ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿರಿ

ಸಾವಿಲ್ಲದ ಶರಣರು

ನವ ಕರ್ನಾಟಕದ ಯುಗ ಪ್ರವರ್ತಕ ಶ್ರೀ ಸಿದ್ದಪ್ಪ ಕಂಬಳಿ 

   ಕರ್ನಾಟಕ ನಾಡು ನುಡಿಗೆ ದೊಡ್ಡ ಕೊಡುಗೆ ಸರ್ ಸಿದ್ದಪ್ಪ ಕಂಬಳಿಯವರದ್ದು. ಡಾ ಬಿ ಆರ್ ಅಂಬೇಡಕರ ಅವರಿಗೆ ಸಂಪೂರ್ಣ ಸಹಾಯ ಸಹಕಾರ ನೀಡಿ ಭಾರತದ ಸಾಮಾಜವಾದ ಚಿಂತನೆಯನ್ನು ಜೀವಂತವಿಡಿಸಿದ ಶ್ರೇಷ್ಠ ನಾಯಕರು. ಹುಬ್ಬಳ್ಳಿಯಲ್ಲಿ ನಾನ್ ಬ್ರಾಹ್ಮಣ ಚಳುವಳಿಯನ್ನು ಸಂಘಟಿಸಿ ದೇಶದ ಎಲ್ಲ ಸಮಾಜವಾದಿಗಳನ್ನು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ ಕೀರ್ತಿ  ಅವರಿಗೆ ಸಲ್ಲಬೇಕು . 

ಕೊಲ್ಹಾಪೂರ ಮಹಾರಾಜಾ ಶಾಹು ಮಹಾರಾಜ್ ಚೆಟ್ಟಿಯಾರ ಸಹೋದರರು,ತಮಿಳುನಾಡು ಜಸ್ಟಿಸ್ ಪಕ್ಷದ ಪಿ  ತ್ಯಾಗರಾಜ ಆಂಧ್ರ ದೆಹಲಿ ಮುಂತಾದ ಪ್ರದೇಶದಿಂದ ಸಮ ಸಮಾಜದ ಕಟ್ಟುವ ದೇಸಿಮೂಲದ ಸಮಾವೇಶಕ್ಕೆ ಶ್ರೀ ಸಿದ್ಧಾರೂಢರು ಅಧ್ಯಕ್ಷತೆ ವಹಿಸಿದ್ದು ಈಗ ಇತಿಹಾಸವೆಂದೇ ಹೇಳಬಹುದು. 

  ಜನನ ಸರ್ ಸಿದ್ದಪ್ಪ ಕಂಬಳಿಯವರು ಸರ್ ಸಿದ್ದಪ್ಪ ಕಂಬಳಿಗಂಗವ್ವ ಮತ್ತು ತೋಟಪ್ಪ ದಂಪತಿಗಳ ಮಗನಾಗಿ ಸೆಪ್ಟೆಂಬರ 11 1882ರಲ್ಲಿ  ಹುಟ್ಟಿದರು. ತಂದೆ ಕಂಬಳಿ ಮಾರುವ ವೃತ್ತಿಯಾದ ಕಾರಣ ಕಂಬಳಿಯೆಂಬ ಅಡ್ಡ ಹೆಸರು ಬಂದಿತು. ಲಕ್ಕುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಧಾರವಾಡದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು.

ಪುಣೆಯ ಡೆಕ್ಕನ್ ಕಾಲೇಜಿನಲ್ಲಿ B.A.ಪದವಿಯನ್ನು 1904ರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಸರಕಾರ ನೌಕರಿ ಸಿಗುವುದಾದರೂ ಜೀ ಹುಜುರ ಅನ್ನಬೇಕಾದ ಹುದ್ದೆ ಬೇಡವೆಂದು ಕಾನೂನು ಅಧ್ಯಯನ ಕೈಗೊಳ್ಳಲು ಮುಂಬೈಗೆ ಪ್ರಯಾಣ ಬೆಳಸಿದರು. ಕಾನೂನು ಪರೀಕ್ಷೆಯಲ್ಲಿ ಇಡಿ ಮುಂಬೈರಾಜ್ಯ ಕ್ಕೆ ಪ್ರಥಮರಾಗಿ ಉತ್ತೀರ್ಣರಾದರು..

