ಕಾವ್ಯ ಸಂಗಾತಿ
ಜೆ.ಎಲ್.ಲೀಲಾಮಹೇಶ್ವರ
ಕಾಮನ ಬಿಲ್ಲು
ನೀಲಾಕಾಶದಿ ಮೂಡಿದೆ ನೋಡು
ಚಂದದ ಮಳೆಬಿಲ್ಲು,
ಎಷ್ಟು ಸುಂದರ,ಎಷ್ಟು ಮನೋಹರ !
ಸಪ್ತರಂಗಿನ ಕಾಮನಬಿಲ್ಲು.
ಮಾಡಿಹೆ ನೀನು ಆಗಸದಲ್ಲಿ
ವರ್ಣರಂಜಿತ ತೋರಣ,
ನಿನ್ನ ನೋಡಲು ಮನಸಿಗೆ ಇಂಪು,
ಸಂತಸಪಡುವುದು ಕಣ್ಮನ.
ಮಾಡುವೆ ಮಕ್ಕಳ ಕಣ್ಣಿಗೆ ಮೋಡಿ,
ನಿನ್ನಲ್ಲಿ ತುಂಬಿವೆ ಬಗೆ ಬಗೆ ಬಣ್ಣ.
ಸಂತಸ ಮನಸಿಗೆ ನಿನ್ನನ್ನು ನೋಡಿ,
ಸೆಳೆಯುವೆ ನೀನು ಎಲ್ಲರ ಕಣ್ಣ.
ಮಂದಹಾಸವ ಮೂಡಿಸಿವೆ
ನಿನ್ನಯ ಸಪ್ತ ವರ್ಣಗಳು,
ಬಾಗಿದ ಪಥವ ಧರೆಯಿಂದ ನಭಕೆ
ನಿರ್ಮಿಸಿವೆ ನಿನ್ನ ಬಣ್ಣಗಳು.
ಜೆ.ಎಲ್.ಲೀಲಾಮಹೇಶ್ವರ
.