ಪುಸ್ತಕ ಪರಿಚಯ–ಪಾರ್ವತಿ ಎಸ್, ಬೂದೂರುರವರ ನನ್ನೊಳಗಿನ ನಾನು

ಪುಸ್ತಕ ಸಂಗಾತಿ

ಪಾರ್ವತಿ ಎಸ್, ಬೂದೂರು

ನನ್ನೊಳಗಿನ ನಾನು

ಪಾರ್ವತಿ ಎಸ್, ಬೂದೂರು.

ಕವನ ಸಂಕಲನ.
ಲೇಖಕರು: ಪಾರ್ವತಿ ಎಸ್, ಬೂದೂರು.
ಪ್ರಥಮ ಮುದ್ರಣ: 2021.
ಪ್ರತಿಗಳು : 1000 ಸಾವಿರ.
ಪುಟಗಳು : 112.
ಬೆಲೆ:. 100
ನಿಶಾ ಪ್ರಕಾಶನ.

ಫೇಸ್ ಬುಕ್ ಗ್ರೂಪ್ನಲ್ಲಿನ ಪರಿಚಯ ಅಷ್ಟಕ್ಕೆ ಸೀಮಿತವಾಗಿ ಉಳಿಯದೆ ಸ್ನೇಹದ ಸುಮದುರ ಸಿಂಚನವನೆ ಸೃಷ್ಟಿಸಿತು,
ಸಾಹಿತ್ಯದ ಕುರಿತು ತುಂಬಾ ಒಲವುಳ್ಳವರು ಆಗಿರುವದರಿಂದ ನಾನು ಅವರು ಆಗಾಗ ಫೋನಿನ ಮೂಲಕ ಚರ್ಚಿಸುತ್ತಿದ್ದೆವು.
ಹೆಬ್ಸುರಿನಲ್ಲಿಯ ರಾಜ್ಯಮಟ್ಟದ ಗಜಲ್ ಗೋಷ್ಠಿಯಲ್ಲಿ ಭಾಗವಹಿಸಲು ಬಂದಿದ್ದ ಪಾರ್ವತಿಯವರು ತಮ್ಮ ಯಜಮಾನರೊಂದಿಗೆ ನಮ್ಮಮನೆಗೆ ಬಂದು ನೇರ ಭೇಟಿಯಾಗಿ ತಮ್ಮ ಎರಡು ಕವನ ಸಂಕಲನವನ್ನು ನನಗೆ ನೀಡಿದರು ಅವರದು
ಆಕರ್ಷಕವಾದ ವ್ಯಕ್ತಿತ್ವ,, ಆದರ್ಶವಾದ ನಡೆ ನುಡಿಯಿಂದ, ಗೌರವಾನ್ವಿತ ಮಹಿಳೆಯಾಗಿ ಆದರ್ಶ ಗೃಹಿಣಿ ಎಂಬ ಪಟ್ಟ . ಅವರ ಕವನ ಸಂಕಲನಗಳ ವಿಮರ್ಶೆಯನ್ನು ಬಹಳಷ್ಟು ಜನ ಬಹಳ ಚೆನ್ನಾಗಿ ಬರೆದಿದ್ದಾರೆ. ಬರಹಗಾರರು ಮೊದಲು ಇವರ ಬಗ್ಗೆ ಬರೆಯುವುದೆ ಆದರ್ಶ ಗ್ರಹಿಣಿಯೆಂದು, ಹಿರಿಯರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು, ಮನೆಯನ್ನು ನಿಭಾಯಿಸುವುದು, ಅವರ ಅತಿಥಿ ಸತ್ಕಾರ, ಆದರ್ಶನೀಯ ಅನುಕರಣೀಯ. ನಾವೇನಾದ್ರೂ ಸಾಧಿಸಬೇಕಾದರೆ ಮನೆಯನ್ನು ನಿರ್ಲಕ್ಷಿಸುವದು ಸರಿಯಲ್ಲ ಎನ್ನುವದು ಇವರಿಂದ ಅರಿಯುತ್ತೆವೆ.
ಇವರಿಗೆ ಪತಿಯ ಹಾಗೂ ತವರ ಮನೆ ಕಡೆಯಿಂದ ಸಂತೃಪ್ತ ಹಾಗೂ ಪ್ರೋತ್ಸಾಹಕರವಾದ ವಾತಾವರಣವಿದೆ, ತಮ್ಮೊಂದಿಗೆ ಬೇರೆಯವರನ್ನು ಬೆಳೆಸುವ ಗುಣವಿಷೇಶವನು ನಾನು ಇವರಲ್ಲಿ ಕಂಡುಕೊಂಡಿರುವೆನು, ಬೇರೆಯವರ ಕವನ ಸಂಕಲನಗಳನ್ನು ಇವರು ವಿಮರ್ಶಿಸಿದ್ದು ಓದಿದ್ದೇನೆ ಕಾವ್ಯಮಯವಾಗಿ ಮನಮುಟ್ಟುವಂತೆ ಬರೆಯುತ್ತಾರೆ. ಇದೆಲ್ಲ ಪೀಠಿಕೆ ಶ್ರೀಮತಿ ಪಾರ್ವತಿ ಬೂದೂರು ಅವರ ಕುರಿತು ಹೇಳಿದ್ದಕೆಂದರೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಇವರೆ ಸೂಕ್ತರೆಂದು ಇವರ ಕವನ ಸಂಕಲನದ ಕುರಿತು ಬರೆಯುವುದು ಸೂಕ್ತವೆಂದು ನಾನು ಆರಿಸಿಕೊಂಡಿದ್ದೆನೆ.

