-ಬಿ.ಟಿ.ನಾಯಕ್ –ಕ್ಲೈಮ್ಯಾಕ್ಸ್  ಪುರಾಣ

ಕಾವ್ಯ ಸಂಗಾತಿ

ಕ್ಲೈಮ್ಯಾಕ್ಸ್  ಪುರಾಣ

ಬಿ.ಟಿ.ನಾಯಕ್

ಅವರು ‘ಕ್ಲೈಮ್ಯಾಕ್ಸ್ ಕೃಷ್ಣಪ್ಪ’ ನವರೆಂದೇ ಪ್ರಸೀದ್ಧಿ. ಅವರು ತಮ್ಮ ಕೃತಿಗಳಲ್ಲಿ ಮೂಡಿಸುವ ‘ಕ್ಲೈಮ್ಯಾಕ್ಸ್’ ಬಹಳೇ ಜನರಿಗೆ ಇಷ್ಟವಾಗುತ್ತಿದ್ದವು. ಓದುಗರಿಗೆ ಕುತೂಹಲ ಮೂಡಿಸಲು ಕ್ಲೈಮ್ಯಾಕ್ಸನ್ನು ಅವರು ಕೊಂಚ ಮುಂದೂಡುತ್ತಿದ್ದರು. ಇದು ಅವರ ಪ್ರಬುದ್ಧ ಶೈಲಿಯೇ ಆಗಿತ್ತು. ಹಾಗಿರುವಾಗಿ, ಒಮ್ಮೆ ಕೈಯಲ್ಲಿ ಇದ್ದ ಒಂದು ಕಥೆಯು ಏಳೆಂಟು ಪುಟಗಳಾಗಿ, ಅದನ್ನು ಒಂದು ಹಂತಕ್ಕೆ ತರಬೇಕೆಂಬ ತವಕದಲ್ಲಿ ಇದ್ದರು. ಆದರೇ, ಅವರಿಗೆ ಮನೆಯಲ್ಲಿಯ ಕಿರಿ ಕಿರಿ ವಾತಾವರಣ ಮತ್ತು ಶಬ್ದ ಮಾಲಿನ್ಯದಿಂದ ವ್ಯತಿರಿಕ್ತತೆ ಇತ್ತು. ಈ ಪರಿಸ್ಥಿತಿ ಅವರ ಯೋಚನಾ ಲಹರಿಗೆ ಬಾಧೆ ಒಡ್ಡುತ್ತಿತ್ತು. ಹಾಗಾಗಿ, ಅವರು ಮನೆಯಿಂದ ಬೇರೆಡೆ ಹೋಗಿ ‘ಕ್ಲೈಮ್ಯಾಕ್ಸ’ ರಚಿಸಬೇಕೆಂದಿನಿಸಿದಾಗ, ಅದಕ್ಕೆ ತಯಾರಿ ಮಾಡಿಕೊಂಡು ಯಾರಿಗೂ ತಿಳಿಯದ ಹಾಗೆ ಹೊರಗೆ ಹೋಗಬೇಕೆಂದರು. ಆ ಪ್ರಕಾರ, ಒಂದು ಕೈ ಚೀಲದಲ್ಲಿ ಬಿಳಿ ಹಾಳೆಗಳು, ಪೆನ್ನು ಇತ್ಯಾದಿ ಮತ್ತು ಒಂದು ಉಣ್ಣೆಯ ಶಾಲು ಇಟ್ಟುಕೊಂಡು ತಯಾರಾದರು. ಈ ಕೈ ಚೀಲ ಸಹಿತ ಅವರು ಹೊರಗೆ ಹೋದರೇ, ಪೊಲೀಸರ ಹಾಗೆ ಮನೆಯವರು ಹಿಡಿದು ಕರೆ ತರುತ್ತಾರೆ. ಹಾಗಾಗಿ, ಅವರ ಕಣ್ತಪ್ಪಿಸಿ, ಕೈ ಚೀಲವನ್ನು ಇಂದೇ ಹೊರಕ್ಕೆ ಸಾಗಿಸಬೇಕೆಂದು ನಿರ್ಧರಿಸಿ ಸ್ನೇಹಿತ ರಂಗನ ಮನೆಯಲ್ಲಿ ಇಡುವುದೇ ಕ್ಷೇಮ ಏಂದಂದುಕೊಂಡು ಯಾರಿಗೂ ಕಾಣದ ಹಾಗೆ ಅಲ್ಲಿಗೆ ಹೊರಟು ಹೋದರು. ಅಲ್ಲಿ ರಂಗನ ಮನೆಯ ಕಾಂಪೌಂಡ ಗೋಡೆಗೆ ಹೊಂದಿಕೊಂಡು ಒಂದು ಶಿಥಿಲವಾದ ಕೊಠಡಿ ಇತ್ತು. ಅಲ್ಲಿ ಆ ಚೀಲವನ್ನು ಸೇರಿಸಿ ಆಮೇಲೆ ರಂಗನನ್ನು ಭೇಟಿ ಮಾಡಲು ಅಲ್ಲಿ ನಿಂತು ಕೂಗಿದರು. ರಂಗ ಹೊರಗೆ ಬರಲಿಲ್ಲ, ಆದರೇ, ಅವನ ತಮ್ಮ ಶೇಖರ ಹೊರಗೆ ಬಂದು ‘ಅಣ್ಣ ಮನೇಲಿ ಇಲ್ಲ, ಹೊರಗೆ ಹೋಗಿದ್ದಾನೆ’ ಎಂದನು. ‘ಸರಿ’ ಆಮೇಲೆ ಬರುತ್ತೇನೆ ಎಂದು ಏನೂ ಹೇಳದೇ ಅಲ್ಲಿಂದ ಕೃಷ್ಣಪ್ಪ ತಮ್ಮ ಮನೆ ಕಡೆ ಹೊರಟರು.

ಮಾರನೆಯ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಶಿಷ್ಟಾಚಾರ ಮುಗಿಸಿ ತಯಾರಾದಾಗ ಅವರ ಶ್ರೀಮತಿ;
‘ಏನ್ರೀ ಬೆಳ ಬೆಳಗ್ಗೆ ತಯಾರಾದಂತಿದೆ. ಎಲ್ಲಿಗೆ ಪಯಣ ?’ ಎಂದಳು.
‘ಅಯ್ಯೋ, ಅದೇನೇ ನಾನು ಹೊರಗೆ ಹೋಗಲೇ ಬಾರದೆ ?ಹಾಗೇನಾದರೂ ಇದ್ದರೇ ಖಾಲಿ ಕೈಯಲ್ಲಿ ಹೋಗುತ್ತಿದ್ದೇನೆಯೇ ?’
‘ತಿಂಡಿ ಏನೂ ತಿನ್ನಲಿಲ್ಲವಲ್ಲ ಅದಕ್ಕೇ ಕೇಳಿದೆ’ ಎಂದಳು
‘ನನ್ನ ಸ್ನೇಹಿತ ಕರೆದಿದ್ದಾನೆ, ಆದಷ್ಟು ಬೇಗ ಮರಳುತ್ತೇನೆ ‘
‘ಸ್ನೇಹಿತ ಅಂದ್ರೇ ರಂಗಣ್ಣನಾ ?’
‘ನೋಡು ಹೋಗುವಾಗ ಅಷ್ಟು ಪ್ರಶ್ನೆ ಕೇಳಬಾರದು’ ಎಂದು ಸರಸರನೆ ಹೊರಟೇ ಬಿಟ್ಟರು.
ಅವರು ಹೋಗುವದನ್ನು ಅವರ ಶ್ರೀಮತಿಯವರು ನೋಡುತ್ತಲೇ ನಿಂತರು. ಇವರೂ ಒಂದು ಬಾರಿ ತಿರುಗಿ ನೋಡಿದಾಗ ಶ್ರೀಮತಿ ಹೊಸ್ತಿಲಲ್ಲೇ ನಿಂತಿರುವುದು ಮತ್ತು ಇವರನ್ನೇ ಅವರು ನೋಡುವುದು ಗಮನಕ್ಕೆ ಬಂತು. ಆಗ ರಭಸದಿಂದ ಹೆಜ್ಜೆ ಹಾಕಿ ತಮ್ಮನ್ನು ಅವರಿಂದ ಮರೆ ಮಾಡಿಕೊಂಡರು.

