ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕು.ಸ.ಮಧುಸೂದನರಂಗೇನಹಳ್ಳಿ

          ಮೊದಲಿಗೆ ನಿಮಗೆಲ್ಲ ಬೆಳಕಿನಹಬ್ಬದ ಶುಭಾಶಯಗಳು.  ಅನಗತ್ಯ  ಖರ್ಚು ಮತ್ತು ಅಪಾಯವನ್ನು ಮೈಮೇಲೇಳೆದುಕೊಳ್ಳದೆ, ಸರಳವಾಗಿ,ಅನ್ಯರಿಗೆ ತೊಂದರೆ ಕೊಡದ ರೀತಿಯಲ್ಲಿ ಹಬ್ಬ ಆಚರಿಸಿ. ಹಬ್ಬದಂದು ಹಚ್ಚುವ ದೀಪದ ಬೆಳಕು ಮನದೊಳಗಿನ ಕತ್ತಲೆಯನ್ನೂ ಕಳೆಯುವಂತಿರ ಬೇಕು.ಆಗಲೇ ಹಬ್ಬಕ್ಕೆ ಸಾರ್ಥಕತೆ ಬರುವುದು

   ಇನ್ನು ‘ಸಂಗಾತಿ’ಬಗ್ಗೆ ಏನು ಹೇಳಲಿ?ನಗರದ ಸಾಹಿತ್ಯಕ್ಷೇತ್ರದ
ಕಣ್ಣು ಕುಕ್ಕುವ ಬೆಳಕಿನಿಂದ ಬಹುದೂರದಲ್ಲಿರುವ ಹಳ್ಳಿಯೊಂದರಿಂದ ಹೊರಬರುತ್ತಿರುವ  ಪತ್ರಿಕೆಗೆ ನೀವು ತೋರಿಸುತ್ತಿರುವ ಪ್ರೀತಿ ದೊಡ್ಡದೇ ಸರಿ.
ಪತ್ರಿಕೆಯ ಬಗ್ಗೆ ಹಲವರ ಮೆಚ್ಚುಗೆಯಜೊತೆಗೆ ಕೆಲವು ದೂರುಗಳೂ ಇವೆ. ಅವನ್ನೂ ನಿಮ್ಮ ಬಳಿ ಹಂಚಿಕೊಳ್ಳಲು
ಬಯಸುತ್ತೇನೆ:

 ಮೊದಲನೆಯದಾಗಿ ಕವಿತೆಗಳು ಹೆಚ್ಚಾದವು ಎಂಬುದು. ನಿಜ, ನನಗು ಹಾಗನಿಸಿತು. ಅದರೆನು ಮಾಡಲಿ?  ಪತ್ರಿಕೆಗೆ ಹೆಚ್ಚುಜನ ಕವಿತೆಗಳನ್ನೇ ಕಳಿಸುತ್ತಿದ್ದಾರೆ.  ಎರಡನೆಯದು, ವೈಚಾರಿಕ ಲೇಖನಗಳು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆಯಾಗಿವೆ. ಪ್ರಕಟಿಸಲು ನಮ್ಮದೇನು ತಕರಾರಿಲ್ಲ ಆದರೆ ಬರೆಯುವವರು ಯಾರು? ಪ್ರಖ್ಯಾತನಾಮರು ಈಗಾಗಲೇ ಹೆಸರು ಮಾಡಿರುವ ಪತ್ರಿಕೆಗಳಿಗೆ ಮಾತ್ರ ಬರೆಯಬೇಕೆಂದುಕೊಂಡಂತಿದೆ.. ಆದರೆ ನನ್ನ ಪ್ರಯತ್ನ ಕೈ ಬಿಟ್ಟಲ್ಲ,ಆದಷ್ಟೂ ಹಿರಿಯ ಬರಹಗಾರರನ್ನು ನಾನೇ ವೈಯುಕ್ತಿಕವಾಗಿ ಸಂಪರ್ಕಿಸಿ ಬರೆಯಲು ಕೋರುತ್ತಿದ್ದೇನೆ.

 ಇರಲಿ ಪ್ರತಿ ಹೊಸ ಪ್ರಯತ್ನದ ಹಿಂದೆಯೂ ಇಂತಹ ಕೊರತೆಗಳಿರುತ್ತವೆ.ಈ
ಕೊರತೆಗಳನ್ನು ಮೀರಿಯೂ’ಸಂಗಾತಿ’ ಸಾಹಿತ್ಯಪಯಣ ಸಾಗುತ್ತಲೆ ಇರುತ್ತದೆ.ಈಪಯಣದಲ್ಲಿ  ನೀವು ನಮ್ಮ ಜೊತೆಗಿರುತ್ತೀರೆಂದು ನಂಬಿಕೊಂಡಿದ್ದೇನೆ

About The Author

Leave a Reply

You cannot copy content of this page

Scroll to Top