ಅಂಕಣ

ಅಂಕಣ

ಮುಟ್ಟು! ಚಂದ್ರಪ್ರಭ ಮುಟ್ಟು .. ಮುಟ್ಟು.. ಮುಟ್ಟು.. ಪ್ರಜಾವಾಣಿ ಭಾನುವಾರದ ಪುರವಣಿ (೨೩/೧೦/೧೯) ಯಲ್ಲಿ ಬಾನು ಮುಷ್ತಾಕ್ ರವರ ಲೇಖನ  “ಮುಟ್ಟು ಮುಟ್ಟೆಂದೇಕೆ..?”  ಓದುವಾಗ ‘ಮುಟ್ಟು’ ಕುರಿತು ಹತ್ತಾರು ಸಂಗತಿಗಳು ತಲೆಯಲ್ಲಿ ಸುಳಿದಾಡತೊಡಗಿವೆ. ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, […]

ಅಂಕಣ

ನೋಟ! ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆ ಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ……      ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ […]

ಅನುವಾದ

ತೆಲುಗು ಮೂಲ- ಡಾ.ಕತ್ತಿ ಪದ್ಮಾರಾವು ಕನ್ನಡಕ್ಕೆ ನಾರಾಯಣಮೂರ್ತಿ ಬೂದುಗೂರು ಯಾರು ಕೊಲೆಪಾತಕರು? ಸಮುದ್ರ ಹಿಮದಿಂದ ಗಾಢವಾಗಿ ಗಡ್ಡೆಕಟ್ಟಿದೆ ನಡುವೆ ಒಂದು ನೀರಿನ ಝರೀ ತಿಮಿಂಗಲಗಳು ಈಜುತ್ತಾ ಸಾಗುತ್ತಿವೆ ಹೆಚ್ಚಾಗಿ ಇಬ್ಬನಿ ಸುರಿದಾಗ, ಅವಕ್ಕೆ ಉಸಿರಾಡಲು ಕಷ್ಟವೆನಿಸುತ್ತದೆ ಈಗ ತಿಮಿಂಗಲಗಳದೇ ಬೇಟೇ ಬಲೆಗಳೆಲ್ಲಾ ಖಾಲೀ,ಖಾಲೀ ಬಿದ್ದಿವೆ ಇತ್ತೀಚೆಗೆ ಮೀನುಗಳೂ… ಬಲೆಯನ್ನು ಗುರ್ತು ಹಚ್ಚುತ್ತಿವೆ. ಆ ಕಾಲುವೆ ಬದಿಯಲ್ಲಿ ತುಂಬಾ ನಾಯೀಕೊಡೆಗಳ ಸಾಲು ರಸ್ತೆ ಒದ್ದೆ ಒದ್ದೆಯಾಗಿ ಕಿರುಪಾದಗಳ ಸಪ್ಪಳಕೆ ನೀರು ಚೆಲ್ಲುತಿದೆ. ಮನುಷ್ಯನಿಗೆ  ಈ ಚಳೀಯಲ್ಲೂ ಬೆವರು ಕಿತ್ತುಬರುತ್ತಿದೆ […]

ಮಕ್ಕಳ ವಿಭಾಗ

ಕೆಂಚಬೆಕ್ಕಿಗೆ ಏನಾಯ್ತು? ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರು ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು […]

