ಜಯಲಕ್ಷ್ಮಿ ಎಂ ಬಿ ಯವರ ಮುಕ್ತಕ

ಕಾವ್ಯ ಸಂಗಾತಿ

ಮುಕ್ತಕ

ಜಯಲಕ್ಷ್ಮಿ ಎಂ ಬಿ

Abstract background of colorful curved wires

ಕೋಪವದು ಬಲುಕಠಿಣ ಮುರಿಯುವುದು ಸಂಬಂಧ
ಕೋಪವನು ತಾಳದಿರಿ ಬದುಕಿನಲ್ಲಿ
ಕೋಪದಲಿ ಕೈಗೊಂಡ ನಿರ್ಧಾರ ಸರಿಯಲ್ಲ
ಕೋಪಕ್ಕೆ ನೆಲೆಯಿಲ್ಲ ಬಸವೇಶ್ವರ

ಕರುಣೆಯಲಿ ನೋಡಿದೆಡೆ ಬಾಗುವುದು ಜಗದಜನ
ಮರುಕದಲಿ ತುಂಬಿರಲಿ ಮನದನುಡಿಯು
ಮುರಿಯದಿರಿ ಕೋಪದಲಿ ಹಸನಾದ ಬಾಳನ್ನು
ಮರೆಯದಿರಿ ನಗುವನ್ನು ಬಸವೇಶ್ವರ

ಮನದಲ್ಲಿ ಕಡುಕೋಪ ತಾಳದಿರಿ ನೀವೆಂದು
ವನದಲ್ಲಿ ಕಾಡ್ಗಿಚ್ಚು ಹಬ್ಬಿದಂತೆ
ಘನಗೋರ ಪಾಪವದು ಕಡುಗೋಪ ವೆಂದೆಂದು
ಮನನೊಂದು ಹಲುಬದಿರಿ ಬಸವೇಶ್ವರ

ಹುಸಿನಗುವ ತೋರುತ್ತ ಸುತ್ತೆಲ್ಲ ಪಸರಿಸಿರಿ
ಹಸನಾದ ಬದುಕಿನಲಿ ಹೂವಂತೆಯೆ
ಬುಸುಗುಡುವ ಹಾವಂತೆ ದುಡುಕದಿರಿ ನೀವೆಂದು
ನಸುನಗುವ ಚೆಲ್ಲುತಿರಿ ಬಸವೇಶ್ವರ

ಮೊಗದಲ್ಲಿ ಹೂನಗುವು ತಂತಾನೆ ತುಂಬಿರಲಿ
ಹಗೆತನವು ಸರಿಯಲ್ಲ ನಮಗೆಂದಿಗು
ಮಗುವಂತೆ ತುಂಬಿರಲಿ ಕಿರುನಗೆಯು ಕಣ್ಣಲ್ಲಿ
ಸೊಗವಿಹುದು ನಮಗದುವೆ ಬಸವೇಶ್ವರ


Leave a Reply

Back To Top