ಅಂಕಣ ಬರಹ

ಸಂವೇದನೆ- 1

ಭಾರತಿ ನಲವಡೆ

ಮಹಿಳೆ ಮತ್ತು ಸೃಜನಶಿಲತೆ

ಮಹಿಳೆ ಇಲ್ಲದ ಕ್ಷಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬೆಳಗಿನ ತಿಂಡಿಯಿಂದ ರಾತ್ರಿಯ ಊಟದವರೆಗಿನ ಬೇಕು ಬೇಡಗಳನ್ನು ನಿರ್ವಹಿಸುವ ಅನ್ನಪೂರ್ಣೇಶ್ವರಿ ಎಂದರೆ ಮಹಿಳೆ.
12ನೇ ಶತಮಾನದಲ್ಲಿಯೇ ಅಕ್ಕಮಹಾದೇವಿ ವಚನ ಸಾಹಿತ್ಯ ಪ್ರಕಾರದ ಮೂಲಕ ಅನುಭವದ ನುಡಿಗಳನ್ನು ಬಿಂಬಿಸಿ ಸೃಜನ ಶೀಲತೆಗೆ ನಾಂದಿ ಹಾಡಿದ್ದಾರೆ.ಮನು ಮಹರ್ಷಿ ಹೆಣ್ಣಿನ ಸ್ಥಾನವನ್ನು ಗೌಣವಾಗಿಸಿ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ”ಎಂದಿದ್ದಾನೆ. “ಹೆಣ್ಣು ಹೆತ್ತೆನೆಂಬ ಹೆಗ್ಗಳ ನಿನಗೇಕೆ?ಹೆಣ್ಣು ನೆರೆಮನೆಯ ಸಿರಿದೇವಿ ತಾಯಮ್ಮಗಂಡು ನಮ್ಮನೆಗೆ ತೊಲೆಗಂಬ”ಎಂದು ಜನಪದರು ಕೂಡ ಹೆಣ್ಣು ಯಾವತ್ತೂ ಪರರ ವಸ್ತು ಮದುವೆಯಾಗಿ ಮತ್ತೊಂದು ಮನೆಗೆ ಬೆಳಕು ನೀಡುವಳು ಎಂದು ಅವಳ ಪಾತ್ರವನ್ನು ಜನಿಸಿದಾಕ್ಷಣ ನಿರ್ಧರಿಸಿದಂತಿದೆ.
ಮಹಿಳೆಯ ವಿಚಾರದಲ್ಲಿ ಪರಂಪರೆ ಮತ್ತು ಪ್ರತಿಭಟನೆಯ ದೊಡ್ಡ ಸಂಘರ್ಷವೆ ಅಡಗಿದೆ.ಪರಂಪರೆ ಎಲ್ಲಿತೊಡಕಾಗುತ್ತದೆಯೋ ಆಗ ಪ್ರತಿರೋಧ ಸಾಮಾನ್ಯ.ಈ ನಿಟ್ಟಿನಲ್ಲಿ ಶಿಕ್ಷಣ ಎಂಬ ಅಸ್ತ್ರವು ಅವಳ ಸಬಲೀಕರಣಕ್ಕೆ ಮೂಲಮಂತ್ರವೆಂಬುದನ್ನು ಅಲ್ಲಗಳೆವಂತಿಲ್ಲ.
ಮಹಿಳೆಯರಿಗೂ ಅವರದೇ ಆದ ವ್ಯಕ್ತಿತ್ವವಿದೆ ಎಂಬುದನ್ನು ಮರೆಯಲಾಗದು.
