ಕಾವ್ಯ ಸಂಗಾತಿ
ಸಂಪೂರ್ಣ ಮತ್ಲಾ ಗಜ಼ಲ್
ಎ . ಹೇಮಗಂಗಾ
ನೆನಪಿನಲ್ಲಿ ಸುರಿವ ಬಿರುಮಳೆಯಾಗಿ ಕಾಡದಿರು ನನ್ನ
ನಡೆಯಲ್ಲಿ ನಿಲ್ಲದ ಬಿರುಗಾಳಿಯಾಗಿ ಕಾಡದಿರು ನನ್ನ
ರೋಷದಲ್ಲಿ ಆರ್ಭಟಿಸುವ ಸಿಡಿಲಾಗಿ ಕಾಡದಿರು ನನ್ನ
ದ್ವೇಷದಲ್ಲಿ ಬಿರುಬಿಸಿಲ ಝಳವಾಗಿ ಕಾಡದಿರು ನನ್ನ
ಮಾತಿನಲ್ಲಿ ಆಳಕೆ ಇರಿವ ಶೂಲವಾಗಿ ಕಾಡದಿರು ನನ್ನ
ವಿರಸದಲ್ಲಿ ಕೊಲ್ಲುವ ಮೌನವಾಗಿ ಕಾಡದಿರು ನನ್ನ
ನೋವಿನಲ್ಲಿ ಮಾಯದ ಗಾಯವಾಗಿ ಕಾಡದಿರು ನನ್ನ
ಸ್ಷರ್ಶದಲ್ಲಿ ಕೊರೆಯುವ ಹಿಮವಾಗಿ ಕಾಡದಿರು ನನ್ನ
ಬದುಕಿನಲ್ಲಿ ಕಾಡುವ ಸಂಗಾತಿಯಾಗಿ ಕಾಡದಿರು ನನ್ನ
ಪ್ರೀತಿಯಲ್ಲಿ ಆವರಿಸುವ ವಿಷವಾಗಿ ಕಾಡದಿರು ನನ್ನ