ಕಾವ್ಯ ಸಂಗಾತಿ
ಬದುಕ ರಾಗ
ಹನಿಬಿಂದು
ರಾಗ ತಾಳ ಲಯವು ಸೇರಿ
ಸಂಗೀತವಾದ ಹಾಗೆ ಬಾಳು
ನೋವು ನಲಿವು ಜೊತೆಗೆ ಕೂಡಿ
ಬದುಕು ಪಕ್ಕ ದಿನವು ತಾಳು..
ಮೋಸ ಸುಳ್ಳು ಬೇಡ ಎಲ್ಲೂ
ಭಾವಭರಿತ ಸತ್ಯ ಇಲ್ಲೂ
ಭಾರ ಜಗದ ದುಃಖ ಗಾಯ
ಸಾರಬೇಕು ಸರ್ವ ನಗೆಯ
ಉಪ್ಪು ಹುಳಿ ಖಾರ ತಿಂದು
ಉಸಿರಾಡೋ ಗಾಳಿ ಬಿಂದು
ನುಡಿವ ನುಡಿಯು ಶುದ್ಧವಾಗಿ
ಬರೆವ ಸಾಲು ಕಾವ್ಯವಾಗಿ..