ಆಮೇಲೆ, ರಂಗನ ಮನೆಗೆ ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು ! ರಂಗನ ಮನೆಗೆ ಬೀಗ ಹಾಕಲಾಗಿತ್ತು! ಬಹುಶಃ ಅವರೆಲ್ಲರೂ ಎಲ್ಲಿಗೋ ಹೋಗಿರಬೇಕು ಏಂದುಕೊಂಡು, ಅಲ್ಲಿಟ್ಟಿದ್ದ ಕೈ ಚೀಲವನ್ನು ತೆಗೆದುಕೊಂಡು ಹೊರಗೆ ಬಂದರು. ಆಗಲೇ, ಪರಿಚಯದ ಶ್ರೀಧರ ಎದುರಿಗೆ ಬಂದು;
‘ಏನು ಕೃಷ್ಣಪ್ಪನವರೇ ಎಲ್ಲಿಗೋ ಹೊರಟಂತಿದೆ ?’
‘ಹಾಂ..ಹೌದು..ಊರಿಗೆ ಹೊರಟಿದ್ದೇನೆ.’ ಎಂದರು ಕೃಷ್ಣಪ್ಪ.
‘ಹೌದಾ..ಹೋಗಿ ಬನ್ನಿ’ ಎಂದು ಹೇಳಿ ಆತ ಮುಂದೆ ಸಾಗಿದ.
ಆಗ ಕೃಷ್ಣಪ್ಪನವರು ಹೆಜ್ಜೆ ಹಾಕಿ ಸಾಗಿದರು. ಅವರ ಖಾಲಿ ಹೊಟ್ಟೆ ಚುರು ಗುಟ್ಟುತ್ತಿತ್ತು. ಹಾಗಾಗಿ, ಹೋಟೆಲೊಂದಕ್ಕೆ ಹೋಗಿ ದೋಸೆ ಮತ್ತು ಕಾಫಿ ಸವಿದು ಹೊರಗೆ ಬರುವಷ್ಟರಲ್ಲಿ ಅವರ ಆತ್ಮೀಯ ಸ್ನೇಹಿತರಾದ ಜವರಪ್ಪ ಮತ್ತು ತಿಮ್ಮಪ್ಪ ಕಂಡು ಮಾತಾಡಿಸಿದರು;
‘ಏನಯ್ಯ ಕೃಷ್ಣ..ಏಲ್ಲಿಗೋ ಹೊರಟಿರುವ ಹಾಗಿದೆ. ಯಾಕೆ ಒಬ್ನೇ ಹೊರಟಿದ್ದೀಯಾ ಏನ್ಕಥೆ ?’ ಏಂದು ಜವರಪ್ಪ ಕೇಳಿದಾಗ;
‘ಕಥೆ ಬರೆಯುವವನಿಗೆಯೇ ‘ಏನು ಕಥೆ’ ಎಂದು ನೀನು ಕೇಳುವದೇ ಒಂದು ಕಥೆಯಾಯ್ತಲ್ಲ. ?’ ತಿಮ್ಮಪ್ಪ ತಿವಿದ.
‘ಏನೂ ಇಲ್ರಯ್ಯ..ಏನೋ ಯಾರಿಗೂ ಗೊತ್ತಾಗದ ಹಾಗೆ ಹೋಗಬೇಕೆಂದೇ..ನೀವೇ ನನ್ನೆದುರು ಒಕ್ಕರಿಸಿ ಬಿಟ್ರೀ ‘ ಎಂದ ಕೃಷ್ಣಪ್ಪ.
‘ಸರಿ..ಸರಿ..ಹೋಗು ಅದೆಲ್ಲಿಗೆ ಹೋಗ್ತೀ..ಮನೆಯಲ್ಲಿ ಕ್ಷೇಮ ತಾನೇ.. ?’ ಜವರಪ್ಪ ಕೇಳಿದಾಗ;
‘ಅಂಥಹದು ಏನೂ ಇಲ್ಲ, ನನಗೆ ದಾರಿ ಬಿಡ್ರಪ್ಪ’ ಎಂದು ಅವರನ್ನು ಸರಿಸಿ ಹೊರಟು ಹೋದರು.
