ಕಾವ್ಯ ಸಂಗಾತಿ
ಮಠಗಳು
ಡಾ ಶಶಿಕಾಂತ ಪಟ್ಟಣ


ಮಠಗಳು ಇಂದು
ಮಠಗಳಾಗಿ ಉಳಿದಿಲ್ಲ
ಮಠಗಳು ವಾಣಿಜ್ಯ ಮಳಿಗೆ
ಬಸವ ಪ್ರಜ್ಞೆ ಮರೆತ
ರುದ್ರಾಕ್ಷಿ ಫೋಟೋ
ಲಿಂಗ ವಿಭೂತಿ ಮಾರುಕಟ್ಟೆ
ಕಾಲೇಜು ಕಲ್ಯಾಣ ಮಂಟಪ
ಅಂಗಡಿ ಮಳಿಗೆ
ಸೇವೆ ಬಿಟ್ಟ ಸುಲಿಗೆ ಕೇಂದ್ರ
ಮಠಗಳಲ್ಲಿ ಯಜ್ಞ ವೇದ ಪಾಠ
ತಿಂಗಳ ಪ್ರವಚನ ಪುರಾಣ
ಅಂದು ಹೋಳಿಗೆ ಹುಗ್ಗಿ
ಮಠಗಳಿಗೆ ಬೇಕು ಹಣ ಆಸ್ತಿ
ಬೇಕಿಲ್ಲ ನಿಷ್ಠ ಭಕ್ತರು
ಜಾತ್ರೆ ಉತ್ಸವ ಮೇಳ ಗಾಯನ
ಮೈಕ್ ತಬಲಾ ಮಂಟಪ ಕಟ್ಟಲು
ತಟ್ಟೆ ಎತ್ತಲು ಗುಲಾಮರು
ವರ್ಷಕ್ಕೊಮ್ಮೆ ಇವರಿಗೆ ಶಾಲು
ಮಠಗಳಲ್ಲಿ ಪೊಕ್ಸೊ ಪ್ರಕರಣ
ಸ್ವಾಮಿ ಜಗದ್ಗುರು ಜೈಲು ಪಾಲು
ಟಿವಿ ಮಧ್ಯಮದಲ್ಲಿ ಸುದ್ಧಿ ಸುಗ್ಗಿ
ಪೋಲೀಸರ ಸರ್ಪಕಾವಲು
ಪೀಠಕ್ಕೆ ನೇಮಕ ಗೊಂದಲ ಗದ್ದಲ
ಸರ್ವೇ ಜನ ಸುಖಿನೋ ಭವಂತು