ಮಕ್ಕಳಸಂಗಾತಿ
ನಳಿನಾ ದ್ವಾರಕನಾಥ್ ಅವರ,ಶಿಶುಗೀತೆ
‘ಮುದ್ದು ಜಿಂಕೆಮರಿ‘
ಆಡೋಣ ಬಾ ಜೊತೆಸೇರಿ
ನನ್ನ ಮೆಚ್ಚಿನ ಪುಟ್ಟಮರಿ
ಕೊಡುವೆ ನಿನಗೆ ಹುಲ್ಲುಗರಿ
ಜಿಗಿದು ಜಿಗಿದು ಬಾ ಬಳಿಗೆ
ಚೆಂದದ ಪಿಳಿಪಿಳಿ ಕಣ್ಣು ನಿನಗೆ
ಓಡೋಡಿ ಕುಣಿದು ಬರುವೆ
ಕುಪ್ಪಳಿಸಿ ನಲಿದು ಆಡುವೆ
ಚಿನ್ನದ ಬಣ್ಣದ ಚಿಗರೆ ಮರಿ
ಹೊನ್ನ ಬೊಂಬೆ ನೀನೇ ಸರಿ
ನಿನ್ನ ಕಿವಿಯದು ಬಲು ಚೆಂದ
ಹಿಡಿದು ಆಡುವೆ ಅದರಿಂದ
ನನಗೆ ನೀನೆ ತಾನೇ ಮುದ್ದು
ದೃಷ್ಟಿ ಬೀಳಬಾರದು ಯಾರದ್ದು
ನಾನು ನೀನು ಗೆಳಯರಂತೆ
ನಮಗಿಲ್ಲ ಯಾವುದೇ ಚಿಂತೆ
ನನ್ನ ಮುದ್ದಿನ ಚಿನ್ನುಮರಿ
ಹೊರ ಹೋಗದಿರು ಚಿನ್ನಾರಿ
ನೀ ಕಾಣದಿದ್ದರೆ ನಾ ಹೆದರಿ
ಅಳುವೆ ನೋಡು ಬಂಗಾರಿ
ನಳಿನಾ ದ್ವಾರಕನಾಥ್
ಮುದ್ದು ಜಿಂಕೆ ಮರಿ ಚಂದದ ಶಿಶುಗೀತೆ