ಲೋ ಜವರಣ್ಣ ಏನೋ ಶಂಕೆ ಬರ್ತಿದೆಯಪ್ಪಾ, ಇವನೇನೋ ಮನೆಯಲ್ಲಿ ರಾದ್ಧಾಂತ ಮಾಡಿಕೊಂಡಾನೋ ಏನೋ ?’
”ನನಗೂ ಹಾಗೆಯೇ ಅನಿಸ್ತಿದೆ ತಿಮ್ಮಣ್ಣ’ ಎಂದು ಪರಸ್ಪರ ಸ್ನೇಹಿತರು ತಮ್ಮೊಳಗೆ ಮಾತಾಡಿಕೊಳ್ಳುತ್ತಾ ಅಲ್ಲಿಂದ ಹೊರಟರು. ಕೃಷ್ಣಪ್ಪ ಆ ಕಡೆ ಈ ಕಡೆ ನೋಡುತ್ತಾ ಸ್ವಲ್ಪ ದೂರ ಸಾಗಿ, ಸರಕಾರೀ ಶಾಲೆಯ ಹಿಂದಿನ ಸಣ್ಣ ದ್ವಾರದಿಂದ ಒಳಕ್ಕೆ ಹೋದರು. ಅವರ ಕಥೆಯ ಕ್ಲೈಮ್ಯಾಕ್ಸ್ ಅಲ್ಲಿಯೇ ಆಗಬೇಕೆಂದು ಕೃಷ್ಣಪ್ಪನವರು ಮೊದಲೇ ನಿರ್ಧರಿಸಿದ್ದರು. ಅಲ್ಲದೇ, ಅಂದು ಭಾನುವಾರ ಇದ್ದು ಯಾರ ಅಡೆ ತಡೆ ಇರುವುದಿಲ್ಲವೆಂಬ ಭರವಸೆ ಕೂಡ ಅವರಿಗಿತ್ತು. ಸೋಜಿಗವೆಂದರೇ, ಅಲ್ಲಿ ಏಕೋ ಏನೋ ಒಂದು ಕೊಠಡಿ ಬಾಗಿಲು ತೆರೆದಿತ್ತು. ಬಹುಶಃ ಯಾರೋ ಶಿಕ್ಷಕರು ಶಾಲೆಗೆ ಬಂದು ಕೆಲಸ ಮಾಡುತ್ತಿರಬಹುದು ಎಂದು ಅಂದು ಕೊಂಡು ಅಲ್ಲಿಗೆ ಹೆಜ್ಜೆ ಹಾಕಿದರು.

ಸ್ವಲ್ಪ ಮರೆಯಿಂದ ಒಳಗೆ ಇಣುಕಿ ನೋಡಿದಾಗ ಅಪರಿಚಿತರು ಇರುವಂತೆ ಕಾಣಿಸಿತು. ಅವರು ಒರಟು ಒರಟಾಗಿ ಮಾತಾಡುತ್ತಿದ್ದರು. ಆಮೇಲೆ, ಅವರು ಯಾರೂ ಶಿಕ್ಷಕ ಸಿಬ್ಬಂದಿಯಲ್ಲ ಎಂದು ಧೃಡವಾದಾಗ, ಧೈರ್ಯದಿಂದ ಅವರ ಮುಂದೆ ನಿಂತು ಕೃಷ್ಣಪ್ಪ ಹೀಗೆ ಕೇಳಿದರು;
‘ಯಾರೋ ನೀವು ?’ ಎನ್ನುವಷ್ಟರಲ್ಲಿ ಒಬ್ಬ ಓಡಿ ಬಂದು ಕೃಷ್ಣಪ್ಪನ ತಲೆಗೆ ಬಲವಾದ ಪೆಟ್ಟು ಕೊಟ್ಟ ! ಆ ಹೊಡೆತಕ್ಕೆ ಇವರು ಧೊಪ್ಪನೇ ಕೆಳಗೆ ಬಿದ್ದರು. ಅರ್ಧಂಭರ್ಧ ಎಚ್ಚರ ತಪ್ಪಿದಾಗ ಮೇಲೆ ಏಳದ ಹಾಗೆ ಆಯಿತು. ಇವರು ಕೆಳಗೆ ಬಿದ್ದ ಮೇಲೆ ಸರಿಯಾಗಿ ಗಮನಿಸದ ಆಗಂತುಕರು ದರೋಡೆ ಕೋರರಾಗಿದ್ದು ಹೀಗೆ ಮಾತಾಡಿ ಕೊಳ್ಳುತ್ತಿದ್ದುದು ಕೃಷ್ಣಪ್ಪನವರಿಗೆ ಕೇಳಿಸಿತು;
‘ಏಯ್…. ಸೀನ ನಾವು ಮೂವರೂ ಸರಿಯಾಗಿ ಹಂಚಿ ಕೊಂಡಿದ್ದೇವೆ.. ಇನ್ನು ಏನೂ ತಕರಾರು ಬೇಡ.’