ಉಪನಿಷತ್ತಿನಲ್ಲಿ ಒಂದು ಮಾತು ಬರುತ್ತದೆ ಬ್ರಹ್ಮನಲ್ಲಿ ಅದ್ದಿದಂತೆ, ಅವನು ಬ್ರಹ್ಮನಂತೆ ಆಗುತ್ತಾನೆ ನಾವು ಯಾವುದನ್ನು ಹಿಡಿದು ಸಾಧನೆ ಮಾಡುತ್ತೇವೆ ನಾವು ಕೂಡ ಅದೇ ಆಗುತ್ತೇವೆ
ಹಾಗೆ ಇವರು ಕಾವ್ಯದಲ್ಲಿ, ಅದ್ದಿದಂತೆ ಇದ್ದಾರೆ ಇವರು ಸಾಧನೆ ಮಾಡಬೇಕಾಗಿಲ್ಲ ಇವರ ಮಾತೆ ಒಂದು ಕಾವ್ಯಮಯ ಇವರು ಯಾವುದೇ ಪ್ರಯತ್ನವನ್ನು ಮಾಡಬೇಕಾಗಿಲ್ಲ ತಾನಾಗಿ ಕಾವ್ಯ ಹರಿದು ಬರುತ್ತದೆ. ಪದಗಳ ಚಮತ್ಕಾರದ ಆಗರವಾಗಿದ್ದಾರೆ.
ಸಾಮಾನ್ಯವಾಗಿ ನಾನು ಯಾರನ್ನು ಹೊಗಳೊದಿಲ್ಲ ಅಂದರೆ ನನಗೆ ಹೊಗಳಲು ಬರುವುದಿಲ್ಲ ಗ್ರೂಪಿನಲ್ಲಿ ಆಗಿರಬಹುದು ಹೊರಗಡೆ ಆಗಿರಬಹುದು ಬಹಳಷ್ಟು ಮಂದಿ ಬಗ್ಗೆ ಅಭಿಮಾನ ಗೌರವ ಇದೆ ಆ ಗೌರವ ಅಭಿಮಾನ ನನ್ನ ಮನಸ್ಸಲ್ಲಿ ಇರುತ್ತದೆ ಅದನ್ನು ನಾನು ಮನಬಿಚ್ಚಿ ವ್ಯಕ್ತಪಡಿಸಲು ಬರುವುದಿಲ್ಲ
ಮುಖ:ತ ಅವರನ್ನು ಭೇಟಿಯಾಗಿದ್ದರಿಂದ ಅವರ ಬಗ್ಗೆ ಹೆಚ್ಚಿನ ಅಭಿಮಾನ ಉಂಟಾಯಿತು.
ಕವನ ಕವಿತೆಗಳು ಅಂದರೆ ನನಗೆ ಅಷ್ಟು ಆಸಕ್ತಿ ಇರಲಿಲ್ಲ. ಈ ಗ್ರೂಪ್ ಗೆ ಬಂದ ಮೇಲೆ. ಒಂದಿಷ್ಟು ಮಂದಿಯ ಕವನಗಳನ್ನು ಓದುತ್ತಿರುತ್ತೇನೆ. ಕವನಗಳು ಕವಿತೆಗಳು ಅಂದರೆ ಒಂದು ಸೀಮಿತ ವಿಷಯಗಳ ಬಗ್ಗೆ ಹೇಳಬಹುದು ಎಂದುಕೊಂಡಿದ್ದೆ, ಇಷ್ಟು ವಿಸ್ತಾರವಾಗಿ ಎಲ್ಲ ವಿಷಯಗಳ ಬಗ್ಗೆ ಹೇಳಬಹುದು ಎಂಬುದು ಇವರ ಕವಿತೆಗಳಿಂದ ಬೆರಗುಗೊಳಿಸಿತು, ಕಥೆಗಳು ಕಾದಂಬರಿಗಳು ಲೇಖನಗಳು ಮಾತ್ರ ಜೀವನದ ವಿಸ್ತಾರವನ್ನು ಹೇಳಬಹುದು ಎಂದುಕೊಂಡಿದ್ದ ನನಗೆ ಕವನಗಳು ಕೂಡ ವಿವಿಧ ಬಗೆಯ ಜೀವನದ ಬಗ್ಗೆ ಹೇಳಬಲ್ಲದು ಎಂಬುದು ಇವರ ಕವನಗಳಲಿ ಅರಿತು ಆಶ್ಚರ್ಯವಾಯಿತು.
ಹಾಡಿನ ಸ್ವರೂಪದಲ್ಲಿರುವ ಕೆ ಎಸ್ ನರಸಿಂಹಸ್ವಾಮಿ ಅವರ ಕವನಗಳು ಇಷ್ಟಪಟ್ಟಿರುವೆ
ದೀಪವು ನಿನ್ನದೇ, ರಾಯರು ಬಂದರು ಮಾವನ ಮನೆಗೆ, ಬಳೆಗಾರ ಚನ್ನಯ್ಯ ಹೀಗೆ, ಅಲ್ಲದೆ ಕುವೆಂಪು ಅವರ ಓ ನನ್ನ ಚೇತನ ಕವನದಂತೆ ಆ ಮೇರು ಬರಹಗಾರರ ಸಾಲುಗಳಂತೆ ಪಾರ್ವತಿ ಯವರ ಬರಹದಲಿ ಸಾಲುಗಳು ಗೋಚರಿಸುತ್ತದೆ.
ನನ್ನೊಳಗಿನ ನಾನು ಈ ಶೀರ್ಷಿಕೆಯೆ ಅದ್ಭುತವಾಗಿದೆ, ನಾನು ಯಾರು? ಈ ನನ್ನೊಳಗಿರುವ ನಾನು ಯಾರು!? ಇದರ ಬಗ್ಗೆ ಅವರೇ ಒಂದು ಕವನ ಬರೆದಿದ್ದಾರೆ,
ನನ್ನೊಳಗೆ ನಾನು ತಿಳಕೊಳ್ಳದೆ
ನಾನಾರೆಂದು ಅರಿಯದೆ
ನಡೆ ನಾಮವ ಹೇಳುತ ಉಳಕೊಂಡೆ
ಜನಿಸಿದ ಮ್ಯಾಕ ನಾನಾರೆಂದು ತಿಳಿಬೇಕ.
ಪಾಲಕರ ಹೆಸರು ಸೂಚಿಸಿದೆ ಮರೆಮಾಚಕ.
ಬೆನ್ನಿಂದೆ ನೆರಳಿನಂತೆ ಸಾವಿದೆ ಜನುಮಕ,
ಮಣ್ಣಲ್ಲೇ ಕಣವಾಗಿ ಸೇರುವ ತನಕ.

