‘ಕನ್ನಡವೇ ನಮ್ಮ ಉಸಿರಾಗಿರುವುದು’ವಿಶೇಷ ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

ಕನ್ನಡವು ಉಸಿರಾಗಿ ನೆನೆಯುತಲಿ ನುಡಿಯುತಿರೆ
ಚೆನ್ನುಡಿಯ ಬಿಂಬಿಸುವ ನೋಟದಂತೆ
ತನ್ನತನ ಭಾಷೆಯದು ತಾಯಿನುಡಿ ಆಗಿರಲು
ಸನ್ನಡತೆ ಹೊಂದಿಹುದು ಲಕ್ಷ್ಮಿ ದೇವಿ……

 ಕನ್ನಡ  ನಮ್ಮ ಮಾತೃ  ಭಾಷೆ . ಕರುನಾಡಿನಲ್ಲಿ ಕನ್ನಡವನ್ನು  ತಾಯಿಯ ಭಾಷೆ ಎಂದು  ಕಲಿಯುತ್ತೇವೆ. ಇಂತಹ ಕನ್ನಡ ಭಾಷೆಯನ್ನು ಚೆನ್ನುಡಿಯನ್ನು ಬಿಂಬಿಸುವಂತೆ ತೋರಿಸಿದ್ದಾರೆ. ತನ್ನತನ ದ ಭಾಷೆ ಅದು ತಾಯಿನುಡಿ ಆಗಿರುವುದು ಕನ್ನಡ. ನಮ್ಮ ಕನ್ನಡವನ್ನು  ಸನ್ನಡತೆಯ ರೀತಿಯಲ್ಲಿ  ಹೊಂದಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಒಟ್ಟಾರೆ ಕನ್ನಡವನ್ನು ಉಳಿಸುವುದರಲ್ಲಿ ಪ್ರತಿಯೊಬ್ಬರು ತನ್ನದೇ ಆದಂತಹ ಪಾತ್ರವನ್ನು ವಹಿಸುತ  ಕನ್ನಡವನ್ನು ಉಳಿಸುತ ಬೆಳೆಸುತ್ತಾ ಸಾಗುವುದು ಕರುನಾಡಿನಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ.
 ನಾವು ಹುಟ್ಟಿದಂತಹ ಮಗುವಿಗೆ  ಪ್ರತಿಕ್ಷಣದಿಂದಲೇ ನಮ್ಮ ಕುಟುಂಬದಲ್ಲಿ ಎಲ್ಲರೂ ಕನ್ನಡವನ್ನು ಕಲಿಸಬೇಕು. ನಾವು ಕನ್ನಡವನ್ನು ಎಲ್ಲೆಡೆಯು ಮಾತನಾಡುವ ಹವ್ಯಾಸವನ್ನು ಮಾಡಿಕೊಳ್ಳಬೇಕು. ಕನ್ನಡದ ಭಾಷೆಗೆ ಪ್ರಾಮುಖ್ಯತೆಯನ್ನು ನೀಡುತ ಕನ್ನಡವನ್ನು ಅರಿಯದವರಿಗೆ ಕನ್ನಡವನ್ನು ಹೇಳಿಕೊಡುವಂತಹ ದೊಡ್ಡ ಮನಸ್ಸು ಮಾಡಿ ಕನ್ನಡವನ್ನು ಉಳಿಸಿ,ಬೆಳೆಸುವ ಕಾರ್ಯವನ್ನು ಮಾಡಬೇಕಿದೆ.ಪ್ರತಿಯೊಬ್ಬರೂ ಕನ್ನಡಾಂಬೆಯ ಪುತ್ರರು ನಾವೆಲ್ಲ ಕನ್ನಡವನ್ನು ಉಳಿಸುವ ಕೆಲಸ  ಮಾಡಿದಾಗ ಮಾತ್ರ ಜೀವನದಲ್ಲಿ ಕನ್ನಡದ ಚಾಪನ್ನು ಮೂಡಿಸಬಹುದು. ಜೀವನದಲ್ಲಿ ಕನ್ನಡದ  ಪಾತ್ರವನ್ನು ಅರಿತು ಕನ್ನಡಾಂಬೆಗೆ ಸೇವೆ ಸಲ್ಲಿಸುವ ಮನೋಭಾವವು ಯಾರು ಹೇಳದಿದ್ದರೂ ಬರುವುದು ಸಹಜವಾಗಿರುತ್ತದೆ. ಅಂತದೊಂದು ನಿಯಮವನ್ನು  ನಮಗೆ ನಾವೇ ಹಾಕಿಕೊಂಡು ಪಾಲಿಸಿದಾಗ ಮುಂದಿನ ಬೇರೆಯವರಿಗೆ ಹೇಳುವಂತಹ ಕಾರ್ಯವನ್ನು  ಮಾಡುವುದರಲ್ಲಿ ಯಶಸ್ವಿಯಾಗುತ್ತೇವೆ. ನಮ್ಮನ್ನು ನೋಡಿ ಹತ್ತು ಜನರು ಕಲಿಯುವಂತಹ ಹವ್ಯಾಸವನ್ನು  ಮಾಡಿಕೊಳ್ಳುವುದರಿಂದ ಕನ್ನಡವು  ಉಳಿಯುತ್ತದೆ ಮತ್ತು ಉಚ್ಚಾರಣೆಗಳನ್ನು  ಅರಿಯಬೇಕಿದೆ.ವಿವಿಧ ರೀತಿಯ ಹಲವು  ಭಾಷೆಯನ್ನು  ಮಾತನಾಡುವ ಜನರಲ್ಲಿ ಕನ್ನಡವನ್ನು ಕಲಿಯುವಂತಹ ಮನೋಭಾವವನ್ನು ಮೂಡಿಸಬೇಕು. ನಮ್ಮ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡವನ್ನು ಶಾಲೆಯಿಂದಲೇ ಆರಂಭಿಸಬೇಕು. ಕನ್ನಡ ಕಲಿಯುವವರಿಗೆ  ಪ್ರೋತ್ಸಾಹ ಮತ್ತು ಆಸಕ್ತಿ ಮೂಡಿ ಸುವಂತಹ ನಮ್ಮ ಹವ್ಯಾಸಗಳಿಂದ ಅವರು ನಮ್ಮ ಕನ್ನಡ ಭಾಷೆಯ  ಬಗ್ಗೆ  ಅರಿಯುವಂತಾಗಬೇಕು ಅರಿತಾಗಲೇ ತಾನೇ ಕನ್ನಡವನ್ನು ಉಳಿಸುವ ಕಾರ್ಯ ಮಾಡಲಾಗುವುದು. ನಾವು ಮಾಡುವ ಕಾರ್ಯಗಳು ಹೇಗಿರಬೇಕೆಂದರೆ ಕನ್ನಡ ತಾಯಿಯ ಸೇವೆಯ ಜೊತೆಗೆ ಆ ತಾಯಿಯ ಋಣವನ್ನು ತೀರಿಸುವಂತಿರಬೇಕು.

