ಕಾವ್ಯಯಾನ

ಕಾವ್ಯಯಾನ

ಮಲ್ಲಿಗೆ-ಸಂಪಿಗೆ ಅನು ಮಹಾಲಿಂಗ ಅಂಗಳದಿ ಹರಡಿತ್ತು ಹಸಿರಿನ ಮಲ್ಲಿಗೆ ಚಪ್ಪರ ಮಳೆಹೊಯ್ದು ತಂಪಾಗೆ ಸೊಂಪಾದ ಹಂದರ ಬಳ್ಳಿಯ ತುಂಬೆಲ್ಲ ಮಲ್ಲಿಗೆ ಹೂ ರಾಶಿ ಸಂಜೆಗೆ ಕೊಯ್ದರೆ ಮನೆತುಂಬ ಘಮ ಸೂಸಿ ಮನದೊಡೆಯ ತಂದಿರುವನು ಘಂಗುಡುವ ಮಲ್ಲಿಗೆ ನಾರಿಯ ಮುಡಿಯೇರಿ ನಗುತಿರಲು ಮೆಲ್ಲಗೆ ಹಿತ್ತಲ ಮರದಲ್ಲಿ ಬಿರಿದಾಳು ಸಂಪಿಗೆ ಘಮನವಾ ಸೂಸ್ಯಾಳು ಸುತ್ತೆಲ್ಲಾ ಸುಮ್ಮಗೆ ಬಾಲೆಯ ಮನ ಸೆಳೆಯೊ ಗಗನದ ಸಂಪಿಗೆ ಮುಡಿಸೇರಿಸಲು ಪರದಾಟ ಪಕ್ಕದ ಮನೆ ಕೆಂಪನಿಗೆ ಮಲ್ಲಿಗೆ ಸಂಪಿಗೆ ಪ್ರತ್ಯೇಕ ರಾಣಿಯರುಅವರವರ ಕಕ್ಷೆಯಲಿ ಅವರವರೆ ಬೀಗುವರು. […]

ಕಾವ್ಯಯಾನ

ಪ್ರಶ್ನೋತ್ತರ ರತ್ನನಂದಿನಿ (ಲತಾ ಆಚಾರ್ಯ) ಪ್ರೀತಿ ಅಂದರೇನು ಕೇಳಿದಳು ಅವಳು ಉತ್ತರಿಸದೆ ನಾನು ಸೊಸೆಯ ಕಡೆಗೊಮ್ಮೆ ಕೈಯ ತೋರಿಸುತ ಮುಗುಳ್ನಗೆಯ ಬೀರಿದೆ ಅರ್ಥವಾಗಿರಬೇಕು ಈಗ  ಆಕೆಗೆ  ಅಮ್ಮ ಮಗುವಿಗೆ ತುತ್ತು ಉಣ್ಣಿಸುತ್ತಿದ್ದಳು. ಸ್ನೇಹವೆಂದರೇನು ಮತ್ತೊಂದು ಪ್ರಶ್ನೆ ಈಗಲೂ ನಾನು ಮೌನ ದಿಟ್ಟಿಸಿದಳು ನನ್ನ  ಗೆಳೆಯನೋರ್ವನು ಬಂದು ಹೇಗಿರುವೆ ಎಂದನು ಮತ್ತದೇ ಅಸೌಖ್ಯ ತೋರಿದರೆ ಹೆದರದಿರು ನಾನಿರುವೆ ಜೊತೆಯಲ್ಲಿ ಎಂದಾಗ ಆಕೆ ಮೌನವಾಗಿದ್ದಳು. ಬೆಸುಗೆ ಎಂದರೇನು ಕೇಳಿದಳು ಈ ಬಾರಿ ಏನು ಹೇಳಲಿ ನಾನು ಮಾತು ಬಾರದು ನನಗೆ […]

