ಅಂಕಣ ಬರಹ ಕಬ್ಬಿಗರ ಅಬ್ಬಿ ಸಾಲುಗಟ್ಟಿದ ಮನಸ್ಸುಗಳು ಮನೆ ಕಟ್ಟುವಾಗ ಮೊದಲು ಕಲ್ಲಿನಿಂದ ಗಟ್ಟಿಯಾದ ಅಡಿಪಾಯ, ಆಮೇಲೆ ಕಟ್ಟುವುದೇ ಗೋಡೆ!. ತಳಪಾಯದ ನಾಲ್ಕೂ ಅಂಚುಗಳುದ್ದಕ್ಕೂ ನಾಲ್ಕು ಗೋಡೆಗಳು ಮಧ್ಯದಲ್ಲಿ ಸ್ಪೇಸ್ ಮತ್ತು ಗಾಳಿ ಬಂಧಿಸಲ್ಪಡುತ್ತದೆ. ಒಳಗೆ ಮತ್ತೊಂದಷ್ಟು ಗೋಡೆಗಳು. ಡ್ರಾಯಿಂಗ್ ರೂಂ ಮತ್ತು ಮಲಗುವ ಕೋಣೆ ನಡುವೆ ಗೋಡೆ, ಮನೆಗೆ ಬರುವ ಆಗಂತುಕರಿಂದ ಪ್ರೈವೆಸಿ ಅತ್ಯಗತ್ಯ. ಆಮೇಲೆ ಅಡುಗೆ ಕೋಣೆ ಮತ್ತು ಡೈನಿಂಗ್ ರೂಂ ನಡುವೆ ಗೋಡೆಗಳು. ಮತ್ತೆ, ದೇವರ ಕೋಣೆ ಎನ್ನಲ್ಪಡುವ ಗೂಡಿನಂತಹ ಚಿಕ್ಕ ಕೋಣೆಗೂ […]
ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ
ಪುಸ್ತಕ ಸಂಗಾತಿ ಸಂದಾಯಿಯೆಂಬ ರಾಜಕೀಯ ಬದುಕಿನ ಸಹಜ ಚಿತ್ರಣ ಸದ್ದುಗದ್ದಲವಿಲ್ಲದೆ ಈಗಾಗಲೇ ಸಾಕಷ್ಟು ಕೃತಿಗಳನ್ನು ಬರೆದೂ ಸಾಹಿತ್ಯದ ಜನಜಂಗುಳಿಯಿಂದ ದೂರವೇ ಇದ್ದು, ತನ್ನ ಪಾಡಿಗೆ ತಾನು ಬರೆಯುವುದರಲ್ಲಿಯೇ ಸುಖ ಕಾಣುವ ಕಣಿವೆ ಭಾರದ್ವಾಜ ಕೊಡಗಿನ ಕುಶಾಲನಗರದವರು. ಅವರ ಬರೆಯುವ ಓಘ ನಿಜಕ್ಕೂ ನನ್ನನ್ನು ಚಕಿತಳನ್ನಾಗಿಸುತ್ತದೆ. ಈ ಕೊರೋನೋ ಲಾಕ್ ಡೌನ್ ಸಮಯದ ಕೆಲವೇ ತಿಂಗಳುಗಳಲ್ಲಿ ವಿಭಿನ್ನ ಕಥಾ ಹಂದರದ ಎರಡು ಕಾದಂಬರಿಗಳನ್ನು ನಮ್ಮ ಮುಂದೆ ತಂದು ಇಟ್ಟಿದ್ದಾರೆ. ಅವರ ಕಥನ ಕುಶಲತೆಗೆ ಶರಣೆನ್ನುತ್ತಾ, ಈಗಷ್ಟೇ ಓದಿ ಮುಗಿಸಿದ […]
ನಾದಬೇಕು …ನಾದ ಬೇಕು !!