‘ಇಲ್ಲ..ನನಗೆ ಸರಿಯಾಗಿ ಸಿಕ್ಕಿಲ್ಲ..ಪರಮ..ಇನ್ನೂ ಒಂದು ಒಡವೆ ಕೊಟ್ಟು ಬಿಡು, ಆಗ ಸರಿ ಹೋಗುತ್ತದೆ ‘ ಏಂದ ಸೀನ.
‘ಸಾಧ್ಯವಿಲ್ಲ..ನನ್ನ ಶ್ರಮ ಇದರಲ್ಲಿ ಜಾಸ್ತಿ ಇದೆ..ಹಾಗಾಗಿ ಒಂದು ಒಡವೆ ನಾನೇ ಇಟ್ಟು ಕೊಳ್ಳುತ್ತೇನೆ’ ಎಂದ ಪರಮ. ಆಗ ಮೂರನೆಯವ;
‘ನೀವಿಬ್ರೂ ನನಗೆ ಮೋಸ ಮಾಡುತ್ತಿದ್ದಿರಿ..ಅದು ಸರಿಯಲ್ಲ. ನನಗೆ ಬರೀ ಎರಡು ಒಡವೆ ಕೊಟ್ಟು ನೀವಿಬ್ಬರೂ ಕಚ್ಚಾಡುವ ನಾಟಕ ಆಡುತ್ತಿದ್ದೀರಿ’. ನೀವಿಬ್ಬರೂ ತಲಾ ಒಂದು ಒಡವೆ ನನಗೆ ಕೊಟ್ಟು ಬಿಡಿ, ಆಮೇಲೆ ಎಲ್ಲರೂ ಹೋಗಿ ಬಿಡೋಣ’
‘ಅದೇನ್ಲಾ ಹುಸೇನಿ..ನೀನೇನ್ ಅಂಥಹ ಘನಂದಾರಿ ಕೆಲಸ ಮಾಡಿದ್ದೀಯಾ ? ನೀನು ಬಂದದ್ದು ನಮಗೆ ಸಹಾಯ ಮಾಡಲಿಕ್ಕೆ. ನಿನ್ನ ಪಾಲು ಅಷ್ಟೇ ಮುಚ್ಕೊಂಡಿರು ‘ ಎಂದ ಪರಮ.
‘ಅದೆಲ್ಲಾ ಆಗೋದಿಲ್ಲ.. ನಮ್ದೇಲ್ಲಾ ಸಮಪಾಲು ಇರಲಿ.’ ಎಂದು ಒತ್ತಡ ತಂದ ಹುಸೇನಿಗೆ ಪರಮ ಅನಿವಾರ್ಯವಾಗಿ ಒಂದು ಒಡವೆ ಕೊಟ್ಟ.
ಇವೆಲ್ಲಾ ಸಂಭಾಷಣೆ ಕೃಷ್ಣಪ್ಪನವರಿಗೆ ಕೇಳುತ್ತಿತ್ತು, ಆದರೇ, ಅವರು ಎದ್ದು ನಿಂತರೆ ತಮ್ಮನ್ನು ಮುಗಿಸಿಯೇ ಬಿಡುತ್ತಾರೆ, ಎಂದು ಹಾಗೆಯೇ ಎಚ್ಚರ ತಪ್ಪಿದವರ ಹಾಗೆ ಮಲಗಿದರು.