ಸೃಜನಶೀಲತೆ ಎಂದರೆ ಹೊಸತನ ಮಹಿಳೆ ಕೇವಲ ಸಂಸಾರದ ಸಾರಥಿಯಾಗಲ್ಲದೆ ಅವಳದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾದ ಸೃಜನಶೀಲತೆಯುಳ್ಳ ಶಕ್ತಿಯಾಗಿದ್ದಾಳೆ.ಒಂದು ಸುಂದರವಾದ ನವಿಲನ್ನು ನೋಡಿದಾಗ ಚಿತ್ರಕಲೆಯಲ್ಲಿಪರಿಣಿತನಾದವ ಸುಂದರವಾದ ನವಿಲಿನ ಚಿತ್ರವನ್ನು ಬಿಡಿಸಿ ಪ್ರತಿಭೆ ಮೆರೆದರೆ ಕವಿಯಾದವ ಒಂದು ಕವನ ಬರೆಯಬಲ್ಲ.ಗಾಯಕ ಆ ಕವನವನ್ನು ರಾಗಬದ್ಧವಾಗಿ ಹಾಡಬಲ್ಲ ,ಕಥೆಗಾರ ನವಿಲ ಬಗ್ಗೆ ಕಥೆಯ ಕಟ್ಟಬಲ್ಲ,ಹೀಗೆ ಸೃಜನಶೀಲತೆಯು ನಾವಿನ್ಯಯುತವಾದ ಭಾವಲಹರಿಯಾಗಿದ್ದು ಹೊಸದನ್ನು ಸೃಷ್ಟಿಸುವ,ಅಭಿವ್ಯಕ್ತಿಸುವ ಅನಾವರಣಗೊಳಿಸುವ ಪ್ರತಿಭೆಯಾಗಿದೆ.ಈ ಸೃಜನಶೀಲ ಸಾಮರ್ಥ್ಯವನ್ನು ಗುರ್ತಿಸಿ ಪ್ರೋತ್ಸಾಹಿಸಿ ಬೆಳೆಸುವಲ್ಲಿ ಅಡೆತಡೆಯಾಗುವ ಉಚಿತ ಸಮಯ,ಶಿಕ್ಷಣದ ಪ್ರವೇಶ,ಹಣಕಾಸಿನ ಪ್ರವೇಶ ಇವು ಅಭಿವೃದ್ಧಿಶೀಲ ಜಗತ್ತಿನಲ್ಲಿ ಕಂಟಕಪ್ರಾಯವಾಗಿವೆ.
ಸೃಜನಶೀಲತೆಯು ಮಹಿಳೆಯರ “ಸಮಯದ ಅಭಾವವನ್ನು “ಗಣನೀಯವಾಗಿ ಕಡಿಮೆ ಮಾಡಬಹುದು.ಶಾಲೆಗೆ ಹಾಜರಾಗಲು,ಅವರ ಕುಟುಂಬಗಳೊಂದಿಗೆ ಇರಲು ಮತ್ತು ಅವರ ವ್ಯವಹಾರಗಳಿಗೆ ಒಲವು ತೋರಲು ಅವರಿಗೆ ಹೆಚ್ಚಿನ ಸಮಯ ಬೇಕಾಗುವದು.ಗ್ರಾಮೀಣ ಭಾಗಗಳಲ್ಲಿ ವೆಲ್ಲೋ ವಾಟರ್ವೀಲೊನ ಬಳಕೆಯು ಮಹಿಳೆಯರು ವಾರಕ್ಕೆ 30ಗಂಟೆಗಳಿಗಿಂತ ಹೆಚ್ಚು ನೀರು ತರುವ ಸಮಯವನ್ನು ಕಡಿಮೆಗೊಳಿಸಿದ್ದರಿಂದ ಅವರುತಮ್ಮ ಕ್ಷೇತ್ತಗಳಲ್ಲಿ ಅವರ ಅಧ್ಯಯನ ಅಥವಾ ವ್ಯವಹಾರಕ್ಕೆ ಬಳಸಬಹುದು.