ಅವ್ಯಕ್ತಳ ಅಂಗಳದಿಂದ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಕನಸು-ಮನಸು-ನನಸು ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಬೇರೆ ಬೇರೆ ತರಹದ ನಿಲುವುಗಳು ಇರುತ್ತವೆ. ಕೆಲವರು ಅವರಿಗೆ, ಪ್ರತಿವರ್ಷ ಪರೀಕ್ಷೆಯಲ್ಲಿ ಬರುವ ಅಂಕಗಳನ್ನು ಮನಸ್ಸಲ್ಲಿಟ್ಟುಕೊಂಡು ಅದಕ್ಕೆ ಅನುಕೂಲಕರವಾಗಿ ಮುಂದೋಗ್ತಾರೆ ಇನ್ನು ಕೆಲವರು, ಮನೆಯಲ್ಲಿ ತಂದೆ-ತಾಯಿ ಹೇಳುವುದನ್ನು ಬಿಟ್ಟು ಬೇರೆ ಸ್ವಂತಿಕೆಯನ್ನು ಉಪಯೋಗಿಸುವುದೇ ಇಲ್ಲ. ಇನ್ನು ಮೂರನೇ ತರಹದ ಮಕ್ಕಳು ಯಾವುದೋ ಒಂದು ವಿಷಯದಲ್ಲಿ ಆಕರ್ಷಿತರಾಗಿ ಆ ವಿಷಯದ ವಿಶೇಷ ಗಳನ್ನೆಲ್ಲಾ ತಿಳಿದುಕೊಂಡು, ಅದನ್ನು ಗುರಿಯಾಗಿಟ್ಟುಕೊಂಡು ಹಂತಹಂತವಾಗಿ ಸಾಧಿಸುತ್ತ ಹೋಗೋರು.ಯಾವುದೇ ರೀತಿ ಮಕ್ಕಳಾದರೂ ಅವರಲ್ಲಿ ಆತ್ಮ ವಿಶ್ವಾಸ ಇರುವುದು ಅತಿಮುಖ್ಯ […]

ಕಾವ್ಯಯಾನ

ಸೃಷ್ಟಿಯ ಮಿಲನ. ರಾಮಾಂಜಿನಯ್ಯ ವಿ ಕಾಡ ಕಗ್ಗತ್ತಲು ಆವರಿಸಿ ಮುತ್ತಿರಲು ಜೇನ್ ಪರಾಗ ರಿಂಗಣ! ಚೆಲುವ ಮಧು ಮೃದಂಗ, ಅಧರಗಳ ಮಧುರ ಗಾನ. ಚಂದಿರನವೆ ಬಡಿತ, ಪಕಳೆಗಳ ಚಿಟಪಟ ಕೇಸರಗಳ ಆಗಮನದಿ ಸೃಷ್ಟಿಯ ಮಿಲನ.. ದುಂಬಿ ಮದರಂಗಿ ಚಲನ.. ಪೇಳ್,ಹೆಣ್ಣೆ ನಾಭಿಯಲಿ ನೆತ್ತರು ಬಿಸಿ ಎದೆಯಲ್ಲಿ ಸಮುದ್ರದಲೆ ಭೋರ್ಗರೆವ ನಾದ ತನ್ಮಯ ವಿನೋದ.. ಕರಗುವ ಮುನ್ನ ಕರಗಿಸೆನ್ನ; ಪೆಣ್ಣೆ, ಅರಳುವ ಹೂವೆ.. ಮದನದ ವದನಕ್ಕಿದು ತನು ತರುಲತೆ ಗಾನ. ಸ್ಪರ್ಶಿಸುವ ನೆಲೆಯಲ್ಲಿ ಪರಾಗಗಳ ಸೆಲೆ! ಸುಳಿಯಿರದ ಸಮುದ್ರದಿ […]