ಇನ್ನು ದೊಡ್ಡದಾದ ಕವನವಿದೆ ಒಟ್ಟು ಇದರ ಅರ್ಥ ಹೆಸರು ತಂದೆ ತಾಯಿ ಇಟ್ಟರು ನಾನಿಂಥ ಕೆಲಸ ಮಾಡುತ್ತೇನೆ ಇನ್ನು ನಾವು ಏನೇನ್ ಆಗಿದ್ದೇವೆ ಈ ಶರೀರಕ್ಕೆ ಸಂಬಂಧಪಟ್ಟಂತ ಎಲ್ಲಾ ಪರಿಚೆಯವನ್ನು ಹೇಳುತ್ತೇವೆ ಆ ಎಲ್ಲಾ ಅಂಶಗಳನ್ನು ತೆಗೆದಾಗ ಉಳಿವುದೇನು ನಾನಾರೆಂಬ ಪ್ರಶ್ನೆ.? ಅದುವೆ ನನ್ನೊಳಗಿನ ನಾನು.
ನನ್ನೊಳಗಿನ ನಾನಾಗಿ ಒಮ್ಮೆ ಬರಹದ ಓಘದಲಿ ಮಿಂದೆದ್ದಾಗ ಮೊದಲ ಕವನವೆ, ಮಹಿಳೆ
ಒಡಲೊಳ್ಹೊತ್ತು ಜನುಮವಿತ್ತು
ಉಸಿರಾದಳು ಕಸುವಿತ್ತು
ಉಸಿರುಗಟ್ಟಿಸಿ ಅಪಹರಿಸಿದೆ ತೃಷೆ ತೀರದೆ ಮತಿಗೆಟ್ಟು

ಹೆಣ್ಣಿನ ಬಗ್ಗೆ ಇರುವ ನಾನಾ ತರದ ಅಭಿಪ್ರಾಯಗಳನ್ನು ಇಲ್ಲಿ ತಿಳಿಸಿದ್ದಾರೆ, ಅಬಲೆ, ಮೀನಿನ ಹೆಜ್ಜೆ ಕಂಡು ಹಿಡಿಯಬಹುದು ಹೆಣ್ಣಿನ ಹೆಜ್ಜೆ ಕಂಡುಹಿಡಿಯಲಾಗದು. ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ. ಹೆಣ್ಣು ಮಾಯೆ. ಎಂದಿರುವದನು ವಿವರಿಸುತ್ತಲೆ,
ದೇವತೆಯ ಪದವಿ ಕೊಟ್ಟು ಚಂಚಲೆ ಎನ್ನುವ ಪದವನಿಟ್ಟು
ಪಲಾಯನದ ದ್ವಂದ್ವದೆಳಿಕೆ ಜೀವನ ಯಾನದಲ್ಲಿ ಬಂಧಿಸಿಟ್ಟು

ಇಂಥ ಎಲ್ಲಾ ಶಬ್ದಗಳನ್ನು ಹೆಣ್ಣಿನ ಬಗ್ಗೆ ಆಡುವದು ಸರ್ವೆಸಾಮಾನ್ಯ, ಹಳ್ಳಿಯಲ್ಲಿ ಅಂತು ಹೆಣ್ಣಿನ ಬುದ್ದಿ ಮೊಣಕಾಲು ಕೆಳಗೆ ಎಂದು ಬಹಳಷ್ಟು ಸಲ ಜರಿಯುವದನ್ನು ಕೇಳಿದ್ದೇವೆ,
ತುಂಬಾ ಚೆನ್ನಾಗಿ ಪ್ರಾಸ ಬದ್ಧವಾಗಿ ಪ್ರತಿ ಸಾಲುಗಳನ್ನು ಬರೆದಿದ್ದಾರೆ ಓದುತ್ತಿದ್ದರೆ ವಾಸ್ತವ ಲೋಕದ ಚಿತ್ರಣವೆ ಕಣ್ಮುಂದೆ ತೆರೆದಿಟ್ಟಂತೆ ಭಾಸವಾಗುತ್ತದೆ.