ಇಂದು ಮಹಿಳೆಯರು ತಾವೂ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆಆಟೋರಿಕ್ಷಾ ಓಡಿಸುವುದರಿಂದ ವಿಮಾನ ಚಾಲಕಿಯವರೆಗೆ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದಾಳೆ.ಎಲ್ಲೋ ಒಂದು ಕಡೆ ಅವಳಿಗೆಕುಟುಂಬದ ಸೂಕ್ತ ಬೆಂಬಲ ದೊರೆಯುತ್ತಿಲ್ಲ .ರೋಹಿಣಿ ಒಬ್ಬ ಗೃಹಿಣಿ ಅವಳ ಪತಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಅವಳ ಮಕ್ಕಳು ಚಿಕ್ಕವರಿದ್ದುದರಿಂದ ಅವರ ಪಾಲನೆ, ವಯಸ್ಸಾದ ಅತ್ತೆ ಮಾವರ ಸೇವೆ ಹೀಗೆ ಸಮಯ ಕಳೆಯುತ್ತಿದ್ದ ಅವಳು ಇಂದು ಮಕ್ಕಳು ಬೆಳೆಯುತ್ತಿದ್ದಂತೆ ಆರ್ಥಿಕ ಸಮಸ್ಯೆಯನ್ನರಿತು ಸೆಣಬಿನ ಬ್ಯಾಗ ತಯಾರಿಸುವ ತರಬೇತಿಗೆ ಸೇರಿದಳು.ಬೆಳಿಗ್ಗೆ ಬೇಗನೆ ಎದ್ದು ಮಕ್ಕಳ ತಿಂಡಿ ,ಹಿರಿಯರಿಗೆ ಅಡುಗೆ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸಿ ನೆರೆಮನೆಯ ಕಮಲಳೊಂದಿಗೆ ಆ ತರಬೇತಿಯ ವೇಳೆಗೆ ಹಾಜರಿದ್ದು ಎರಡೇ ವಾರದಲ್ಲಿ ಸೆಣಬಿನಿಂದ ಬ್ಯಾಗ ತಯಾರಿಸುವದನ್ನು ಕಲಿತಳು. ತರಬೇತಿಯ ಸಂಘಟಕರ ಸಲಹೆಯಂತೆ ಪ್ರತಿದಿನ ಇಂತಿಷ್ಟು ಬ್ಯಾಗ ಹೊಲಿದರೆ ಪ್ರತಿ ಬ್ಯಾಗಿಗೆ ಅವುಗಳ ಗಾತ್ರದ ಆಧಾರದ ಮೇಲೆ ಬೆಲೆ ನಿಗದಿ ಮಾಡಿದರು. ಕಾರಣ ಪ್ರತಿದಿನ ಬ್ಯಾಗ ಹೊಲಿಯಲು ಹೋಗುತ್ತಿದ್ದಳು. ಅವಳ ಆಸಕ್ತಿಯನ್ನು ಅವಳು ಮನೆಯಲ್ಲಿ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಹೋಗುತ್ತಿದ್ದುದರಿಂದ ಅವಳ ಪತಿಗೆ ಸಂತಸ.ಆಗ ಅವಳ ಕೆಲಸ ಮೆಚ್ಚಿಬ್ಯಾಗಗಳಿಗೆ ತುಂಬಾ ಬೇಡಿಕೆ ಪ್ರಾರಂಭವಾಯಿತು.