ಸರ್ ಸಿದ್ದಪ್ಪ ಕಂಬಳಿ

ಸಿದ್ದಪ್ಪ ಕಂಬಳಿಯವರ ವಕಾಲತ್ತಿನ ಪ್ರತೀತಿ ಅರಿತ ಸಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮದೋಂದು ಕೇಸು ಪ್ರೀವಿವ್ ಕೌನ್ಸಿಲ್ ಎದುರು ಹೋದಾಗ ಕಂಬಳಿಯವರನ್ಬು ಲಂಡನ್ ಗೆ ಕಳುಹಿಸಲು ಆಲೋಚಿಸಿದಾಗ ಆಗ ಮೊದಲ ಮಹಾಯುದ್ದದ ಕಾರಣ ಪ್ರಯಾಣ ಅಪಾಯಕಾರಿ ಎಂದು ವಿಚಾರವನ್ನು ಕೈ ಬಿಟ್ಟರು ಲಿಂಗರಾಜ ದೇಸಾಯಿಯವರು. 1917ರಲ್ಲಿ ಹುಬ್ಬಳ್ಳಿಯ ನಗರ ಸಭೆಯ ಸದಸ್ಯರಾಗಿ, 1921ನಗರಸಭೆ ಅಧ್ಯಕ್ಷರಾಗಿ, ಅದೇ ಕಾಲಕ್ಕೆ ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಬೋರ್ಡ ಸದಸ್ಯ ರಾಗಿ, ಮುಂಬೈ ವಿಧಾನ ಪರಿಷತನ ಸದಸ್ಯರಾಗಿ ಆಯ್ಕೆಯಾದರು. 1924ರಲ್ಲಿ ಮುಂಬೈ ವಿಧಾನ ಪರಿಷತ್ ಉಪಸಭಾಪತಿ ಯಾಗಿ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಇತಿಹಾಸ ನಿರ್ಮಿಸಿದರು.

ಧಾರವಾಡ ದಲ್ಲಿ ಡೆಪ್ಯುಟಿ ಚನ್ನಬಸಪ್ಪ ನವರು ಸ್ಥಾಪಿಸಿದ ಶಿಕ್ಷಕರ ಟ್ರೆನಿಂಗ ಕಾಲೇಜು ಮತ್ತು ಅರಟಾಳ ರುದ್ರಗೌಡ್ರು ಸ್ಥಾಪಿಸಿದ ಕರ್ನಾಟಕ   ಕಾಲೇಜುನ್ನು ಬ್ರಿಟಿಷ್‌ ಸರಕಾರ ಆರ್ಥಿಕ ಮಿತವ್ಯಯದ ನೆಪದಡಿ ಅನುದಾನ ಸ್ಥಗಿತಗೂಳಿಸಲು ಪ್ರಯತ್ನಿಸಿದಾಗ ಬ್ರಿಟಿಷ್ ಸರಕಾರಕ್ಕೆ ಸವಾಲು ಹಾಕಿ ಏಕಾಂಗಿ ವೀರರಾಗಿ ಹೋರಾಡಿ ಇವೆರಡು ಸಂಸ್ಥೆಗಳನ್ನು ಉಳಿಸಿ ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸಲು ಕಾರಣರಾದರು ಸರ ಸಿದ್ದಪ್ಪ ಕಂಬಳಿಯವರು.

1924 ರ ಕಾಂಗ್ರೆಸ ಅಧಿವೇಶನ ದ ಅಧ್ಯಕ್ಷತೆ ವಹಿಸಲು ಗಾಂಧಿಜಿ ಬೆಳಗಾವಿಗೆ ಬಂದಾಗ ಧಾರವಾಡದ ರೇಲ್ವೆ ನಿಲ್ದಾಣದಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಭೇಟಿ ಮಾಡಿಸಿ ಎಂದರು ಗಾಂಧಿಯವರು. ಇದರಿಂದ ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವದ ಮಹತ್ವ ಅರಿವಾಗದೇ ಇರದು.