ಭಾಷೆ

ಮರಳಿ ಮರಳಿ ಬರಲಿದೆ  ರಾಜ್ಯೋತ್ಸವ…… ಗಣೇಶ  ಭಟ್ಟ ಶಿರಸಿ ಪ್ರತಿ ವರ್ಷವೂ ನವೆಂಬರ್  ಮೊದಲನೇ ತಾರೀಕಿಗೆ  ಕನ್ನಡಿಗರಿಗೆ  ಸಂಭ್ರಮ. ಕನ್ನಡ ಭಾಷಿಕ  ಪ್ರದೇಶಗಳೆಲ್ಲವೂ ಸೇರಿ ಒಂದೇ ರಾಜ್ಯವಾದ  ದಿನ- ಕನ್ನಡದ ಹಬ್ಬವನ್ನು  ಅದ್ಧೂರಿಯಾಗಿ  ಆಚರಿಸುವ  ಹೊಸ ಹೊಸ  ವಿಧಾನಗಳನ್ನು  ಕನ್ನಡ  ಪ್ರೇಮಿಗಳು ಆವಿಷ್ಕರಿಸುತ್ತಿದ್ದಾರೆ.  ಕಿಲೋ ಮೀಟರ್‌ಗಳಷ್ಟು  ಉದ್ದದ ಕನ್ನಡ ಧ್ವಜದ ಮೆರವಣಿಗೆ , ಕನ್ನಡ ಪರ ಹಾಡುಗಳ  ಹಿನ್ನೆಲೆಯಲ್ಲಿ  ಕುಣಿತ, ಸ್ತಬ್ಧ ಚಿತ್ರಗಳ ಮೆರವಣಿಗೆ  ಇತ್ಯಾದಿ ಇತ್ಯಾದಿ…  ಆದರೆ  ಕನ್ನಡಿಗರ ಪಾಡು ಅಮಾಯಕತೆ, ಬಡತನ, ಶೋಷಣೆ,   […]

ಭಾಷೆ

ಭಾಷಾ ಮಾಧ್ಯಮವಲ್ಲ, ಶೈಕ್ಷಣಿಕ ವ್ಯವಸ್ಥೆಯೇ ಬದಲಾಗಬೇಕು! ಡಿ.ಎಸ್.ರಾಮಸ್ವಾಮಿ ಕರ್ನಾಟಕವನ್ನು ಕಾಡುತ್ತಿರುವ ಹಲವು ಸಮಸ್ಯೆಗಳ ನಡುವೆ ಭಾಷೆ, ಭಾಷಾ ಮಾಧ್ಯಮ, ಭಾಷೆಯ ಬಳಕೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಯ ಮಾತುಗಳ ಸುತ್ತ ಹಬ್ಬಿಕೊಂಡಿರುವುದು ಭಾವನಾತ್ಮಕ ಅಂಶಗಳಾಗಿರುವುದರಿಂದ ಈ ವಿಷಯವನ್ನು ಕುರಿತಂತೆ ಹೊಸ ಚಿಂತನೆಗಳೇ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮನ್ನು ಕಾಡುತ್ತಿರುವ ನದಿ ನೀರಿನ ವಿಚಾರವೂ ಭಾವನಾತ್ಮಕವಾಗಿಯೇ ನಮ್ಮನ್ನು ಇಕ್ಕಟ್ಟಿಗೆ ತಳ್ಳಿರುವ ಸತ್ಯ ನಮ್ಮ ಮುಂದೆ ಢಾಳಾಗಿಯೇ ಇದೆ. ಈ ನೆಲದಲ್ಲಿ ತೀವ್ರ ಸ್ವರೂಪದ ಆಂದೋಲನಗಳೇನಾದರೂ ನಡೆಯುವುದಾದರೆ ಅದು ಕನ್ನಡ-ಕನ್ನಡತನ […]

ಕಥಾಗುಚ್ಛ

ವೃದ್ದಾಶ್ರಮ ಎಂಬ ಬೆಳಕು. ಸುಮಾ ಉಮೇಶ್ ಗೌಡ ಮೊಮ್ಮಕ್ಕಳು  ಶಾಲೆಗೆ ಹೋದ್ರು,  ಮಗ ಸೊಸೆ ಕೆಲಸಕ್ಕೆ ಹೋದ್ರು, ಬಾಗಿಲು ಭದ್ರ  ಪಡಿಸಿದ  ರಾಯರು ಪತ್ನಿಯ ಫೊಟೋ ನೋಡುತ್ತಾ  ಕುಳಿತರು  ಏಕಾಂಗಿ ಆಗಿ…    ಗಂಡು ಎಷ್ಟೆ ದರ್ಪದಿಂದ ಇದ್ರು ಪತ್ನಿ  ಮರಣಿಸಿದ ಮೇಲೆ ಹಲ್ಲು ಕಿತ್ತ ಹಾವಿನಂತೆ,  ಯಾರಿಗೆ ಬುಸುಗುಡಿದ್ರು  ಹೇದರಿಕೊಳ್ಳೊರು ಯಾರು..? ರಾಯರ ಬದುಕು ಇದಕ್ಕೆ ಹೊರತಾಗಿರಲಿಲ್ಲ…    ಸದಾ ಚಟುವಟಿಕೆ  ಇಂದ ಇರುವ ರಾಯರಿಗೆ, ನಿವೃತ್ತಿ ಅನ್ನೋದೇ  ಶಾಪವಾದ್ರು,  ಪತ್ನಿಯ ನಗು ಮುಖ,  ಹುಸಿ […]

