ಲಲಿತಾ ಕ್ಯಾಸನ್ನವರ ಕವಿತೆ-ಭಾವಗೀತೆ

ಕಾವ್ಯಸಂಗಾತಿ

ಭಾವಗೀತೆ

ಲಲಿತಾ ಕ್ಯಾಸನ್ನವರ

ಇಂಚರ..
ಮನದಿ ಮೂಡಿದ ಭಾವ ನಸುನಗೆ ಸೂಸಿ
ಮರುಕಳಿಸಿದೆ ಮತ್ತೆ ನೆನಪು ತವಕದಿ
ಬೆಚ್ಚನೆಯ ಅನುಭವ ಪಸರಿಸುತ
ಹೊಸ ಪಲ್ಲವಿಗೆ ಮುನ್ನುಡಿ ಬರೆಯುತ

ಭೋರೆಂದು ಸುರಿತಿಹ ಮಳೆಯಲ್ಲಿ
ಕೈಬೆರಳು ಬೆಸೆದು ಸವೆಸಿದ ದಾರಿ
ಬೆವೆತಿತ್ತು ದೇಹ ಮನಸಸಿಗೆ ಕಚಗುಳಿಯಿಟ್ಟು
ಮಧುರ ಮನ ಮೌನವಾಗಿದೆ

ದೂರದ ಪಯಣ‌ ಕಿರುನೋಟದಿ
ಓರಣವಾಗಿಸಿದೆ ನಲ್ಲ ತುಟಿಯಂಚಿನ
‌ಮೌನ ಮಾತಾಗಿಸಿದ ಜಾಣ ಆ‌ ಮುತ್ತು
ಈ ಮತ್ತು ಜೀವನಕೆ ಸಂಪತ್ತು ಕಾಣಾ

ಒಂದಿಷ್ಟು ಹುಡುಗಾಟ ಜಂಜಾಟದಿ
ಬಾಳಪಯಣ ನನ್ನ ನಿನ್ನ ನಮ್ಮೊಡನಾಟದಿ
ಅವರಿವರು ನಮ್ಮವರ ಜೊತೆ ಸಾಗಿದ
ದಾರಿ ನೆನದು ಮಧುರ ಮನ ಮಾತಾಡಿದೆ

ಅಂಬುಧಿಯಗಲ ಮನಸಲಿ ತುಡಿತವಿದೆ
ಹಿಡಿಯಷ್ಟು ಪ್ರೀತಿ ಹೃದಯದಲಿದೆ
ಬಾಳ ಓಡಕೆ ಬರದಿರಲಿ ಯಾವುದೇ ಆಪತ್ತು
ಮಧುರ ಮನ ಮೌನವಾಗೆ ಝೇಂಕರಿಸಲಿ ತಾನನ….


ಕಾವ್ಯಸಂಗಾತಿ

ಭಾವಗೀತೆ

ಲಲಿತಾ ಕ್ಯಾಸನ್ನವರ

Leave a Reply