ಪ್ರೀತಿಯೆನಲು ಹಾಸ್ಯವೇ
ಚಂದ್ರಪ್ರಭ ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ […]
ನನ್ನೊಳು ಸುನಾಮಿಯೊ
ನನ್ನ ಕೊಳಲು ಚಂದ್ರಪ್ರಭ ಬಿದಿರ ರಂಧ್ರಗಳಲಿ ತೂರಿ ತುಳುಕುವಾಗ ನೀನು ಕೊಳಲ ಮಾಧುರ್ಯ.. ಇಂಪು ಸೊಂಪಿನ ಅದೇ ಮೋಡಿ ಬೀಸಿ ಬಂದ ಬಿರುಗಾಳಿಯಲಿ ಬೆರೆವಾಗ ಅಲುಗುವುದೇಕೆ ಅಸ್ತಿತ್ವದ ಸೌಧ..! ಮತ್ತದೇ ಗಾಳಿ ಭೋರ್ಗರೆವ ಸುನಾಮಿಯಲಿ ಬೆರೆವಾಗ ನನ್ನೊಳು ಸುನಾಮಿಯೊ ಸುನಾಮಿಯೊಳು ನಾನೊ..!! ನಿನ್ನ ಹೊರತು ಸಾಗದ ಉಸಿರು.. ಅಳವಿಗೇ ಸಿಕ್ಕದ ನಿನ್ನ ಗಾಳಿ ಎಂದವರಾರು..?
ಪುಸ್ತಕ ಸಂಗಾತಿ
ಕೃತಿ-ಮುಳುಗದಿರಲಿ ಬದುಕು(ಅನುವಾದಿತ) ಲೇ:-ಡಾ.ಸುಭಾಷ್ ರಾಜಮಾನೆ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಕೃತಿಯ ಬಗ್ಗೆ ಒಂದು ಟಿಪ್ಪಣಿ ಡಾ.ಮಹಾಲಿಂಗ ಪೋಳ ದಿನಾಂಕ ೦೮-೧೨-೨೦೧೯ ರಂದು ಭಾನುವಾರ ಬಿಡುಗಡೆಯಾಗುತ್ತಿರು ‘ಮುಳುದಿರಲಿ ಬದುಕು’ ಡಾ.ಸುಭಾಷ್ ರಾಜಮಾನೆಯವರ ೪ ನೇ ಕೃತಿ. ೩ ನೇ ಅನುವಾದದ ಕೃತಿ.ಈಗಾಗಲೆ ಸಿನಿಮಾಕ್ಕೆ ಸಂಬಂಧಿಸಿದ ‘ ದಿ ಆರ್ಟಿಸ್ಟ್’ ಮತ್ತು ವಿಕ್ಟರ್ ಪ್ರ್ಯಾಂಕಲ್ ನ ‘ ಬದುಕಿನ ಅರ್ಥ ಹುಡುಕುತ್ತಾ’ ಎಂಬ ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡದಲ್ಲಿ ಇಲ್ಲದ ವಿಶಿಷ್ಟವಾದ ವಸ್ತುವುಳ್ಳ ಪುಸ್ತಕವನ್ನು ಆಯ್ದುಕೊಂಡು […]
ಯಾರೂ ಓದದೆಯೇ ಹೋದ ಕತೆ…
ಟಿ.ಎಸ್.ಶ್ರವಣ ಕುಮಾರಿ ಯಾರೂ ಓದದೆಯೇ ಹೋದ ಕತೆ… ಇದೋ ಅತ್ಯಂತ ಜನನಿಬಿಡವಾದ ಮಾರುಕಟ್ಟೆ ಪ್ರದೇಶ. ಈ ಮಾರುಕಟ್ಟೆ ಸಂಕೀರ್ಣ ಮತ್ತು ಅದರ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾರದ, ಸಿಗದ ವಸ್ತುವೇ ಇಲ್ಲ ಎಂದುಕೊಳ್ಳಿ. ಸಣ್ಣ ಪುಟ್ಟ ಸಾಸುವೆ, ಪಿನ್ನು ಇಂತಹ ವಸ್ತುಗಳನ್ನು ಮಾರುವ ಅಂಗಡಿಗಳಿಂದ ಹಿಡಿದು ಕಾರು, ರಿಯಲ್ ಎಸ್ಟೇಟ್ ಏಜೆನ್ಸಿಯಂತ ದೊಡ್ಡ ವಹಿವಾಟುಗಳೂ ಇಲ್ಲಿವೆ. ಇವೆಲ್ಲವೂ ಇಲ್ಲಿದೆ ಎಂದ ಮೇಲೆ ಇವನ್ನೆಲ್ಲಾ ಮಾರುವವರು, ಕೊಳ್ಳುವ ಗಿರಾಕಿಗಳು, ಸರಕನ್ನು ಹೊರುವ ಹಮಾಲಿಗಳು, ಸಾಗಿಸುವ ಚಾಲಕರು, ವ್ಯವಹಾರವನ್ನು ಕುದುರಿಸುವ ದಲ್ಲಾಳಿಗಳು, ಪಾರ್ಕಿಂಗ್ ಕಾಸು ವಸೂಲಿ ಮಾಡುವ ಹುಡುಗರು, ಇವೆಲ್ಲ ವ್ಯವಹಾರಗಳನ್ನು ನೋಡಿ ಮಜಾ ತೆಗೆದುಕೊಳ್ಳುವ, ಅಂದಿನ […]
