ವೃದ್ದಾಶ್ರಮ ಎಂಬ ಬೆಳಕು.
ಸುಮಾ ಉಮೇಶ್ ಗೌಡ
ಮೊಮ್ಮಕ್ಕಳು ಶಾಲೆಗೆ ಹೋದ್ರು, ಮಗ ಸೊಸೆ ಕೆಲಸಕ್ಕೆ ಹೋದ್ರು, ಬಾಗಿಲು ಭದ್ರ ಪಡಿಸಿದ ರಾಯರು ಪತ್ನಿಯ ಫೊಟೋ ನೋಡುತ್ತಾ ಕುಳಿತರು ಏಕಾಂಗಿ ಆಗಿ…
ಗಂಡು ಎಷ್ಟೆ ದರ್ಪದಿಂದ ಇದ್ರು ಪತ್ನಿ ಮರಣಿಸಿದ ಮೇಲೆ ಹಲ್ಲು ಕಿತ್ತ ಹಾವಿನಂತೆ, ಯಾರಿಗೆ ಬುಸುಗುಡಿದ್ರು ಹೇದರಿಕೊಳ್ಳೊರು ಯಾರು..? ರಾಯರ ಬದುಕು ಇದಕ್ಕೆ ಹೊರತಾಗಿರಲಿಲ್ಲ…
ಸದಾ ಚಟುವಟಿಕೆ ಇಂದ ಇರುವ ರಾಯರಿಗೆ, ನಿವೃತ್ತಿ ಅನ್ನೋದೇ ಶಾಪವಾದ್ರು, ಪತ್ನಿಯ ನಗು ಮುಖ, ಹುಸಿ ಮುನಿಸು, ಅವರ ಜೊತೆಯಾಗಿ ಲವಲವಿಕೆ ಇಂದ ಇರಲು ಕಾರಣ ಆಗಿತ್ತು, ಆದರೆ ಆರು ತಿಂಗಳ ಹಿಂದೆ ಪತ್ನಿ ಅಗಲಿದ ಮೇಲೆ, ತನ್ನ ಮನೆಯಲ್ಲೇ ತಾನೊಬ್ಬ ಪರಕಿಯ ಅಂತಾಗಿ ಬಿಟ್ಟಿದ್ದರು…
ಪತ್ನಿ ಪದ್ಮಾನ ಫೋಟೋ ನೋಡ್ತಾ, ಅದು ಯಾವ ದೇವರಿಗೆ ಮುತೈದೆ ಸಾವು ಬರಲಿ ಅಂತಾ ಬೇಡಿಕೊಂಡೆ ನೀನು, ನಿನಗೆ ಮುತೈದೆ ಸಾವು ಸಿಕ್ಕು, ನಾನು ಒಂಟಿಯಾಗಿ ಕೊರಗ್ತಾ ಇದೆನೆ. ನೀನು ನನ್ನ ಜಾಗದಲ್ಲಿ ಇದ್ದಿದ್ರೆ, ಅತ್ತು ಮನಸ್ಸು ಹಗುರ ಮಾಡಿಕೊಂಡು, ಅಕ್ಕ ಪಕ್ಕದ ಮನೆಯವರ ಜೊತೆ ಮಾತಾಡ್ತಾ ಹೇಗೋ ಒಂಟಿತನ ದೂರ ಮಾಡಿಕೊಳ್ಳತಾ ಇದ್ದೆ, ಈಗ ನನ್ನ ಪರಿಸ್ಥಿತಿ ನೋಡು, ಒಂಟಿಯಾಗಿ ನಾಲ್ಕು ಗೊಡೆಯ ಮಧ್ಯೆ ಇರಬೇಕಾಗಿದೆ, ಸಂಜೆ ವಾಕಿಂಗ್ ಹೋದರೆ ಒಂಚೂರು ವೇಳೆ ಕಳಿತಿವಿ ಅಷ್ಟೆ…
ಹಾಗಂತ ನಿನ್ನ ಮಗ ಸೊಸೆ ಏನು ದ್ವೇಷಿಸ್ತಾ ಇಲ್ಲ, ಚನ್ನಾಗಿ ನೋಡ್ಕೊತಾರೆ ನಿನಗೂ ಗೊತ್ತು ಅದು, ಆದ್ರೆ ಮಮ್ಮಕ್ಕಳಿಗೆ ಸ್ಕೂಲ್ ಹೊಂ ವರ್ಕ್ ಮಾಡೊಕೆ ವೇಳೆ ಸಾಲಲ್ಲಾ, ಇನ್ನೂ ನನ್ನ ಜೊತೆ ಕಳೆಯೊಕೆ ಎಲ್ಲಿ ವೇಳೆ ಸಿಗಬೇಕು, ಮಗ ಸೊಸೆ ಅವರವರ ಕೆಲಸದಲ್ಲಿ ಬ್ಯುಸಿ, ಸರಿಯಾದ ಟೈಮ್ ಗೆ ಊಟ ತಿಂಡಿ ಮಾಡಿಕೊಟ್ರೆ ಮುಗಿತು, ಮಗನ ಜೊತೆ ನಾಲ್ಕು ಮಾತು ಮಾತಾಡೊಕು ಟೈಮ್ ಇರಲ್ಲ…