ಆ ಮೂವರು ಅಲ್ಲಿಂದ ಕದಲು ಯತ್ನಿಸಿದಾಗ;
‘ಅವನಿಗೆ ಎಚ್ಚರ ಇದೆಯೇನೋ ನೋಡೋ..ನಾವು ಇಲ್ಲಿಂದ ಹೋಗೋಣ’ ಎಂದೊಬ್ಬ.
‘ಇಲ್ಲ. ಅವನಿಗೆ ಚೆನ್ನಾಗಿಯೇ ಏಟು ಕೊಟ್ಟಿದ್ದೀನಿ. ಆಯಿತು ನಡೆಯಿರಿ. ಇಲ್ಲಿಂದ ಕರಗಾನಳ್ಳಿಗೆ ಹೋಗಿ ಅಲ್ಲಿ ಎಲ್ಲಿಯಾದರೂ ನಮ್ಮನ್ನು ನಾವು ಅಡಗಿಸಿಕೊಳ್ಳೋಣ.’ ಎಂದು ಮಾತಾಡಿಕೊಂಡು ಶಾಲೆಯ ಬಾಗಿಲು ಮುಚ್ಚಿಕೊಂಡು ಹೊರಟು ಹೋದರು. ಆಮೇಲೆ ಕೃಷ್ಣಪ್ಪ ಎದ್ದು ನಿಂತು ಬಾಗಿಲು ಅಲುಗಾಡಿಸಿದಾಗ ಹೊರಗಿನಿಂದ ಕೊಂಡಿ ಹಾಕಿರುವದು ತಿಳಿಯಿತು. ಅವರು ಕಿಟಕಿ ಬಾಗಿಲು ತೆರೆದು, ಯಾರಾದರೂ ಆ ಕಡೆಗೆ ಬರುವರೇನೋ ಎಂದು ಕೃಷ್ಣಪ್ಪ ಕಾಯುತ್ತಾ ಇದ್ದರು.
ಯಾರೋ ಒಬ್ಬ ದೂರದಲ್ಲಿ ದೇವರಂತೆ ಕಾಣಿಸಿಕೊಂಡ. ಆಗ ಕೃಷ್ಣಪ್ಪ ಸಹಾಯಕ್ಕಾಗಿ ಕೂಗಿದರು. ಆದರೇ, ಅದು ಆತನಿಗೆ ಕೇಳಿಸಿತೋ ಇಲ್ಲವೋ ಆತ ಹಾಗೆಯೇ ಹೋಗಿ ಬಿಟ್ಟ. ಆಗ ಮತ್ತೇ ಬೇರೊಬ್ಬನಿಗಾಗಿ ಕಾಯ ತೊಡಗಿದರು.
ಅದೇನು ಎರಡು ಗಂಟೆ ಕಳೆದರೂ ಯಾರೂ ಆ ಕಡೆ ಸುಳಿಯಲಿಲ್ಲ. ಇನ್ನೇನು ಕೃಷ್ಣಪ್ಪ ನಿರಾಶೆಯಾಗುವಷ್ಟರಲ್ಲಿ, ಒಬ್ಬ ಆಕಳನ್ನು ಹೊಡೆದುಕೊಂಡು ಹೋಗುತ್ತಿದ್ದ. ಆತನ ಹೊಡೆತ ತಾಳದೇ ಆಕಳು ಶಾಲೆಯ ಕಾಂಪೌಂಡಿನ ಹತ್ತಿರ ಬಂದಾಗ, ಹಿಂದೆಯೇ ಆ ಹುಡುಗನೂ ಓಡಿ ಬಂದ. ಆಗ ಅವನು ಹತ್ತಿರದಲ್ಲೇ ಇದ್ದುದರಿಂದ, ಕೃಷ್ಣಪ್ಪನವರ ಕೂಗು ಕೇಳಿಸಿತು. ಆ ಹುಡುಗನ ಗಮನ ಕಿಟಕಿಯ ಕಡೆಗೆ ಕೇಂದ್ರೀಕೃತವಾದಾಗ, ಕೃಷ್ಣಪ್ಪ ಕಿಟಕಿಯಿಂದ ಹೊರಗೆ ತಮ್ಮ ಕೈ ಅಲುಗಾಡಿಸುವದನ್ನು ನೋಡಿ, ಕಾಂಪೌಂಡ್ ಹಾರಿ ಓಡಿ ಬಂದು ಕೇಳಿದ;
‘ಏನು ಸ್ವಾಮೇರಾ ಒಳಗೆ ತಗಲು ಹಾಕಿಕೊಂಡಿರಾ ?’