ಶಾನಿಯ ಡೆಸ್ಕಿನಿಂದ…

ಚಂದ್ರಾವತಿ ಬಡ್ಡಡ್ಕ ನಾನು- ಛೇ ನೀವು ಎಲ್ಲಿ ಹೋದ್ದು? ಸಚಿನ್ ಸರೀ ಹೊಡ್ದ, ನೋಡ್ಬೇಕಿತ್ತು… ಅಮ್ಮ- ಹೊಡ್ದನಾ…. ಯಾರಿಗೆ ಹೊಡ್ದಾ? ಆಚೆ ಪಾರ್ಟಿಯವನಿಗೆ ಹೊಡ್ದದ್ದದ್ದಾ…. ಯಾಕೆ ಹೊಡ್ದದ್ದು…? ಶ್ರೀಪತಿ- ಅಲ್ಲಮ್ಮಾ ರನ್ ಬಾರಿಸಿದ. ಅಮ್ಮ- ಹ್ಞಾ.. ಹಾಗಾ…. ನಾನು ಆಚೆ ಪಾರ್ಟಿಗೆ ಹೊಡ್ಡದ್ದದ್ದಾ ಅಂತ ನೆನ್ಸಿದೆ. ನಾನು- ಹ್ಹೋ…. ವೋ….. ವಿಕೆಟ್…. ಇಲ್ಲ ಥರ್ಡ್ ಅಂಪಾಯರ್ ಅಮ್ಮ- ಏನಾಯ್ತು….ಏನಾಯ್ತು… ನಾನು- ಸ್ವಲ್ಪ ಇರಿ…. ಧರ್ಡ್ ಅಂಪಾಯರ್‌ಗೆ ಹಾಕಿದ್ದಾರೆ ಅಮ್ಮ- ಅದ್ಯಾರು? ನಾನು- ವಿವರಿಸಿ ಎಂಬಂತೆ ಇವರತ್ತ ನೋಡಿದೆ. […]

ಅಂತರಂಗದ ಅಲೆಗಳು

                         ಸುಜಾತ ರವೀಶ್ ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಳಾಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ.ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಹಾಗಾಗಿ ಈಗ […]

ಪುಸ್ತಕ ವಿಮರ್ಶೆ

ಬಿದಲೋಟಿ ರಂಗನಾಥ್ ಕೃತಿಯ ಹೆಸರು: ನನ್ನಪ್ಪ ಒಂದು ಗ್ಯಾಲಕ್ಸಿ ( ಕವನಸಂಕಲನ) ಕವಿ: ನೂರುಲ್ಲಾ ತ್ಯಾಮಗೊಂಡ್ಲು ” ಹೊಸ  ತಲೆಮಾರಿನ ನಿಜದ ಕಾವ್ಯಾಭಿವ್ಯಕ್ತಿ ”      ಗೆಳೆಯ ನೂರುಲ್ಲಾ ತ್ಯಾಮಗೊಂಡ್ಲು ಮತ್ತು ನನ್ನ ಸ್ನೇಹ ಸುಮಾರು ಆರುವರೆ ವರ್ಷದ್ದು, ಸಿಟ್ಟು ಸಿಡುಕು ಆವೇಶ ಅವರಲ್ಲಿ ಕಂಡಂತೆ ಅವರ ಕವಿತೆಗಳಾಲ್ಲೂ ಇದೆ. ಯಾವುದನ್ನೇ ಆಗಲಿ ಖಡಕ್ಕಾಗಿ ಪ್ರತಿಭಟಿಸುವ ನೇರ ಮಾತಿನ ನಿಷ್ಠೂರವಾದಿ ಮನುಷ್ಯ. ಅಷ್ಟು ಸುಲಭವಾಗಿ ರಾಜಿಯಾಗದ ನಡತೆ.      “ನನ್ನಪ್ಪ ಒಂದು ಗ್ಯಾಲಕ್ಸಿ” ಅವರ ಎರಡನೆಯ ಕವನ […]

ವಿಶೇಷ

ಕನ್ನಡ ಬರಹಗಾರ ಮತ್ತು ಜಾಲತಾಣಗಳು.  ಡಿ.ಎಸ್.ರಾಮಸ್ವಾಮಿ         ಕನ್ನಡಕ್ಕೂ ಮತ್ತು ಅದರ ಸಾಹಿತ್ಯ ಚರಿತ್ರೆಗೂ ಶತಮಾನಗಳ ಇತಿಹಾಸವೇ ಇದೆ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತು ನಾವು ನೀವೆಲ್ಲ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳವರೆಗೂ ಅದರ ವಿಸ್ತರತೆ ಇದೆ. ಇಂಗ್ಲಿಷಿಗೆ ತರ್ಜುಮೆಯಾಗದ ಏಕೈಕ ಕಾರಣಕ್ಕೆ ಶ್ರೇಷ್ಠ ಸಾಹಿತ್ಯ ಕೃತಿಗಳಾಗಿದ್ದೂ ವಿಶ್ವ ಮನ್ನಣೆ ಪಡೆಯುವ ಹಲವಾರು ಬಹುಮಾನಗಳಿಂದ ಕನ್ನಡದ ಲೇಖಕರು ವಂಚಿತರಾಗಿರುವುದೂ ಮತ್ತು ಇಂಗ್ಲಿಷಿಗೆ ಅನುವಾದಗೊಂಡ ಕಾರಣಕ್ಕೇ ಸಾಮಾನ್ಯ ಲೇಖಕರೂ ವಿಶ್ವ ವ್ಯಾಪೀ ಪ್ರಚಾರ ಪಡೆದುದೂ ಇದೆ.      ಅಂದರೆ ಕನ್ನಡ […]

