ನಿತ್ಯ ಜಗನ್ನಾಥ್ ನಾಯ್ಕ್ ಕವಿತೆ-ಅವಳೇ ನಮ್ಮ ಧನ್ಯ

ಮುಗ್ಧ ಮನಸಿನ
ಸ್ನಿಗ್ಧ ಸೌಂದರ್ಯದ
ನಿರ್ಮಲ ಹೃದಯದರಸಿ
ಅವಳೇ ನಮ್ಮ ಧನ್ಯ…

ಹಿತ ಮಿತವಾದ ಮಾತಿನಲಿ
ಸರಳವಾದ ನಡೆ ನುಡಿಯಲಿ
ಅದ್ಭುತ ಸಾಧನೆ ಮಾಡಿದವಳು
ಅವಳೇ ನಮ್ಮ ಧನ್ಯ …

ಕೂರುವಳು ತರಗತಿಯ ಕೊನೆಯ ಬೆಂಚಿನಲಿ
ದಂಡಿಸುವಳು ದೇಹವ ಮೈದಾನದಲ್ಲಿ
ಆಗಿರುವಳು ಸ್ಪೂರ್ತಿ ಎಲ್ಲರೆದೆಯಲ್ಲಿ
ಅವಳೇ ನಮ್ಮ ಧನ್ಯ…

ಕ್ರೀಡೆಯಲ್ಲಿ ಚಿನ್ನ ಗೆದ್ದು
ರಾಜ್ಯ ದಾಖಲೆ ಸೃಷ್ಟಿಸಿ ಮಿಂಚುತ್ತಾ
ಶಾಲೆಗೆ ಹೆಮ್ಮೆ ತಂದವಳು
ಅವಳೇ ನಮ್ಮ ಧನ್ಯ…

ಗುರುವನರಿತು ಗುರಿ ಸಾಧಿಸಿ
ಹೆತ್ತವರೊಡಲನ್ನು ಸಂತೈಸಿ
ಊರಿಗೆ ಕೀರ್ತಿ ತಂದವಳು
ಅವಳೇ ನಮ್ಮ ಧನ್ಯ …

ಹಳ್ಳಿಯಲ್ಲರಳಿದ ಹೊನ್ನ ಪುಷ್ಪದ ಗಮ
ದಿಲ್ಲಿಯವರೆಗೂ ಪಸರಿಸಿ
ಬಂಗಾರದ ಹಾಗೆ ಬಾಳು
ನೀ ನಮ್ಮ ಧನ್ಯ….


Leave a Reply

Back To Top