ಇದು ನನ್ನೊಬ್ಬನ ಗೋಳಲ್ಲ ಪದ್ಮಾ, ಪತ್ನಿಯನ್ನು ಕಳೆದುಕೊಂಡ ನನ್ನಂತಹ ವಯಸ್ಸಾದವರ ಗೋಳು, ನಲವತ್ತು ವರುಷ ಸಂಸಾರ ಮಾಡಿ, ಹೀಗೆ ದಿಡಿರ್ ಅಂತಾ ಹೋಗಿಬಿಟ್ರೆ, ಎಲ್ಲದಕ್ಕೂ ಪತ್ನಿ ನೆ ಅವಲಂಬಿಸಿ, ಪತ್ನಿ ಎಷ್ಟೆ ಚನ್ನಾಗಿ ಬದುಕು ಸಂಬಾಳಿಸಿದರು, ಮತ್ತು ಅವಳ ಮೇಲೆ ರೇಗಾಡೊ ಅಂತಾ ನಮ್ಮ ಗಂಡಸರ ಸ್ಥಿತಿ ಹೀಗೆ ಪತ್ನಿ ಹೋದಮೇಲೆ…
ಹಿಂದಿನ ಮನೆ ರಾಮಣ್ಣನ ಪತ್ನಿ ನಾಲ್ಕು ತಿಂಗಳ ಹಿಂದೆ ತೀರಿಕೊಂಡಳು, ಅವನ ಜೀವನ ಕೂಡಾ ಹೀಗೆ, ಆಚೆ ಮನೆ ಭೀಮ, ನನ್ನ ಕ್ಲಾಸ್ ಮೇಟ್ ಸದಾನಂದಾ ಎಲ್ಲರು ಹೀಗೆ, ಕೆಲವರಿಗೆ ಅಂತು ಮಗ ಸೊಸೆ ಅಂತು ಸರಿಯಾಗಿ ನೋಡಿಕೊಳ್ಳೊದೆ ಇಲ್ಲ ಪಾಪ, ನಮ್ಮ ಬಾಸ್ ಶಂಕರ್ ಅವರ ಪತ್ನಿ ಕೂಡಾ ಹೋದ್ರಂತೆ, ಹುಲಿ ಅಂತೆ ಇದ್ದವರು ಈಗ ಇಲಿ ಅಂತೆ ಆಗಿಬಿಟ್ಟಿದಾರೆ, ಇನ್ನೂ ನಿವೃತ್ತಿ ಆಗಿಲ್ಲ, ಸದಾ ಕೆಲಸದಲ್ಲೆ ಮುಳುಗಿರ್ತಾರೆ ಒಂಟಿತನ ಮರೆಯಲು, ಆದ್ರು ಇಷ್ಟು ವರ್ಷ ಸಂಸಾರ ಮಾಡಿದ ಸಂಗಾತಿ ಇಲ್ಲದ ಏಕಾಂತ ಅನುಭವಿಸೋದು ಹೆಣ್ಣಿಗಿಂತ ಗಂಡಿಗೆ ಕಷ್ಟ. ಪತ್ನಿಯ ಪಟದ ಎದುರು ಮಾತಾಡ್ತಾ, ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ ರಾಯರ ಫೋನ್ ಗೆ ಕರೆ ಬಂತು, ಜಾರಿದ ಕಣ್ಣೀರು ಒರೆಸಿಕೊಂಡು ಫೋನ್ ರಿಸೀವ್ ಮಾಡಿದರು …
ಅರೆ, ನಮ್ಮ ಬಾಸ್ ಶಂಕರ್ ಅವರ ನಂಬರ್, ಅವರು ತುಂಬಾ ಕುಗ್ಗಿಹೋಗಿದ್ರು ಅವರಿಗೆ ಏನಾದರೂ ಆಯ್ತಾ, ಅಯ್ಯೋ ದೇವರೆ ಹಾಗಾಗದೆ ಇರಲಿ ಅಂದು ಫೋನ್ ರಿಸೀವ್ ಮಾಡಿದ…
ರಾಯರೆ ಏನ್ಮಾಡ್ತಿದ್ರಿ..?