ಕಥಾಗುಚ್ಛ

ಮುಡಿಯೇರಿದ ಹೂವು! ಸಂತೇಬೆನ್ನೂರು ಫೈಜ್ನಾಟ್ರಾಜ್ ಹುಡ್ಗಿ ಮನೆ ಪಕ್ಕಾನೇ ಇದ್ ಬಿಟ್ರೆ ಪ್ರೀತಿ ಹುಟ್ ಬಿಡುತ್ತಾ ? ಹುಡುಗೀರೂ ಥಕ್ ಅಂತ ತೆಕ್ಕೆಗೆ ಬಿದ್ ಬಿಡ್ತಾರಾ ? ಅದೆಲ್ಲಾ ನಮ್ಮಂಥಾ ಹುಚ್ ಹುಡುಗರ ಬೆಚ್ ಕಲ್ಪನೆಗಳು ! ಈಗ ಈ ರೇಷ್ಮಾ ನಮ್ಮ ಪಕ್ಕದ್ಮನೇಲೇ ಇರೋದು ; ಆಕೆ ಬಂದು ಸರಿ ಸುಮಾರು ವರ್ಷ ಆಗ್ತಾ ಬಂತು. ತಲೆ ಮೇಲಿನ ದಾವಣಿ ಸರೀಲಿಲ್ಲ. ತಲೆ ಎತ್ತಿ‍ ಯಾರನ್ನೂ ನೋಡ್ಲಿಲ್ಲ. ತಾನು, ತನ್ನ ಕೆಲ್ಸ ಅಂತ ಸದಾ ಮೌನದ […]

ಕಥಾಗುಚ್ಛ

ಟೊಮ್ಯಾಟೊ ಕೆಚಪ್ ಡಾ.ಅಜಿತ್ ಹರೀಶಿ ಹಲೋ ಸನಾ, ನಾನ್ಯಾರು ಗೊತ್ತಾಯ್ತಾ? ಒಂದು ವಾರದಿಂದ ವಾಟ್ಸ್ ಆಪ್ ಮಾಡದೆ, ನಿನ್ನ ಸಂದೇಶಕ್ಕೆ ಉತ್ತರ ಕೊಡದೆ ಸುಮ್ಮನಿದ್ದನಲ್ಲ… ಜಯ್.. ನಾನು ಜಯ್ ಅಲ್ಲ. ನನ್ನ ಹೆಸರು ಸುಹಾನ್. ನಾನೀಗ ಮೇಲ್ ಮಾಡಿದ್ದು ನಿನಗೆ ಸತ್ಯ ಹೇಳಲಿಕ್ಕೆ… ಸನಾ, ಅಡಿಗೇನೆ ಬರದ ನೀನು, ಮೆಟ್ರಿಮೋನಿಯಲ್ ನ ಪ್ರೊಫೈಲ್ ನಲ್ಲಿ ನನಗೆ ಒಪ್ಪಿಗೆ ಆದಾಗ್ಯೂ, ವಧು ಪರೀಕ್ಷೆ ಮಾಡೋದಿಕ್ಕೆ ಅಂತ ನಾನೊಂದು ವೇಷ ಹಾಕಿದೆ. ಜಯ್, ಕಂಪ್ಯೂಟರ್ ಇಂಜಿನಿಯರ್ ಅಂತ. ನಿಂಗೆ ಟೊಮ್ಯಾಟೊ […]

Back To Top