ಪುಸ್ತಕ ಸಂಗಾತಿ
ಗೊರೂರು ಅನಂತರಾಜು ವಿರಚಿತ ಕಥಾ ಸಂಕಲನ
ಕಥೆಗೆ ವಸ್ತುವಾದಳು ಹುಡುಗಿ
ವಿಮರ್ಶೆ-ಹೆಚ್. ಎಸ್. ಪ್ರತಿಮಾ ಹಾಸನ್.
ತೆರೆಯುವುದು ಬಾಗಿಲದು ಜೀವನದಿ ಎಂದೆಂದು
ತೆರೆಗೆಲೆಯು ಆಗದಿರು ಬದುಕಿನಲಿಯೆ
ಪರಿಸರದ ಗುಣಗಳ ತೋರುತಿರು ಬರಹದಲಿ
ಗರಿಬಿಚ್ಚಿ ಹಾರುತಿರೆ ಲಕ್ಷ್ಮಿ ದೇವಿ.
ಈ ಮೇಲಿನ ಮುಕ್ತಕ ಪದವಿಮರ್ಶೆಯು ಕಥೆಗೆ ವಸ್ತುವಾದಳು ಹುಡುಗಿ ಕಥಾ ಸಂಕಲನದ ವಿಮರ್ಶೆಯಲ್ಲಿ ಕಾಣಸಿಗುವುದು. ತೆರೆಯುವುದು ಬಾಗಿಲುದು ಜೀವನದಿ ಎಂದೆಂದು ಅಂದರೆ ಕಥಾ ಸಂಕಲನದಲ್ಲಿ ಒಂದು ಹೆಣ್ಣು ಮಗಳ ಪರಿಸ್ಥಿತಿಗೆ ಬಲಿಯಾಗಿರುವ ಸ್ಥಿತಿಯನ್ನು ಕಾಣಬಹುದು. ತೆರೆಗೆಲೆಯ ರೀತಿಯಲ್ಲಿ ಬದುಕಿನಲ್ಲಿ ಹಾರದಂತೆ. ಪರಿಸರದ ಗುಣಗಳನ್ನು ಬರಹದಲಿ ತೋರುತ್ತಿದ್ದಾರೆ. ಕಲ್ಪನೆಯನ್ನು ಗರಿಬಿಚ್ಚಿ ಆರಿಸುತ್ತಿದ್ದಾರೆ ಮನಮುಟ್ಟುವ ಕಥೆಗಳನ್ನು ಒಳಗೊಂಡಿರುವುದನ್ನು ತಿಳಿಯಬಹುದು.
ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್.ಆದ ನಾನು ಗೊರೂರು ಅನಂತರರಾಜು ರವರ ಕಥೆಗೆ ವಸ್ತುವಾದಳು ಹುಡುಗಿ ಎಂಬ ಕಥಾ ಸಂಕಲನದ ಬಗ್ಗೆ ಹೇಳುವುದಾದರೆ. ಹೆಣ್ಣು ಮಗಳ ವ್ಯಥೆಯನ್ನು ತಿಳಿಸಲಾಗಿದೆ. ಪರಿಸ್ಥಿತಿಯನ್ನು ಗಮನಿಸಬಹುದಾಗಿದೆ ಎಲ್ಲಾ ಪ್ರಕಾರಗಳಲ್ಲೂ ಬರೆದು ಪ್ರಸಿದ್ಧರಾದಂತಹ ಗೊರೂರು ಅನಂತರರಾಜು ರವರು ಬರಹದ ಪರಿವನ್ನು ತನ್ನದೇ ಆದಂತಹ ರೀತಿಯಲ್ಲಿ ಜನರ ಮನ ಮುಟ್ಟುವಂತೆ ಬರಹದ ಮುಖಾಂತರ ಮಾಡಿದ್ದಾರೆ. ಈ ಕಥೆಗೆ ವಸ್ತುವಾದಳು ಹುಡುಗಿ ಎಂಬುದರಲ್ಲಿ. ಆ ಹುಡುಗಿಯನ್ನು ಅಂದರೆ ಕೋಮಲ ಎಂಬ ಪಾತ್ರದ ಬಗ್ಗೆ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿ ಅವಳ ಪರಿಸ್ಥಿತಿಯನ್ನು ಎತ್ತಿ ಹಿಡಿಯಲಾಗಿದೆ. ಆಕೆ ಜಾರಣಿಯಾದದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ಆಕೆಗೆ ಸಹಾಯ ಮಾಡಲು ಹೋಗಿ ವ್ಯಕ್ತಿ ಒಳಗಾದ ಸಮಸ್ಯೆಗಳನ್ನು ತಿಳಿಸಿದ್ದಾರೆ ಬಯಕೆಯ ಬೆನ್ನೇರಿ . ಇಲ್ಲಿಯೂ ಒಂದು ಆಸ್ಪತ್ರೆಯ ಚಿತ್ರಣವನ್ನು