ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಾಂತ್ರಿಕ ಯುಗದಲ್ಲಿ
ಮನುಜ ಯಾಂತ್ರಿಕನಾಗಿ
ಯಂತ್ರ ಮಾನವ ಸೃಷ್ಟಿಸಿ
ಕುತಂತ್ರ ಜ್ಞಾನ ಬೆಳೆಸುತ್ತಿದ್ದಾನೆ

ತಾತ್ವಿಕ ತಳದಿ ತಳ್ಳಿ ಹಾಕಿ
ಮಾನವೀಯ ಮೌಲ್ಯಗಳ ಮರೆತು
ಸಂಚು ಮಾಡಿ ಹೊಂಚು ಹಾಕಿ
ವಿಕೃತಿ ಮೆರೆಯುತ್ತಿದ್ದಾನೆ

ವೈಚಾರಿಕತೆ ಇಲ್ಲದ ವಿಜ್ಞಾನಿ
ಅಜ್ಞಾನದ ಅಂಧಕಾರದಲಿ
ಅಪಾಯಕಾರಿ ಅನ್ವಸ್ತ್ರಗಳಿಂದ
ನಾಗರಿಕತೆ ನಾಶಗೊಳಿಸುತ್ತಿದ್ದಾನೆ

ಭಾವನೆಗಳನ್ನು ಬರುಡಾಗಿಸಿ
ಅಧರ್ಮದ ಅಡ್ಡ ದಾರಿಯಲ್ಲಿ
ದುರಾಸೆಯ ದಾಸನಾಗಿ
ಧರ್ಮದ್ರೋಹಿಯಾಗುತ್ತಿದ್ದಾನೆ

ವಿಜ್ಞಾನ ಅಜ್ಞಾನಕ್ಕೆ ಕಾರಣವಾಗಿ
ಮಾನವತೆ ಮೌನವಾಗಿದೆ
ಹೇಡಿಗಳ ಹಗೆತನದಿಂದ
ಅಶಾಂತಿಯ ಸಮರ ಸಾರುತ್ತಿದೆ

ವಿಜ್ಞಾನಿಗಳು ಸುಜ್ಞಾನಿಗಳಾಗಿ
ವಿನಾಶ ತಡೆವ ವಿವೇಕಿಗಳಾಗಬೇಕಿದೆ
ಸ್ವಾರ್ಥ ಬಿಟ್ಟು,ಪ್ರೇಮ ಕೊಟ್ಟು
ಸಾಮರಸ್ಯದ ಜಗವ ಬೆಳಗಬೇಕಿದೆ


About The Author

2 thoughts on “ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “”

Leave a Reply

You cannot copy content of this page

Scroll to Top