ಕನ್ನಡವೇ ನಮ್ಮ ಉಸಿರಾಗಿರುವುದು

 ಬದುಕಿನ ದಿನನಿತ್ಯದ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡಮ್ಮನ ಸೇವೆ ಮಾಡಬೇಕಿದೆ. ನಾವು ಮಾಡುವ ಕೆಲಸದಲ್ಲಿ  ಸ್ವಲ್ಪ ವ್ಯತ್ಯಾಸವಾದರೂ  ಸಹ   ಹಲವಾರು ಗೊಂದಲಗಳಿಗೆ ಕಾರಣವಾಗುತ್ತದೆ. ಬದುಕಿನಲ್ಲಿ ಯಾವುದೇ ಸಾಧನೆ ಮಾಡಬೇಕಾದರೂ  ನಿಯಮಗಳು ಹೇಗೆ ಮುಖ್ಯವೋ ? ಹಾಗೆಯೇ ಕನ್ನಡವನ್ನು ಉಳಿಸುವಲ್ಲೂ ಸಹ ನಿಯಮಗಳು ಅಗತ್ಯವಿದೆ. ಪ್ರತಿಯೊಬ್ಬ  ಕರುನಾಡಿನಲ್ಲಿರುವ ಕನ್ನಡಿಗರು  ಪ್ರತಿಯೊಬ್ಬರು ತಮ್ಮ  ಮನೆಯಿಂದಲೇ ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಿದೆ. ನಮ್ಮ  ಮನೆಯಿಂದ ಪ್ರಾರಂಭಿಸಿ ಮೊದಲು ನಮ್ಮ ಮಕ್ಕಳಿಂದಲೇ, ಶಾಲೆಯಿಂದಲೇ ಪ್ರಾರಂಭಿಸಿದರೆ ಆಗ ಮಾತ್ರ ನಮ್ಮ ಕನ್ನಡ ತಾಯಿಯ ಸೇವೆಯನ್ನು  ಸಂಪೂರ್ಣವಾಗಿ ಮಾಡಲು ಸಾಧ್ಯ. ಜನರ ಬದುಕಿನಲ್ಲಿ ಹಲವಾರು ಸಮಸ್ಯೆಗಳು ಸಹಜವಾಗಿಯೇ ಇರುತ್ತದೆ. ಅಂತಹ ಬದುಕಿನಲ್ಲಿ ಬಾಳುತ್ತಿರುವ ಎಲ್ಲರೂ ಒಂದಲ್ಲ ಒಂದು ದಿನ ಸಂತೋಷವನ್ನು ಪಟ್ಟೆ ಪಡುತ್ತಾರೆ. ಆ ದಿನಗಳು ಬಂದೇ ಬರುತ್ತದೆ. ಇಂದಿನ ಪ್ರಸ್ತುತ ದಿನಮಾನದಲ್ಲಿ ಕನ್ನಡವು ಮರೆಯಾಗುತ್ತಿರುವುದನ್ನು ಕಂಡರೆ ಮತ್ತೆ ಕನ್ನಡ ಯಾವಾಗ ಆರಾಧಿಸುತ್ತದೆ ಎಂಬ ಆತಂಕದಲ್ಲಿ ಬದುಕುತ್ತಿರುವುದೇ ಹೆಚ್ಚಾಗಿದೆ.ಜನರ ಸಹಜವಾದ ಪ್ರಭಾವಗಳನ್ನು ಗಮನಿಸುತ್ತಾ  ವಿಶ್ವಾಸವನ್ನು ತೆಗೆದುಕೊಂಡು ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕು. ನಾವು ಇರುವುದು ಕನ್ನಡಾಂಬೆಯ ಮಡಿಲಿನಲ್ಲಿ ಅಂತಹ ತಾಯಿಯ ಋಣವನ್ನು ತೀರಿಸಬೇಕೆಂದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಲೇ ಬೇಕಿದ್ದರೆ ಮೊದಲು ನಮ್ಮ ಕನ್ನಡವನ್ನು ಉಳಿಸೋಣ. ಕನ್ನಡ ನಾಡಿನಲ್ಲಿ  ಉಸಿರಾಡುತ್ತಿರುವ ನಾವು  ಮಾನವೀಯತೆಯನ್ನು ಮರೆಯದೆ   ಕನ್ನಡದ ಪ್ರೇಮಿಯಾಗಿ  ಕನ್ನಡ ಹೋರಾಟಗಾರರಾಗಿ , ಕನ್ನಡವನ್ನು ಉಳಿಸೋಣ.