ಮನುಜಮತ
ಉತ್ತರೋತ್ತರಕೆ ಹಾರಿದೆ ಬಾನಿನೆಡೆಗೆ ಬಾವುಟ
ಹತ್ತಿರ ಹತ್ತಿರಕೆ ಸುಳಿದಿದೆ
ಗಡಿ ತಂಟೆಗಳ ಕಾಟ

ಜಾತಿ ಮತ ಪಂಥಗಳ ಗೋಡವೆಯಲ್ಲಿ ಏನೇನ್ ನಡೆಯುತ್ತಿದೆ ಅದರ ಆವಾಂತರಗಳ ಹಾವಳಿಗಳ ಕುರಿತಾಗಿ ಬೇಸರದಿಂದ ಬರೆದಿದ್ದಾರೆ.

ನಮ್ಮ ಸಂಸ್ಕೃತಿ
ಬೀಸುವುದು ಅದರ ಬಗ್ಗೆ ಎಷ್ಟು ಚೆನ್ನಾಗಿ ಶಬ್ದಗಳನ್ನು ಜೋಡಿಸಿದ್ದಾರೆ ನೋಡಿ

ಪಕ್ಕದಿ ಕುಳಿತ ಮಗುವಿನ ನಗುವೆ ಮರೆಸಿತು ಬೀಸುವ ಪ್ರಯಾಸ
ಜಾನಪದಗಳೆ ನೀಗುತಿದ್ದವು
ದೇಹಕ್ಕಾಗುವ ಆಯಾಸ
.

ಆಗಿನ ಅಡುಗೆ ಬಗ್ಗೆ ,ಅವರು ಹೇಗೆ ನೂರು ಕಾಲ ಬಾಳುತ್ತಿದ್ದರು ಎನ್ನುವ ಆಯುಷ್ಯದ ಬಗ್ಗೆ, ಆ ಜೀವನ ಶೈಲಿಯನ್ನು ನಾವು ಅಳವಡಿಸಿಕೊಳ್ಳೋಣ ಎನ್ನುತ್ತಾರೆ.

   ಬಂಗಾರದ ಬಾಲ್ಯ

ಹೆತ್ತವರ ಬದುಕೆಲ್ಲ ಮಕ್ಕಳಿಗೆ ಮೀಸಲು
ಕಲಿಸಿದರಾಗ ಭವದ ಭಯ ನೀಗಲು
ಯಯಾತಿ ಕೇಳಿದನಂತೆ ಮರಳಿ ಯವ್ವನ
ನಾ ಕೇಳುವೆ ಬಾಲ್ಯ ಮತ್ತೆ ಸಿಗುವದೇನ.

ಹಳ್ಳಿಯ ತಮ್ಮ ಬಾಲ್ಯವನ್ನು ಪ್ರಕೃತಿಯೊಂದಿಗೆ ಕಳೆದ ದಿನಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ
ಹಣ್ಣು ಕಾಯಿ ಕದ್ದು ತಿಂದದ್ದು ಕಾಮನ ಹಬ್ಬ, ಬುಗುರಿ ಆಟದ ಕುರಿತು ಸವಿಯನು ಹಂಚಿದ್ದಾರೆ

 ಮಾಸದ ಸವಿ

ಉತ್ತರ ಕರ್ನಾಟಕ ಭಾಷಾ ಸೊಗಡಿನಲ್ಲಿ ಅಡುಗೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ.

ಕೊಳವೆ ನೀರ ಬಳಿಸಿ
ಪಿಜ್ಜಾ, ಬರ್ಗರ್ ಅರಸಿ ತೇಗುವ ಮಂದಿಗೆ ತಿಳಿದೀತೇನ?
ಮಣ್ಣಿನ ಒಲೆ ಒಳಗ ಸುಟ್ಟ

ರೊಟ್ಟಿ ರುಚಿಯ ಸವಿಜೇನ.
ಹೀಗೆ ಇನ್ನು ಬಹಳಷ್ಟು ವಿಷಯ ಅದ್ಭುತವಾಗಿ ಹರವಿದ್ದಾರೆ.

*ಪರದೆ
ಶತಮಾನದಿಂದಲೂ ಹೆಣ್ಣೆಂದು ಜರಿದು ಹೋದಸಿದೆ ಪರದೆಯ
ನಿನ್ನಾಗೆಯೇ ಅವಳೊಳುಗು ಇದೆ ಜಗ ಸುತ್ತುವ ಕಾತರದ ಹೃದಯ
ಇದರ ಬಗ್ಗೆ ಇನ್ನೂ ತುಂಬಾ ಮನ ತಾಕುವಂತ ಸಾಲುಗಳು ಕಾಣಬಹುದು.

ಸಮಯ
ರೊಕ್ಕ ಕೊಟ್ಟರೆ ಸಾವಿರ ಗಡಿಯಾರ ಸಿಗುತಾವ ಜಗದಾಗ
ಒಂದೆ ನಿಮಿಷವು ಕೊಳ್ಳಲು ಬಾರದು ಕೋಟಿಯು ಸುರಿದಾ
ಗ.
ಸಮಯವು ಎಷ್ಟು ಮುಖ್ಯ ಮನುಷ್ಯನ ಸಾಧನೆಗೆ ಸಮಯ ಎಷ್ಟು ಅಮೂಲ್ಯ ಮಿಂಚಿ ಹೊದ ಗಳಿಗೆಯನು ಕೋಟಿ ಸುರಿದರು ಕೊಳ್ಳಲಾಗದೆಂದು ಅರ್ಥಪೂರ್ಣವಾಗಿ ವಿಡಂಭಿಸಿದ್ದಾರೆ.