1930ರಲ್ಲಿ ಲಂಡನಿನಲ್ಲಿ ಜರುಗುವ ದುಂಡು ಮೇಜಿನ ಪರಿಷತ್ತಿಗೆ ಅಹ್ವಾನ ಬಂದಿತು. ಆದರೆ ಅದಕ್ಕೆ ಹಾಜರಾಗಲಿಲ್ಲಾ. ಅದೇ ವರ್ಷ ನವೆಂಬರ್ ನಲ್ಲಿ ಸರ ಸಿದ್ದಪ್ಪ ಕಂಬಳಿ ಮುಂಬೈ ಸರಕಾರದಲ್ಲಿ ಮಂತ್ರಿಯಾದರು. ಇದು ಕನ್ನಡಿಗನೋರ್ವ ಮುಂಬೈ ಸರಕಾರದಲ್ಲಿ ಪ್ರಪ್ರಥಮವಾಗಿ ಮಂತ್ರಿಯಾದದ್ದು

ಅಂಬೇಡ್ಕರ ಅವರು ಬ್ಯಾರಿಸ್ಟರ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು. 1932 ಪುಣಾ actನಲ್ಲಿ ಗಟ್ಟಿಯಾಗಿ ಅಂಬೇಡ್ಕರ್ ಅವರ ಬೆಂಗಾವಲಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು.

1937 ರಲ್ಲಿ ಮುಂಬಯಿ ವಿಧಾನ ಸಭೆಗೆ ಚುಣಾವಣೆ ನಡೆದಾಗ ಸರ ಸಿದ್ದಪ್ಪ ಕಂಬಳಿಯವರ ವಿರುದ್ದ ಧಾರವಾಡಕ್ಕೆ ಬಂದು ಬಾಷಣ ಮಾಡಿದವರು ಜವಹರಲಾಲ ನೆಹರು ಮತ್ತು ಸರದಾರ ವಲ್ಲಭಭಾಯಿ ಪಟೇಲ್ ಅವರು. ಆದರೆ ಪಲಿತಾಂಶ ಮಾತ್ರ ಸರ ಸಿದ್ದಪ್ಪ ಕಂಬಳಿಯವರದ್ದಾಗಿತ್ತು.

ಬೆಳಗಾವಿಯ ಲಿಂಗರಾಜ ಕಾಲೇಜ್‌ಗೆ ಅನುಮತಿ ನಿಡಲು ಪುಣಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೀನ ಮೇಷ ಏಣಿಸುವಾಗ ಮಡಿವಂತರ ಮೂಗು ಹಿಡಿದು ಲಿಂಗರಾಜ ಕಾಲೇಜ ಸ್ಥಾಪನೆಗೆ ಸಿಂಡಿಕೇಟ್ ಅನುಮತಿ ಕೊಡಿಸಿದರು ಸಿದ್ದಪ್ಪ ಕಂಬಳಿಯವರು.

ಶಿಕ್ಷಣ ಮಂತ್ರಿಗಳಿದ್ದಾಗ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಿ ಈ ಭಾಗದಲ್ಲಿ ಉನ್ನತ ಶಿಕ್ಷಣ ತಲೆ ಎತ್ತಿ ನಿಲ್ಲಿಸಲು ಕಾರಣರಾದವರು ಸರ ಸಿದ್ದಪ್ಪ ಕಂಬಳಿಯವರು.

ಅಂಬೇಡ್ಕರ ಅವರು ತಮ್ಮ ಶಿಕ್ಷಣ ಪೂರೈಸಿದ ನಂತರ, ಶಿಕ್ಷಣ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರಿಗೆ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಪ್ರಸ್ತಾಪಿಸಿದಾಗ, ಸಿದ್ದಪ್ಪ ಕಂಬಳಿಯವರು ಪ್ರಾಧ್ಯಾಪಕ ಹುದ್ದೆಗೆ ಅಂಬೇಡ್ಕರ್ ಅವರಿಗೆ ಅವಕಾಶ ಒದಗಿಸಿ ಅಂಬೇಡ್ಕರ್ ಅವರ ಪ್ರತಿಭೆಗೆ ಭೂಮಿಕೆ ಒದಗಿಸಿಕೂಟ್ಟರು.

ಪ್ರತ್ಯೇಕ ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಅಂಬೇಡ್ಕರ ಅವರ ಹೆಜ್ಜೆ ಹಜ್ಜೆಗೂ ಸರ ಸಿದ್ದಪ್ಪ ಕಂಬಳಿಯವರೂಂದಿಗೆ ಸಮಾಲೋಚನೆ ಮಾಡಿರುವುದು ಐತಿಹಾಸಿಕ.