ಬಾಸ್ ಧ್ವನಿ ಕೇಳಿ ಸಮಾಧಾನ ಆಯ್ತು, ಇನ್ನೆನಿರುತ್ತೆ ಸರ್, ಒಂಟಿ ಮನೆಯಲ್ಲಿ ಅಂತರ್ ಪಿಶಾಚಿ ತರ ಇದೆನೆ…
ರಾಯರೆ ಹಾಗೆಕಂತಿರಾ..?
ಮತ್ತಿನ್ನೇನು ಸರ್, ನಮ್ಮ ಕಷ್ಟ ಸುಖ, ನೋವು ನಲಿವು ಕೇಳೊ ಜೀವ ಇಲ್ಲ, ನಿಮಗೂ ಅನುಭವ ಆಗಿದೆ ಅಲ್ವಾ ಸರ್…
ಅದು ನಿಜಾನೆ ರಾಯರೆ, ಎಷ್ಟೆ ಕೋಪ, ಮುನಿಸು ಇದ್ರು, ನಮ್ಮ ಕಷ್ಟ ಕೇಳೊ ಪತ್ನಿನ ಇದ್ದಾಗ ಅರ್ಥ ಮಾಡಿಕೊಳ್ಳುವಲ್ಲಿ ಸೋತಬಿಟ್ಟೆ, ಈಗ ಒಂದೊಂದು ಕ್ಷಣ ಅವಳ ನೆನಪಿಲ್ಲದೆ ಬದುಕಲು ಆಗ್ತಾ ಇಲ್ಲ, ಹಾ ರಾಯರೆ ನಿಮಗೆ ಒಂದು ಮುಖ್ಯವಾದ ವಿಷಯ ತಿಳಿಸಬೇಕಿತ್ತು…
ಎನ್ ಸರ್ ಅದು…
ರಾಯರೆ ನಾನು ಸ್ವಯಂ ನಿವೃತ್ತಿ ಪಡಿತಾ ಇದೆನೆ…
ಸರ್, ಯಾಕೆ ಹಾಗೆ ಮಾಡಿದ್ರಿ, ಕೆಲಸ ಇಲ್ಲದೇ ಒಂಟಿಯಾಗಿ ವೇಳೆ ಕಳಿಯೋದು ತುಂಬಾ ಕಷ್ಟ…
ನಿಜಾ ರಾಯರೆ, ನಾನೊಂದು ನಿರ್ಧಾರಕ್ಕೆ ಬಂದಿದೆನೆ, ಉಳಿದಿರೊ ಜೀವನ ಸಂತೋಷ ವಾಗಿ ಕಳೆಯಬೇಕು, ಮಕ್ಕಳು ಸೊಸೆ, ಅಳಿಯ ಯಾರ ಹಂಗು ಇಲ್ಲದೇ, ವೃದ್ದಾಶ್ರಮದಲ್ಲಿ ಇರಬೇಕು ಅಂತಾ ಮಾಡಿದೆನೆ, ಅಲ್ಲಿ ನಮ್ಮಂತಹ ಹಿರಿಯ ಜೀವಗಳು ಇರ್ತಾರೆ, ಸಮಾನ ವಯಸ್ಕರ ಜೊತೆ ಇಡೀ ದಿನ ಕಳೆದು, ಮನಸ್ಸು ಉಲ್ಲಾಸಿತ ಆಗಿರಬೇಕು ಅಂದ್ರೆ ಅದೆ ಸರಿ ಅನ್ನಿಸಿತು, ನನ್ನ ಗೆಳೆಯ ಒಬ್ಬನು ಈಗ ವರ್ಷದಿಂದ ಇದಾನೆ, ಅವನು ಅಲ್ಲಿ ಖುಷಿ ಇಂದ ಇದಾನೆ, ನೀವು ಬನ್ನಿ, ಆದರೆ ನಾನಲ್ಲಿ ನಿಮ್ಮ ಬಾಸ್ ಅಲ್ಲ ಗೆಳೆಯ, ನಾವು ಸಮಾನ ದುಃಖಿಗಳು…
ರಾಯರು ತುಂಬಾ ಯೋಚನೆ ಮಾಡಿ ತಮ್ಮ ವಾಕಿಂಗ್ ಗೆಳೆಯರ ಜೊತೆ ಚರ್ಚಿಸಿದಾಗ, ಒಂದು ರೀತಿಯಲ್ಲಿ ಅದೆ ಸರಿ ಅನ್ನಿಸಿತು, ಸಮಾನ ವಯಸ್ಕರು, ಸಮಾನ ದುಃಖಿಗಳು ಇರುವೆಡೆ, ಕ್ರಿಯಾಶಿಲರಾಗಿ ವೃದ್ದಾಶ್ರಮದಲ್ಲಿ ಇರೋದೇ ಸರಿ ಅನ್ನಿಸಿತು…
ಮಗನಿಗೆ ನಿರ್ಧಾರ ತಿಳಿಸಿದಾಗ, ನಾವೆಲ್ಲ ಇದ್ದು ವೃದ್ದಾಶ್ರಮ ಯಾಕೆ ಅಪ್ಪಾ , ನೋಡಿದವರು ತಂದೆಯನ್ನು ಮಗ ಸೊಸೆ ಚನ್ನಾಗಿ ನೋಡಿಕೊಳ್ಳಲಿಲ್ಲ ಅಂತಾ ಆಡಿಕೊಳ್ಳುತಾರೆ, ನಾವೇನು ಕಡಿಮೆ ಮಾಡಿದೆವೆ….