‘ಹೌದಪ್ಪ, ನನಗೆ ಏನೋ ಗ್ರಾಚಾರ ಕಾದಿದೆ. ಆ ಕಡೆ ಹೋಗಿ ಬಾಗಿಲ ಕೊಂಡಿ ಸರಿಸು’ ಎಂದರು. ಆ ಹುಡುಗ ಬಾಗಿಲು ತೆರೆದು ಕೃಷ್ಣಪ್ಪನವರಿಗೆ ಬಂಧನದಿಂದ ಮುಕ್ತಿ ಮಾಡಿದ.
ತಕ್ಷಣವೇ, ಕೃಷ್ಣಪ್ಪ ಪೊಲೀಸ್ ಕಚೇರಿಗೆ ಹೊರಟರು. ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ದುಃಖಾನುಭವವನ್ನು ಹೇಳಿಕೊಂಡರು. ಆಗ ಪೊಲೀಸರು;
‘ಕೃಷ್ಣಪ್ಪ ಸರ್ ಇಂದು ಭಾನುವಾರ ಅಲ್ವೇ ? ನೀವು ಶಾಲೆಗೇ ಯಾಕೆ ಹೋಗಿದ್ದೀರಿ ?ನಿಮಗೆ ಅವರ ಬಗ್ಗೆ ಅನುಮಾನ ಮೊದಲೇ ಬಂದಿತ್ತಾ ?’ ಎಂದರು.
‘ಅಲ್ಲಿ ಎಲ್ಲೊ ಒಂದು ಮೂಲೆಯಲ್ಲಿ ಕುಳಿತು ನನ್ನ ಕಥೆಯ ‘ಕ್ಲೈಮ್ಯಾಕ್ಸ್’ ಬರೆಯಬೇಕೆಂದಿದ್ದೆ. ಆದರೆ, ಆ ಕಳ್ಳರೇ ನನ್ನ ‘ಕ್ಲೈಮ್ಯಾಕ್ಸ್’ ಬರೆದರು’ ಎಂದಾಗ;
‘ಅವರ ಬಗ್ಗೆ ನಿಮಗೇನಾದರೂ ಸುಳಿವು ಸಿಕ್ಕಿತಾ ?’ ಎಂದು ಅಧಿಕಾರಿ ಕೇಳಿದಾಗ;
‘ಸಾಹೇಬ್ರೇ, ಅವರೇ ಹೇಳಿದ ಪ್ರಕಾರ ಅವರ ಹೆಸರುಗಳು ಸೀನ, ಪರಮ ಮತ್ತು ಹುಸೇನಿ’ ಮತ್ತು ಅವರು ದರೋಡೆ ಮಾಡಿದ್ದ ಒಡವೆಗಳನ್ನು ಹಂಚಿಕೊಳ್ಳಲು ಭಾನುವಾರವಿದ್ದುದರಿಂದ ಶಾಲೆಯ ಒಳಗೆ ಆಶ್ರಯ ಪಡೆದಿದ್ದರು. ಅವರಲ್ಲೊಬ್ಬ ಹೇಳಿದ ಹಾಗೆ, ಅವರು ಕರಗಾನಳ್ಳಿಗೆ ಪರಾರಿಯಾಗಿದ್ದಾರೆ. ನೀವು ಆದಷ್ಟು ಬೇಗ ಅಲ್ಲಿಗೆ ಹೋದರೆ ಅವರು ಸಿಕ್ಕೇ ಸಿಗುತ್ತಾರೆ’. ಏಂದರು.
‘ಆಯಿತು ಬಿಡಿ, ಇಷ್ಟು ಸುಳಿವು ಕೊಟ್ಟಿದ್ದೀರಿ, ಅವರು ಯಾರೆಂದು ನಮಗೆ ಈಗ ತಿಳಿಯಿತು. ಇಂದೇ ಅವರನ್ನು ಮಾಲು ಸಹಿತ ಎಳೆದುಕೊಂಡು ಬರುತ್ತೇವೆ.’ ಎಂದು ಸಾಹೇಬ್ರು ನಾಲ್ಕು ಜನರ ಒಂದು ತಂಡ ಮಾಡಿ ಹಳ್ಳಿಗೆ ಕಳಿಸಿ ಕೊಟ್ಟರು.
