ರೋಹಿಣಿ ಯಾದವಾಡ/ಗಜಲ್

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ಗಜಲ್

ಪ್ರೀತಿಯ ಬಾಳಿನಲ್ಲಿ ನನ್ನ ಜೊತೆಯಾಗಿರು ಸಾಕಿ
ಬದುಕಿನ ಸ್ಪೂರ್ತಿಗೆ ನನ್ನ ಜೀವಸೆಲೆಯಾಗಿರು ಸಾಕಿ

ನೋವು ನಲಿವಿನ ಪಯಣದಲ್ಲಿ ವಿರಹವೇ ಹೆಚ್ಚಿಹುದು
ಜೀವನೋತ್ಸಾಹ ಬಿತ್ತುವಲ್ಲಿ ನನ್ನ ಸಂಗಾತಿಯಾಗಿರು ಸಾಕಿ

ಬತ್ತಿ ಹೋಗದಂತೆ ಚಿಗುರಿ ಬೆಳೆಯಬೇಕಿದೆ ಇಲ್ಲಿ
ಬಾಳ ಪಯಣದುದ್ದಕ್ಕೂ ನನ್ನ ಸ್ಪೂರ್ತಿಯಾಗಿರು ಸಾಕಿ

ಅವಮಾನದ ಗಳಿಗೆಗಳನ್ನು ಮೆಟ್ಟಿ ನಿಲ್ಲಬೇಕಿದೆ ಜಗದಿ
ಸೋತೆ ಎನಿಸಿಕೊಂಡಾಗ ನನ್ನ ಶಕ್ತಿಯಾಗಿರು ಸಾಕಿ

ಅಪಶೃತಿಯು ಮೂಡದಂತೆ ಕಾಪಿಟ್ಟುಕೊಳ್ಳಬೇಕಿದೆ ಸಂಬಂಧ
ರೋಹಿಯ ಜೊತೆಗೂಡಿ ನಡೆಯುವಲ್ಲಿ ನನ್ನ ನೆರಳಾಗಿರು ಸಾಕಿ.


One thought on “ರೋಹಿಣಿ ಯಾದವಾಡ/ಗಜಲ್

  1. ಪ್ರೀತಿ ಕಾಳಜಿ ಭರಿತ ಸುಂದರ ಗಜಲ್ ಧನ್ಯವಾದ.. ಜಿ..

Leave a Reply

Back To Top