1930ರಲ್ಲಿ ಸರ ಸಿದ್ದಪ್ಪ ಕಂಬಳಿಯವರಿಗೆ “ಜಸ್ಟಿಸ್ ಆಫ್ ಪೀಸ್” ಪ್ರಶಸ್ತಿ ಬಂದಿತು. ಇದನ್ನು ಪಡೆದ ಮೊದಲ ಕನ್ನಡಿಗರು. 1939ರಲ್ಲಿ ಸರಕಾರ ಇವರಿಗೆ ಸರ್ ಪ್ರಶಸ್ತಿ ನೀಡಿಗೌರವಿಸಿತು.

ಸರದಾರ ವಲ್ಲಭಭಾಯಿ ಪಟೇಲ್ ಅವರು ಕಂಬಳಿಯವರ ಮುಂಗೈ ಹಿಡಿದು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದರೂ ಸಹಿತ ತಮ್ಮ ಮಾತೃ ಪಕ್ಷಕೆ ನಿಷ್ಠೆ ತೋರಿಸಿದರು.

ಮುಂಬಯಿ ಪ್ರಾಂತ್ಯದಲ್ಲಿ ಧಾರವಾಡ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಪ್ರಾಂತ್ಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ದೊಡ್ಡಮೇಟಿ ಅಂದಾನಪ್ಪ, ಗಿರಿಮಲ್ಲಪ್ಪ ನಲ್ವಾಡಿ, ವಿಶ್ವನಾಥ ರಾವ್ ಜೋಗ್, ಶ್ರೀಪಾದ ಕರಿಗುದ್ರಿ ಮತ್ತು ತಿಮ್ಮಪ್ಪ ನೇಸ್ವಿ ಯವರ ಜೊತೆ ಧಾರವಾಡ ಪ್ರಾಂತ್ಯದ ಶಾಸಕರಾಗಿದ್ದರು. ಬೆಳಗಾವಿ,ಬಿಜಾಪುರ, ಕೆನರಾ ಮತ್ತು ಧಾರವಾಡ ಪ್ರಾಂತ್ಯಗಳನ್ನು ಮುಂಬಯಿ ಪ್ರಾಂತ್ಯದಿಂದ ಕನ್ನಡ ಭಾಷಿಕರ ರಾಜ್ಯವೊಂದಕ್ಕೆ ಸೇರಿಸಲು ಹಾತೊರೆಯುತ್ತಿದ್ದ ಕಂಬಳಿಯವರು, ಈ ಕಾರಣದಿಂದ ಕರ್ನಾಟಕ ಎಂಬ ರಾಜ್ಯವನ್ನು ಸ್ಥಾಪಿಸಲು ಬ್ರಿಟಿಷ್ ಸರ್ಕಾರಕ್ಕೆ ಮನವಿಯಿತ್ತರು.  ಆದರೆ, ಮೈಸೂರು ಪ್ರಾಂತ್ಯದಿಂದ ಮುಕ್ತ ಪ್ರತಿಕ್ರಿಯೆ ಬರಲಿಲ್ಲ. ಆದರೂ, ಕರ್ನಾಟಕ ಎಂಬ ಪದವನ್ನು ಸಾಧ್ಯವಾದಷ್ಟೂ ಬಳಸಲು ಮುಂದಾದರು. ಮುಂಬಯಿ ಸರ್ಕಾರದಲ್ಲಿ ಸಚಿವರಾಗಿದ್ದ ಕಂಬಳಿಯವರ ಸೇವೆಗೆ ಬ್ರಿಟಿಷ್ ಸರ್ಕಾರ ಸರ್ ಪದವಿಯಿತ್ತು ಗೌರವಿಸಿತು. ಭಾಷಾವಾರು ಪ್ರಾಂತ್ಯದ ರಚನೆಗಾಗಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರುತ್ತಾ ಬಂದ ಸರ್ ಕಂಬಳಿಯವರು, ಈ ಕಾರಣಕ್ಕಾಗಿ ಹಲವರ ಕೆಂಗಣ್ಣಿಗೆ ಗುರಿಯಾದರು. 1949ರಲ್ಲಿ ಪ್ರಸಕ್ತ ಪಾವಟೆನಗರದಲ್ಲಿರುವ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಪರೋಕ್ಷವಾಗಿ ಕಾರಣರಾದರು. ಸ್ವತಂತ್ರ ದೊರೆತ ಮೇಲೆ ನೆಹರೂ ಸರ್ಕಾರದ ಯೋಜನೆಗಳನ್ನು ವಿರೋಧಿಸಿ ಜೆ ಬಿ ಕೃಪಲಾನಿ , ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರಫ಼ುಲ್ಲ ಚಂದ್ರ ಘೋಷ್, ಮದ್ರಾಸ್ ಮುಖ್ಯಮಂತ್ರಿ ಟಂಗಟೂರಿ ಪ್ರಕಾಶಂರೊಡಗೂಡಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಸ್ಥಾಪಿಸಿದರು. 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತು. ಇದು ಕಂಬಳಿಯವರಿಗೆ ಹಿನ್ನಡೆಯಾಯಿತು. 1952ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯು ಪ್ರಜಾ ಸೋಷಲಿಸ್ಟ್ ಪಕ್ಷದೊಂದಿಗೆ ವಿಲೀನವಾಯಿತು.

