ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎತ್ತ ಹೋದರು
ನನ್ನ ಶರಣರು
ಸತ್ಯ ಸಾಧಕ
ಯೋಧರು
ನಿತ್ಯ ಅನುಭವ
ಲಿಂಗ ಜಂಗಮ
ಮರ್ತ್ಯ ಕಟ್ಟಿದ
ಭೂಪರು
ಹಾಸಿ ದುಡಿದು
ಹಂಚಿ ತಿಂದರು
ಶಾಂತಿ ಸಮತೆಯ
ಶ್ರೇಷ್ಠರು
ಜಾತಿ ಕಸವ
ಕಿತ್ತೊಗೆದು
ಭಕ್ತಿ ಬಿತ್ತಿದ ರೈತರು
ಜಗದಿ ಮೆರೆವ
ಬಸವ ತಂದೆಯ
ಮಮತೆ ಕರುಣೆ
ಮಕ್ಕಳು
ಮತ್ತೆ ಬರುವರು
ನನ್ನ ಶರಣರು
ಸುತ್ತು ಕಹಳೆ
ಮೊಳಗಿತು
ವಿಶ್ವ ಪ್ರೇಮ
ನ್ಯಾಯ ನೀತಿ
ನನ್ನ ಶರಣರು
ಅಮರರು


About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನನ್ನ ಶರಣರುʼ”

  1. ನನ್ನ ಶರಣರು
    ಎಲ್ಲೂ ಹೋಗಿಲ್ಲಾ.
    ಇಲ್ಲಿಯೇ… ನಮ್ಮ ಜೊತೆ………

  2. ಬಹಳ ಚೆನ್ನಾಗಿ ನೋಡಿ ಶರಣರ ಬಗ್ಗೆ ಭಾವ ಸವಿತಾ ದೇಶಮುಖ

  3. ವಿಜಯಲಕ್ಷ್ಮಿ ಹಂಗರಗಿ ಶಹಾಪುರ

    ವ್ಹಾ ಎಷ್ಟು ಅರ್ಥಗರ್ಭಿತ ಕವನ ಸರ್
    ಶರಣರು ಬರುತ್ತಾರೆ ಎನ್ನುವ ಭರವಸೆ ಇದೆ

  4. ಕಲ್ಯಾಣ ಕ್ರಾಂತಿಯ ನಂತರದ ಕಾಲದಲ್ಲಿ ಶರಣರ ಮೇಲೆ ಹಲ್ಲೆ ಗೈದ ವೈದಿಕರ ಕುತಂತ್ರ

  5. ಮತ್ತೆ ಬರುವರು ಶರಣರು ಮಸ್ತ್ ಮಸ್ತ್ ಕವನ ಇದೆ ಸರ್
    ನೀವು ದಾರ್ಶನಿಕರು,ಬಸವ ತತ್ವದ ಪ್ರತಿಪಾದಕರು,ಪಂಡಿತರು,ಹಾಗೂ ವಾಗ್ಮಿಗಳು.

  6. ಶರಣರು ಎಂದೆಂದಿಗೂ ಅಮರರು…ಪ್ರತಿಯೊಬ್ಬರಲ್ಲೂ ಅವರಿದ್ದಾರೆ…
    ಜಾಗೃತ ಮಾಡಬೇಕು ಅಡಿಗಡಿಗೆ ನಿಮ್ಮ ಕವನ ಗಳಿಂದ…. ಸರ್

    ಸುತೇಜ

Leave a Reply

You cannot copy content of this page

Scroll to Top