ಟಿ.ದಾದಾಪೀರ್ ಕವಿತೆ-ಮಾಗಿ ಚಳಿಯ moodu..

ಕಾವ್ಯ ಸಂಗಾತಿ

ಮಾಗಿ ಚಳಿಯ moodu..

ಟಿ.ದಾದಾಪೀರ್

1)ನಿನ್ನ ಅಪ್ಪುಗೆಯಲ್ಲಿ
ಮೊದಲಿನ
ನಶೆ ಇಲ್ಲದಕ್ಕೇನೋ
ಮಾಗಿಯ ಚಳಿ
ಮೊದಲಿನಂತಿಲ್ಲ
ಕತ್ತರಿಸುತ್ತಿದೆ
ದೇಹವನ್ನೆಲ್ಲ

2) ನನಗೆ ಸೋಕುವ
ಮಾಗಿಯ ಗಾಳಿ
ನಿನಗೆ ತಾಕದೇನು ?
ಹತ್ತಿರ ಬಂದು ಬಿಡು
ಚಳಿಗಷ್ಟು
ಘನತೆ ಸಿಗಲಿ

3) ಚಳಿ ಎದುರಿಸುವ
ಅಸ್ತ್ರ ಹುಡುಕುತ್ತಿದ್ದೆನೆ
ಜೊತೆಯಾಗು
ಮಾಗಿಯ ಚಳಿಗೆ
ಒಂದಿಷ್ಟು
ಚಳಿಯ ಬಿಡಿಸೋಣ

4) ನಿನ್ನ ಚಾಳಿ ಬಿಟ್ಟಿದ್ದೆ !
ದೂರ ಇರಲು
ಮಾಗಿಯ ಚಳಿ ಬಿಡದು ;
ನಾವೇನು
ಎರಡು ದೇಶಗಳಲ್ಲ
ದೂರ ದೂರ ನಿಲ್ಲಲು
‘ಎರಡು ದೇಹಗಳಷ್ಟೆ!’

5) ನಮ್ಮಿಬ್ಬರ ನಡುವಿನ
ಶೀತಲ ಸಮರ
ಮುಗಿಯಲು
ಶೃಂಗ ಸಭೆ ( summit meating)
ನಡೆಯಬೇಕಿಲ್ಲ
ಮಾಗಿಯ ಚಳಿ ಸಾಕು

6) ಉಲ್ಲನ್ ಸ್ವೆಟರ್, ಉಣ್ಣೆ ರಗ್ಗು
ಮಾರಾಟದ
ಭರಾಟೆ
ಮಾಕೇ೯ಟಿನಲ್ಲಿ ;
ನೀನೊಮ್ಮೆ
ರೌಂಡ್ ಹಾಕಿ ಬಾ
ಊರೋಳಗೆ
ದುಡ್ಡಿಲ್ಲದವರು
ಚಳಿಯಲಿ
ಸ್ವಲ್ಪ
ಬೆಚ್ಚಾಗಾಗಲಿ !

7 ಮೂಡಣ ದಿಕ್ಕಿನಿಂದ
ನಿನ್ನೋಂದಿಗೆ
ಬೀಸುವ
ಮೂಡು‌ ಗಾಳಿಯೂ
ಒಂತರಹ
ನಿನ್ನಂತೆಯೆ
Moody…
ರಾತ್ರಿ ಕೊರೆಯುತ್ತೆ
ಹಗಲಲ್ಲಿ ಮರೆಯುತ್ತೆ


2 thoughts on “ಟಿ.ದಾದಾಪೀರ್ ಕವಿತೆ-ಮಾಗಿ ಚಳಿಯ moodu..

Leave a Reply

Back To Top