ದೇವರಾಜ್ ಹುಣಸಿಕಟ್ಟಿ-ಗಜಲ್

ಕಾವ್ಯ ಸಂಗಾತಿ

ಗಜಲ್

ದೇವರಾಜ್ ಹುಣಸಿಕಟ್ಟಿ

ಗುಲಾಬಿ ತೋರಿಸಿ ಮುಳ್ಳು ಹಾಸೋದ ನಿಲ್ಲಿಸಿ
ಸೂರ್ಯನ ತೋರಿಸಿ ಕೆಂಡ ಉಗಳೋದ ನಿಲ್ಲಿಸಿ

ಅಚ್ಚೇ ದಿನ ಕೊಚ್ಚೆಲಿ ಹೋಗಿರುವುದ ನೋಡಿರುವೆ
ಕಚ್ಚೆ ಹರಕರೇ ಸನ್ಯಾಸಿ ಅಂತಾ ಕರೆಸಿಕೊಳ್ಳೋದ ನಿಲ್ಲಿಸಿ

ಅತ್ಯಾಚಾರಿಗಳಿಗೆ ಆರತಿ ಎತ್ತೋದು ನೋಡಿರುವೆ
ಅನಾಚಾರಿಗಳೇ ದೇಶ ಭಕ್ತಿಯ ಪಾಠ ಅರಚೋದ ನಿಲ್ಲಿಸಿ

ಪವಿತ್ರ ಗಂಗೆಯಲಿ ಹೆಣ ತೇಲಿರುವುದ ನೋಡಿರುವೆ
ಬಟ್ಟೆ ಬದಲಿಸಿದಷ್ಟು ಸರಳ ಮಾತ ಬದಲಿಸೋದ ನಿಲ್ಲಿಸಿ

ಗೇಣು ಹೊಟ್ಟೆಗೆ “ದೇವ”ರೇ ಮೈ ಮೇಲೆ ಬಂದಿರೋದ ನೋಡಿರುವೆ
ಮಂದಿರದ ಹೆಸರಲ್ಲಿ ಸ್ಮಶಾನ ಕಟ್ಟೋದ ನಿಲ್ಲಿಸಿ


Leave a Reply

Back To Top