ಪುಸ್ತಕ ಸಂಗಾತಿ
ವಿಜಯಕಾಂತ ಪಾಟೀಲ
‘ಅನಿಸಿದ್ದು ಆಡಿದ್ದು’..!
ಗ್ರಾಮ್ಯ ಭಾರತದ ನಿಕಟ ಒಡನಾಡಿಯಾಗಿ ಬರೆದ ಪುಸ್ತಕವೇ ವಿಜಯಕಾಂತ ಪಾಟೀಲರ ‘ಅನಿಸಿದ್ದು ಆಡಿದ್ದು’..! —
ಲೇಖಕ ಮತ್ತು ಮುಖ್ಯವಾಗಿ ಕವಿ ವಿಜಯಕಾಂತ ಪಾಟೀಲರು ಹಾನಗಲ್ ತಾಲ್ಲೂಕಿನ ಕ್ಯಾಸನೂರಿನವರು. ಇವರ ಜನನವು 1969 ರಲ್ಲಿ ಆಯಿತು. ಇವರು ಧಾರವಾಡದಲ್ಲಿ ಎಲ್.ಎಲ್.ಬಿ. ಮತ್ತು ಎಂ.ಎ. ಪದವಿಯನ್ನು ಮುಗಿಸಿದರು.
ಪ್ರಸ್ತುತವಾಗಿ ಹಾನಗಲಿನಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡುವುದರ ಜೊತೆಗೆ ಇವರ ಹುಟ್ಟುರಾದ ಕ್ಯಾಸನೂರಲ್ಲಿ ವ್ಯವಸಾಯವನ್ನೂ ಮಾಡುತ್ತಿದ್ದಾರೆ. ಇವರ ಹೊಲ, ಗದ್ದೆ, ತೋಟವು ಇವರ ಪರಿಶ್ರಮದಿಂದ ಚೆನ್ನಾಗಿ ಫಲವನ್ನು ಕೊಡುತ್ತದೆ. ಈ ವಿಜಯಕಾಂತ ಪಾಟೀಲರು ಯಾವಾಗಲೂ ಅಷ್ಟೇ ಪರಿಶ್ರಮವಾದಿಗಳು. ಅದು ಸಾಹಿತ್ಯ ರಚನೆಯಾಗಲಿ, ತಮ್ಮ ನ್ಯಾಯವಾದಿತ್ವವಾಗಲಿ, ಅಲ್ಲದೇ ತೋಟ, ಹೊಲ, ಗದ್ದೆ ನೋಡಿಕೊಂಡು ವ್ಯವಸಾಯವನ್ನು ಮಾಡುವುದು ಆಗಲಿ, ಎಲ್ಲಾ ಕಾರ್ಯಗಳಲ್ಲೂ ಭಾರೀ ಪರಿಶ್ರಮ ಪಡುತ್ತಾರೆ ಈ ವಿಜಯಕಾಂತ ಪಾಟೀಲರು.
ಸಾಹಿತ್ಯ ವಿಷಯಕ್ಕೆ ಬಂದರೆ ಈ ವಿಜಯಕಾಂತ ಪಾಟೀಲರು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಹಿಂದಿನ ಸದಸ್ಯರೂ ಕೂಡ ಆಗಿದ್ದರು. ಅಲ್ಲದೇ ಹಾನಗಲ್ಲಿನಲ್ಲಿನ ಕನ್ನಡ ಯುವಸಮೀತಿಯ ಪ್ರಧಾನ ಸಂಚಾಲಕರಾಗಿ ಹತ್ತು ಹಲವಾರು ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇದ್ದಾರೆ.
ಈ ವರೆಗೂ ಐದಾರು ಕವನ ಸಂಕಲನ, ಒಂದು ಪ್ರಬಂಧ ಸಂಕಲನ, ಎರಡು ಮಕ್ಕಳ ಸಾಹಿತ್ಯ ಕೃತಿಗಳೂ ಸೇರಿದಂತೆ ಹಲವಾರು ಸಾಹಿತ್ಯದ ಕೃತಿಗಳನ್ನು ಹೊರತಂದಿದ್ದಾರೆ. ಈ ಕಾರಣಕ್ಕಾಗಿಯೇ ಇವರಿಗೆ ಹಲವಾರು ಪ್ರಶಸ್ತಿಗಳು ಹಾಗೂ ಬಹುಮಾನಗಳಿಗೂ ಭಾಜನರಾಗಿದ್ದಾರೆ ಈ ವಿಜಯಕಾಂತ ಪಾಟೀಲರು.
