ಮಳೆವಿಶೇಷ

ಮಳೆಯು ಬರುತಿದೆ

ಚಂದ್ರಶೇಖರ ಹೆಗಡೆ

ಮಳೆಯು ಬರುತಿದೆ ಓ ಲಕುಲೀಶ
ಮಳೆಯು ಬರುತಿದೆ
ಧರಣಿದೇವಿಯ ಪಾದಪದ್ಮಗಳ ತೊಳೆಯಲು ಹೊಳೆಯೇರಿ ಬರುತಿದೆ
ವಸಂತವಿಡೀ ಮಲೆತು ಕೊಳೆತ
ಮನದ ಮಲಿನವ ಕಳೆಯಲೋಡಿ ಬರುತಿದೆ
ಅಂಧಕಾರದ ಕತ್ತಲೆಯ ನೀಗಿ ಜ್ಞಾನಸಾಗರದವೋಲ್ ಕರೆದು ಬರುತಿದೆ

ಮಳೆಯು ಬರುತಿದೆ ಓ ಲಕುಲೀಶ ಮಳೆಯು‌ ಬರುತಿದೆ
ಮದ್ದು ಗುಂಡುಗಳನೆಲ್ಲ ಕೊಚ್ವಿ ಮುಚ್ವಲು ಕಣಿವೆದಾರಿಯ ಹುಡುಕಿ ಬರುತಿದೆ
ಹೊತ್ತಿದ ಬೆಂಕಿ ಬಿರುಗಾಳಿಯ ತಲೆಗೆ ಕುಕ್ಕಿ ತಂಪನೆರೆದು ಹಾರಿ ಬರುತಿದೆ
ತೀರದ ದಾಹ ಮೋಹದಿಂ ನೆತ್ತಿಗೇರಿದ ಪಿತ್ತಮತ್ತುಗಳನಿಳಿಸಲು ಸೆಳೆದು ಬರುತಿದೆ

ಮಳೆಯು ಬರುತಿದೆ ಓ ಲಕುಲೀಶ
ಮಳೆಯು ಬರುತಿದೆ
ನೆಮ್ಮದಿಯ ಪುಷ್ಪಗಳನಿರಿಸಿಕೊಂಡ
ಪಾದಪಂಕಜಗಳೆಲ್ಲಿವೆ ಹೇಳು ತೊಳೆಯ ಬರುತಿದೆ
ಜಗದ ಕಾರ್ಮೋಡದ ಭೀಕರ ಕಪ್ಪು ಛಾಯೆಯನಳಿಸಿ ಬೆಳಗಿ ತೊಳಗ ಬರುತಿದೆ
ಹಸಿದ ಮನಸುಗಳ ಹಾಹಾಕಾರವ ನುಂಗಿ ಕುಣಿದು ಅನ್ನಾವತಾರವನೆತ್ತಿ ಬರತಿದೆ

ಮಳೆಯು ಬರುತಿದೆ ಓ‌ ಲಕುಲೀಶ
ಮಳೆಯು ಬರುತಿದೆ
ಬಿರಿದ ಎದೆಗಳ ಬಂಧುರ ಬಯಸಿ ಮದ್ದನರೆದು ಕುಡಿಸಲು ಉಗ್ಗಡಿಸಿ ಬರುತಿದೆ
ನೆಲದ ಹಕ್ಕಿಗಳ ಗಾನದಿ ಆರ್ದ್ರತೆ ತುಂಬಿ ತುಳುಕಿಸಲು ಹರಿದು ಬರುತಿದೆ
ಮಾವು ಬೇವುಗಳ ಕೊರಳೊಳಗಿಳಿದು ಸುಮಧುರ ರಸಾಂಭೋಧಿಯ ಹರಿಸಲು ಬರುತಿದೆ


8 thoughts on “

  1. ಸುಂದರವಾದ ಕವಿತೆ ಗುರುಗಳೆ .ಮನಕೆ ತಂಪನೆರೆಯಿತು

  2. ಬರಲಿ ಸರ್, ತಮ್ಮ ಕನಸಿನ ಮಳೆಗೆ ಕಾದು ಸುಸ್ತಾಗಿದೆ ಜಗವೆಲ್ಲ. ಕೂದಲು ಬಿಳಿಯಾಗಿವೆ .ನಡ ಬಾಗಿ ಕಣ್ಣು ಮಂಜಾಗಿವೆ ನಿಮ್ಮ ಪೆನ್ನಿನಿಂದಾದ ಹನಿಗಳಿಂದ ಮನ ತಂಪಾಗಿದೆ ಸೂ

Leave a Reply

Back To Top