ಮಾವ ನಿಮ್ಮ ಆರೋಗ್ಯಕ್ಕೆ ಹೊಂದುವಂತ ಊಟ, ಸರಿಯಾದ ವೇಳೆಗೆ ಮಾತ್ರೆ, ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಯಾಕೆ ಮಾವ ಇಂತಹ ನಿರ್ಧಾರ ತಗೆದುಕೊಂಡ್ರಿ ಅಂದು ಮಗ ಸೊಸೆ ಒಪ್ಪಲಿಲ್ಲ…
ಮಕ್ಕಳು ಚನ್ನಾಗಿ ನೋಡಿಕೊಳ್ಳಲಿಲ್ಲಾ ಅಂತಾ ವೃದ್ದಾಶ್ರಮ ಕ್ಕೆ ಹೋಗ್ತಾ ಇಲ್ಲ, ನನ್ನ ಏಕಾಂತತೆ ದೂರ ಮಾಡಿಕೊಳ್ಳಲು ಅಂದು ರಾಯರು ಅರ್ಥ ಮಾಡಿಸಿ, ಬಿಡಿಸಿ, ಸಮಾಧಾನ ದಿಂದ ಹೇಳಿದಾಗ ತಂದೆಯ ಮಾತಲ್ಲೂ ಸತ್ಯ ಇದೆ ಅಂದು ಒಪ್ಪಿದ, ಮಗ ಸೊಸೆ ಸಂತೋಷಕ್ಕೆ ಮೊಮ್ಮಕ್ಕಳೊಂದಿಗೆ ದೀಪಾವಳಿ ಆಚರಿಸಿ ವೃದ್ದಾಶ್ರಮ ಕಡೆ ನಡೆದರು ರಾಯರು …
ವೃದ್ದಾಶ್ರಮ ಕ್ಕೆ ಹೋದ ರಾಯರಿಗೆ ಹೊಸ ಲೋಕ ತೇರೆದಂತಾಯಿತು, ತಮ್ಮ ಬಾಸ್ ಜೊತೆ ಆದ್ರು, ತಮ್ಮಂತಹ ಅನೇಕರು ಸಿಕ್ಕರು, ರಾಯರಿಗೆ ನಿಜವಾದ ದೀಪಾವಳಿ ವೃದ್ದಾಶ್ರಮದ ಸ್ನೇಹಿತರ, ಸಂಗಡಿಗರ, ಮೇಲ್ವಿಚಾರಕರ ಸ್ನೇಹ, ಪ್ರೀತಿ ಆತ್ಮೀಯತೆಯಲ್ಲಿ ಸಿಕ್ಕಿತು, ವೃದ್ದಾಶ್ರಮ ಒಂಟಿ ಬಾಳಿಗೆ ಬೇಳಕಾಯ್ತು….
=================================
ಪರಿಚಯ:
ಗೃಹಿಣಿ,ಹವ್ಯಾಸಿ ಲೇಖಕಿ,ಇವರ ಹಲವು ಬರಹಗಳು ವಿವಿಧ ಪತ್ರಿಕೆಗಳಲ್ಲಿಬಂದಿವೆ.ಇನ್ನೂ ಪುಸ್ತಕ ಹೊರತಂದಿಲ್ಲ
ಧನ್ಯವಾದಗಳು ನನ್ನ ಬರಹಕ್ಕೆ ಅವಕಾಶ ನೀಡಿದ ಪತ್ರಿಕಾ ಬಳಗಕ್ಕೆ