ಗಜಲ್

ಕಾವ್ಯ ಸಂಗಾತಿ

ಗಜಲ್

ದಸ್ತಗೀರಸಾಬ್ ದಿನ್ನಿ

ಬೇಡವೆಂದರೂ ಮತ್ತೆ ಮತ್ತೆ ಹೆಜ್ಜೆಗಳು ಹೊರಳುತಿವೆ ನಿನ್ನ ಊರಿಗೆ
ಸುಮ್ಮನಿರದೆ ಕರಗಳು ಯಾಕೋ ಬಿಕ್ಷೆ ಬೇಡುತಿವೆ ನಿನ್ನ ಪ್ರೀತಿಗೆ .

ಬಟ್ಟಲು ಕಂಗಳ ಮಾದಕ ನೋಟ ಚೆಲುವು ನಿದಿರೆ ಕದ್ದಿವೆ
ಜಿಟಿಜಿಟಿ ಮಳೆಯಲಿ ಮೈಖಾನೆಯ ಹುಡುಕಲು  ಬರುತಿರುವೆ ನಿನ್ನ ಕೇರಿಗೆ .                              

ನಮ್ಮಿಬ್ಬರ ಸ್ನೇಹ ಸಂಬಂಧ ಹೂ ಪರಿಮಳದ ನಂಟಿನಂತಿಹುದು
ಮಧುಚೈತ್ರದ ಇರುಳಲಿ ಇಬ್ಬನಿಯಂತೆ ಕರಗುತಿರುವೆ ನಿನ್ನನೆನಪಿಗೆ .

ಮೊದಲ ನೋಟದಿ ನಿನ್ನ ಮೋಹ ಸರಪಳಿ ಮನವ ಬಂಧಿಸಿದೆ
ಬದುಕಿಗೆ ಚೆಲುವು ತುಂಬಲು ಜೊತೆಯಾಗುತಿರುವೆ ನಿನ್ನ ಕನಸಿಗೆ .

‘ ದಿನ್ನಿ’ ಕಾಲ ಕ್ರಮಿಸುತಿದೆ ನಿರೀಕ್ಷೆಯ ಕಂಗಳಿಗೆ ಒಲವನಾದರೂ ಹರಿಸು
ಕಂಬನಿ ಸುರಿಸದೆ ಖುಷಿಯಿಂದ ಪಲ್ಲವಿಯಾಗುತಿರುವೆ ನಿನ್ನ ಹಾಡಿಗೆ .


Leave a Reply

Back To Top