ಗೆರೆಬರೆ
ಎನ್.ಸುದೀಂದ್ರ
ಶಿವಮೊಗ್ಗ ಜಿಲ್ಲೆಯ ಚಳುವಳಿಗಳು
ಡಾ.ಸಣ್ಣರಾಮ ಕಳೆದ ಸಂಚಿಕೆಯಿಂದ… ಅಕ್ಕ ಕೂಡಲ ಸಂಗಮವನ್ನು ಪ್ರವೇಶಿಸುತ್ತಲೇ ಮತ್ತೊಂದು ಅಗ್ನಿ ಪರೀಕ್ಷೆ ಅವಳಿಗೆ ಕಾದಿತ್ತು. ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಯಾರೇ ಬರಲಿ ಪರೀಕ್ಷಿಸದೇ ಅನುಮತಿಯನ್ನು ಕೊಡುತ್ತಿರಲಿಲ್ಲ. ಶರಣೆ ಅಕ್ಕಮಹಾದೇವಿಯನ್ನು ಕಂಡು ದಿಗ್ಭ್ರಮೆಗೊಂಡ ಅಲ್ಲಮ ಅವಳನ್ನು ಪರೀಕ್ಷಿಸಲು ಮುಂದಾಗಿ “ಸತಿ ನೀನು ಇತ್ತಲೇಕೆ ಬಂದೆಯವ್ವಾ ಸತಿಯೆಂದರೆ ಮುನಿವರು ನಮ್ಮ ಶರಣರು ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು ಇಲ್ಲದಿದ್ದರೆ ತೊಲಗು ತಾಯಿ” ಅಕ್ಕ; “ಹರನೇ ನೀನೆನಗೆ ಗಂಡನಾಗಬೇಕೆಂದು […]
ಕವಿತೆ ಕಾರ್ನರ್
ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ ಕತ್ತಲಾಗಲೆಂದೆ ಬೆಳಗಾಗುವುದು ಆರಲೆಂದೇ ದೀಪ ಉರಿಯುವುದು ಬಾಡಲೆಂದೇ ಹೂವು ಅರಳುವುದು ಕಮರಲೆಂದೆ ಕನಸು ಹುಟ್ಟುವುದು ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು ಬರಲಿರುವ ಸಖನಿಗಾಗಿ. ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು ಬರಲಿರುವ ಸಖನ ಮೂಗಿಗೆ ಘಮಿಸಲೆಂದು ಬರಡು ಎದೆಗೆ ವಸಂತನ ಕನವರಿಸಿ ಹೊಸ ಕನಸು ಚಿಗುರಿಸಿಕೊಂಡಳು ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು ಮುಸ್ಸಂಜೆಗೆ ಬಂದ ಸಖ ಹಚ್ಚಿಟ್ಟ ಹಣತೆ ಆರಿಸಿದ ಮಲ್ಲೆ ಮಾಲೆಯ ಹೊಸಕಿಹಾಕಿದ ಅದಾಗತಾನೆ ಚಿಗುರೊಡೆದಿದ್ದ ಕನಸುಗಳ ಚಿಗುರ ಚಿವುಟಿ ಹಸಿಯೆದೆಯ ಮತ್ತೆ ಬರಡಾಗಿಸಿ ನಡೆದ ಮತ್ತೊಂದು ಎದೆಬಯಲ ಅರಸಿ ಅದೇ ಕಡೆ ಮತ್ತವಳೆಂದು ಹಣತೆ ಹಚ್ಚಿಡಲಿಲ್ಲ ಗಿಡದಿಂದ ಮಲ್ಲಿಗೆಯ ಬಿಡಿಸಿ ತರಲಿಲ್ಲ ಒಣಗಿದೆದೆಗೆ ನೀರು ಹಾಯಿಸಲಿಲ್ಲ ಕನಸಿರಲಿ ಮನಸಲ್ಲೂ ಮಂಡಿಗೆ ತಿನ್ನಲಿಲ್ಲ
ಕಾವ್ಯಯಾನ