ಕಾರ್ಟೂನ್ ಕೋಲ್ಮಿಂಚು

ಡಾ.ಎನ್.ಸುಧೀಂದ್ರ ಪರಿಚಯ: ಕನ್ನಡ  ಸ್ನಾತಕೋತ್ತರ ಪದವಿ. .”ಕನ್ನಡ ರೇಡಿಯೋ ನಾಟಕಗಳು” ವಿಷಯದಲ್ಲಿ ಕುವೆಂಪುವಿ,ವಿ ಯಿಂದ ಡಾಕ್ಟರೇಟ್. ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ ಯಾಗಿ ಸೇವೆ. ಈಗ ವಿಶ್ರಾಂತ ಸ್ಪಂದನಟೀವಿಚಾನಲ್ ಶಿವಮೊಗ್ಗ ,ಇದರಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ  ಸೇವೆ. ಮಲೆನಾಡು ಮೀಡಿಯ ವೆಬ್ ಪೋರ್ಟಲ್ ಸಂಪಾದಕರಾಗಿ ಸೇವೆ

ಕಾವ್ಯಯಾನ

ಕಾಡುಹರಟೆ ಮತ್ತು ಕವಿಗೋಷ್ಠಿ. ವಿಜಯಶ್ರೀ ಹಾಲಾಡಿ ವಾರವಿಡೀ ಕಾಡುಮುನಿಯ ಹಕ್ಕಿಗಳು ಮರಿಗಳಿಗೆಂದು ಗೂಡುನೇಯುತ್ತಿದ್ದವು ಕಟ್ಟಿರುವೆಗಳು ಹುಲ್ಲಿನ -ಬೀಜಕ್ಕಾಗಿ ಜಗಳಾಡಿದವು ಗೋಡೆಗಳನ್ನು ಕಾಲುದಾರಿ ಮಾಡಿಕೊಂಡ ಅಳಿಲು ಮುಂಗುಸಿ ಮತ್ತದರ ಮಗು ಪಕ್ಕದ ಖಾಲಿ ಸೈಟಿನಲ್ಲಿ ವಿಹರಿಸುತ್ತಿದ್ದವು.. ಹುಲ್ಲುಗಾವಲಲ್ಲಿ ಕಿವಿಗಳು ಕಂಡದ್ದಷ್ಟೇ ಬೆಚ್ಚನೆಯ ಪಾದವನ್ನು ಎದೆಯೊಳಗೆ ಊರಿ ಮೊಲವೊಂದು ನಾಗಾಲೋಟ ಹೂಡಿತು ಹಿಂದಿನ ಮನೆಯ ಕಿಟಕಿ ಗಾಜನ್ನು ಮರಕುಟಿಕವೊಂದು ಬಡಿದದ್ದೇ ಬಡಿದದ್ದು ಅದರ ತಲೆಯೊಳಗೆ ಮೆದುಳು ಕದಡಲೇ ಇಲ್ಲವಲ್ಲ ಎಂದು ಅಚ್ಚರಿಪಡುತ್ತ ಕಾಲಹರಣಮಾಡಿದೆ.. ನನ್ನ ರಜಾದಿನಗಳು ಹೀಗೇ ಕವಿತೆ ಹುಟ್ಟಿಸುತ್ತ […]

ಕೃತಿ ಲೋಕಾರ್ಪಣೆ

ಬಂಟಮಲೆ ತಪ್ಪಲಿನಲ್ಲಿ ಪುಸ್ತಕಸಂಭ್ರಮ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಮುಖ್ಯಸ್ಥ ಶ್ರೀ ಡಾ.ಪುರುಷೋತ್ತಮ ಬಿಳಿಮಲೆಯವರ-“ವಲಸೆ,ಸಂಘರ್ಷ ಮತ್ತು ಸಮನ್ವಯ” ಕೃತಿ ನವೆಂಬರ್ 9 ರಂದು ಲೋಕಾರ್ಪಣೆಗೊಳ್ಳಲಿದೆ. ಕೃತಿಯ ಹೆಸರು-“ವಲಸೆ, ಸಂಘರ್ಷ ಮತ್ತು ಸಮನ್ವಯ” ಲೇಖಕರು-ಡಾ.ಪುರುಷೋತ್ತಮ ಬಿಳಿಮಲೆ ಸ್ಥಳ-ಬಂಟಮಲೆ ತಪ್ಪಲಿನ ಬಿಳಿಮನೆ ಅದ್ಯಕ್ಷತೆ-ಟಿ.ಜಿ.ಮುಡೂರು ಬಿಡುಗಡೆ-ಪ್ರೊ.ಬಿ.ಎ.ವಿವೇಕ ರೈ ಅತಿಥಿಗಳು-ಪ್ರೊ.ಕೆ.ಚಿನ್ನಪ್ಪಗೌಡ ಮತ್ತು ಜಾಕೆ ಮಾದವಗೌಡರು.