2011 ರಲ್ಲಿ ನಡೆದ ಹಾನಗಲ್ಲ ತಾಲ್ಲೂಕಿನ ಮೊದಲ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರ ಪಾಲಿಗೆ ಒಲಿದು ಬಂದಿತ್ತು.
ಈ ವಿಜಯಕಾಂತ ಪಾಟೀಲರ ‘ಬೆವರ ಬಣ್ಣ’ ಎಂಬ ಕವನ ಸಂಕಲನ ಹೊರಬರಲಿದೆ. ಇದೀಗ ತಾನೇ ಹಲವು ದಾರಿಗಳ ಗದ್ಯ ಸಂಕಲನ ‘ಅನಿಸಿದ್ದು ಆಡಿದ್ದು’ ಓದುಗರೆಡೆಗೆ ಬಂದಿದೆ. ಆ ‘ಅನಿಸಿದ್ದು ಆಡಿದ್ದು’ ಗದ್ಯ ಸಾಹಿತ್ಯದ ಸಂಕಲನದ ಬಗೆಗೆ ನಾವೀಗ ನೋಡೋಣ.
ಗ್ರಾಮ್ಯ ಭಾರತದ ಬದುಕಿನ ನಿಕಟ ಒಡನಾಡಿಯಾಗಿ ಬರೆದ ಪುಸ್ತಕವೇ ವಿಜಯಕಾಂತ ಪಾಟೀಲರ ‘ಅನಿಸಿದ್ದು ಆಡಿದ್ದು’..! —
ಗ್ರಾಮ್ಯ ಭಾರತದ ನಿಕಟ ಒಡನಾಡಿಯಾಗಿರುವ ವಿಜಯಕಾಂತ ಪಾಟೀಲರು ಜನಪದಸತ್ವದ ಮುಕ್ತ ಮನಸ್ಸಿನ ಮನುಷ್ಯ. ನೇರಾನೇರ ಮಾತುಗಳು ಸಹಜವೆಂತೆ ಸಿದ್ಧಿಸಿವೆ. ಈ ಗುಣಗಳೇ ಇಲ್ಲಿನ ಬರಹಗಳ ವಿನ್ಯಾಸವನ್ನೂ ರೂಪಿಸಿವೆ. ಯಾವ ನಿರ್ದಿಷ್ಟವಾದ ಚೌಕಟ್ಟುಗಳಿಗೂ ಒಳಪಡದೇ ‘ಅನಿಸಿದ್ದು ಆಡಿದ್ದು’ ಸಂಕಲನದಲ್ಲಿ ಪ್ರಬಂಧ, ವಿಮರ್ಶೆ, ಸಂದರ್ಶನ, ಸಂವಾದ, ಪ್ರತಿಕ್ರಿಯೆ ಹೀಗೆಯೇ ಬಗೆಯ ಬರಹಗಳು ಇವೆ. ಈ ‘ಅನಿಸಿದ್ದು ಆಡಿದ್ದು’ ಸಂಕಲನದಲ್ಲಿ.
ವೃತ್ತಿಯಲ್ಲಿ ನ್ಯಾಯವಾದಿ ಆಗಿಯೂ ಅಲ್ಲದೇ ಕೃಷಿಕನಾಗಿಯೂ ಪ್ರವೃತ್ತಿಯಲ್ಲಿ ಅನಿಸಿದಂತೆ ನಿಜವ ನುಡಿವೆನೆಂಬ ವಿಜಯಕಾಂತ ಪಾಟೀಲರ ಸಂಕಲ್ಪವು ಇಲ್ಲಿನ ಬರಹಗಳ ಜೀವದ್ರವ್ಯವೆಂದೇ ಹೇಳಬೇಕು.
ವಿಜಯಕಾಂತ ಪಾಟೀಲರು ಸೂಕ್ಷ್ಮ ಸಂವೇದನಾಶೀಲ ಮನಸ್ಸಿನ, ಸಾಮಾಜಿಕ ಜವಾಬ್ದಾರಿಯ ವ್ಯಕ್ತಿತ್ವದವರಾಗಿದ್ದರಿಂದ ಇಲ್ಲಿನ ಲೇಖನಗಳು ತನ್ನ ಸುತ್ತಮುತ್ತಲಿನ ಪರಿಸರದ ವಿದ್ಯಮಾನಗಳಿಗೇ ಸ್ಪಂದಿಸುವ ದಾಖಲೆಗಳಾಗಿವೆ. ಕಂಡದ್ದು, ಕೇಳಿದ್ದು, ಓದಿದ್ದು, ಅನುಭವಿಸಿದ್ದು, — ಎಲ್ಲವೂ ಇಲ್ಲಿ ಸಹಬಾಳ್ವೆ ನಡೆಸಿವೆ. ಗ್ರಾಮಜೀವನದ ಮೂಲಸತ್ವವೇ ಸಹಬಾಳ್ವೆ ಎಂಬುದೇ ವಿಜಯಕಾಂತ ಪಾಟೀಲರ ಮೂಲ ಚಿಂತನೆಯು.
