಿ ಸುವಾಸಿತ ಮದಭರಿತ ಗಾಳಿಯು ಅನಂದದಿ ಮೈಸೋಕಲು ಅನಿಸುವದು ನೀನೆಂದು ತಾರೆಗಳ ಮಿನುಗುವ ಹೊದಿಕೆ ಹೊದ್ದುಕೊಂಡು ನದಿಯೊಂದು ಹರಿದಾಡಿದರೆ ಅನಿಸುವದು ನೀನೆಂದು ಸರಿರಾತ್ರಿಯಲಿ ಬಂದು ಒಂದು ಹೊನ್ನ ರಶ್ಮಿ ನನ್ನೊಂದಿಗೆ ಉರುಳಾಡಿದರೆ ಅನಿಸುವದು ನೀನೆಂದು. ಮೂಲ: ಜಾನ್ ನಿಸ್ಸಾರ್ ಅಖತರ್ (ಉರ್ದು) ============================== ಗಜಲ್ […]

ಅನುವಾದ

ಹಿಂದಿ ಮೂಲ:    ಅದ್ನಾನ್ ಕಾಫೀಲ್ ದರ್ವೇಶ್ ಪರಿಚಯ: ಕವಿ ಅದ್ನಾನ್ ಕಾಫೀಲ್ ದರ್ವೇಶ್ ಉತ್ತರ ಪ್ರದೇಶದ ಬಾಲಿಯಾದವರು. ಪ್ರಸ್ತುತ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಯುತ್ತಾರೆ. ಹಿಂದಿಯ ಪ್ರಖ್ಯಾತ ಪತ್ರಿಕೆಗಳಲ್ಲಿ ಅವರ ಕವನಗಳು ಬೆಳಕು ಕಂಡಿವೆ. ಅವರು ಅನುವಾದದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಕಾವ್ಯಕ್ಕೆ ಈಗಾಗಲೇ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಕನ್ನಡಕ್ಕೆ: ಕಮಲಾಕರ ಕಡವೆ ಪರಿಚಯ: ಕಮಲಾಕರ ಕಡವೆ, ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರು, ಈಗ ಮಹಾರಾಷ್ಟ್ರದ ಅಹಮದನಗರದಲ್ಲಿ […]

ನಿಮ್ಮೊಂದಿಗೆ

ನಿಮ್ಮೊಂದಿಗೆ……… ಕು.ಸ.ಮಧುಸೂದನರಂಗೇನಹಳ್ಳಿ ಪ್ರಿಯರೆ,          ‘ಸಂಗಾತಿ’ ಡಿಜಿಟಲ್  ಕನ್ನಡ ಸಾಹಿತ್ಯ ಪತ್ರಿಕೆಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.          ಇವತ್ತು ಮುದ್ರಣ ಮಾಧ್ಯಮದಿಂದ ಜನ ದೂರ ಸರಿಯುತ್ತಿದ್ದರೆ, ಅದಕ್ಕೆ ಕಾರಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಜನರ ಜೀವನ ಶೈಲಿ ಮತ್ತು ಅಗ್ಗದ ದರದಲ್ಲಿ ದೊರೆಯುತ್ತಿರುವ ಅಂತರ್ಜಾಲ ಸಂಪರ್ಕಗಳು,ಪ್ರತಿಯೊಬ್ಬರ ಕೈಲೂ ಇರುವ ಸ್ಮಾರ್ಟ್ ಪೋನುಗಳೇ ಕಾರಣ. ಇದರ ಜೊತೆಗೆ ದುಬಾರಿಯಾಗುತ್ತಿರುವ ಪುಸ್ತಕಗಳ ಬೆಲೆಯೂ ಒಂದು ಕಾರಣ!      ಮೊದಲಿನ ಹಾಗೆ ಪುಸ್ತಕವೊಂದನ್ನು ಕೈಲಿಹಿಡಿದು  ಕೂತಲ್ಲೇ ಬೇರು ಬಿಟ್ಟು ಓದುವ ಪುರಸೊತ್ತು ಯಾರಿಗೂ […]

ನಿಮ್ಮೊಂದಿಗೆ!

ಸಂಪಾದಕರ ಮಾತು….. ಕು.ಸ.ಮಧುಸೂದನರಂಗೇನಹಳ್ಳಿ ಪ್ರಿಯರೆ,          ‘ಸಂಗಾತಿ’ ಡಿಜಿಟಲ್  ಕನ್ನಡ ಸಾಹಿತ್ಯ ಪತ್ರಿಕೆಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.          ಇವತ್ತು ಮುದ್ರಣ ಮಾಧ್ಯಮದಿಂದ ಜನ ದೂರ ಸರಿಯುತ್ತಿದ್ದರೆ, ಅದಕ್ಕೆ ಕಾರಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಜನರ ಜೀವನ ಶೈಲಿ ಮತ್ತು ಅಗ್ಗದ ದರದಲ್ಲಿ ದೊರೆಯುತ್ತಿರುವ ಅಂತರ್ಜಾಲ ಸಂಪರ್ಕಗಳು,ಪ್ರತಿಯೊಬ್ಬರ ಕೈಲೂ ಇರುವ ಸ್ಮಾರ್ಟ್ ಪೋನುಗಳೇ ಕಾರಣ. ಇದರ ಜೊತೆಗೆ ದುಬಾರಿಯಾಗುತ್ತಿರುವ ಪುಸ್ತಕಗಳ ಬೆಲೆಯೂ ಒಂದು ಕಾರಣ!      ಮೊದಲಿನ ಹಾಗೆ ಪುಸ್ತಕವೊಂದನ್ನು ಕೈಲಿಹಿಡಿದು  ಕೂತಲ್ಲೇ ಬೇರು ಬಿಟ್ಟು ಓದುವ ಪುರಸೊತ್ತು […]

Back To Top