ಕಾವ್ಯ ಸಂಗಾತಿ
ಕೆ. ವಾಣಿಶ್ರೀ ಅಶೋಕ್ ಐತಾಳ್
“ದೀಪಗಳಾಗೋಣ ಬನ್ನಿ..!”


ಎದೆಯ ಗುಡಿಯಲೊಂದು ಪ್ರೀತಿಯ ಪ್ರಣತಿ ಹಚ್ಚಿ,
ಮಮತೆಯ ಚೆಂಬೆಳಕಲಿ ಜಗವ ನೋಡೋಣ ಬನ್ನಿ..!
ಹೊಂಗನಸಿನ ಆಕಾಶ ಬುಟ್ಟಿಯ ಹೊಸೆದು ಆಗಸಕೆ ಎಸೆದು
ಹೊಸತನದಿ ದೀಪಾವಳಿಯ ಆಚರಿಸೋಣ ಬನ್ನಿ..!
ಜ್ಞಾನದ ಸುರುಬತ್ತಿ, ಹೊತ್ತಲಿ ಮನದಂಗಳದಿ,
ಮೌಢ್ಯದ ಅಂದತ್ವ ತೊಲಗಿ ಛವಿಯಾಗಲಿ ಬದುಕು..!
ನಲಿವಿನ ಪಟಾಕಿಯ ಚಟಪಟನೆ ಹೊಡೆಸುತ
ಬೆಳಕಿನ ಹೂದಾನಿಯಂತೆ , ಸಂತಸವೇ ಮಳೆಯಾಗಬೇಕು.
ತಿರುಚಕ್ರದಂತೆ ಹುರುಪಿರಲಿ, ಮಂಥನವಿರಲಿ ,
ನೆಲಗುಮ್ಮನಂತೆ ಮಾತಿರಲಿ, ದಿನದಿನದಿ,
ಕೇಪು,ಮಾತಾಪಿನ ಚುರುಕು ಕೃತಿಯಲಿರಲಿ,
ಉತ್ಸಾಹದ ಆಟಮ್ ಬಾಂಬ್ ಆಗಿರಿ ಮುದದಿ,
ಚಿಂತೆ, ಕಂತೆಗಳೆಲ್ಲ ಉರಿದು ಹೋಗಲಿ ಬಿಡಿ
ಊರ ಹಂಗಿರದೆ ಉರಿವ ಹನುಮನ ಬಾಲದಂತೆ..!
ಬದುಕು ಚಿಕ್ಕದು, ಬಣ್ಣದ ಬೆಂಕಿ ಪೊಟ್ಟಣ ನೋಡಿ
ಯಶಸ್ಸು ಮಾತ್ರ ಬಾನಿಗಂಟಲಿ ರಾಕೇಟಿನಂತೆ..!
ಅಲ್ಲಲ್ಲಿ ಕೇಳಲಿ ಸಾಧನೆಯ ಆನೆಪಟಾಕಿಯ ಶಬ್ದಅ
ಶರೀರದಿ ಆರೋಗ್ಯತೈಲ ಖಾಲಿಯಾಗದಿರಲಿ,
ಕಲಿಗಳಾಗೋಣ, ಕಲಿಯೋಣ, ಸಾವಿರಾರು ದೀಪಗಳ ಬೆಳಗುತಲಿ,
ನಾವೇ ದೀಪಗಳಾಗೋಣ ಬನ್ನಿ..!
ಕೆ. ವಾಣಿಶ್ರೀ ಅಶೋಕ್ ಐತಾಳ್