ಕಾವ್ಯಯಾನ

ಮೌನ ಮಾರಾಟಕ್ಕಿದೆ ತನುನಯ ಮೌನದ ಜೊತೆ ಮಾತು ಬಿಡುವ ಮನಸಾಗಿದೆ ಮೌನವೂ ಸಮ್ಮತಿಸಿ ಟೂ ಬಿಟ್ಟು ನಡೆದಿದೆ ಹಾಳು ಮಳೆಯ ಜೊತೆ ಕಾಡು ಹರಟೆ ಜೋರಾಗಿದೆ ನಿಲ್ಲುತ್ತಿಲ್ಲ ಮಾತಿನ ಮಳೆ ಮುಗಿಸುವ ಮನಸಿಲ್ಲದೆ ಮಳೆಗೂ ಮನಸಿಗೂ ಮಾತಿಲ್ಲದ ಜೊತೆಗಾರರಿಲ್ಲದೆ ಮಳೆಯೂ ಕೂಡ ಮೌನವನು ಮಾರಿಬಿಡು ಎನ್ನುತಿದೆ ಮಾತು ಮುಗಿಯುತ್ತಿಲ್ಲ  ಮೌನವಿಂದು ಮಾರಾಟಕ್ಕಿದೆ ಮಾತಿನ ಸಂತೆಯಲಿ ಕೊಳ್ಳುವವರಿಲ್ಲದೆ ಮೌನ ಮರುಗುತ್ತಿದೆ ಕೊಳ್ಳುವೆಯ ಮೌನವನು ನಿನ್ನ ಮಾತು ಮರೆತು ಬರೆಯುವೆನು ಕವಿತೆಯ ನಿನ್ನೊಲವ ಅರಿತು… =====================

ಕಾವ್ಯಯಾನ

ವ್ಯತ್ಯಾಸ ಪ್ರಮೀಳಾ ಎಸ್.ಪಿ. ಎದೆಯ ಮೇಲೊಮ್ಮೆ ಕಿವಿಯಿಡು ನಿನ್ನೆಸರೇ ನನ್ನುಸಿರಲಿ ಎಂದಿದ್ದವ ಗೊರಕೆ ಸದ್ದುಸಹಿಸಲಾರೆ ದೂರ ಮಲಗುವೆಯಾ ಎನ್ನುತ್ತಿದ್ದಾನೆ ಬೈಕ್ ಮೇಲೆ ನಿನ್ನಬಾಡಿ ಲೈಟ್ ವೈಟ್,ಹಾರೀಯೆ ಎಂದಿದ್ದವ ಕಾರಿಗೂ ಮುಂಬಾರ ಹಿಂದೆ ಕೂರುವೆಯಾ ಎನ್ನುತ್ತಿದ್ದಾನೆ. ನಿನ್ನ ಮುಡಿಗೆ ಮಲ್ಲಿಗೆ ತಂದಿರುವೆ ಮುಡಿಯಲೇ ಬೇಕು ಎಂದಿದ್ದವ ಮಾರೀಗ ರೂಪಾಯಿ ನೂರು ಖಾಲಿ ಜಡೆಯೆ ಚೆನ್ನ ಎನ್ನುತ್ತಿದ್ದಾನೆ ಮಸಾಲೆ ದೋಸೆ ನಿನ್ನಿಷ್ಟ ತಿನ್ನು ನೀ ಎಷ್ಟಾದರೂ ಎಂದಿದ್ದವ ಅನ್ನ ಸಕ್ಕರೆ ಬೇಡ ಸಿರಿಧಾನ್ಯ ತಿನ್ನಲಾರೆಯಾ ಎನ್ನುತ್ತಿದ್ದಾನೆ. ಸೀರೆಯಲಿ ನೀ ಸುಂದರಿ […]

Back To Top