ಪ್ರಸ್ತುತ

ಮಹಾರಾಷ್ಟ್ರದ ಗಡಿ ತಗಾದೆ ಕೆ.ಶಿವು ಲಕ್ಕಣ್ಣವರ ಮತ್ತೆ ಭುಗಿಲೆದ್ದ ಬೆಳಗಾವಿ ಗಡಿ ವಿವಾದವೂ..! ‘ಮಹಾರಾಷ್ಟ್ರ’ ಗಡಿ ಕ್ಯಾತೆ ಕಥೆಯ ಪೂರ್ಣ ಚಿತ್ರಣವೂ..!! ಮಹಾರಾಷ್ಟ್ರಕ್ಕೆ ಏನೋ ಗತಿ ಕಾದಿದೆ. ಅದಕೇ ಅದು ಮೇಲಿಂದ ಮೇಲೆ ಗಡಿ ಕ್ಯಾತೆ ತೆಗೆಯುತ್ತಿದೆ. ಈ ಬಾರಿ ಸಮಗ್ರ ಕರ್ನಾಟಕ ಈ ಗಡಿ ಕ್ಯಾತೆಯ ವಿರುದ್ಧ ಮಹಾರಾಷ್ಟ್ರದ ನೀರು ಇಳಿಸಲು ಸಿದ್ಧವಾಗಿ ಈ ಗಡಿ ಕ್ಯಾತೆ ಹೋರಾಟದಲ್ಲಿ ದುಮುಕಿದೆ… ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡದಂತೆ. ಸುಮ್ಮನಿರುವ ಕರ್ನಾಟಕವನ್ನು ಪದೇ […]

ಕಾವ್ಯಯಾನ

ನಾನಲ್ಲ ದೇವದಾಸಿ ನಿರ್ಮಲಾ ನನ್ನ ಬದುಕಿದು ನನ್ನ ಸ್ವತ್ತು ಬಲವಂತವಾಗಿ ಕಟ್ಟಿಸಿದಿರಿ ನನಗೆ ಮುತ್ತು ಬೆಲೆ ಇಲ್ಲವೇ ನನ್ನಾವ ಆಸೆಗೆ ಬಲಿಯಾದೆ ಕಾಮಪಿಶಾಚಿಗಳ ಲಾಲಸೆಗೆ ಭಗವಂತನ ಸೇವೆಗೆಂದೇ ಮಾಡಿದಿರಿ ನನ್ನ ದಾಸಿ ಆದರೆ ವೇಶ್ಯೆಯೆಂದೆ ನಾನಾದೆ ಹೆಸರುವಾಸಿ ಶಾಸ್ತ್ರ ಹೇಳಿತು ದೇವನಿಗೆ ಸಂಗೀತ, ನೃತ್ಯ ಪ್ರಿಯ ದೇವನ ಹೆಸರಲಿ ಸಮಾಜ ಮಾಡಿತು ನನ್ನ ಬದುಕು ಹೇಯ ಮಾಡಿದಿರಿ ನನಗೆ ಗೆಜ್ಜೆ ಪೂಜೆ ನನ್ನಾವ ತಪ್ಪಿಗಾಗಿ ಈ ಸಜೆ ನಾನಾಗ ಬೇಕಿತ್ತಲ್ಲವೇ ಸಂಸಾರಿ ಅದೇಕೆ ಮಾಡಿದಿರಿ ನನ್ನ ವ್ಯಭಿಚಾರಿ […]