ನಾನು ನಿನ್ನಾತ್ಮದ ಗುರುತಾಗಿದ್ದೆ ಬಿದಲೋಟಿ ರಂಗನಾಥ್ ಹೌದು ನಾನು ನಿನ್ನಾತ್ಮದ ಗುರುತಾಗಿದ್ದೆ ಆ ನಿನ್ನ ನೋಡುವ ನೋಟದ ಬಿಸುಪಿಗೆ ಚಳಿಯಾಗಿದ್ದೆ ಮಳೆಯಾಗಿದ್ದೆ ಮುಗಿಲೇ ಆಗಿದ್ದೆ ನಿನ್ನ ಮೈಯೊಳಗಿನ ಬಿಸಿಗೆ ಬೆರೆತ ಜೀವವಾಗಿದ್ದೆ ನೀನು ನಡೆದ ದಾರಿಯ ಮೇಲಿನ ಹೆಜ್ಜೆಯನು ಮುಟ್ಟಿ ಬೆಳಕಿನ ಕಿರಣಗಳ ಮುಡಿಸಿದ್ದೆ ಉಳಿದ ಮಾತುಗಳ ನಿಟ್ಟುಸಿರ ಮೌನಕೆ ಕಾಲದ ಸವಾರ ಕುಂಟಾಗಿ ಬಿದ್ದಿದ್ದ ಎದೆಯೊಳಗಿನ ಗಿಲಕಿಗೆ ಕೀ ಕೊಡುವ ನಿನ್ನ ಹೃದಯದ ಕೋಮಲ ಕೈಗಳು ನನ್ನಿಂದ ಜಾರಿಹೋದಾಗಿನ ಶೂನ್ಯತೆಯಲಿ ಕತ್ತಲ ಮನೆಯಲಿ ದಿನಗಳ ಎಣಿಸುತ್ತ […]
ಕಾಡುವ ಹಾಡು
ಮೈಸೂರು ದಸರಾ ಚಿತ್ರ-ಕರುಳಿನ ಕರೆ ಗೀತರಚನೆ- ಆರ್.ಎನ್.ಜಯಗೋಪಾಲ್ ಸಂಗೀತ-ಎಂ.ರಂಗರಾವ್ ಗಾಯಕರು-ಪಿ.ಬಿ.ಶ್ರೀನಿವಾಸ್ ಸುಜಾತ ರವೀಶ್ ಕಾಡುವ ಹಾಡು ಮೈಸೂರು ದಸರಾ ಮೈಸೂರು ಎಂದರೆ ದಸರಾ ಜಂಬೂ ಸವಾರಿ ಮೊದಲು ನೆನಪು ಬರುವುದು. ನಂತರ ಮೈಸೂರು ಪಾಕ್ ಮೈಸೂರು ಮಲ್ಲಿಗೆ ಮೈಸೂರು ರೇಷ್ಮೆ ಸೀರೆ ಮೈಸೂರು ಚಿಗುರು ವೀಳ್ಯದೆಲೆ ಹಾಗೂ ಶ್ರೀಗಂಧದ ಉತ್ಪನ್ನಗಳು ಮೈಸೂರು ವೀರನಗೆರೆ ಬದನೆಕಾಯಿ. ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಕೈಗೆ ಹಚ್ಚುವ ಮಸಿ ತಯಾರಾಗುವುದು ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲೇ. ರಾಜ್ಯದ ರಾಜಧಾನಿ ಬೆಂಗಳೂರು ಆದರೂ […]
ಹೊತ್ತಾರೆ
ಅಮ್ಮನೂರಿನನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಹೋರಿ ಕಣ್ಣು ಮೊನ್ನೆ ರಾತ್ರಿ ಊಟ ಮುಗಿಸಿ ಮಲಗಿದ ನಿದ್ರೆ ಹತ್ತಿದ ಸ್ವಲ್ಪ ಹೊತ್ತಿನಲ್ಲೇ ಯಾಕೋ ಇದ್ದಕ್ಕಿದ್ದ ಹಾಗೆ ಕಲ್ಹಳ್ಳಿ ಎತ್ತು ಎದುರಲ್ಲಿ ಬಂದು ನಿಂತಂತೆ ಇತ್ತು! ಸುತ್ತ ನೋಡಿದೆ, ಯಾರಿದಾರೆ ಜೊತೆಯಲ್ಲಿ, ಬರೀ ಕಲ್ಹಳ್ಳಿ ಎತ್ತು… ಮನೆ ಎತ್ತು ಯಾವ್ ಕಡೆ ಹೋಯ್ತು? ಮತ್ತೆ ಇನ್ನೊಂದು ಸಲ ಪರಿಶೀಲಿಸಲೇ, ಎಲ್ಲಿದಿವಿ, ಕಲ್ಹಳ್ಳಿ ಎತ್ತು ಮತ್ತು ನಾನು ಇಬ್ಬರೇ. ಯಾರಿಗೆ ಹೇಳೋದು ಈಗ, ಗಾಬರಿಯಾಯ್ತು. ಆ ಗಾಬರಿಗೆ ಕಾರಣ, ಮನೆ ಎತ್ತು ಜೊತೆಯಲ್ಲಿದ್ದರೆ ಮಾತ್ರ ಕಲ್ಹಳ್ಳಿ […]