ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
ಹಸಿರು.

ಭೂತಾಯಿ ಬಯಲು
ಹಸಿರು ನಾಡಿನ ಒಡಲು
ಪ್ರತಿವರುಷ ಸಸಿ ನೆಡಲು
ಮರವಾದವು ಬೆಳೆದು
ಹೂವು ಕಾಯಿ ತಿನ್ನಲು
ಸಿಹಿ ಸಿಹಿ ಹಣ್ಣು
ಮುಡಿಯಲು
ಘಮ ಘಮ ಹೂವು
ಭೂತಾಯಿ ಬಯಲು
ಹಸಿರು ನಾಡಿನ ಒಡಲು
ಹಸಿರು ಜೀವದ ಉಸಿರು
ಬೆಳೆಸಿ ಗಿಡ ಮರ
ಉಳಿಸಿ ಕಾಡುನಾಡು
ಕೋಗಿಲೆಯ ಇಂಪಾದ ಹಾಡು
ಭೂತಾಯಿ ಬಯಲು
ಹಸಿರುನಾಡಿನ ಒಡಲು
ಕಾನನದಿ ಪಕ್ಷಿಗಳ ಗುಂಪು
ಬಾನನದಿ ಮೋಡದ ಸೋಂಪು
ಪಟಪಟನೆ ಉದುರುವ ಮಳೆಹನಿ
ಗಗನದಿ ಮೂಡಿತು ಕಾಮನಬಿಲ್ಲು
ಗರಿಗೆದರಿ ಕುಣಿದ ನಾಟ್ಯದ ನವಿಲು
ವಿಜಯಲಕ್ಷ್ಮಿ ಹಂಗರಗಿ

Excellent poem
ಒಳ್ಳೆಯ ಕವನ ವಿಜಯಲಕ್ಷ್ಮಿ
Very nice poem akka
Very Beautiful poem..
Superb
Very nice