ಬರವಣಿಗೆಯ ಲಯವಿನ್ಯಾಸ ಎಲ್ಲವೂ ಈ ಸಹಬಾಳ್ವೆಯ ತತ್ವವೇ ರೂಪಿಸಿವೆ. ಎಲ್ಲವನ್ನೂ ‘ಒಳಗೊಳ್ಳುವ’ ಈ ಮಾದರಿಯು ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ಹೀಗಾಗಿಯೇ ವಿಜಯಕಾಂತ ಪಾಟೀಲರ ಬರವಣಿಗೆ ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಈ ವಿಜಯಕಾಂತ ಪಾಟೀಲರ ಗದ್ಯ ಬರಹಗಳ ಸಂಕಲನದಲ್ಲಿ ಒಟ್ಟಾರೆ ನಾಲ್ಕು ವಿಭಾಗಳು ಇವೆ. ಭಾಗ ಒಂದು : ‘ಅನಿಸಿಸಿದಂತೆ ಆಡಿದಂತೆ…’ ಎಂಬುದು. ಭಾಗ ಎರಡು : ‘ಅವರ ಮಾತು… ಎಂಬುದು. ಭಾಗ ಮೂರು : ಓದಿನ ಹಾದಿಯಲ್ಲಿ ತುಸು ಹಾದು…’ ಎಂಬುದು. ಭಾಗ ನಾಲ್ಕು : ‘ಸಮಕಾಲೀನ ಪ್ರಶ್ನೆಗಳು : ಕೆಲವು ನಿಲುವುಗಳು’. ಎಂಬಂತೆ ಒಟ್ಟು ನಾಲ್ಕು ವಿಭಾಗಗಳನ್ನು ಮಾಡಿದ್ದಾರೆ ಈ ವಿಜಯಕಾಂತ ಪಾಟೀಲರು. ಹಾಗೆಯೇ ಒಂದು ಒಂದು ವಿಭಾಗದಲ್ಲಿ ವಿಶಿಷ್ಠವಾದ ಬರಹಗಳನ್ನು ಮಾಡಿದ್ದಾರೆ.
ಹೀಗಾಗಿಯೇ ಇದೊಂದು ವಿನೂತನ ಮಾದರಿಯ ಗದ್ಯ ಸಂಗ್ರಹವು. ಇಲ್ಲಿ ಗಂಭೀರ ಲೇಖನಗಳಿವೆ. ವಿಮರ್ಶೆಗಳು ಇವೆ.ವ್ಯಕ್ತಿ ಚಿತ್ರ ಚಿತ್ರಣಗಳಿವೆ. ಹಲವಾರು ವಿಚಾರಗಳು, ಅನಿಸಿಕೆಗಳು, ಆಕ್ರೋಶಗಳು, ತಿಳಿ ಮನಸ್ಸಿನ ತಣ್ಣಗಿನ ಮಾತುಗಳು ತುಂಬಿಕೊಂಡಿವೆ. ಪಾಪು, ಚಂಪಾ, ಹೀಗಾಗಿಯೇ ಮುಂತಾದವರನ್ನು ಮೊದಲ್ಗೊಂಡೂ ಹೆಸರನ್ನೇ ಕೇಳರಿಯದ ಲೇಖಕರ ಪುಸ್ತಕ ವಿಮರ್ಶೆಗಳೂ ಇಲ್ಲವೆ.
ಇಂತಹ ಈ ಪುಸ್ತಕದಲ್ಲಿ ಸ್ವತಃ ವಿಜಯಕಾಂತ ಪಾಟೀಲರು ತಾವು ಹಲವಾರು ವರ್ಷಗಳಿಂದ ಪತ್ರಿಕೆಗಳಿಗೆ ‘ವಾಚಕರ ವಾಣಿ’ಗೆ ಬರೆದ ಕಿರುಬರಹಗಳ ದಾಖಲೆಗಳೂ ಇಲ್ಲಿವೆ. ಒಟ್ಟಾರೆ ಈ ಪುಸ್ತಕ ಓದುಗರಿಗೆ ಒಂದು ಅನನ್ಯವಾದ ಅನುಭವವನ್ನು ಕೊಡುತ್ತದೆ.
ಪರಿಚಯ, ವಿಶ್ಲೇಷಣೆ ಚನ್ನಾಗಿದೆ.