‘ಇನ್ಸ್ಪೆಕ್ಟರ್ ಸಾಹೇಬ್ರೇ ಈಗ ನಾನು ಮನೆಗೆ ಹೋಗಬಹುದೇ ? ಏಂದಾಗ;
‘ಇಲ್ಲೇ ಇರಿ ಸಾರ್, ನಿಮಗೆ ಏಲ್ಲಾ ವ್ಯವಸ್ಥೆ ಮಾಡಿ ಕೊಡುತ್ತೇವೆ. ನೀವು ಈ ರಾತ್ರಿ ಇಲ್ಲಿಯೇ ಇದ್ದು ನಿಮ್ಮ ಕಥೆಯ ಕ್ಲೈಮ್ಯಾಕ್ಸ್ ಮುಗಿಸಿರಿ, ನಾವು ಆ ದರೋಡೆಕೋರರ ಕ್ಲೈಮ್ಯಾಕ್ಸ್ ಮುಗಿಸುತ್ತೇವೆ.’ ಎಂದರು.
‘ಆಯಿತು ಸಾರ್ ಹಾಗೆಯೇ ಆಗಲಿ’ ಎಂದು ಅಲ್ಲಿಯೇ ಉಳಿದುಕೊಂಡರು.
ಅತ್ತ ಅವರ ಮನೆಯವರು ರಂಗಣ್ಣನ ಮನೆ, ಜವರಣ್ಣ ಮತ್ತು ತಿಮ್ಮಣ್ಣನ ಮನೆ ಕಡೆಗೆಲ್ಲಾ ಹೋಗಿ ವಿಚಾರಿಸಿದಾಗ ಏನೂ ತಿಳಿಯದೇ ಇದ್ದಾಗ, ಯಾರೋ ‘ಕೃಷ್ಣಪ್ಪನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದಾಗ ಗಾಭರಿಗೊಂಡು ಅವರ ಕುಟುಂಬದವರೆಲ್ಲ ಮತ್ತು ಸ್ನೇಹಿತರಾದ ಜವರಣ್ಣ, ತಿಮ್ಮಣ್ಣ ಕೂಡಾ ಪೋಲಿಸ್ ಕಛೇರಿಗೆ ಬಂದರು.
‘ಅಯ್ಯೋ ನೀವೆಲ್ಲಾ ಯಾಕೆ ಬಂದಿರೀ ?’ ನನಗೆ ಕ್ಲೈಮ್ಯಾಕ್ಸ್ ಮುನ್ನೋಟ ಹೊಳೆಯಲು ಇದು ಪ್ರಾಶಸ್ತ್ಯ ಜಾಗ. ನಾನು ಇಲ್ಲಿ ಇದ್ದು ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿ ಅವರುಗಳ ಮನವೊಲಿಸಿ ಕಳಿಸಿ ಕೊಟ್ಟರು.
ಆ ರಾತ್ರಿಯೇ ಒಂದು ಉತ್ಕೃಷ್ಟವಾದ ‘ಕ್ಲೈಮ್ಯಾಕ್ಸ್ ಸೃಷ್ಟಿಸಿ ‘ ಕಥೆಗೆ ಮುಕ್ತಾಯ ಹಾಡಿದ್ದರು. ಅದೇ ವೇಳೆಗೆ ಆ ಮೂವರು ಧರೋಡೆಕೋರರನ್ನು ಮಾಲು ಸಹಿತ ಪೊಲೀಸರು ಕರೆ ತಂದು ಕ್ಲೈಮ್ಯಾಕ್ಸ್ ಹಾಡಿದ್ದರು. ಹಾಗಾಗಿ, ಅತ್ತ ಪೊಲೀಸರು ಖುಷಿ ಗೊಂಡರು ಇತ್ತ ಕೃಷ್ಣಪ್ಪನವರೂ ಕೂಡಾ
ಆನಂದಿತರಾದರು.

Leave a Reply

Back To Top