ಅನ್ನದಾತ
ನಿತ್ಯ ದುಡಿಯುವ ಅನ್ನದಾತ
ಪ್ರಗತಿ ಕಾಣದ ದೀನನೀತ
ಸಬಲನಾಗದೆ ಸಾಲ ಕೇಳತ

ಸುಖದ ಮರಿಚಿಕೆಯ ರೈತ
ಕೃಷಿ ಮತ್ತು ಕೃಷಿಕರು ಎದುರಿಸುವ ಸಂಕಷ್ಟಗಳು
ತುಂಬಾ ವಿವರಣಾತ್ಮಕವಾಗಿ ವಿವರಿಸಿದ್ದಾರೆ.

ಬೆಳೆವ ಸಿರಿ
ನಸು ಬೆಳಗು ಮೂಡಿರಲು
ಏರು ದನಿಯಲ್ಲಿ ಜನಕ ಕೂಗಲು
ಏಳುವೆನು ತುಸು ದುಗುಡದಲಿ
ಬಳಪ ಹಿಡಿದೆನು ಕರದಲಿ

ಶಾಲೆಗೆ ಹೋಗುವ ಮಕ್ಕಳಿಗೆ ಬೆಳಿಗ್ಗೆ ಏಳುವುದು ಒಂದು ಹಿಂಸೆಯಾದರು ಆ ಬ್ರಾಹ್ಮಿ ಮಹೊರ್ತದಲಿ ಓದಿನ ಅಭ್ಯಾಸದ ಮಹತ್ವದಿಂದ ಲಭಿಸುವ ಏಳಿಗೆಗೆಯನ್ನು ಇನ್ನು ಬಹು ಸುಂದರವಾಗಿ ರಚಿಸಿದ್ದಾರೆ.

ಪುರಸ್ಕಾರ

ಕೋಪಕೆ ಬಲಿಯಾಗಿ
ಮನವಾಗದಿರಲಿ ವಿಕಾರ್
ನಿಗ್ರಹ ಭಾವ ಉದಯಿಸುವುದು
ಸೂಸ್ಪಷ್ಟ ಆಕಾರ

ಇಲ್ಲಿ ಇನ್ನೊಂದು ಗಮನಿಸಿದ್ದು ಏನೆಂದರೆ ದ್ವಿಪದಿ, ತ್ರಿಪದಿ, ಚೌಪದಿ, ಹಾಗೂ ಷಟ್ಪದಿಯಲ್ಲಿ ವಿಶೇಷ ವಿಭಿನ್ನ ವಿಶಿಷ್ಟವಾಗಿ ರಚನೆಗಳು ಮೂಡಿವೆ ಎಂದು ಹೇಳಬಹುದು.

ಅ- ಪವಿತ್ರ
ದೇವನೊಬ್ಬ ನಿರ್ಮಿಸಿದನೆ ಈ ಜಗ
ದೇವತೆಯರು ಇರಲಿಲ್ಲವೇ ಯುಗಯುಗ
ಮಂದಿರಕ್ಕೆ ನಿಷೇಧವಂತೆ ಮಹಿಳೆ ಅನ್ನುವ ಕಾರಣ
ನವಮಾಸ ಉದರದಿ ಹೊರಳಾಡಿ ಕಣ.
ಹೆಣ್ಣು ನಿಂದಿಸಿ ಜನಿಸಿದ ಉದ್ಭವ ಪುರುಷರೇ

ಹೇಗಾದಿರಿ ನೀವಿಂದು ಪವಿತ್ರ. ಸಂಸ್ಕೃತಿ ಸಂಪ್ರದಾಯ ನಾಮದ ಪರಿಧಿಗಿತ್ತು ಚುಚ್ಚುತಿದೆ ಎದೆಯೊಳು ವಿರೋದಿಸಿದ ಚಿತ್ರ. ಮುಟ್ಟು,ಮೈಲಿಗೆ ಅಪವಿತ್ರವೆಂದರೆ
ಕಟ್ಟಕಡೆಯಾದಿತು ಹೊಸಹುಟ್ಟು
ಮುಟ್ಟೆ, ಹುಟ್ಟಿಗೆ ಮೂಲ ಮುಟ್ಟ ಬೇಡವೆಂದರೆ ತೊಟ್ಟಂತ ಕೋಲ.

ಸ್ತ್ರಿ ಎಂದು ಬೇದಭಾವಗಳನು ಪಾಲಿಪರ, ಸಮಾನತೆಯನು ವಿರೋದಿಸುವ ಹೃದಯವನ್ನು ಬರಹದ ಮುಖೇನ ಈಟಿಯಿಂದ ತಿವಿಯುವದರ ಮೂಲಕ ಸಮ ಸಮಾಜದ ಸಾಕಾರಕ್ಕೆ ಸಮಾನ ಅಂಶಗಳೆಡೆಗೆ ಭಾವ ತುಡಿತವಿರುವ ಒಲವು ತೋರಿದ್ದಾರೆ.

        ಬಾಲ್ಯವಿವಾಹ

ಮದುವೆ ಅಂದರೆ ಏನೆಂದು ಅರಿಯದ ಹಸುಳೆಯು ಹಬ್ಬಕೆಂಬಂತೆ ಅವಳು ಹೊಸ ಸೀರೆಯುಟ್ಟು ನಲಿಯುತ್ತಾಳೆನ್ನುವದನು ಸಾರಿದ್ದಾರೆ
ಬದುಕಿನ ಹೊರೆಯ ಇಳಿಸಲೆಂದು
ಬಾಳ ತೇರ ಸಾಗಿಸಲೆಂದು
ಕರುಳ ಬಳ್ಳಿ ಸೇರಿಸಲೆಂದು
ಬಾಲೆ ಕನಸು ಕೊಯ್ದರು.

