ಗಜಲ್(ಜುಲ್ ಕಾಫಿಯಾ)

ಕಾವ್ಯ ಸಂಗಾತಿ

ಗಜಲ್(ಜುಲ್ ಕಾಫಿಯಾ)

ಬಾಗೇಪಲ್ಲಿ

ನೀ ಬಿಂಕದ ಸಿಂಗಾರಿ ಆಗಿರಬೇಕು ಅನಾಮಿಕೆ
ಮೈ ಡೊಂಕಿನ ವಯ್ಯಾರಿ ಇರಬೇಕು ಅನಾಮಿಕೆ

ನಿನ್ನ ನೋಡದೆಯೇ ಅಂಕುರ
ಆಯಿತು ಪ್ರೇಮ ನನ್ನಲಿ
ನೀ ಶೃಂಗಾರಿ/ಸುಂದರಿ ಇದ್ದಿರಲಿಕ್ಕೆಬೇಕು ಅನಾಮಿಕೆ.

ಬೃಂದಾವನದ ಗೋಪಿಕೆಯರೆಲ್ಲಾ ಗರತಿಯರಂತೆ.
ನಾನೀಗ ಮುರಾರಿ ಆಗಲೇಬೇಕು ಅನಾಮಿಕೆ

ವಿಶ್ವ ಸುಂದರಿ ಇಡೀ ಸಭೆಗೆ ಗಾಳಿಮುತ್ತ ನೀಡುವಳು
ಆದರೂ ನಾವು ಪರನಾರಿ ಎಂದೆನಬೇಕು ಅನಾಮಿಕೆ

ಪ್ರೀತಿ ವ್ಯಕ್ತಿ ಜನಿತ ಮಾತ್ರವಲ್ಲ
ವ್ಯಕ್ತಿತ್ವ ಜನಿತವೂ ಸಹ
ಅಂತಹ ಹೆಣ್ಣನು ಗಾಂಧಾರಿ ಅನ್ನಲೇಬೇಕು ಅನಾಮಿಕೆ.


Leave a Reply