” ಹುಟ್ಟಿನಿಂದಲೇ
ನಮ್ಮ ಮಕ್ಕಳಿಗೆ
ಹೇಳಿ ಕೊಡೋಣ
ನಾವು ಅವರೊಂದಿಗೆ
ಕನ್ನಡವನ್ನೆ ಮಾತನಾಡೋಣ…
 ಬದುಕು ಕ್ಷಣಿಕವೆಂಬುದನ್ನು ಅರಿತು
 ಎಲ್ಲರೊಂದಿಗೆ  ಹೊಂದಿಕೊಂಡು ಹೋಗೋಣ
 ಕನ್ನಡ ತಾಯಿಯ ಋಣವನ್ನು
 ಬದುಕಿ ಸಾಯುವ ಒಳಗೆ
 ತೀರಿಸೋಣ
 ಕನ್ನಡಮ್ಮನಿಗೆ ಜೈ ಎಲ್ಲೋಣ “….


 ನಮ್ಮ ಶಾಲಾ ಮಕ್ಕಳಲ್ಲಿ ಕನ್ನಡದ ಭಾಷೆ ಅರಿತು ಕಲಿತು ಬರೆಯುವುದು ಎಂದರೆ ಕಬ್ಬಿಣದ ಕಡಲೆಯಂತೆ ವರ್ತಿಸುತ್ತಿದ್ದಾರೆ. ಕನ್ನಡವನ್ನು  ಮರೆತು ಪರ ಭಾಷೆಗೆ ಮಾರು ಹೋದ ಪೋಷಕರೇ ದಯಮಾಡಿ ನಮ್ಮ ಕನ್ನಡಮ್ಮನ  ತೇರು ಎಳೆಯಲು ಜೊತೆಗೂಡೋಣ ಬನ್ನಿ.ಕನ್ನಡ ತಾಯಿಯ ಸೇವೆಯ ಮಾಡೋಣ ಬನ್ನಿ . ಒಗ್ಗಟ್ಟಿನಲ್ಲಿ ಬಲವಿದೆ ಎಂಬುದ ತೋರಣ. ಕನ್ನಡವು ಕಬ್ಬಿಣದ ಕಡಲೆ ಯಾಗದಂತೆ ನೋಡಿಕೊಳ್ಳೋಣ. ಅಸಂಖ್ಯಾತ ಜನ ಕೋಟಿ ಕನ್ನಡ ಕನ್ನಡ ಎನ್ನುವಂತೆ ಮಾಡೋಣ. ನಮ್ಮ ಕನ್ನಡದ ಉಳಿವಿಗಾಗಿ ನಾವು ಹೋರಾಟ ಮಾಡೋಣ. ಹುಟ್ಟನ್ನು ಸಾರ್ಥಕತೆಯ ಬದುಕಿನಲ್ಲಿ ಕಳೆಯೋಣ. ನಾವೆಲ್ಲ  ನವೆಂಬರ್  ಒಂದರ  ಕನ್ನಡಿಗರಾಗದೆ ಪರಿಪೂರ್ಣವಾಗಿ ಕನ್ನಡಿಗರಾಗೋಣ. ಪರಭಾಷೆಯ ವ್ಯಾಮೋಹವನ್ನು ಬಿಟ್ಟು, ಎಲ್ಲರಲ್ಲೂ ಕನ್ನಡದ ಜಾಗೃತಿ ಮೂಡಿಸಿ ಕನ್ನಡಮ್ಮನ ಸೇವೆಯನು ಮಾಡುತ್ತಾ ಸಾಗೋಣ ಬನ್ನಿ…ಜೈ ಹಿಂದ್ . ಕರ್ನಾಟಕ ಮಾತೆ…..


Leave a Reply

Back To Top