ಎಂಥಹ ಮಾರ್ಮಿಕವಾದ ಸಾಲಿದು ಓದುಗರೆದೆಯ ಕದವನು ಬಡಿದು ಅಂತರಾಳವನೆ ಕೆದಕುವ ಬಹಳಷ್ಟು ನುಡಿಗಳಿರುವದು ಕಾಣಬಹುದು.

ಸರಳತೆ

ನಾನೇ ತುಂಬಾ ಸರಳ ಹೇಳುವರು ಬಹಳ
ಒಳಹೊಕ್ಕು ಪರಿಶೀಲಿಸೆ
ಸಿಗುವವರು ಅತಿ ವಿರಳ.
ಮೋಹ ಮುಸುಕಿದ ಬುದ್ದಿ
ಸರ್ವನಾಶದ ಸಿದ್ಧಿ
ಅಳಿದರೆ ಬಾಲಿಶತೆಯು ಉಳಿಯುವದು ಸರಳತೆಯು
ಮೂಖವಾಡ ಧರಿಸಿ ಊಸರವಳ್ಳಿಗಳಂತೆ ಬಣ್ಣ ಬದಲಾಯಿಸುವರರ ಕುರಿತ ಅದ್ಭುತವಾದ ಕವಿತೆಯಿದು

:ಶತಕ
ಕುರಿ ಕಾಯುತ್ತಿರುವ ಅಮಾಯಕ
ವೃತ್ತಿಯ ಧರ್ಮದಲ್ಲಿ ಇವನೇ ನಾಯಕ
ಬೇಕಿಲ್ಲ ಊರ ಉಸಾಬರಿ ಅಭ್ಯುದಯಕ್ಕೆ ಮೆಯಿಸುವುದಷ್ಟೆ ಇವನ ಕಾಯಕ,
ಕುರುಬನ ಸಮಗ್ರ ಬದುಕನೆ ಅನಾವರಣ ಮಾಡಿರುವ ಕವಿತೆಯಿದು.

ಸುಳ್ಳಿನ ಪೇಚಾಟ
ಸ್ಕೂಲಲ್ಲಿ ಮಕ್ಕಳು ಶಾಲೆ ತಪ್ಪಿಸಲು ಏನೋ ಒಂದು ಸುಳ್ಳು ಹೇಳುತ್ತಾರೆ ಅಜ್ಜಿ ತೀರಿಕೊಂಡಿದ್ದಾಳೆ ಎಂದು. ಮೊಮ್ಮಗ ಅಜ್ಜಿ ಕೂಡಿ ಆಡುವಾಗ ಟೀಚರ್ ಕೈಯಲ್ಲಿ ಸಿಕ್ಕು ಪಜಿತಿಗೊಳಗಾಗುವ ವಿಷಯವನ್ನು ಕವನ ರೂಪದಲ್ಲಿ ಬರೆದಿದ್ದಾರೆ ಬಹು ಸುಂದರವಾಗಿ ಪ್ರಾಸದಿಂದ ಕೂಡಿದ ಇದೊಂದು ಲಗು ಹಾಸ್ಯದ ಬರಹವಾಗಿದೆ.