ಕಾವ್ಯಯಾನ

ಹೊಸ ವರ್ಷದ ಹೊಸಿಲಲ್ಲಿ…. ಡಿ.ಎಸ್.ರಾಮಸ್ವಾಮಿ ಇವತ್ತು ಈ ವರ್ಷಕ್ಕೆ ಕಡೆಯ ಮೊಳೆ ಹೊಡೆದಾಯಿತು. ಮತ್ತಷ್ಟು ಬಿಳಿಯ ಕೂದಲು ಗಡ್ಡದಲ್ಲಿ ಹಣುಕಿವೆ ತೆಲೆ ಮತ್ತಷ್ಟು ಬೊಕ್ಕಾಗಿದೆ. ಇರುವ ಸಾಲದ ಕಂತುಗಳ ಲೆಕ್ಕ ಹಾಕಿದರೆ ಬರೀ ನಿಟ್ಟುಸಿರು ಆದಾಯ ತೆರಿಗೆಯ ಸ್ಲಾಬು ಏರಿದೆ. ಎದೆ ಎತ್ತರ ಬೆಳೆದು ನಿಂತಿದ್ದಾಳೆ ಮಗಳು, ಮುಂದೆ ಹೇಗೋ ಎಂದು ತಳಮಳಿಸುವುದು ಜೀವ, ಮದುವೆಯ ಮಾತೆತ್ತಿದರೆ ಸಿಡುಕುತ್ತಾಳೆ. ಚಿನ್ನದ ಸರ ಕೊಳ್ಳುವ ಇವಳ ಮಾತು, ಅಪಥ್ಯ. ಸ್ವರ್ಣ ಬಾಂಡಿನ ಕಂತು ಮುಗಿದು ಆಭರಣಗಳ ಆಯಬೇಕಿದೆ ಅಷ್ಟೆ. […]

ಹಳೆಯ ವರ್ಷಕ್ಕೊಂದುವಿದಾಯ

2019ಮುಗಿಯುತ್ತಿದೆ… ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಳೆಯ ವರ್ಷಕ್ಕೊಂದು ವಿದಾಯ ಹೇಳಬೇಕಾಗಿದೆ ಖ್ಯಾತ ಕವಿ ಗುಲ್ಜಾರರ ಕವಿತೆ ಹೇಳಿರುವ ವಿದಾಯದ ಸಾಲುಗಳು ನಿಮಗಾಗಿ ಮೆಲ್ಲ ಮೆಲ್ಲನೆ ನಡೆ ಜೀವನವೆ ತೀರಿಸಬೇಕಾದ ಋಣವಿನ್ನು ಉಳಿದಿದೆ ! ಇನ್ನಷ್ಟು ನೋವುಗಳ  ನಿವಾರಿಸಬೇಕಿದೆ, ನಿಭಾಯಿಸುವ ಕರ್ತವ್ಯ ಇನ್ನಷ್ಟಿದೆ.  ಹೊರಳಿ ನಡೆಯುವ ನಿನ್ನ ವೇಗಕೆ, ಕೆಲವು ಕೈ ಜಾರಿದವು ಕೆಲವು ಮುನಿದವು  ಮುನಿದವರ ಮನವೊಲಿಸಬೇಕಿದೆ, ಅಳುವವರ ಮತ್ತೆ ನಗಿಸಬೇಕಿದೆ. ಮನದ ಬಯಕೆಗಳದೆಷ್ಟೋ ಅಪೂರ್ಣವಾಗಿವೆ, ಕೆಲ ಅಗತ್ಯ ಕರ್ಮಗಳ ಮುಗಿಸಬೇಕಿದೆ.  ಈಡೇರಿಸಲಾಗದ ಎದೆಯ ಬಯಕೆಗಳ […]

