ವ್ಯಾಲಂಟೈನ್ ವಿಶೇಷ

ಒಲವೆಂದರೆ

ಚಂದ್ರಿಕಾ ನಾಗರಾಜ್ ಹಿರಿಯಡಕ

Watercolor heart. Red, yellow and green colors

ನೀನೆ ಹೇಳು ಕವಿತೆಗೆ
ನಾಳೆಗೆಂದು
ಮಡಚಿ ಕೂತ ಒಲವ
ಎಳೆದು ತಂದು
ಇಸ್ತ್ರಿ ಪೆಟ್ಟಿಗೆಯ
ಸವರಿ ಕೂತಿದೆ
ಮತ್ತದೇ ಹೊರಗೊಂದು
ಒಳಗೊಂದು ಎಣಿಕೆಯಾಟದಿ
ಸೋಲೊಪ್ಪಿಕೊಳ್ಳದ
ನೆರಿಗೆ
ಸೆರಗಿಗೆ ಚುಚ್ಚುವ ಪಿನ್ನು
ಮತ್ತೆ ಮತ್ತೆ ಹೊದ್ದುಕೊಳ್ಳಬೇಕು
ನೀನು ಅಲ್ಲೆಲ್ಲೋ ನಿಂತು ನಗುವಾಗ
ಪ್ರೇಮಾಮೃತ ಚಿಮ್ಮಿ
ನಿನ್ನತ್ತ
ಗೆಜ್ಜೆ ಬಡಿತವ ಹೊತ್ತು ಬರಬೇಕು
ಹಠಕ್ಕೆ ಬಿದ್ದಿದೆ
ಹೇ ಕೃಷ್ಣ
ನೀನೆ ಹೇಳು ಕವಿತೆಗೆ
ವೈಯಾರದ ಹಂಗಿರದ ನಮ್ಮೊಲವಿಗೆ
ದಿನವುಂಟೇ…!?
ಎದೆಯಂಗಳದಿ ಆರದ ದೀಪಕೆ
ಒಲವ ಎಣ್ಣೆ ಸುರಿದರೆ ಸಾಕಲ್ಲವೇ…?
ಹೇಳು ಮುರಾರಿ…
ನಿನ್ನ ಕಾಣುವ ಹಂಬಲಕೆ
ನಿನ್ಹೆಸರ ಆತ್ಮೋದ್ಘಾರದ ರಿಂಗಣ
ನಿನ್ನ ಕರ್ಣಗಳಿಗೆ ಅಂಟಿಸಿ ಬಿಟ್ಟರೆ ಸಾಕಲ್ಲವೇ…!?


Leave a Reply

Back To Top