ಒಟ್ಟಿನಲ್ಲಿ ಈ ಪುಸ್ತಕದಲ್ಲಿ 82 ಕವನಗಳ ಸಂಕಲನವಿದೆ.
ಜೀವನದ ವಾಸ್ತವ ಮತ್ತು ತಪತೆಯಲ್ಲಿ ಅದ್ದಿದ ಮನಸ್ಸಿನಾಳದ ಈ ಕವಿತೆಗಳನ್ನು ಓದಿದಾಗ ಅನಿಸಿದ್ದು ಇಷ್ಟು. ತನ್ನಷ್ಟಕ್ಕೆ ತಾನೇ ಪಿಸುಮಾತಿನಲ್ಲಿ ಹೇಳಿಕೊಂಡ ಭಾವಗಳಿವು ಅದಕ್ಕೆಂದೆ”ನನ್ನೊಳಗಿನ ನಾನು”ಎಂಬ ಶೀರ್ಷಿಕೆ ಅನ್ವರ್ಥಕ ಈ ನುಡಿಗಳನ್ನು “ಮಹಿಪಾಲ ರೆಡ್ಡಿ ಮುನ್ನೂರ ರವರು ಸಿಂಗಾರದ ರಂಗೋಲಿ ಎಂದು ಉದ್ಘಾರವೆತ್ತಿರುವದು ನೋಡಿದರೆ ಕವಿತ್ರಿಯ ಬರಹದ ಗುಣಮಟ್ಟ ಗುರುತಿಸುತ್ತದೆ.
ಈಲ್ಲಿ ಕೆಲ ಕವನಗಳನ್ನು ಮಾತ್ರವೆ ಉಲ್ಲೇಖಿಸಿದ್ದೇನೆ ಎಲ್ಲವು ಆಸ್ಥೆಯಿಂದ ಓದಿಸಿಕೊಂಡು ಸಾಗುವ ಬರಹದಲ್ಲಿ ಕೌಶಲ್ಯ ಅಡಗಿಸಿರುವದು ತೋರಿಸುತ್ತದೆ. ಬರವಣಿಗೆಯ ಶೈಲಿ, ಶಬ್ಧ ಚಮತ್ಕಾರ ಓದಿಯೆ ಆನಂದಿಸಬೇಕು.
ಎಲ್ಲ ಬಗೆಯ ಸುಖದಿಂದ ಇರುವವರು ಬೇರೆ ಕಡೆಗೆ ಗಮನ ಹರಿಸುವುದಿಲ್ಲ. ಇವರು ಎಲ್ಲ ದೃಷ್ಟಿಯ ಸುಖದಿಂದ ಇದ್ದರೂ ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಗಮನಹರಿಸಿ ಬರೆಯುತ್ತಾರೆ.
ಪಾರ್ವತಿ ಮೇಡಂ ಅವರು ಹಾಗೇನೆ ರೈತರ ಸಂಕಟ ಹೆಣ್ಣು ಮಕ್ಕಳ ಜೀವನದ ಭವಣೆಯನ್ನು ಕಣ್ಣಾರೆ ಕಂಡು ಮರುಗಿ ಅದನ್ನು ಅಕ್ಷರ ರೂಪದಲ್ಲಿ ತಂದಿದ್ದಾರೆ.
ಬಡವರ ಬಗ್ಗೆ ಬಹಳ ಸಹಾನುಭೂತಿ ಮರುಕವಿರುವದು ಗೋಚರಿಸುತ್ತದೆ.
ಸಾಹಿತ್ಯದ ಹರಿವಿಗೆ ಮಿತಿಘಟ್ಟಲಾಗದು. ಹಲವು ಮುಖಜದಿಂದ ಪಸರಿಸುವ ಸಾಹಿತ್ಯ ಗಂಗೆ ಬತ್ತದೆ ನಿತ್ಯ ನೂತನವಾಗಿಹಳು. ಆ ನಿಟ್ಟಿನಲ್ಲಿ ಶ್ರೀಮತಿ ಪಾರ್ವತಿ. ಎಸ್ ಬೂದೂರು ರವರು “ನನ್ನೊಳಗಿನ ನಾನು” ವಿನ ಮೂಲಕ ಸಾರಸ್ವತ ಪ್ರವೇಶ ಪಡೆದು ಸಿರಿ ಹೆಚ್ಚಿಸಿ ಸಾಹಿತ್ಯದ ಹರಿವು ವೃದ್ಧಿಸಿದ್ದಾರೆ. ಸಗರನಾಡಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ (ಕೃಷಿ ಪ್ರಧಾನತೆಯನ್ನು ಎತ್ತಿ ತೋರುವ ಊರು ನೂರು ನಗಗಳ ಊರು ನಗನೂರು) ನಗನೂರು ಗ್ರಾಮದ ಆದರ್ಶ ಗ್ರಹಿಣಿಯಾಗಿ ತಮ್ಮ ಜೀವನಾನುಭವದೊಂದಿಗೆ ಕಟ್ಟಿಕೊಟ್ಟ ಇಲ್ಲಿಯ ಕವಿತೆಗಳು ವಿರಹ ಪ್ರೀತಿ ಪ್ರೇಮದೊಂದಿಗೆ ಸಾಮಾಜಿಕ ವ್ಯವಸ್ಥೆಯ ಸ್ಥಿತಿಗತಿಗಳ ಕುರಿತು ಸರಳ ಹಾಗೂ ಸುಂದರವಾಗಿ ತಿಳಿಯಾಗಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.
ಕೃತಿಯ ಶೀರ್ಷಿಕೆಯೆ ಹೇಳುವಂತೆ ಇಲ್ಲಿರುವ ಬಹುಪಾಲು ಕವಿತೆಗಳು ಓದುಗರನ್ನು ಆತ್ಮಾವಲೋಕನದೊಳಗೆ ಕೊಂಡೊಯುತ್ತವೆ. ಸಾಮಾಜಿಕ ಜಂಜಾಟಗಳನ್ನು, ಪ್ರವಾಹ, ಗುಳೆ , ಅನ್ನದಾತ, ಹಸಿವು, ಹೆತ್ತೊಡಲು, ಮಹಿಳೆ, ಮನುಜ ಮತ, ಹಿತ್ತಾಳೆ ಕಿವಿ, ಹೀಗೆ ಹಲವಾರು ಕವಿತೆಗಳಲ್ಲಿ ನೋವುಗಳ ಅನುಭವ ಕಾಳಜಿಯೊಂದಿಗೆ ದುಃಖ ನಿವಾರಣೆ ಹಾಗೂ ಸಾರ್ವತ್ರಿಕ ಸುಂದರತೆಗೆ ಹಲುಬುವ ಸಂವೇದನೆ ಹೊತ್ತುಕೊಂಡು ಬಂದಿರುವ ಹಲವು ವಿಧಗಳಲ್ಲಿ ನೊಂದವರಿಗೆ ಮಿಡಿಯುವ ಇಲ್ಲಿನ ಸಾಲುಗಳು ಪ್ರತಿಯೊಬ್ಬರನು ಇಷ್ಟಪಟ್ಟು ಓದಿಸಿಕೊಂಡು ಹೋಗುವ ಗಟ್ಟಿ ಪದಗಳಿಂದ ಮೂಡಿ ಬಂದ ದಿಟ್ಟ ಸಾಲುಗಳು ಹಾಗೂ ಲಯಬದ್ಧ ರಚನೆ ಶ್ರೀಮತಿ ಪಾರ್ವತಿ ಅವರ ಶಬ್ದ ಸಿರಿತನಕ್ಕೆ ಸಾಕ್ಷಿಕರಿಸುತ್ತವೆಂದು ಶ್ರೀಯುತ ವೀರಣ್ಣ ಕಲಿಕೇರಿ ಪತ್ರಕರ್ತ- ಸಾಹಿತಿಗಳು ಕೆಂಭಾವಿ ಇವರು ತುಂಬಾ ಚೆನ್ನಾಗಿ ಬೆನ್ನುಡಿಯಲ್ಲಿ ಹೇಳಿದ್ದಾರೆ
ನನ್ನ ಅಭಿಪ್ರಾಯ ಅದೇ ಆಗಿದ್ದರಿಂದ ಅದನ್ನೇ ಬರೆದೆ.
ಇಷ್ಟೇ ಅಲ್ಲದೆ ಹಸುಗಳು, ನಿತ್ಯದ ಪಾಲನೆ, ನಾವು ನಿತ್ಯಪಾಲಿಸಬೇಕಾದ ಜೀವನ ಕ್ರಮದ ಬಗ್ಗೆ, ಮನಗಾಣಿಸಿದ್ದು ಕಾಣಬಹುದು.

