ಕಾವ್ಯಸಂಗಾತಿ
ಈರಮ್ಮ.ಪಿ.ಕುಂದಗೋಳರವರ ಕವಿತೆ-
ಕೊಳಲಾದೇನಾ ಕೃಷ್ಣ ನಿನ್ನ ಕೈಯಲ್ಲಿ.
ಕೊಳಲಾದೇನಾ ಕೃಷ್ಣ ನಿನ್ನ ಕೈಯಲ್ಲಿ
ನುಡಿಸಿದ ನಾದವು ಜೀವ ಭಾವವಾಗಿ
ಪ್ರೀತಿಯ ಉಸಿರು ಚೆಲ್ಲಿದೆ ಹೃದಯದಲ್ಲಿ!
ಬೆಣ್ಣೆಯ ಕದ್ದ ಕಳ್ಳ ಕೃಷ್ಣನ ಕಣ್ಣ ನೋಟಕ್ಕೆ
ಸೆರೆಯಾದ ರಾಧೆ ಶೇಂಕಿಸದೆ,ಬಿಡದೇ
ಝೇಂಕರಿಸಿದೆ ಒಲವಿನ ಒನಪು ಬಿಂಕವ ಮಾಡಿ
ಪ್ರೇಮದ ಕಡಲಾಗಿದೆ ಇಲ್ಲಿ!
ಗೋಕುಲವೆಲ್ಲವು ನಂದನವನವಾಗಿ
ಅಮೃತಧಾರೆಯಲಿ ಸವಿ ಸುಧೆಯ ಸುರಿಸಿ
ಅನುರಾಗದ ಬುತ್ತಿಯನ್ನು ಉಣಿಸಿ
ಸವಿರಾಗದ ಅನುಪಲ್ಲವಿ ಹಾಡಿದೆನು!
ಮೋಹಿತ ರಾಧೆಯ ಮನವನು ಗೆದ್ದ ಕೃಷ್ಣನ
ಕೊಳಲಿನ ನಾದಕ್ಕೆ ತಕಧಿಮಿ ಎನ್ನುತ್ತಾ
ಕುಣಿತಿರಲು ಗೋವುಗಳೆಲ್ಲವು ಹೆಜ್ಜೆಯ ಹಾಕಿ
ಕೂಗಿದವು ರಾಧ ಕೃಷ್ಣಗೆ ಶುಭ ಕೋರಿದವು!
ಕೊಳಲಿನ ನಾದವು ಇಂಪಾಗಿ ನುಡಿಸಿ
ಲೋಕದ ಕಣ್ಣಿಗೆ ರಾಧೆಯ ಮನಸ್ಸು
ಪರಿಶುದ್ದವೆಂದು ಸರಿಗಮದಿ ಕೂಡಿ
ಗಮಕದಿ ಘಮದಿ ತಾಳದಿ ಹಾಡಿದೆ!
ಕೊಳಲಾದೇನಾ ಕೃಷ್ಣ ನಿನ್ನ ಕೈಯಲ್ಲಿ……….
ಈರಮ್ಮ.ಪಿ.ಕುಂದಗೋಳ