ರಶ್ಮಿ ಬರೆಯುತ್ತಾರೆ
ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ
ಒಕ್ಕಲುತನ
ಇನ್ನ ಕಬ್ಬ ಸುಲದು ರಸಾ ಹೀರೂದು ನಮ್ ಜನಕ್ಕೆ ಭಾರೀ ಸಲೀಸು. ಒಂದ ಕೈಯಾಗ ಸೈಕಲ್ ಹಿಡದು ಮತ್ತೊಂದ ಕೈಯಾಗ ಕಬ್ಬ ತಿನಕೋತ ಹೋಗವರನ್ನ ನೀವು ಎಲ್ಲೆಲ್ಲೂ ನೋಡಬಹುದು.
ದಂತ ಪುರಾಣ
ಸಂಗೀತಾರವಿರಾಜ್ ಬರೆಯುತ್ತಾರೆ ದಂತಪುರಾಣ
ಗಜಲ್
ಗಜಲ್ ಶ್ರೀ ಲಕ್ಷ್ಮಿ ಅದ್ಯಪಾಡಿ ನಿನ್ನ ಉಸಿರ ರಾಗಕ್ಕಾಗಿ ಹುಡುಕಾಡುತ್ತಿರುವೆನಿನ್ನ ಒಲವ ಪಿಸುನುಡಿಗಾಗಿ ಹುಡುಕಾಡುತ್ತಿರುವೆ.. ಕದ್ದು ನೋಡುವ ಸಾವಿರಾರು ಕಣ್ಣುಗಳ ನಡುವೆನಿನ್ನ ಪ್ರೇಮದ ನೋಟಕ್ಕಾಗಿ ಹುಡುಕಾಡುತ್ತಿರುವೆ.. ನನ್ನ ಕುಡಿ ನೋಟಕ್ಕೆ ಕಾದಿವೆ ನೂರು ಭ್ರಮರಗಳುಕೆನ್ನೆ ಸವರಿದ ಪುಟ್ಟ ಹೂವಿಗಾಗಿ ಹುಡುಕಾಡುತ್ತಿರುವೆ.. ಬಣ್ಣಗಳಲ್ಲಿ ಅದ್ದಿದ ಸಾವಿರ ಕುಂಚಗಳು ಕಾದಿವೆನಿನ್ನ ನೆನಪಿನ ಒಂದು ರೇಖೆಗಾಗಿ ಹುಡುಕಾಡುತ್ತಿರುವೆ ಜಗದ ಬನದೊಳು ಅರಳಿವೆ ವಿಧವಿಧವಾದ ಹೂಗಳುಒಡಲ ಕಂಪು ಸೂಸಿದ ಕಸ್ತೂರಿಗಾಗಿ ಹುಡುಕಾಡುತ್ತಿರುವೆ *****************************
ಗಜಲ್
ಗಜಲ್ ಸಿದ್ದರಾಮ ಹೊನ್ಕಲ್ ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತುಕಳವಳಿಸದಿರು […]
ಪರಿವರ್ತನೆಗೆ ದಾರಿ ಯಾವುದಾದರೇನು?
