ಹೊಸ ರಾಗ

ಕಾವ್ಯ ಸಂಗಾತಿ

ಹೊಸ ರಾಗ


ಶ್ರೀನಿವಾಸ ಜಾಲವಾದಿ

ಹೊಸ ರಾಗ

medium shot father lifting his son Stock Footage Video (100% Royalty-free)  1020936355 | Shutterstock

ನಿಮ್ಮ ಖುಷಿ ನೀಡಿದೆ ನೆಮ್ಮದಿ
ತಂದೆ ಬಂಧು ಬಳಗ ಎಲ್ಲವೂ
ಮಕ್ಕಳು ಸೊಸೆ ಮೊಮ್ಮಗನೇ
ಅಲ್ಲವೇ ನಮಗೆ ಪಂಚಾಮೃತ!

ಅಪ್ಪನೆಂಬ ಆಕಾಶವೇ ವಿಸ್ಮಯ
ಅದೇ ಬದುಕಿನ ಬಾಸುರಿ ವಾದನ
ಬಾನುಲಿಯ ಶಹನಾಯಿ ಸುಸ್ವರ
ನಕ್ಷತ್ರಗಳೆಂಬ ಮಕ್ಕಳ ಕಾವಲುಗಾರ!

ದೇವ ಸೃಷ್ಟಿಯಿದು ಬದುಕಿನುಯ್ಯಾಲೆ
ಸೋಲು ಗೆಲುವುಗಳ ಸಮ್ಮಿಶ್ರಣವೆಲ್ಲ
ಬದುಕು ಬಂದಂತೆ ಸ್ವೀಕರಿಸು ಮನವೇ
ಅದೇ ಹೊಸ ರಾಗಕೆ ನಾಂದಿ ಹಾಡೀತು!


One thought on “ಹೊಸ ರಾಗ

  1. ಅಪ್ಪನೆಂಬ ಆಕಾಶ
    ಆಶ್ರಯದಾಣ

Leave a Reply

Back To Top