  ಕರ್ನಾಟಕದ ಲಿಂಗರಾಜು ಕಾಲೇಜು ಕರ್ನಾಟಕ ವಿಶ್ವ ವಿದ್ಯಾಲಯ ಮುಂತಾದ ಸಂಸ್ಥೆಗಳನ್ನು ಕಟ್ಟುವಲ್ಲಿ ಅವರ ಪರಿಶ್ರಮ ಅಪಾರವಾಗಿದೆ.

 ಮುಂಬೈ ಸರಕಾರದಲ್ಲಿ ಶಿಕ್ಷಣ ಕೃಷಿ ಅಬಕಾರಿ ಕಾನೂನು ಹೀಗೆ ಏಳು ಖಾತೆಗಳನ್ನು ಹೊಂದಿದ ಕನ್ನಡದ ಮೊತ್ತ ಮೊದಲ ಮಂತ್ರಿ ಎನಿಸಿಕೊಂಡಿದ್ದರು. ದೊಡ್ಡ ಮೇಟಿ ಅಂದಾನಪ್ಪ ಅವರು ರಾಮದುರ್ಗದ ದುರಂತ ಮತ್ತು ಜಮಖಂಡಿಯ ಸಂಸ್ಥಾನಗಳ ತಗಾದೆಯಾ ಬಗ್ಗೆ ಸಭಾಧ್ಯಕ್ಷರ ನಿಲುವಳಿಯನ್ನು ಸೆಳೆಯುವ ನಿಲುವಿನೊಂದಿಗೆ  ಕನ್ನಡದಲ್ಲಿಯೇ ಮುಂಬೈ ಶಾಸನ ಸಭೆಯಲ್ಲಿ ಮಾತನಾಡಿದಾಗ ಸರ್ ಶ್ರೀ ಸಿದ್ದಪ್ಪ ಕಂಬಳಿಯವರ ಅವರ ಬೆಂಬಲಕ್ಕೆ ನಿಂತು ಸಭಾಧ್ಯಕ್ಷರಾದ ಶ್ರೀ ಮಳವಳಕರ ಅವರಿಗೆ ಸಮಜಾಯಿಸಿದ್ದು ಐತಿಹಾಸಿಕ ಘಟನೆ.

ಹುಬ್ಬಳ್ಳಿಯಲ್ಲಿ ಜನಿಸಿದ ಸಿದ್ದಪ್ಪ ಕಂಬಳಿ ರವರು ಮುಂಬಯಿ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ ನಾಯಕರು. ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇವರು ಕರ್ನಾಟಕ ಸಂಸ್ಕೃತಿಯನ್ನು ಮತ್ತು ನಾಡುನುಡಿಯನ್ನು ಉತ್ತಮಗೊಳಿಸಿದವರು. ನಾಯಕರು ಆಗಿ ಮಾತ್ರವಲ್ಲದೇ ಹೋರಾಟದ ಮೂಲಕವೂ ಕನ್ನಡಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು. ವೃತ್ತಿಯಲ್ಲಿ ವಕೀಲರಾದರೂ ತಮ್ಮ ಪ್ರವೃತ್ತಿಗಳಾದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಕನ್ನಡದ ಪ್ರಮುಖ ಕಟ್ಟಾಳು ಆಗಿ ಗುರುತಿಸಿಕೊಂಡವರು.