ಲಲಿತ ಪ್ರಬಂಧ ಪರಿವರ್ತನೆಗೆ ದಾರಿ ಯಾವುದಾದರೇನು? ನಾಗರೇಖಾ ಗಾಂವಕರ್ ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. ಉಳಿದೆಲ್ಲ ಮಕ್ಕಳು […]
ಕದಳಿಯ ಅಕ್ಕ
ಕವಿತೆ ಕದಳಿಯ ಅಕ್ಕ ಜ್ಯೋತಿ ಬಳ್ಳಾರಿ ಶಿವಮೊಗ್ಗ ಜಿಲ್ಲೆಯಉಡುತಡಿಯಲಿ ಹುಟ್ಟಿತು,ಒಂದು ಕನ್ನಡದ ಕಂದಮ್ಮಅವಳಿಂದ ಜಗಕ್ಕೆಲ್ಲಆನಂದ ನೋಡಮ್ಮ. ನಿರ್ಮಲಶೆಟ್ಟಿ ಸುಮತಿದಂಪತಿಗಳ ಅಕ್ಕರೆಯ ಕಂದಮ್ಮ,ಸುರದೃಪಿ ಗುಣವಂತಹೆಮ್ಮೆಯ ಮಗಳಮ್ಮ. ಅಂದದ ಮೈಮಾಟಕ್ಕೆಕೌಶಿಕ ಮಹಾರಾಜನ ವಶವಾದಳು ಕೇಳಮ್ಮ,ಮಾತು ತಪ್ಪಿದ ರಾಜನ ದಿಕ್ಕರಿಸಿಬಿಟ್ಟಳಮ್ಮ. ಅರಮನೆಯ ಭೋಗವತೊರೆದು ಕೇಶಾಂಬರಿಯಾಗಿ ಹೋರಟು ಬಿಟ್ಟಳಮ್ಮ.ಭವ ಬಂಧನವ ತೊರೆದು ಮಲ್ಲಿಕಾರ್ಜುನನ್ನುಕಾಡು ಮೆಡುಗಳಲ್ಲಿ ಹುಡುಕಿದಳಮ್ಮ. ಹಾಡುವ ಕೋಗಿಲೆಗೆಹಕ್ಕಿ ಪಕ್ಷಿಗಳಿಗೆ ಕಂಡಿರಾನನ್ನ ಪತಿನೆಂದು ಕೇಳಿದಳಮ್ಮ. ಕಲ್ಯಾಣದ ಅನುಭವ ಮಂಟಪದಲಿಅಲ್ಲಮಪ್ರಭುವಿನ ಪರೀಕ್ಷೆ ಗೆದ್ದಳಮ್ಮಜ್ಞಾನದ ಗಣಿಯಾಗಿಮಹಾಮನೆಯ ಅಕ್ಕ ಆದಳು ನೋಡಮ್ಮ. ಬಸವಣ್ಣನವರ ಜೊತೆಗೂಡಿಕಟ್ಟಿದಳು ಸಮಾನತೆಯ ಕಲ್ಯಾಣ […]
ಉಡ್ಡಾಣ
ಕಥೆ ಉಡ್ಡಾಣ ಹೇಮಾ ಸದಾನಂದ್ ಅಮೀನ್ ಎಡೆಬಿಡದೆ ಅಳುವ ಆ ಮಗುವಿನ ತಾಯಿಯ ಬೇಜವಾಬ್ದಾರಿತನವನ್ನು ನೋಡಿ ಯಾರೂ ಸಿಡಿಮಿಡಿಗೊಳ್ಳುವದು ಸಹಜವೇ. ಆದರೆ ಇದು ಫಸ್ಟ್ ಕ್ಲಾಸ್ ಕಂಪಾರ್ಟ್ಮೆಂಟಿನಲ್ಲಿ ಆಗಿರುವುದರಿಂದ ಕೇವಲ ಮುಖ ಸಿಂಡರಿಸಿ, “ ತಾನು ಡಿಸ್ಟರ್ಬ್ ಆಗಿದ್ದೇನೆ. ದಯಮಾಡಿ ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಿ “ ಎಂದು ವಕ್ರ ದೃಷ್ಟಿಯಿಂದಲೇ ಎಚ್ಚರಿಕೆ ಕೊಡುವ ಮನಸ್ಥಿತಿಯುಳ್ಳವರ ಮಧ್ಯ ಮೂರೂ ತಿಂಗಳ ಗರ್ಭಿಣಿಯಾಗಿದ್ದ ಸಮೀಕ್ಷಳ ಮನಸ್ಸು ತೀರ ವಿಚಲಿತಗೊಂಡಿತ್ತು. ಆಕೆ ಆ ತಾಯಿ ಮಗುವನ್ನು ಒಂದೇ […]