ಪ್ರೀತಿ,
ಮುಂಜಾವಿನ ಹೊಂಗಿರಣ ಸಿಂಚನಕೆ ಮೂಡಿದ ಉಲ್ಲಾಸವನ್ನು ಪ್ರೀತಿಯೆನಲೆ
ತಿಳಿನೀರ ಕೊಳದಿ ಅಲೆಯುಂಗರದ ಸೆಳೆತವನು ಪ್ರೀತಿ ಎನ್ನಲೇ
ಕವನದ ಮೊದಲ ಸಾಲು ಇದು
ಕೊನೆಯ ಸಾಲು ಹೀಗಿದೆ

ವಯೋವೃದ್ಧರು ಬದುಕು ನಿರ್ವಹಣೆಗೆ ಭಿಕ್ಷೆ ಎತ್ತುವುದನ್ನು ಜೀವನದ ಪ್ರೀತಿ ಎನ್ನಲೇ
ನೋಡಿ ಹೇಗಿದೆ ಪ್ರೀತಿಯನ್ನುವ ಕವನದ ಸಾಲುಗಳು.
ಹಾಸ್ಯಗವನ

ದಸರೆ ಹಬ್ಬಕ್ಕೆ ಅಳಿಯ ಬಂದು. ನಾಚಿಕೆಯ ಸ್ವಭಾವದಿಂದ ಬವಣೆ ಪಡುವ ವಿಷಯವಿದೆ.
ಜಂಗಮವಾಣಿ ಇದರಿಂದ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಬರೆದಿದ್ದಾರೆ
ಹಿತ್ತಾಳೆ ಕಿವಿ

ಚಾಡಿ ಮಾತಿಗೆ ಚೂರಾಗದಿರಲಿ ಎದೆ ನಂಬಿಕೆಯ ಗೂಡು ಸತ್ಯಾಸತ್ಯತೆ ಪರಾಮರ್ಶಿಸಿ ತಡೆಯಿರಿ ಆಹ್ವಾನದ ಕೇಡು,
ಶಿರಸ್ತ್ರಾಣವನು ತಲೆಗೆ ಹಾಕುವದರಿಂದಾದ ರಕ್ಷಣೆ ಬಗ್ಗೆ ತಿಳಿಸಿದ್ದಾರೆ
ತಿರುವು

ನೀ ಜೊತೆಯಾದೆ ಬಾಳಿಗದೆ ತಿರುವಿನ ಪಯಣ
ನನ್ನೆಲ್ಲ ಕನಸುಗಳಿಗೆ ನೀ ತಾನೆ ಕಾರಣ,
ಮನದೊಳಗೆ ಹುದುಗಿದ ಭಾವಗಳ ಚಿತ್ರಣ
ಒಮ್ಮೊಮ್ಮೆ ಮಾಡಿವೆ ಎದೆ ಯೋಳು ತಲ್ಲಣ
ಇದೇ ರೀತಿ ಐದು ನುಡಿಗಳ ಸುಂದರ ಕವಿತೆಯಿದಾಗಿದೆ

ನೀರವತೆ
ನನ್ನೆದೆಗೆ ತಾಕಿಸಿರುವೆ ಆರದ ಗಾಯ
ಮುಗುಳುನಗೆ ಬೀರು ಚಣದಲೆ ಮಾಯ
ಕನ್ನಡಿ

ಸಿಗಬಾರದೇಕೊಂದು ಹಸ್ತದಿ, ಮಾಯ ಕನ್ನಡಿ
ನೋಡುವೆ ಅದರಲ್ಲಿಳಿದು
ವಾಸ್ತವದ ಮುನ್ನುಡಿ

ಹೀಗೆ ಪ್ರತಿಯೊಂದು ಇವರ ಅನುಭವಕ್ಕೆ ತಾಕಿದ ವಿಷಯವನು ಕವನಗಳಾಗಿಸಿ ಓದುಗ ದೊರೆಯ ಮನೊಮಂದಿರದಲಿ ಸುಸ್ಪಷ್ಟವಾಗಿ ನೆಲೆಯಾಗುವಂತೆ ಇದು ನನ್ನದೆ ಕೂಗು ಎಂದು ಪ್ರತಿಧ್ವನಿಸುವ ಸುಂದರ ಸಾಲುಗಳಿರುವ ಕೃತಿಯು ಒಂದು ಅಮರವಾದ ಅನುಭೂತಿಯನು ಒದಗಿಸುವದು ಇವರಿಂದ ಮಗದಷ್ಟು ಕೃತಿಗಳು ಸಾಹಿತ್ಯ ಲೋಕವನು ಶ್ರಿಂಗರಿಸಲೆಂದು ಆಶಿಸುತ್ತ ವಿರಮಿಸುವೆ.



ಸರೋಜ ಗಡಾದ.



.

Leave a Reply

Back To Top