ಪಥ
ತಿರುಗುವುದು ಚಕ್ರದಂದದಿ
ಹಾಗೇ ದುಃಖ ದುಮ್ಮಾನಗಳು
ನಿಲ್ಲಲಾರವು ಸ್ಥಿರವಾಗಿ
ಹಾಯ್ಕುಗಳು
ತೊಟ್ಟಿಲು ಕಟ್ಟಿ :
ಬಾನಿಗೆ, ಲಾಲಿಹಾಡು,
ಹಕ್ಕಿ ಹೇಳಿದೆ.
ಏಕತಾರಿಯ ಸಂಚಾರಿ ಸ್ವರಗಳು
ಕಾತ್ಯಾಯಿನಿ ಕುಂಜಿಬೆಟ್ಟು ಬರೆಯುತ್ತಾರೆ
ಹೊರ ದಾರಿಯಲ್ಲಿ ನೀನು ನಡೆದು ದೂರ ಹೋಗಿ ಬಿಡು
ನಿನ್ನದೇ ಕನಸುಗಳ ಊರಿಗೆ
ಕಡಲಾಚೆಯ ಆ ದೇಶಕೆ
ಇಬ್ಬನಿಯ ಸೆರಗು
ಶಾಂತಲಾಮಧು ಕವಿತೆ
ಕ್ಷಣಿಕಬದುಕಿನ ನೆನಹು
ಇಬ್ಬನೀಯ ಸೆರಗು
ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ
ಲಲಿತ ಪ್ರಬಂಧ ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ… ಟಿ.ಎಸ್.ಶ್ರವಣಕುಮಾರಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ […]
ಅಂಕಣಬರಹ ಗೊಂಬೆಗೆ ತೊಡಿಸಿದ ಬಣ್ಣದ ಅಂಗಿ ಅಳು ತಡೆಯದಾದಾಗ ಆಸರೆಯಾಗುತ್ತಿದ್ದದ್ದು ಒಂದೋ ಅಜ್ಜಿಯ ಮಡಿಲು, ಇಲ್ಲವಾದರೆ ಆ ತಾಯಿಯಂತಹ ಮರದ ತಣಿಲು. ದಪ್ಪದಪ್ಪದ ಎರಡು ಕಾಂಡಗಳು ಬುಡವೊಂದೇ,ಹೆಗಲೆರಡು ಎಂಬ ಹಾಗೆ ನಿಂತಿದ್ದ ಆಲದ ಮರ. ಅದನ್ನು ಅಪ್ಪಿ ಹಿಡಿದು ನಿಂತರೆ ಎಂತಹಾ ದುಗುಡ,ಭಯ,ದುಃಖವನ್ನೂ ಅದು ಹೀರಿ ನಾನು ಹಗುರವಾಗುತ್ತಿದ್ದೆ. ಯಾವುದೋ ಜನ್ಮಾಂತರದ ಬಂಧದ ಸಾಕ್ಷಿಯೇನೋ ಎಂಬಂತೆ ಮುಖ್ಯ ರಸ್ತೆಯ ಒಂದು ಬದಿಗೆ ಉದ್ದದ ನೆರಳು ಹಾಸಿ ನಿಂತ ಆಲದ ಮರವದು. ಅದರ ಪಕ್ಕದಲ್ಲೇ ತುಸು ಅಂತರ ಕಾಪಾಡಿಕೊಂಡು […]
ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ. ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ… ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ! ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ […]