ತರಬೇತಿ ಸ್ಥಳದಲ್ಲಿರುವ ಹೊಲಿಗೆಯಂತ್ರ ಕೇವಲ ಐದು ಮೂವತ್ತು ಜನರಲ್ಲಿ ಇವಳ ಸರದಿ ಬಂದಾಗ ಕೇವಲ ಐದರಿಂದ ಆರು ಬ್ಯಾಗಗಳನ್ನು ಹೊಲಿಯಲು ಮಾತ್ರ ಸಾಧ್ಯವಾಗುತ್ತಿತ್ತು.ಮನೆಯಲ್ಲೆ ಹೊಲಿದರೆ ಸರದಿಗಾಗಿ ಕಾಯುವ ಪ್ರಶ್ನೆಯೇ ಇಲ್ಲವೆಂದು ವಿಚಾರಿಸಿ ಪತಿಯ ಮನವೊಲಿಸಿ ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ತೆಗೆದು ಬ್ಯಾಗ ಹೊಲಿದು ಮಾರುವ ವ್ಯಾಪಾರ ಸಣ್ಣ ಪ್ರಮಾಣದಿಂದ ಪ್ರಾರಂಭವಾಯಿತು.ಅವಳು ಸ್ವಲ್ಪ ಯೋಚಿಸಿ ತಾನೇಕೆ ಬಣ್ಣಬಣ್ಣದ ಸೆಣಬು ಹಾಗೂ ಬಟ್ಟೆ ಬಳಸಿ ನಾವಿನ್ಯಯುತವಾಗಿ ಹೊಲೆಯಬಾರದೆಂದು
ತೀರ್ಮಾನಿಸಿದಳು.ವಿವಿದವಿನ್ಯಾಸದ ಆಕೃತಿಯ ಬೇರೆ ಬೇರೆ ಬಣ್ಣದ ಬಣ್ಣ ಚಿಕ್ಕ ಪರ್ಸನಿಂದ ಮಾರುಕಟ್ಟೆಗೆ ಒಯ್ಯುವ ಆಕರ್ಷಕ ಬ್ಯಾಗಗಳನ್ನು ಹೊಲಿದು ಇಂದುತನ್ನ ಸಾಲದಿಂದ ಮುಕ್ತಳಾಗಿ ಇನ್ನೊಂದು ಯಂತ್ರ ಖರೀದಿಸಿ ಇಬ್ಬರಿಗೆ ಕೆಲಸ ನೀಡಿ ಅವರ ಸೃಜನಶೀಲತೆಗೆ, ಸ್ವಾಭಿಮಾನದ ಬದುಕಿಗೆ ಸಾಕ್ಷಿಯಾಗಿದ್ದಾಳೆ. ಸೃಜನಶೀಲತೆಯೊಂದಿಗೆ ನಾವಿನ್ಯತೆ ಬೆರೆತರಂತೂ ಅರ್ಧ ಯಶಸ್ಸು ದಕ್ಕಿದಂತೆ.ಹೀಗೆ ಪಟ್ಟಣ ಪ್ರದೇಶವಾಗಿರಲಿ ಗ್ರಾಮೀಣ ಪ್ರದೇಶವಾಗಿರಲಿ ಹಣಕಾಸು ಮತ್ತು ಔಪಚಾರಿಕ ಆರ್ಥಿಕತೆಯ ಪ್ರವೇಶವು ಮಹಿಳೆಯರ ಆರ್ಥಿಕ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಮೂಲನೇ ಕೀಲಿಯಾಗಿದೆ.ಮೊಬೈಲ್ ಬ್ಯಾಂಕಿಂಗ್ ಮೂಲಕ ಬಡ ಅನಕ್ಷರಸ್ಥ ಮಹಿಳೆಯರೂ ತಮ್ಮ ಆದಾಯವನ್ನು ನಿರ್ವಹಿಸಲು ಸಹಾಯ ಮಾಡುವ ಬ್ಯಾಂಕಿಂಗ್ ಸೇವೆಗಳನ್ನು ಪ್ರವೇಶಿಸಬಹುದಾಗಿದೆ.


ವೃತ್ತಿಪರ ಕೌಶಲ್ಯಗಳಲ್ಲಿ ತರಬೇತಿ ನೀಡಲು NGO ಗಳೊಂದಿಗೆ ಸೇರಿ ವಂಡರ್ ಬ್ಯಾಗ,ವಾಟರ್ ವೀಲ್,ಬಿಎಂಬಿಯಂತಹ ಆವಿಷ್ಕಾರಗಳು ಮಹಿಳೆಯರಿಗಾಗಿ ಮಹಿಳೆಯರಿಂದ “LifeAsYouClimb”ಕಲ್ಪನೆಯನ್ನು ಸಾಕಾರಗೊಳಿಸುತ್ತವೆ.ಕುಶಲ ಕರ್ಮಿಗಳ ಮೂಲಕ ಮಹಿಳೆಯರ ಸಬಲೀಕರಣವನ್ನು ಬೆಂಬಲಿಸಲಾಗುತ್ತಿದೆ.ಗೊಂಬೆತಯಾರಿಕೆ,ಹಪ್ಪಳ ,ಸಂಡಿಗೆ,ಚಟ್ನಿ ,ಸಿಹಿತಿಂಡಿ ತಯಾರಿಕೆ, ವಸ್ತವಿನ್ಯಾಸದಂತಹ ಉದ್ದಿಮೆಗಳ ಪ್ರಾರಂಭಕ್ಕೆ ಸಹಕಾರ,ಸಮಯ ನೀಡುವಶ ಮೂಲಕ ಅವಳ ಅಸ್ಮಿತೆಯನ್ನು ಬೆಂಬಲಿಸಿದರೆ ಅವಳು ಕುಟುಂಬ, ಸಮಾಜ,ದೇಶದ ಅಭಿವೃದ್ಧಿಯಲ್ಲಿ ತನ್ನ ಕೊಡುಗೆ ನೀಡಲು ಸಾಧ್ಯ. ದೀಪಾವಳಿ ಹಬ್ಬದ ವೇಳೆಯಲ್ಲಿ ಮಣ್ಣಿನ ಹಣತೆಗಳ ತಯಾರಿಕೆ,ಹೀಗೆ ನಾವಿನ್ಯತೆ ಮತ್ತು ಸೃಜನಶೀಲತೆ ಮಾನವ ಪ್ರಗತಿಯ ಎಂಜಿನ್ಗಳಾಗಿವೆ.ಮೊದಲಿನ ಗೃಹ ಕೈಗಾರಿಕೆಗಳೂ ಕೂಡ ನಶಿಸುತ್ತಿವೆ.ಮಹಿಳೆ ತನ್ನ ಸಂಸಾರ ರಥಕ್ಕೆ ಜೊತೆಯಾದಾಗ ಕಣ್ಮರೆಯಾಗುತ್ತಿರುವ ಬುಟ್ಟಿಹೆಣೆಯುವದು,ಮಣ್ಣಿನ ಮಡಕೆ ತಯಾರಿಸುವದು ಹೀಗೆ ಇವುಗಳನ್ನು ಉಳಿಸುವ ಕಾಯಕದಲ್ಲಿ ಪತಿಯ ಹೆಗಲಿಗೆ ಹೆಗಲುಕೊಟ್ಟು ದುಡಿದರೂ ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರ ಸೃಜನಶೀಲತೆಗೆ ನಂತರದ ಸ್ಥಾನ. ಇದು ತಲೆತಲಾಂತರದಿಂದ ಬಂದ ವ್ಯವಸ್ಥೆ.
ಪುಸ್ತಕಗಳು,ಸಂಗೀತ ಮತ್ತು ಚಲನಚಿತ್ರಗಳಂತಹ ಸೃಜನಾತ್ಮಕ ಕೃತಿಗಳಿಗೆ ಸಂಬಂಧಿಸಿದಂತೆ ಲಿಂಗ ಅಸಮಾನತೆಗಳನ್ನು ಅಳೆಯುವದು ಕಷ್ಟವಾಗಿದ್ದರೂ ಮಹಿಳೆಯರ ಸೃಜನಶೀಲತೆಗೆ ನಂತರದ ಸ್ಥಾನ ಎಂಬುದನ್ನು ಅಲ್ಲಗಳೆಯಲಾಗದು.


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

Leave a Reply

Back To Top