ಕಾವ್ಯಸಂಗಾತಿ
ಪ್ರೊ. ಸಿದ್ದು ಸಾವಳಸಂಗ ಕವಿತೆ
ನನ್ನೊಳಗೊಬ್ಬ ರಕ್ಕಸನಿದ್ದಾನೆ
—
ನನ್ನೊಳಗೊಬ್ಬ ರಕ್ಕಸನಿದ್ದಾನೆ
ನನ್ನೊಳಗೊಬ್ಬ ರಕ್ಕಸನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಪಿಶಾಚಿ ಇದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ರಾವಣನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಕೌರವನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಶಕುನಿ ಇದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಕೀಚಕನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಕುಂಭಕರ್ಣನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಹಿರಣ್ಯಕಶ್ಯಪು ಇದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ರಕ್ತ ಬೀಜಸುರನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಹಿರಣ್ಯಾಕ್ಷನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬ ಬಸ್ಮಾಸುರನಿದ್ದಾನೆ
ಅವನನ್ನು ಎಚ್ಚರಗೊಳಿಸಬೇಡಿ !
ನನ್ನೊಳಗೊಬ್ಬಳು ಸೂರ್ಪನಖಿ ಇದ್ದಾಳೆ
ಅವಳನ್ನು ಎಚ್ಚರಗೊಳಿಸಬೇಡಿ !
ಒಬ್ಬರೇ ಎದ್ದರೆ ಇಡೀ ಜಗತ್ತೇ
ನಾಶವಾಗುವಾಗ ಎಲ್ಲರೂ ಎದ್ದರೆ
ಏನಾಗುತ್ತದೆಂದು ಉಳಿಸಿಕೊಳ್ಳಿ !!
ಪ್ರೊ. ಸಿದ್ದು ಸಾವಳಸಂಗ
ಕವಿತೆ ಇಷ್ಟವಾಯಿತು ಸರ್ ..
ದುಷ್ಟ ಪಾತ್ರಗಳ ( ವ್ಯಕ್ತಿತ್ವಗಳ) ಒಂದಂಶವೇ ಇಡೀ ಜಗತ್ತಿನ ಒಳಿತನ್ನು ನಾಶ ಮಾಡಬಹುದಾದಾಗ ..ದುಷ್ಟತೆಯ ದಂಡು ಎಚ್ಚರವಾದರೆ ಊಹಿಸಲಾಧ್ಯವೆಂಬ ಭಾವವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ..ಕವಿತೆ ಹೆಣೆದ ರೀತಿಯೂ ವಿಶಿಷ್ಠವಿದೆ ..
ಕವಿತೆ ಇಷ್ಟವಾಯಿತು ಸರ್ ..
ದುಷ್ಟ ಪಾತ್ರಗಳ ( ವ್ಯಕ್ತಿತ್ವಗಳ) ಒಂದಂಶವೇ ಇಡೀ ಜಗತ್ತಿನ ಒಳಿತನ್ನು ನಾಶ ಮಾಡಬಹುದಾದಾಗ ..ದುಷ್ಟತೆಯ ದಂಡು ಎಚ್ಚರವಾದರೆ ಊಹಿಸಲಾಧ್ಯವೆಂಬ ಭಾವವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ..ಕವಿತೆ ಹೆಣೆದ ರೀತಿಯೂ ವಿಶಿಷ್ಠವಿದೆ ..