ಅಂಕಣ ಬರಹ ಸಂಕ್ರಾಂತಿ ಬಂತೋ ರತ್ತೋ ರತ್ತೋ ಸಂಕ್ರಾಂತಿ ಎಂದ ಕೂಡಲೇ ನೆನಪಾಗುವುದೇ ಚಂದದ ರೇಷಿಮೆ ಲಂಗ ತೊಟ್ಟು ಉದ್ದ ಜಡೆ ಹೆಣೆದುಕೊಂಡು, ಘಮ ಘಮ ಮಲ್ಲಿಗೆ ಹೂ ಮುಡಿದು, ಏನೆಲ್ಲ ಸಾಧ್ಯವಿರುತ್ತದೋ ಅಷ್ಟೆಲ್ಲಾ ಅಲಂಕಾರ ಮಾಡಿಕೊಂಡು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಹಂಚಲು ಹೊರಡುತ್ತಿದ್ದದ್ದು… ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿರುತ್ತಿತ್ತಾದರೂ ಸಂಕ್ರಾಂತಿಗಿರುವ ಆಕರ್ಷಣೆಗಳ ದೊಡ್ಡಪಟ್ಟಿಯೂ ಇರುತ್ತಿತ್ತು. ಸಂಕ್ರಾಂತಿ ಹೆಣ್ಣುಮಕ್ಕಳ ಹಬ್ಬ ಎನಿಸಿಬಿಡುತ್ತಿತ್ತು. ಅದೆಷ್ಟೋ ದಿನಗಳ ತಯಾರಿ ಈ ಹಬ್ಬಕ್ಕೆ. ಹದಿನೈದು ದಿನಗಳಿಗೆ ಮುಂಚೆಯೇ ಎಳ್ಳು-ಬೆಲ್ಲ ತಯಾರಿಸಲು […]
ಶಪಥ
ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ ಶಪಥ ಹೊಸ ವರುಷಕೆ ಒಂದುಶಪಥವಿದೆ ಸಾಕಿಮತ್ತೆಂದೂ ಎದಿರುಗೊಳ್ಳುವುದಿಲ್ಲಹನಿ ಪ್ರೀತಿಗಾಗಿಅಂಗಲಾಚುವುದೂ ಇಲ್ಲನೀ ಸಾಗಿದ ದಾರಿಯಲ್ಲಿಸಾವಿರ ಬಾರಿ ತಿರುಗಿ ತಿರಿಗಿನೋಡುವುದೂ ಇಲ್ಲ ನಿನ್ನ ನೆನಪಲಿ ಕಣ್ಣಾಲಿಗಳುಒಡ್ಡು ಕಟ್ಟಿ ನಿಂತರೂ,ಥುಳುಕಿದರೂತುಟಿ ಕಂಪಿಸಿದರೂನಿನ್ನ ಸಂತೈಸುವಿಕೆಗೆಹಾತೊರೆಯುವುದೂ ಇಲ್ಲಒರಗಿದ್ದ ನಿನ್ನೆದೆಯ ನೆನೆದುಸಂತೈಸಿಕೊಳ್ಳುವುದು ಇಲ್ಲಬಿಡು, ನಿರಾಳವಾಗಲಿ ಮನಸ್ಸು, ಅದೆಷ್ಟೂ ಖಾಲಿತನಉಸಿರು ನಿಂತ ಮೇಲೆಯಾರಿಗ್ಯಾವ ಹೆಸರು?ಹೆಣವೆಂದಷ್ಟೇ ಅಲ್ಲವೇ ಸಾಕಿಈ ವರ್ಷಕೂ ಅದೇ ಶಪಥನನ್ನಲ್ಲಿ ನೀನಿರುವವರೆಗೂಬದುಕಬೇಕುಅದಮ್ಯವಾಗಿ ಪ್ರೀತಿಸಬೇಕು
ಸಂಕ್ರಾಂತಿಕಾವ್ಯ ಸುಗ್ಗಿ ಉರಿಯುವ ಬದಲು ಬೆಳಗಬೇಕು ಸಂಗೀತ ರವಿರಾಜ್ ಸಮಾಜ ಅಭಯದ ಮುಖವಾಡ ಹಾಕಿನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ? ಮಲ ತೆಗೆಯಲು ಒಂದುಮನುಷ್ಯ ವರ್ಗವ ಸೃಷ್ಠಿಸಿಅದಕ್ಕೊಂದು ಜಾತಿಯ ಹೆಸರು ಕೊಟ್ಟಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿದೇವ ಸ್ವರೂಪ ತೋಟಿಗಳಒಳತೋಟಿಯ ಅರಿವಾಗಿಒಂದು ತೊಟ್ಟು ಕಣ್ಣೀರು ಹಾಕಿದರೆಈ ಜನ್ಮ ಸಾರ್ಥಕ. ಜಗದಲ್ಲಿ ಜಲಗಾರ ಜಾಡಮಾಲಿಯಒಡಲ ಬೇಗುದಿಯ ಉರಿಗೆತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆಶೋಚನೀಯ ಸ್ಥಿತಿಯ ಗತಿಗಳುಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ […]