ಇಂದಿರಾ.ಕೆ ಕತ್ತಲೇ ನೀನಿರು ಜೊತೆಯಾಗಿ

ಕಾವ್ಯ ಸಂಗಾತಿ

ಇಂದಿರಾ.ಕೆ

ಕತ್ತಲೇ ನೀನಿರು ಜೊತೆಯಾಗಿ

ಕತ್ತಲೇ ನೀನಿರು ಸಖಿಯಗಿ
ದುಃಖವನ್ನರಿತು
ನೋವನ್ನೆಲ್ಲ ಹಂಚಿಕೊಳ್ಳುತ್ತಾ
ಹೃದಯದ ಭಾರ ಇಳಿಸಲು ಸಂತೈಸಲು…

ಕತ್ತಲೇ ನೀ ನಿರು ಓಲೈಕೆಯಾಗಿ
ಮುನಿಸುಕೊಂಡಾಗ ಕೋಪವನ್ನು ದೂರ ಸರಿಸಿ ಮುದ್ದು ಮಾಡುತ್ತಾ ಪ್ರೀತಿಸಲು ರಮಿಸಲು…

ಕತ್ತಲೇ ನೀನಿರು ಭಾವವಾಗಿ
ತುಟಿಬಿಚ್ಚದ ಅದೆಷ್ಟೋ ಮಾತುಗಳ ಪದಗಳೆಲ್ಲವು
ಬೆರಳುಗಳನು ಸ್ಪರ್ಶಿಸುತ್ತಾ
ಮೌನವಾಗಿ ತಲುಪಲು…

ಕತ್ತಲೇ ನೀನಿರು ಸೆರಗಾಗಿ
ಜಾರುತಿರುವ ಕಣ್ಣ ಹನಿಗಳ ಒರೆಸುತಾ
ಆ ನಿನ್ನ ಒಡಲ ತಬ್ಬಿ
ಮನಸು ಹಗುರ ಮಾಡಲು
ಜೋಪಾನಿಸಲು…

ಕತ್ತಲೇ ನೀನಿರು ಜೊತೆಯಾಗಿ
ವಕ್ರದೃಷ್ಟಿ ನೋಟಗಳಿಗೆ ಬಂಧಿಯಾಗಲಾರೆನು
ಕರುಣೆಯಿಲ್ಲದ ಕರಗಳಿಗೆ ಬಲಿ ನಾನಾಗ ಲಾರೆನು
ಬೆಳಕಿನ ಭಯದಲ್ಲಿ ಬಾಳಲಾರೆನು
ಮಿಥ್ಯ ದ ಮನುಜರಲ್ಲಿ ಇರಲಾರೆನು
ನಿನ್ನೊಂದಿಗೆ ಖುಷಿಯಾಗಿ ರುವೆ
ನಿನ್ನಲ್ಲಿಯೇ ಆನಂದಿಸುವೆ…


ಇಂದಿರಾ.ಕೆ

Leave a Reply

Back To Top