ಅನುವಾದ ಸಂಗಾತಿ

ನಿಕ್ಕಿ ಗಿಯೊವಿನ್ನಿ ಅಮೇರಿಕಾದ ಕವಿಯಿತ್ರಿ ಕನ್ನಡಕ್ಕೆ: ಕಮಲಾಕರ ಕಡವೆ “ನೀನೂ ಸಹ ಬಂದೆ” ನಾನು ಬಂದೆ ಸರ್ವರ ಸಮ್ಮುಖ ಸ್ನೇಹಿತರ ಅರಸಿನಾನು ಬಂದೆ ಸರ್ವರ ಸಮ್ಮುಖ ಒಲವ ಅರಸಿನಾನು ಬಂದೆ ಸರ್ವರ ಸಮ್ಮುಖ ಸಹಾನುಭೂತಿಗಾಗಿ ನಿನ್ನ ಕಂಡುಕೊಂಡೆನಾನು ಬಂದೆ ಸರ್ವರ ಸಮ್ಮುಖ ಅಳಲುನಾನು ಬಂದೆ ಸರ್ವರ ಸಮ್ಮುಖ ನಗಲು ನೀನು ನನ್ನ ಕಣ್ಣೊರೆಸಿದೆನೀನು ನನ್ನ ಸಂತೋಷವ ಹಂಚಿಕೊಂಡೆನಾನು ಸರ್ವರ ಸಮ್ಮುಖ ತೊರೆದು ನಿನ್ನ ಅರಸಿ ಹೊರಟೆ ನಾನು ಸರ್ವರ ಸಮ್ಮುಖ ತೊರೆದು ಹೋದೆ ನನ್ನನೇ ಅರಸಿನಾನು ಸದಾಕಾಲಕ್ಕೆ […]

ಸೂಚನೆ

ಪ್ರಿಯರೆ, ನಮಸ್ಕಾರಗಳು.ಹೊಸ ವರ್ಷದಿಂದ (2020)ಸಂಗಾತಿ ಪತ್ರಿಕೆಯನ್ನು  ಪ್ರತಿ ಬುದವಾರ ಪ್ರಕಟಿಸಲಾಗುವುದು. ಆರಂಭದ ದಿನಗಳ ಅನಿಶ್ಚಿತತೆ ಈಗ ಮುಗಿದಿದ್ದು, ವಿಶೇಷ ಮತ್ತು ಅನಿವಾರ್ಯ ಸಂದರ್ಭ ಹೊರತು ಪಡಿಸಿದಂತೆ, ವಾರಕ್ಕೊಮ್ಮೆ ಪ್ರಕಟಿಸುವ ನಿರ್ದಾರ ಕೈಗೊಳ್ಳಲಾಗಿದೆ. ಪ್ರತಿ ಗುರುವಾರದಿಂದ ಮುಂಗಳವಾರದವರೆಗು ನಮಗೆ ತಲುಪಿದ ಬರಹಗಳನ್ನು ಬುದವಾರ  ಮುಂಜಾನೆ ಪ್ರಕಟಿಸಲಾಗುವುದು-ಅಂಕಣಗಳಿಗು ಇದು ಅನ್ವಯಿಸಲಿದೆ. ಎಂದಿನಂತೆ ಬರಹಗಾರರು ಮತ್ತು ಓದುಗರು ಸಹಕರಿಸಬೇಕಾಗಿ ಕೋರುತ್ತೇವೆ,ಸಂಪಾದಕರು. ಸಂಗಾತಿ ಪತ್ರಿಕೆ

ಕುವೆಂಪು ಜನ್ಮದಿನ

“ವಿಶ್ವ ಮಾನವ” ಬರಹಗಾರ ಕುವೆಂಪು..! ಕೆ.ಶಿವು ಲಕ್ಕಣ್ಣವರ ಇಂದು ಡಿಸೆಂಬರ್ ೨೯. ಕುವೆಂಪು ಹುಟ್ಟಿದ ದಿನ. ಆ ವಿಶ್ವ ಮಾನವ ನೆನಪಿನಲ್ಲಿ ಈ ಬರಹ ಸ್ಮರಣೆ… ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ “ಪರ್ವತಾರಣ್ಯ ಪ್ರಪಂಚ”ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ , […]

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂ ಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನೂ ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದ ಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲುಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನು ಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿ ನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆ ಎಲ್ಲಿ ಹೋದೆ ಯಾರಿರುವರು ಜೊತೆಗೆಕೇಳಬಾರದ ಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರಬಯಲು ಸೀಮೆಯ […]

Back To Top