ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಕಂಗಳು ತುಂಬಿ ಸುರಿಸಿದ ಕಂಬನಿಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ
ಗಂಟಲ ಪಸೆಯಾರಿ ಬಿಕ್ಕಿದ ಬಿಕ್ಕಳಿಕೆಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ
ಅದೆಷ್ಟು ಲೋಕ ಸುತ್ತಿ ಹೃದಯದ ಗಾಯಕ್ಕೆ ಮುಲಾಮು ಹುಡುಕಿದೆ ಗೊತ್ತೇ
ಅದ್ಯಾವ ಮಠ ಮಂದಿರದ ದೇವರಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ
ರಚ್ಚೆ ಹಿಡಿದ ಮಗುವಂತೆ ಹೃದಯದ ಹಾಳೆಯಲಿ ಚಿತ್ರ ಬಿಡಿಸಿ ಹೋದೆ
ಕೊಚ್ಚಿ ಹೋಗುವಷ್ಟು ಸುರಿದ ಮಳೆಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ
ಬಟವಡೆಯಾಗದೆ ಉಳಿದ ರಾಶಿ ಮಾತಿವೆ ಎದೆಯ ಕಪಾಟಿನಲ್ಲಿ ಗೊತ್ತೇ
ಅದೆಷ್ಟು ಮಿಂದೆದ್ದ ಗಂಗೆ ತುಂಗೆಯರಿಂದಲೂ ನಿನ್ನ ನೆನಪ ಅಳಿಸಿಲಾಗಲಿಲ್ಲ
‘ದೇವ’ರಾಗುವುದೆಂದರ ಮರಳಿ ಬಾರದೂರಿಗೆ ಹೋಗುವುದೇ ಇರಬೇಕಲ್ಲವೇ..?
ಪ್ರೀತಿಯೆಂದ್ರ ಬೇರೆನಲ್ಲ ನನ್ನ ಮರಣಶಯ್ಯಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ
ಪ್ರೀತಿ ಅಂದ್ರೆ ಹಾಗೆನೇ. ಅಷ್ಟಕ್ಕೂ ಅದನ್ನು ಅಳಿಸವುದೇಕೆ? ಒಲಿದರೆ ಆರಾಧಿಸಿ, ಕಳೆದರೆ ಹಾರೈಸಿ.