ಗಜಲ್

ಕಾವ್ಯ ಸಂಗಾತಿ

ಗಜಲ್

ಪ್ರೊ ರಾಜನಂದಾ ಘಾರ್ಗಿ

ಪ್ರೊ ರಾಜನಂದಾ ಘಾರ್ಗಿ

ಕುಡಿನೋಟ ಬೀರುತ್ತ ಭಾವಗಳ ಕೆದರದಿರು ಗೆಳೆಯ
ಮಾತುಗಳ ಜಾಲ ಬೀಸಿ ಸಂಬಂಧ ಕುದುರದಿರು ಗೆಳೆಯ

ಕಾಲ ಮಾಗ ಬೇಕಿದೆ ಹೃದಯ ತೆರೆಯ ಬೇಕಿದೆ ಹೃದಯಹೀನಳೆಂದು ಕರೆದು ಗದರದಿರು ಗೆಳೆಯ

ಮನಗಳು ಬೆರೆಯ ಬೇಕಿದೆ ತನುಗಳು ಅರಳಬೇಕಿದೆ
ಸಿಡಲ ಸುಡು ಕಿರಣದಂತೆ ಎದೆಯಮೇಲೆ ಉದುರದಿರು ಗೆಳೆಯ

ಕಾಯುತ್ತಿರುವೆ ನಿನಗಾಗಿಯೇ ಯುಗಯುಗಗಳಿಂದ
ಹೊತ್ತಿರುವೆ ನಿನ್ನ ಹೆಸರಿನ ಲಾಂಛನ ಹೆದರದಿರು ಗೆಳೆಯ

ಹುಟ್ಟಿರುವುದೇ ನಿನಗಾಗಿ ನಿನ್ನ ಸಂಗಾತಿಯಾಗಿ ರಾಜಿ
ಕೂಡಿಬರಬೇಕು ಸಮಯ ಮನ ಮುದುರದಿರು ಗೆಳೆಯ


3 thoughts on “ಗಜಲ್

  1. ಮೂರನೇ ಶೇರ್ ತುಂಬಾ ಇಷ್ಟವಾಯಿತು ಮೇಡಂ ಅಭಿನಂದನೆಗಳು

Leave a Reply

Back To Top