ಡಾ.ಭಾರತಿ ಅಶೋಕ್‌ ಅವರ ಕವಿತೆ-ಅನಾಮಿಕ

ಅವರು ಚರ್ಚಿಸಿದ್ದು
ಹೀಗೆ ಆಗಂತುಕರ ತರ ಇರೋಣ ಅಂತ ಅಲ್ಲ,
ಅಷ್ಟಕ್ಕು ಅವಳು ಅವನ ಅಭಿಪ್ರಾಯ ಕೇಳಿದ್ದು
ಅವಳ ನಿರ್ಧಾರವನ್ನು ಹೇಳಿದ್ದಲ್ಲ

ಅವನು ಆಗಲೇ ನಿರ್ಧರಿಸಿ
ಅಪರಿಚಿತನಾಗಿಯೇಬಿಟ್ಟೆ
ಎಂದಂದುಕೊಂಡರೆ ಅವನು
ಅವನ ಮನಸ್ಸಿಗೆ ಮಾಡಿಕೊಂಡ
ದ್ರೋಹವದು

ಅವಳು
ಇಲ್ಕೇಳು ನಮ್ಮದು ಬಿಡಿಸಲಾಗದ
ಜನ್ಮಾಂತರಗಳ ಅನುಬಂಧ
ಜಗಕೆ ನಾವಿಬ್ಬರು ಅನಾಮಿಕರು
ಆದರೆ ನಮಗೆ ನಾವಲ್ಲ ಇದು
ನಿನಗು ಅರಿವಾಗದಿರದು

ಅರಿವಾದಾಗ ನಾನು ಕೊರೆದೆನಲ್ಲ ಇಷ್ಟೊತ್ತು
ಹಾಗೆ ನೀನು ನನಗೆ
ಕೊರೆಯಲು ಶುರುವಿಟ್ಟುಕೊಳ್ಳುವೆ
ಯಾಕೆ ಗೊತ್ತಾ
ನನ್ನನ್ನು ಅನಾಮಿಕಳಂತೆ ಭ್ರಮಿಸಿದ
ನಿನಗೆ ನೀನೇ ಅನಾಮಿಕನಾಗಿರುತ್ತೀಯಲ್ಲ


Leave a Reply

Back To Top