 ಇಂತಹ ಅಪ್ರತಿಮ ದಿವ್ಯ ಜ್ಯೋತಿ ನವೆಂಬರ್ 1956 ರಲ್ಲಿ ಬಯಲಲ್ಲಿ ಬಯಲಾಯಿತು ಸಾವು ದೇಹಕ್ಕೆ ಆತ್ಮಕ್ಕಲ್ಲ ಎನ್ನುವಂತೆ ಸರಿಸಿದ್ದಪ್ಪ ಕಂಬಳಿಯವರು ಸಾವಿಲ್ಲದ ಶರಣರು 


ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆ

ವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರತಾಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

22 thoughts on “

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಲೇಖನ ಸರ್

  2. ನಮ್ಮವರೇ ಆದ ಅಪ್ರತಿಮ ದಿವ್ಯ ಜ್ಯೋತಿ ಶ್ರೀ ಸಿದ್ದಪ್ಪ ಕಂಬಳಿ ಅವರ ಬಗೆಗೆ ನಿಮ್ಮ ಸಾವಿಲ್ಲದ ಶರಣರ ಮಾಲಿಕೆಯಲ್ಲಿ ಎಲ್ಲವನ್ನೂ ಒಳಗೊಂಡಂತೆ ವಿವರವಾಗಿ ಹಂಚಿಕೊಂಡಿದ್ದೀರಿ

  3. ಸಮಾಜಕ್ಕೆ ಮಾದರಿಯನಿಸಿದ ಹಿರಿಯರ ಶರಣರ ಜೀವನ ಚರಿತ್ರೆಯನ್ನು ಪರಿಚಯಿಸುವ ತಮ್ಮ ಲೇಖನ ಅತ್ಯಂತ ವಿದ್ವತ್ಪೂರ್ಣವಾಗಿದೆ ಧನ್ಯವಾದಗಳು ಸರ್

  4. ಏಷ್ಟು ಸುಂದರ ಐತಿಹಾಸಿಕ ಲೇಖನ ಬರೆದಿರುವಿರಿ ಸರ್ ನಿಮ್ಮ ಜ್ಞಾನಕ್ಕೆ ನನ್ನದೊಂದು ಶರಣು

    1. ಇಂತಹ ಅದ್ಭುತ ಸಾವಿಲ್ಲದ ಶರಣರ ಮಾಲಿಕೆಯಲ್ಲಿ ನಿರಂತರ ಲೇಖನಗಳು ಮೂಡಿ ಬರಲಿ.

  5. ಅಣ್ಣಾ ಅರ್ಥಪೂರ್ಣ ಮತ್ತು ಸಂಶೋಧನ ಲೇಖನ

  6. ಸಾವಿಲ್ಲದ ಶರಣರು ಮಾಲಿಕೆ ಚೆನ್ನಾಗಿ ಮೂಡಿ ಬರುತ್ತಿವೆ ಲೇಖಕರಿಗೂ ಪ್ರಕಾಶಕರಿಗೆ ಅನಂತ ವಂದನೆಗಳು

  7. ಹೊಸ ಭರವಸೆ ಯುವ ಲೇಖಕ ಡಾ ಶಶಿಕಾಂತ ಪಟ್ಟಣ ರಾಮದುರ್ಗ ನಿಮಗೆ ಅನಂತ.ಧನ್ಯವಾದಗಳು

  8. ಅತ್ಯುತ್ತಮ ಲೇಖನ ಓದಿ ಕಣ್ಣು ತುಂಬಿ ಬಂದವು ಸರ್

  9. ಸರ್ ಸಿದ್ದಪ್ಪ ಕಂಬಳಿ ಅವರ ಚರಿತ್ರೆ ಓದಿ ಕಣ್ಣು ತುಂಬಿ ಬಂದವು ಸರ್

  10. ಸರ್ ಬಹುತೇಕ ಮಹಾನುಭಾವರ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ ಮತ್ತು ನೀವು ಇಂತಹ ಸುಂದರ ಲೇಖನ ಬರೆದು ಪ್ರಕಟಿಸಿದ್ದಕ್ಕೆ ತಮಗೂ ಮತ್ತು ಪ್ರಕಾಶಕರಿಗೆ ಅನಂತ ವಂದನೆಗಳು

  11. ಮುಂದಿನ ವಾರದ ಸಾವಿಲ್ಲದ ಶರಣರು ಮಾಲಿಕೆ ಕುತೂಹಲ ಮೂಡಿಸಿದೆ
    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಖನ ಸರ್

Leave a Reply

Back To Top