ನೀಡುತ್ತಾ ಹೆಣ್ಣಿನ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವ ಚಿತ್ರಣವಿದೆ. ನಮ್ಮೂರ ಚಾಮಯ್ಯ ಮೇಷ್ಟ್ರು ಕಥೆಯಲ್ಲಿ ಚಾಮಯ್ಯ ಮೇಷ್ಟ್ರೇನಾ ಶಿಸ್ತಿನ ಜೀವನ ಅವರ ಸೇವೆಯ ಬಗ್ಗೆ ಬಹಳ ಚೆನ್ನಾಗಿದೆ. ಇಲ್ಲಿಯು ಭಾವನೆಗಳು ಮನಮುಟ್ಟುವಂತಿವೆ . ಹೀಗೆ ಹೇಳುತ್ತಾ ಹೋದರೆ ಇವರ ಪ್ರತಿಯೊಂದು ಕಥೆಯಲ್ಲೂ ಸಹ ಹೆಣ್ಣಿನ ಬಗ್ಗೆಗಿನ ಪರಿಸ್ಥಿತಿಗೆ ಅನುಗುಣವಾಗಿ ಆಕೆಯ ಬದಲಾವಣೆಯ ಜೀವನವನ್ನು ತಿಳಿಸಿದ್ದಾರೆ. ಅಂತೆ ಹಲವಾರು ರೀತಿಯ ವಿಭಿನ್ನತೆಯ ಕಥೆಗಳಲ್ಲಿ ಪಾತ್ರಗಳು ಹೊರ ಹೊಮ್ಮಿವೆ . ಕೆಲವು ಪಾತ್ರಗಳು ಹೀಗೆ ಆಗುವುದೇ ಕಾರ್ಯಗಳು ಸಾಧ್ಯವೇ? ಇಲ್ಲವೇ?. ಹೀಗೆ ಪ್ರತಿಯೊಂದು ತರ್ಕವನ್ನು ಮಾಡುತ್ತ ತನ್ನ ಕಥೆಯ ರೂಪದಲ್ಲಿ ತಿಳಿಸಿದ್ದಾರೆ. ಪ್ರತಿಯೊಂದು ಕಥೆಗಳಲ್ಲೂ ನೈಜತೆಯ ರೂಪವನ್ನು ನೀಡುತ್ತಾ ತನ್ನ ಭಾವನೆಗಳಿಗೆ ಬಣ್ಣವನ್ನು ನೀಡುತ್ತಾ ಬರಹದ ರೂಪದಲ್ಲಿ ಪರಿಪೂರ್ಣವಾಗಿ ತಿಳಿಸಿದ್ದಾರೆ. ಪ್ರತಿಯೊಂದು ಕಥೆಯು ಅರ್ಥಪೂರ್ಣವಾಗಿದ್ದು. ಓದುಗರಿಗೆ ಮನಮುಟ್ಟುವಂತೆ ಅರ್ಥವಾಗುವಂತಿದೆ. ಅದರಲ್ಲೂ ಹುಡುಗಿ ಕಥೆಯಲ್ಲಿ ಕಮಲಾಳ ಜೀವನದ ಶೈಲಿ ಬಗ್ಗೆ ಅವರಿಗಾದ ಪರಿಚಯ ಅವಳಿಗೆ ಮಾಡಲಾಗದ ಸಹಾಯದಿಂದ ನರಳಾಟವನ್ನು ತನ್ನ ಅಸಹಾಯಕತೆಯನ್ನು ಬರಹ ರೂಪದಲ್ಲಿ ಕಥೆಗಾರನ ಮಾತುಗಳನ್ನು ಬರಹದಲ್ಲಿ ಓದುಗರ ಮನ ಮುಟ್ಟುವಂತೆ ಚಿತ್ರಸಿದ್ದಾರೆ. ಕಥೆಗೆ ವಸ್ತುವಾದಳು ಹುಡುಗಿ ಕಥಾಸಂಕಲನದಲ್ಲಿ ಮತ್ತೊಂದು ಮನ ಮುಟ್ಟುವ ಕಥೆ ಎಂದರೆ ಚಂದ್ರಮುಖಿ ಪ್ರಾಣಸಖಿ ಚತುರೇ ನೀ ಹೇಳೆ! ಇಲ್ಲಿ ಸೋಮಶೇಖರನ ಪಾತ್ರ, ಚಂದ್ರಮುಖಿಯ ಪಾತ್ರವು ಮನಮುಟ್ಟುವಂತಿದೆ,. ಮೌಲ್ಯವು ಎಲ್ಲರ ಮನೆ ಮುಟ್ಟುವಂತಹ ಹಣದ ಬೆಲೆಯನ್ನು ತೋರಿಸುತ್ತದೆ. ಅಜ್ಜನ ಮನೆಯಲ್ಲಿ ದೊಡ್ಡಪ್ಪ ಸತ್ತಾಗ. ಕಥೆಯಲ್ಲಿ ರಾಮ ದೊಡ್ಡಪ್ಪ ಪಾತ್ರವು ಸಾವಿನ ನಂತರದ ನಡೆಗಳನ್ನು ಅಲ್ಲಿನ ಕಾರ್ಯಗಳನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ . ವಿಪರ್ಯಾಸ ಎಂಬ ಕಥೆಯು ಅಷ್ಟೇ ಮನುಜನ ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಚಿತ್ರಣವನ್ನು ನೀಡಿದ್ದಾರೆ. ಹೀಗೆ ಯಾವ ಕಥೆಯನ್ನು ಬಿಡುವ ಹಾಗಿಲ್ಲ. ಪ್ರತಿಯೊಂದು ಕಥೆಯು ತನ್ನದೇ ಆದಂತಹ ಒಂದು ಸಾಂದರ್ಭಿಕ ಉದಾಹರಣೆಗಳನ್ನು ಒಳಗೊಂಡಿದೆ. ಕಥೆಗೆ ವಸ್ತುವಾದಳು ಹುಡುಗಿ ಗೊರೂರು ಅನಂತರಾಜುರವರ ಕಥಾ ಸಂಕಲನವಾಗಿದ್ದು. ಓದುಗರ ಮನವನ್ನು ಸೆಳೆಯುತ್ತಿದ್ದು. ಬಹಳ ಕುತೂಹಲಕಾರಿ, ಚರ್ಚೆಯನ್ನು ಮಾಡುವಂತಹ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ, ಏನು ಆಗಬಹುದು ಎಂಬ ಆಸಕ್ತಿಯಿಂದ ಓದುಗರ ಮನದಲ್ಲಿ ಕಾತುರತೆ ಮೂಡಿಸುವಂತಹ ಕಥಾ ಸಂಕಲನವಾಗಿದ್ದು. ಬಹಳ ಅರ್ಥಪೂರ್ಣವಾದ ಕಥೆಗಳಿವೆ.ಹಲವು ಬಾರಿ ಶಾಲೆಗಳಲ್ಲಿ ಮತ್ತು ಬಸ್ಸು ಪ್ರಯಾಣದಲ್ಲಿ ಓದುತ್ತಾ ಕಥೆಯನ್ನು ಓದಿ ತಿಳಿದಿದ್ದೇನೆ. ಹಲವು ಬಾರಿ ನಮ್ಮ ಶಾಲೆಯ ಶಿಕ್ಷಕಿಯರು ಸಹ ಇದನ್ನು ಓದಿದ್ದಾರೆ. ಅವರೊಂದಿಗೆ ಚರ್ಚೆಯನ್ನು ಸಹ ಮಾಡಿದ್ದೇನೆ. ಅವರ ಪ್ರಕಾರ ಇದು ವಾಸ್ತವಿಕ ಚಿತ್ರಣವನ್ನು ನೀಡಿದ್ದಾರೆ ಎಂಬುದನ್ನು ತಿಳಿದಿದ್ದೇನೆ. ಆಸಕ್ತಿಯುತವಾದ ಕಥೆಗಳಾಗಿದ್ದು. ಬಹಳ ಅರ್ಥಪೂರ್ಣವಾದ ಕಥೆಗಳೆಂದು ತಿಳಿಸಿದ್ದಾರೆ. ಬಸ್ನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೂ ಸಹ ಈ ಕಥಾ ಸಂಕಲನವನ್ನು ಓದಲು ನೀಡಿದ್ದೇನೆ. ಅಲ್ಲಿಯೂ ಅವರ ಅಭಿಪ್ರಾಯದ ಪ್ರಕಾರ ಪೂರ್ಣ ಓದಲಾಗದಿದ್ದರು. ಓದಿದರ ಪ್ರಕಾರ ಕಥೆಗೆ ವಸ್ತುವಾದಳು ಹುಡುಗಿ ಎಂಬ ಕಥೆ , ಸಂಘರ್ಷ, ನಿರ್ಧಾರ ಈ ಕಥೆಗಳು ಬಹಳಷ್ಟು ಮೆಚ್ಚುಗೆಯನ್ನು ಪಡೆದಿದೆ.. ಒಟ್ಟಾರೆ ಕಥೆಗೆ ವಸ್ತುವಾದಳು ಹುಡುಗಿ, ಕಥಾ ಸಂಕಲನವು ಓದುಗರ ಮನ ಮುಟ್ಟುವುದರಲ್ಲಿ ಸಂಶಯವಿಲ್ಲ. ಹೀಗೆ ಹಲವು ಕಥಾ ಸಂಕಲನಗಳು ಹೊರ ಬರುತ್ತಿರಲಿ ಓದುಗರ ಮನ ಮುಟ್ಟುವಂತಿರಲಿ ಎಂದು ಆಶಿಸುತ್ತಾ . ಈ ಕಥಾ ಲೇಖನದ ವಿಮರ್ಶೆಗೆ ವಿರಾಮವನ್ನು ಹಾಕುತ್ತಿದ್ದೇನೆ . ಜೈ ಹಿಂದ್ ಜೈ ಕರ್ನಾಟಕ ಮಾತೆ.
ಹೆಚ್. ಎಸ್. ಪ್ರತಿಮಾ ಹಾಸನ್.